ಹುಬ್ಬಳ್ಳಿ: ತಮ್ಮ ನಾಯಕತ್ವಕ್ಕೆ ಎದುರಾಗಿರುವ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಕುರುಬ ಸಮಾಜದ ಹೋರಾಟದ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವಿದೆಯೆಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್ ತಿರುಗೇಟು ನೀಡಿದರು. ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳು ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೂ ಮೊದಲು ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಕುರುಬರ ನಾಯಕ ಎಂದು ಬಿಂಬಿಸಿಕೊಂಡಿದ್ದ ಅವರಿಗೆ ಲಕ್ಷಾಂತರ ಜನ …
Read More »ದಿಂಗಾಲೇಶ್ವರ ಶ್ರೀಗಳು ಯಾರೂ ಎಂಬುದೇ ಗೊತ್ತಿಲ್ಲ ಜಾಗವನ್ನು ಯಾವುದೇ ಕಾರಣಕ್ಕೂ ಮರಳಿ ಕೊಡುವುದಿಲ್ಲ: ಪ್ರಭಾಕರ ಕೋರೆ
ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ಆಗುವ ವಿಷಯದಲ್ಲಿ ಗೊಂದಲವಾಗುತ್ತಲೇ ಬಂದಿದ್ದು, ಈಗ ಕೆಎಲ್ಇ ಸಂಸ್ಥೆಯ ಹೆಸರನ್ನ ಮುಂದೆಲೆಯಾಗಿ ತೆಗೆದುಕೊಂಡು ಹೆಸರು ಕೆಡಿಸಲಾಗುತ್ತಿದೆ ಎಂದು ಕೆಎಲ್ಇ ಸಂಸ್ಥೆಯ ಚೇರಮನ್ ಪ್ರಭಾಕರ ಕೋರೆ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಭಾಕರ ಕೋರೆ, ಗದಗ ತೊಂಟದಾರ್ಯ ಸ್ವಾಮಿಗಳ ಬಳಿ ಹೋದಾಗ, ಅವರು ಮೂರುಸಾವಿರ ಮಠದವರಿಗೆ ತಿಳಿಸಿ, ಅಲ್ಲಿ ವೈದ್ಯಕೀಯ ಕಾಲೇಜ್ ಮಾಡೋಕೆ ಮುಂದಾಗ್ಲಿ ಎಂದ್ರು. ಹಾಗಾಗಿಯೇ ನಾವೂ ಮೂರುಸಾವಿರ ಮಠದ ಹಿರಿಯ ಸ್ವಾಮೀಜಿಗಳನ್ನ ಭೇಟಿಯಾಗಿದ್ವಿ. ಆಗ …
Read More »ಮನೆಗಳಿಗೆ ಗ್ಯಾಸ್ ಪೂರೈಸುವ ಪೈಪ್‍ಲೈನ್ ಒಡೆದು ಅಪಾರ ಪ್ರಮಾಣದ ಅಡುಗೆ ಅನಿಲ ಸೋರಿಕೆ
ಹುಬ್ಬಳ್ಳಿ: ಮನೆಗಳಿಗೆ ಗ್ಯಾಸ್ ಪೂರೈಸುವ ಪೈಪ್‍ಲೈನ್ ಒಡೆದು ಅಪಾರ ಪ್ರಮಾಣದ ಅಡುಗೆ ಅನಿಲ ಸೋರಿಕೆಯಿಂದಾಗಿ, ಸ್ಥಳೀಯರು ಆತಂಕಕ್ಕೆ ಒಳಗಾದ ಘಟನೆ ಹುಬ್ಬಳ್ಳಿಯ ಹಳೇ ಬಾದಾಮಿನಗರದಲ್ಲಿ ಕಂಡುಬಂದಿದೆ. ಇಂದು ಮಧ್ಯಾಹ್ನ ಐಒಎಜಿ ಒಡೆತನದ ಪೈಪ್ ಲೈನ್ ಒಡೆದು ಕೆಲ ಸಮಯ ಅನಿಲ ಸೋರಿಕೆಯಾದ ಪರಿಣಾಮ ಸ್ಥಳೀಯರು ಆತಂಕಕ್ಕೆ ಒಳಗಾದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಐಒಎಜಿ ಸಿಬ್ಬಂದಿಗಳು ಮೇನ್ ವಾಲ್ ಬಂದ್ ಮಾಡಿ ಭಾರಿ ಅನಾಹುತ ತಪ್ಪಿಸುವಲ್ಲಿ ಯಶ್ವಸಿಯಾಗಿದ್ದಾರೆ. ಅಡುಗೆ ಅನಿಲ ಪೂರೈಸುವ …
Read More »ಇನ್ ಲೈನ್ ಸ್ಕೇಟಿಂಗ್ ನಲ್ಲಿ ಹತ್ತು ವರ್ಷದ ಪೋರಿಯ ಗಿನ್ನಿಸ್ ದಾಖಲೆ
ಹುಬ್ಬಳ್ಳಿ: ಇನ್ ಲೈನ್ ಸ್ಕೇಟಿಂಗ್ ಮಾಡುತ್ತಾ ಮೂರು ಹುಲಾಹೂಪಗಳನ್ನು ತಿರುಗಿಸುವುದರೊಂದಿಗೆ 100 ಮೀ. ದೂರವನ್ನು 23.45 ಸೆಕೆಂಡ್ ಗಳಲ್ಲಿ ಕ್ರಮಿಸಿ ಹತ್ತು ವರ್ಷದ ಪೋರಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾಳೆ. ಇಲ್ಲಿನ ಪರಿವರ್ತನ ಗುರುಕುಲ ಹೆರಿಟೇಜ್ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಸ್ತುತಿ ಕುಲಕರ್ಣಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾಳೆ. ಇಲ್ಲಿನ ಶಿರೂರು ಪಾರ್ಕ್ ನಿವಾಸಿಗಳಾದ ಕಿಶೋರ ಕುಲಕರ್ಣಿ, ರಶ್ಮಿ ಕುಲಕರ್ಣಿ ಅವರ ಪುತ್ರಿಯಾದ ಸ್ತುತಿ ಇದೇ ಕ್ರೀಡೆಯಲ್ಲಿ ಹಲವು ದಾಖಲೆ ಮಾಡಿದ್ದಾಳೆ. …
Read More »ಗರ್ಭಿಣಿ ಶ್ವಾನವೊಂದಕ್ಕೆ ಹುಬ್ಬಳ್ಳಿಯಲ್ಲಿ ಸೀಮಂತ ಮಾಡಿ ಪ್ರೀತಿ ತೋರಿದ್ದಾರೆ.
ಹುಬ್ಬಳ್ಳಿ: ಗರ್ಭಿಣಿ ಶ್ವಾನವೊಂದಕ್ಕೆ ಹುಬ್ಬಳ್ಳಿಯಲ್ಲಿ ಕುಟುಂಬಸ್ಥರೆಲ್ಲಾ ಸೇರಿ ಸೀಮಂತ ಮಾಡಿ ಪ್ರೀತಿ ತೋರಿದ್ದಾರೆ.ಸಾಮಾನ್ಯವಾಗಿ ಮೊದಲ ಬಾರಿಗೆ ಗರ್ಭವತಿಯಾದ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದನ್ನು ನೋಡಿದ್ದೇವೆ. ಆದರೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿರುವ ಕುಟುಂಬವೊಂದು ಮನೆಯಲ್ಲಿ ಸಾಕಿದ್ದ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದೆ. ಗ್ರಾಮದ ಸಾರಿಗೆ ನೌಕರ ರಮೇಶ್ ಪಡತೇರ್ ಎಂಬವರು ತಮ್ಮ ಮನೆಗೆ ಕಳೆದ ವರ್ಷ ಶ್ವಾನವೊಂದನ್ನು ತಗೆದುಕೊಂಡು ಬಂದಿದ್ದರು. ಅದಕ್ಕೆ ಲೂಸಿ …
Read More »ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ACB ದಾಳಿ!
ಹುಬ್ಬಳ್ಳಿ: ನಗರದ ಅಕ್ಷಯ ಪಾರ್ಕ ಬಳಿಯಿರುವ ರಾಜೀವಗಾಂಧಿನಗರದ ಮನೆಯೊಂದರ ಮೇಲೆ ಬೆಳಿಗಿನ ಜಾವವೇ ಎಸಿಬಿ ದಾಳಿ ನಡೆದಿದ್ದು, ಬೃಹತ್ ಭೇಟೆಯನ್ನ ಅಧಿಕಾರಿಗಳು ಆಡಿದ್ದಾರೆಂದು ಹೇಳಲಾಗುತ್ತಿದೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ದೇವರಾಜ ಶಿಗ್ಗಾಂವಿ ಎನ್ನುವವರ ಮನೆ ಹುಬ್ಬಳ್ಳಿಯಲ್ಲಿದ್ದು ಕೆಲವು ವರ್ಷಗಳ ಹಿಂದೆ, ಇದೇ ದೇವರಾಜ ಶಿಗ್ಗಾಂವ ಧಾರವಾಡದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ನೀರಾವರಿ ಇಲಾಖೆಯಲ್ಲಿದ್ದ ದೇವರಾಜ ಅವರನ್ನ ಧಾರವಾಡದಿಂದ ವರ್ಗಾವಣೆ ಮಾಡಿದ ನಂತರ ಮುಖ್ಯ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷದ …
Read More »ಚಿನ್ನದ ಒಡೆವೆಗಳನ್ನು ತೊಳೆದುಕೊಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಕಳ್ಳರು ವಂಚನೆ
ಹುಬ್ಬಳ್ಳಿ/ಧಾರವಾಡ: ಚಿನ್ನದ ಒಡೆವೆಗಳನ್ನು ತೊಳೆದುಕೊಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಕಳ್ಳರು ವಂಚನೆ ಮಾಡಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಚೆನ್ನಪೇಟೆಯ ಸರ್ಕಾರಿ ಶಾಲೆಯ ಹಿಂಬಾಗದಲ್ಲಿ ನಡೆದಿದೆ. ವಿಷ್ಣುಸಾ ಪವಾರ ಎಂಬವರ ಮನೆಯಲ್ಲಿ ಸರೋಜಾ ಹಾಗೂ ಸೊಸೆ ಅನಿತಾ ಮೋಸಕ್ಕೆ ಒಳಗಾಗಿದ್ದು, ಆರು ಬಳೆ ಮತ್ತು ಮಂಗಳಸೂತ್ರ ತೊಳೆಯುವುದಾಗಿ ಹೇಳಿದ್ದಾರೆ. ಕುಕ್ಕರಿನಲ್ಲಿ ಬಂಗಾರ ತೊಳೆಯುವ ನೆಪ ಮಾಡಿ, ಅತ್ತೆಯನ್ನು ಕುಕ್ಕರ್ ಮುಚ್ಚಳ ತೆಗೆಯಲು ಹೇಳಿ ಒಳಗಡೆ ಕಳಿಸಿದ್ದಾರೆ. ಇದೇ ವೇಳೆ ತಮ್ಮ ಕೈ ಚಳಕ …
Read More »ರೈತರ ಪ್ರತಿಭಟನೆ ವಿರುದ್ಧ ಶೆಟ್ಟರ್ ಕಿಡಿ,ಎಂಪಿಎಂಸಿ ಮುಚ್ಚಿದ್ರೆ ಏನಾಯ್ತು? ಹೊರಗಡೆಯವರಿಗೆ ಅವಕಾಶ ಕೊಟ್ಟು ನೋಡೋಣ
ಹುಬ್ಬಳ್ಳಿ: ಎಪಿಎಂಸಿಯಿಂದ ರೈತರಿಗೆ ಲಾಭವಾಗಿಲ್ಲ. ಎಪಿಎಂಸಿ ಇಲ್ಲ ಅಂದ್ರೆ ಇಲ್ಲ, ಎಂಪಿಎಂಸಿ ಮುಚ್ಚಿದ್ರೆ ಏನಾಯ್ತು? ಹೊರಗಡೆಯವರಿಗೆ ಅವಕಾಶ ಕೊಟ್ಟು ನೋಡೋಣ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈತರು ಬೆಳೆದ ಕೃಷಿ ಉತ್ಪನ್ನಗಳಿಂದ ಇಷ್ಟು ವರ್ಷ ಎಪಿಎಂಸಿಯಲ್ಲಿ ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದರು. ತಿದ್ದುಪಡಿ ಕಾಯ್ದೆಯಿಂದ ಹೊರಗಡೆ ವಹಿವಾಟು ನಡೆಸಲು ಅವಕಾಶ ಇರುವುದರಿಂದ ಅದರ ಲಾಭ …
Read More »35 ಲಕ್ಷ ಲೂಟಿ ಮಾಡಿದ್ದ ಆರೋಪಿಗಳು ಅಂದರ್
ಹುಬ್ಬಳ್ಳಿ: ಎರಡು ವರ್ಷದ ಹಿಂದೆ ಪ್ರಯಾಣಿಕರೊಬ್ಬರ ಜೊತೆ ಗಲಾಟೆ ಮಾಡಿ 35 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. 2019 ರಲ್ಲಿ ಕಾರವಾರದ ಅಡಿಕೆ ಗೋದಾಮಿನ ನೌಕರ ಅಹ್ಮದ್ ತಮ್ಮ ಮಾಲೀಕ ಹೇಳಿದ ಹಾಗೇ ಹುಬ್ಬಳ್ಳಿಯ ದುರ್ಗದ ಬೈಲಿನ ಬಂಗಾರದ ಅಂಗಡಿಯಲ್ಲಿ 35 ಲಕ್ಷ ಹಣವನ್ನು ಪಡೆದು ತಮ್ಮ ಊರಿಗೆ ಬಸ್ ನಲ್ಲಿ ಪ್ರಯಾಣವನ್ನು ಮಾಡುತ್ತಿದ್ದರು. ಈ ವೇಳೆ ಆರೋಪಿಗಳು …
Read More »ಲಾಡ್ಜ್ ಮಾಲಕನಿಗೆ ಅವಾಚ್ಯವಾಗಿ ನಿಂದಿಸಿ ಆವಾಜ್ ಹಾಕಿದ ಪೊಲೀಸ್ ಕಾನ್ಸ್ಟೇಬಲ್
ಕುಡಿದ ಮತ್ತಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ತನ್ನ ಸ್ನೇಹಿತನಿಗೆ ರೂಮ್ ಕೊಡಲಿಲ್ಲ ಎಂದು ಲಾಡ್ಜ್ ಮಾಲಕನಿಗೆ ಅವಾಚ್ಯವಾಗಿ ನಿಂದಿಸಿ ಆವಾಜ್ ಹಾಕಿದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ.ಬೇಗೂರು ಠಾಣೆಯ ಜೀಪ್ ಚಾಲಕನಾಗಿರುವ ನಾಗೇಶ್ ಎಂಬುವನೇ ಲಾಡ್ಜ್ ಮಾಲೀಕನಿಗೆ ಆವಾಜ್ ಹಾಕಿದ ಪೊಲೀಸ್ ಆಗಿದ್ದಾನೆ,ತನ್ನ ಗೆಳೆಯನೊಬ್ಬನಿಗೆ ರೂಮ್ ಕೊಡು ಅಂತಾ ಲಾಡ್ಜ್ ಮಾಲೀಕನಿಗೆ ಹೇಳಿದ್ದಾನೆ ಆದ್ರೆ ಮಾಲಕ್ ಕೊಡಲು ಒಪ್ಪದ ಹಿನ್ನೆಲೆಯಲ್ಲಿ ಕುಡಿದು ಬಂದು ಲಾಡ್ಜ್ ಮುಂದೆಯೇ ರಂಪಾಠವನ್ನು ಮಾಡಿದ್ದಾನೆ.ಸಧ್ಯ ಪೊಲೀಸಪ್ಪನ …
Read More »