Breaking News

ಹುಬ್ಬಳ್ಳಿ

ನಿಯಮ ಉಲ್ಲಂಘಿಸಿ ರಸ್ತೆಗಿಳಿದ ಆಟೋಗಳು ಸೀಜ್………..

ಹುಬ್ಬಳ್ಳಿ: ಮೂರನೇ ಹಂತದ ಲಾಕ್‍ಡೌನ್ ವಿಸ್ತರಣೆಯಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಿದ್ದು, ಆಟೋ ಸಂಚಾರಕ್ಕೆ ಮಾತ್ರ ಅನುಮತಿ ನೀಡಿಲ್ಲ. ಆದರೂ ಕೂಡ ಅನಗತ್ಯವಾಗಿ ರಸ್ತೆಗೆ ಇಳಿಯುವ ಆಟೋಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುರೇಂದ್ರ ಹೊಳೆಣ್ಣವರ ನೇತೃತ್ವದಲ್ಲಿಂದು ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ಆಟೋಗಳಿಗೆ ಸೀಜ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಈಗಾಗಲೇ ಸುಮಾರು ಆಟೋಗಳನ್ನು ಸೀಜ್ ಮಾಡಿ ಈದ್ಗಾ ಮೈದಾನದಲ್ಲಿ ನಿಲ್ಲಿಸಲಾಗಿದೆ. ಈಗಾಗಲೇ ಸರ್ಕಾರ …

Read More »

ಮಾಸ್ಕ್ ಧರಿಸಿ ಮದುವೆ ಮಾಡಿಕೊಂಡ ವಧು-ವರ……..

ಹುಬ್ಬಳ್ಳಿ: ಲಾಕ್‍ಡೌನ್ ವೇಳೆ ಹುಬ್ಬಳ್ಳಿಯ ಹುಡುಗ ಸಿಂಧನೂರಿನ ಯುವತಿಯನ್ನು ಕೈ ಹಿಡಿಯುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಲಾಕ್‍ಡೌನ್ ಸಂದರ್ಭದಲ್ಲಿ ಮದುವೆಗಳಿಗೆ ಷರತ್ತುಬದ್ಧ ಅನುಮತಿ ನೀಡಿ, ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಆದರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿಕೊಂಡೆ ಸಿಂಧನೂರಿನ ವಧುವನ್ನು ಹುಬ್ಬಳ್ಳಿಯ ಹುಡುಗ ಮದುವೆಯಾಗಿದ್ದಾರೆ. ಸಿಂಧನೂರಿನಲ್ಲಿ ಸಚೇತಿಯವರ ಮನೆಯಲ್ಲಿ ಸರಳವಾಗಿ ಮದುವೆಯ ಸಮಾರಂಭ ಜರುಗಿದ್ದು, ವಧು ಪೂನಂ ಸಚೇತಿ, ವರ …

Read More »

ತೆರಿಗೆ ಸಂಗ್ರಹಕ್ಕೆ ವರ್ಕೌಟ್ ಆದ ಪಾಲಿಕೆ ಪ್ಲಾನ್- 2 ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹ

ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್ ಬಂದ ನಂತರ ವಿಶ್ವದ ಆರ್ಥಿಕ ಪರಿಸ್ಥಿತಿಯೇ ಪಾತಾಳಕ್ಕೋಗಿದೆ. ಭಾರತದಲ್ಲೂ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಇತ್ತ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗುತ್ತಾ ಬರುತ್ತಿದೆ. ಆದರೆ ಲಾಕ್‍ಡೌನ್ ನಡುವೆಯೂ ಅವಳಿ ನಗರದ ಮಹಾನಗರ ಪಾಲಿಕೆಯ ಖಜಾನೆಗೆ ಕೋಟಿ ಕೋಟಿ ಹಣ ಹರಿದು ಬಂದಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕೊರೊನಾ ಲಾಕ್‍ಡೌನ್ ಬರಸಿಡಿಲು ಬಡಿದಂತಾಗಿತ್ತು. ಹೀಗಾಗಿ ಆರ್ಥಿಕ ಪುನಶ್ಚೇತನಕ್ಕೆ ಮಹಾನಗರ ಪಾಲಿಕೆ ಆಯುಕ್ತ …

Read More »

ಕೊರೊನಾ ಹೋಲುವ ಪುಷ್ಪ – ಜನತೆಯಲ್ಲಿ ಕುತೂಹಲ ಮೂಡಿಸಿದ ಹೂವು

ಹುಬ್ಬಳ್ಳಿ: ಮಳೆರಾಯ ಭೂಮಿಗೆ ಆಗಮಿಸುತ್ತಿದ್ದಂತೆ ಗಿಡ ಮರಗಳೆಲ್ಲ ಚಿಗುರೊಡೆದು ನಿಸರ್ಗ ದೇವತೆಯನ್ನು ಅಲಂಕರಿಸುತ್ತವೆ. ಪ್ರಸ್ತುತ ದಿನಮಾನಗಳಲ್ಲಿ ಕೊರೊನಾ ವೈರಸ್ ಭೀತಿ ಎಲ್ಲೆಡೆಯೂ ಹಬ್ಬಿದ್ದು, ಕೊರೊನಾ ವೈರಸ್ ಚಿತ್ರಣವೊಂದು ಎಲ್ಲರ ಗಮನದಲ್ಲಿದೆ. ಇದೀಗ ಕೊರೊನಾ ವೈರಸ್ ಚಿತ್ರಣವನ್ನು ಹೋಲುವ ಹೂವೊಂದು ವಾಣಿಜ್ಯನಗರಿಯಲ್ಲಿ ಅರಳಿದ್ದು, ಆಕರ್ಷಣಿಯವಾಗಿ ಗೋಚರಿಸುತ್ತಿದೆ. ಮಾಧ್ಯಮಗಳಲ್ಲಿ ಕೊರೊನಾ ವೈರಸ್ ಚಿತ್ರಣವನ್ನು ನೋಡಿರುವ ಜನರಿಗೆ ಈ ಹೂವನ್ನು ನೋಡಿದಾಕ್ಷಣ ಕೆಲಕಾಲ ಅಚ್ಚರಿಯನ್ನುಂಟು ಮಾಡಿದೆ. ಹುಬ್ಬಳ್ಳಿಯ ಅಮರನಗರದಲ್ಲಿರುವ ಮುತ್ತು ಶಾಂತಪೂರಮಠ ಅವರ ಮನೆಯ …

Read More »

ವಿಶ್ರಾಂತಿಗಾಗಿ ತಂಗಿದ್ದ ವೇಳೆ ನನ್ನ ವಸ್ತ್ರಗಳನ್ನು ಕಳಚಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.: ಗುರುಸ್ವಾಮಿ ಸ್ಪಷ್ಟನೆ

ಹುಬ್ಬಳ್ಳಿ: ಶಬರಿ ನಗರದ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶನ ಬೆತ್ತಲೆ ಪುರಾಣದ ವಿಡಿಯೋ ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಮೋಹನ್ ಗುರು ಸ್ವಾಮೀಜಿ ಅವತಾರ ಕಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿ, ಆತನನ್ನು ಮಠದಿಂದ ಹೊರ ಕಳುಹಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಸದ್ಯ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶ ಮೋಹನ ಗುರುಸ್ವಾಮಿ, ಕುಸುಗಲ್ ರಸ್ತೆಯಲ್ಲಿರುವ ಸಿದ್ದಾರೂಡ ಮಠದಲ್ಲಿ ವಿಶ್ರಾಂತಿಗಾಗಿ ತಂಗಿದ್ದ ವೇಳೆ ನನ್ನ …

Read More »

ಗಾಂಜಾ ಮತ್ತಲ್ಲಿ ತೇಲಾಡಿ ಬೆತ್ತಲಾಗಿ ಸ್ವಾಮೀಜಿ ಕಂಡು ಹುಬ್ಬಳ್ಳಿ ಜನರು ಬೆಚ್ಚಿಬಿದ್ದಿದ್ದಾರೆ.

ಹುಬ್ಬಳಿ/ಧಾರವಾಡ: ಗಾಂಜಾ ಮತ್ತಲ್ಲಿ ತೇಲಾಡಿ ಬೆತ್ತಲಾಗಿ ಸ್ವಾಮೀಜಿ ಕಂಡು ಹುಬ್ಬಳ್ಳಿ ಜನರು ಬೆಚ್ಚಿಬಿದ್ದಿದ್ದಾರೆ. ಹುಬ್ಬಳ್ಳಿ ಶಬರಿ ನಗರದ ಅಯ್ಯಪ್ಪ ಸ್ವಾಮೀಜಿ ಮಠದ ಪೀಠಾದೀಶನ ಬೆತ್ತಲೆ ಪುರಾಣದ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ. ಮೋಹನ್ ಗುರು ಸ್ವಾಮೀಜಿ ಅವತಾರ ಕಂಡು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ಆತನನ್ನು ಮಠದಿಂದ ಹೊರ ಕಳುಹಿಸಬೇಕೆಂಬ ಕೂಗು ಕೇಳಿ ಬಂದಿದೆ. ನಂಗಾನಾಚ್ ಮೋಹನ್ ಸ್ವಾಮಿ ರಾತ್ರಿ ಕಂಠಪೂರ್ತಿ ಕುಡಿದು, ಗಾಂಜಾ ಹೊಡೆದು ಬೆತ್ತಲಾಗಿ ಕುಸಗಲ್ ರಸ್ತೆಯ …

Read More »

ಸಾರ್ವಜನಿಕ ಸೇವೆಗೆ ನೈರುತ್ಯ ರೈಲ್ವೆ ಸನ್ನದ್ಧ- ಮುಂಜಾಗ್ರತಾ ಕ್ರಮ ಹೇಗಿದೆ ಗೊತ್ತಾ?

ಹುಬ್ಬಳ್ಳಿ: ಕೊರೊನಾ ಲಾಕ್‍ಡೌನ್‍ನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಡಿಲಿಕೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯ ಆಡಳಿತ ಕಚೇರಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಮೇ 4ರಿಂದ ಶೇ.33 ಸಿಬ್ಬಂದಿಯೊಂದಿಗೆ ಕೆಲಸ ಆರಂಭಿಸಿವೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತೆ ಕೆಲಸಕ್ಕೆ ಹಾಜರಾಗುತ್ತಿರುವುದರಿಂದ ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿನ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಪ್ರವೇಶದ್ವಾರದಲ್ಲಿ ದೇಹ ತಾಪಮಾನ ಸ್ಕ್ರೀನಿಂಗ್ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾರ್ಯಾಗಾರಕ್ಕೆ …

Read More »

ಹುಬ್ಬಳ್ಳಿಯಲ್ಲಿ ಕೂಡ ಅಜ್ಜಿಯೊಬ್ಬರು ದೊಣ್ಣೆ ಹಿಡಿದುಕೊಂಡೇ ಬಂದು ಮದ್ಯದಂಗಡಿ ಸರತಿ ಸಾಲಿನಲ್ಲಿ

ಹುಬ್ಬಳ್ಳಿ: ಲಾಕ್ ಡೌನ್ ಸಡಿಲಿಕೆ ಬಳಿಕ ಮದ್ಯದಂಗಡಿ ತೆರವು 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಜನ ಕ್ಯೂನಲ್ಲಿ ನಿಂತು ಎಣ್ಣೆ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಹುಬ್ಬಳ್ಳಿಯಲ್ಲಿ ಕೂಡ ಅಜ್ಜಿಯೊಬ್ಬರು ದೊಣ್ಣೆ ಹಿಡಿದುಕೊಂಡೇ ಬಂದು ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು. ಹೌದು ಹಳೆ ಹುಬ್ಬಳ್ಳಿಯ ಮದ್ಯದಂಗಡಿಯಲ್ಲಿ ಅಜ್ಜಿ ಸಾರ್ವಜನಿಕರ ಕುತೂಹಲಕ್ಕೆ ಕಾರಣರಾದರು. ಮದ್ಯ ಖರೀದಿ ಮಾಡಲು ಬಂದಿದ್ದ ಅಜ್ಜಿಯನ್ನು ನೋಡಿ ಮದ್ಯಪ್ರಿಯರು ಅಚ್ಚರಿಗೊಂಡಿದ್ದಾರೆ. ಕಳೆದ 41 ದಿನಗಳಿಂದ ಅಂದರೆ …

Read More »

ಮೆಡಿಕಲ್ ಶಾಪ್ ಖಾಲಿ – ಮದ್ಯದಂಗಡಿ ಫುಲ್,ಬಿಸಿಲಿನಲ್ಲೇ ಕ್ಯೂ ನಿಂತ ಎಣ್ಣೆಪ್ರಿಯರು….

ಹುಬ್ಬಳ್ಳಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಇದೂವರೆಗೂ ಮದ್ಯ ಮಾರಾಟವನ್ನ ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಲಾಕ್‍ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ ಪರಿಣಾಮ ಮದ್ಯ ಪ್ರಿಯರು ಬೆಳಗ್ಗೆಯಿಂದ ಮದ್ಯ ಖರೀದಿ ಮಾಡಲು ಕ್ಯೂ ನಿಂತಿದ್ದಾರೆ. ಆದರೆ ಪಕ್ಕದಲ್ಲಿದ್ದ ಮೆಡಿಕಲ್ ಶಾಪ್ ಮಾತ್ರ ಖಾಲಿಯಾಗಿದೆ. ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣ ಬಳಿಯ ದಾರುವಾಲ್ ಶಾಪ್ ಮುಂದೆ ಎಣ್ಣೆ ಖರೀದಿ ಮಾಡಲು ಸುಮಾರು ಒಂದು ಕೀಲೋ …

Read More »

ಬಾರ್‌ಗಳ ಮುಂದೆ ಸ್ವತಃ ತಾವೇ ಬ್ಯಾರಿಕೇಡ್ ನಿರ್ಮಿಸಿದ ಮದ್ಯ ಪ್ರಿಯರು……….

ಹುಬ್ಬಳ್ಳಿ: ಲಾಕ್‍ಡೌನ್ ಜಾರಿಯಾದ ದಿನದಿಂದಲೂ ಎಣ್ಣೆ ಸಿಗದೆ ಪರದಾಡಿದ ಕುಡುಕರು ನಾಳೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರ ಮೇ 4ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು, ಕುಡುಕರಲ್ಲಿ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಮದ್ಯಪ್ರಿಯರು ನಗರದ ಕಾಟನ್ ಮಾರ್ಕೆಟ್ ನಲ್ಲಿ ಸ್ವತ ತಾವೇ ಮುಂದೆ ನಿಂತು ಬಾರ್‍ಗಳಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಟನ್ ಮಾರ್ಕೆಟ್‍ನ ಎಂಎಸ್‍ಐಎಲ್ ಮುಂದೆ ನೂಕುನುಗ್ಗಲು ಆಗದಂತೆ ತಾವೇ ಕಟ್ಟಿಗೆಯ ಬ್ಯಾರಿಕೇಡ್ ಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸರತಿ …

Read More »