ಧಾರವಾಡ: ನೂಪುರ್ ಶರ್ಮಾ ಬೆಂಬಲಿಗ, ಟೈಲರ್ ಕನ್ನಯ್ಯ ಲಾಲ್ ಕೊಲೆಯನ್ನು ಖಂಡಿಸಿ ನಾಳೆ ದೇಶಾದ್ಯಂತ ಹಿಂದು ಸಂಘಟನೆಗಳು ಅಭಿಯಾನ ಆರಂಭಿಸಲಿದ್ದಾರೆ. ಈ ಕುರಿತು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿಷಯ ಬಹಿರಂಗಪಡಿಸಿದ್ದಾರೆ. ಕನ್ನಯ್ಯ ಲಾಲ್ ಕೊಲೆಯನ್ನು ಖಂಡಿಸಿ ಧಾರವಾಡದಲ್ಲಿ ಮಾತನಾಡಿರುವ ಮುತಾಲಿಕ್, ನಾಳೆ ಶ್ರೀರಾಮ ಸೇನೆ, ಯುವ ಬ್ರಿಗೇಡ್, ಹಿಂದೂ ಜನಜಾಗೃತಿ ಸೇರಿ ಇತರೆ ಸಂಘಟನೆಗಳಿಂದ ಅಭಿಯಾನ ಆರಂಭವಾಗಲಿದೆ. ‘ನಾನು ಕನ್ನಯ್ಯ ಲಾಲ್’, ‘ನಾನು ನೂಪುರ್ ಶರ್ಮಾ ಬೆಂಬಲಿಗ’ ಎಂಬ …
Read More »ಹುಬ್ಬಳ್ಳಿ : ಪ್ರೇಮ ವೈಫಲ್ಯಕ್ಕೆ ನೊಂದು ನೇಣಿಗೆ ಶರಣಾದ ಯುವಕ
ಹುಬ್ಬಳ್ಳಿ : ಯುವಕನೋರ್ವ ಪ್ರೇಮ ವೈಫಲ್ಯಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕೊಟ್ರೇಶ್ ಮಠಪತಿ (20) ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಕೂಲಿ ಕಾರ್ಮಿಕನಾಗಿದ್ದ ಕೊಟ್ರೇಶ್ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆ ಯುವತಿಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯವಾಗಿದೆ. ಇದರಿಂದ ಮನನೊಂದು ಕೊಟ್ರೇಶ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ …
Read More »ಬೆಳಗಾವಿ ನೂತನ S.P. ಆಗಿ ನೇಮಿಸಿ ಸಂಜೀವ್ ಪಾಟೀಲ ನೇಮಕ,ಬೆಳಗಾವಿ ನೂತನ ಎಸ್ಪಿ ಆಗಿ ನೇಮಿಸಿ
ಧಾರವಾಡ : 16 ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಕೂಡ ವರ್ಗಾವಣೆಯಾಗಿದ್ದಾರೆ. ಅವರ ಸ್ಥಾನಕ್ಕೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಲೋಕೇಶ್ ಜಗಲಸರ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಪಿ.ಕೃಷ್ಣಕಾಂತ್ ಅವರನ್ನು ಬೆಂಗಳೂರಿನ ಸೌತ್ ಡಿವಿಜನ್‌ಗೆ ಡೆಪ್ಯುಟಿ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಇವರಿಂದ ತೆರವಾದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ …
Read More »ಧಾರವಾಡದಲ್ಲಿ ಬೈಕ್-ಕಾರು ಅಪಘಾತ: ಮೂವರ ಸಾವು
ಧಾರವಾಡ: ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಪ್ರಯಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ಸುಶೀಲವ್ವ ಹರಿಜನ, ಕಲ್ಲವ್ವ ಹರಿಜನ ಹಾಗೂ ರಾಜು ಎಂಬುವರು ಮೃತರು. ಸುಶೀಲವ್ವ ಮತ್ತು ಕಲ್ಲವ್ಬ ಬೊಗೂರ ಗ್ರಾಮದವರಾಗಿದ್ದು, ರಾಜು ತಿಗಡೊಳ್ಳಿ ನಿವಾಸಿಯಾಗಿದ್ದಾರೆ. ಮೃತ ಮಹಿಳೆಯರು ಧಾರವಾಡಕ್ಕೆ ನೇರಳೆ ಹಣ್ಣು ಮಾರಲು ಬಂದಿದ್ದರು ಎನ್ನಲಾಗುತ್ತಿದೆ. ಕಾರಿನವರು ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಗರಗ ಪೊಲೀಸ್ ಠಾಣೆ …
Read More »ಬೇರೆಯಾಗಲು ಬಂದು ಒಂದಾಗಿ ಮರಳಿದ ದಂಪತಿ: ನ್ಯಾಯಾಧೀಶರಿಂದಲೇ ರಾಜಿ ಸಂಧಾನ!
ಧಾರವಾಡ: ದಿನನಿತ್ಯ ಸಾವಿರಾರು ವಿಚ್ಛೇದನ ಪ್ರಕರಣಗಳು ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗುತ್ತಿವೆ. ಮದುವೆಯಾದ ತಿಂಗಳ ಒಳಗೇ ವಿಚ್ಚೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣಗಳೂ ಇವೆ. ಆದರೆ ಇಲ್ಲೊಂದು ಅಪರೂಪದಲ್ಲಿ ಅಪರೂಪ ಪ್ರಕರಣವೊಂದು ನಡೆದಿದ್ದು, ವಿಚ್ಛೇದನಕ್ಕೆ ಬಂದ ಗಂಡ-ಹೆಂಡತಿಯನ್ನು ನ್ಯಾಯಾಧೀಶರೇ ಒಂದು ಮಾಡಿದ್ದಾರೆ.ಧಾರವಾಡ ಕೌಟುಂಬಿಕ ನ್ಯಾಯಾಲಯದಲ್ಲಿ ಅಪರೂಪದ ರಾಜಿ ಸಂಧಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರು ಸಾಕ್ಷಿಯಾಗಿದ್ದಾರೆ. ನಾಲ್ಕು ಮಕ್ಕಳಾದ ಬಳಿಕ ಗಂಡ ಹೆಂಡತಿಯಲ್ಲಿ ಬಂದಿದ್ದ ವೈಮನಸ್ಸು, …
Read More »ಗುಜರಿ ಬಸ್ ಖರೀದಿಗೆ ಮುಂದಾದ NWKRTC: ಉತ್ತರ ಕರ್ನಾಟಕ ಜನತೆಯಿಂದ ಆಕ್ರೋಶ
ಹುಬ್ಬಳ್ಳಿ: ಈಗಾಗಲೇ ಹುಬ್ಬಳ್ಳಿ ನಗರ ವಾಯುಮಾಲಿನ್ಯದಲ್ಲಿ ಅಗ್ರಸ್ಥಾನಕ್ಕೇರಿದೆ. ಹೀಗಿದ್ದರೂ ಸಾರಿಗೆ ಸಂಸ್ಥೆ ಮತ್ತಷ್ಟು ಅವೈಜ್ಞಾನಿಕ ನಿರ್ಧಾರದ ಮೂಲಕ ಜನರ ಜೀವನದ ಜೊತೆಗೆ ಆಟವಾಡಲು ನಿರ್ಧರಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಬಿಎಂಟಿಸಿಯ ಗುಜರಿ ಬಸ್ ಖರೀದಿಗೆ NWKRTC ಮುಂದಾಗಿದೆ. ಬೆಂಗಳೂರಲ್ಲಿ ಓಡಿಸಿ ಬಿಟ್ಟಿರುವ 100 ಬಸ್ ಖರೀದಿಗೆ ಸಂಸ್ಥೆ ನಿರ್ಧರಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂರಾರು ಬಸ್‌ಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದ್ದು, ಬಹುತೇಕ ಬಸ್ಗಳು ಲಕ್ಷಗಟ್ಟಲೆ ಕಿ.ಮೀ ಓಡಾಡಿವೆ ಎಂದು ತಿಳಿದುಬಂದಿದೆ. …
Read More »ಯುವತಿಗೆ ಚುಡಾಯಿಸಿದ ಯುವಕನಿಗೆ ಸಹೋದರರಿಂದ ಚಾಕು ಇರಿತ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಸಹೋದರಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಅಣ್ಣಂದಿರಿಬ್ಬರು ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹಳೇ ಹುಬ್ಬಳ್ಳಿಯ ಧಾರವಾಡ ಕಾಲೋನಿಯಲ್ಲಿ ನಡೆದಿದೆ. ಚಂದ್ರಶೇಖರ್ ಎಂಬಾತನೇ ತೀವ್ರವಾಗಿ ಗಾಯಗೊಂಡ ಯುವಕನಾಗಿದ್ದಾನೆ. ಈತ ಯುವತಿಯೊಬ್ಬಳಿಗೆ ಚುಡಾಯಿಸಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಆಕೆಯ ಸಹೋದರರಾದ ಕಿರಣ್ ಹಾಗೂ ಅಭಿ ಎನ್ನುವವರು ಚಾಕು ಇರಿದಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಗಾಯವಾಗಿರುವ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ …
Read More »ಮೈಸೂರು-ಬೆಳಗಾವಿ ರೈಲು ಸಂಚಾರ ಭಾಗಶಃ ರದ್ದು
ಹುಬ್ಬಳ್ಳಿ: ಬೆಳಗಾವಿ-ಸುಲಧಾಳ ವಿಭಾಗ ನಡುವೆ ನಡೆಯುತ್ತಿರುವ ಜೋಡು ಮಾರ್ಗ ಕಾಮಗಾರಿ ನಿಮಿತ್ತ ವಿಶ್ವಮಾನವ ನಿತ್ಯ ಸಂಚಾರ ಎಕ್ಸ್‌ಪ್ರೆಸ್ ರೈಲು ಭಾಗಶಃ ರದ್ದುಗೊಳಿಸಲಾಗಿದೆ. ಜೂ.22ರಿಂದ 28ರ ವರೆಗೆ ಮೈಸೂರು-ಬೆಳಗಾವಿ ವಿಶ್ವಮಾನವ ನಿತ್ಯ ಸಂಚಾರ ಎಕ್ಸ್‌ಪ್ರೆಸ್ (17326) ರೈಲು ಧಾರವಾಡ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಬೆಳಗಾವಿ ಬದಲು ಧಾರವಾಡಕ್ಕೆ ಕೊನೆಗೊಳ್ಳಲಿದೆ. 23ರಿಂದ 29ರ ವರೆಗೆ ಬೆಳಗಾವಿ-ಮೈಸೂರು (17325) ರೈಲು ಬೆಳಗಾವಿ ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಬೆಳಗಾವಿ ಬದಲು …
Read More »ಮೋದಿ ಬಂದಾಗ ಜನ ಸೇರಿಸಿದ್ರೆ ಕೋವಿಡ್ ಹೆಚ್ಚಾಗಲ್ವಾ ಅನ್ನೋ ಪತ್ರಕರ್ತರ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಸಿಡಿಮಿಡಿ
ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ (PM Modi) ಬಂದಾಗ ಜನ ಸೇರಿಸಿದ್ರೆ ಕೋವಿಡ್ (Covid) ಹೆಚ್ಚಾಗಲ್ವಾ ಅನ್ನೋ ಪತ್ರಕರ್ತರ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಸಿಡಿಮಿಡಿಗೊಂಡರು. ಉತ್ತರಿಸದೇ ಹೊರಟು ಹೋದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಭಟನೆ ಮಾಡಿದ್ರೆ ಕೋವಿಡ್ ಹೆಚ್ಚಾಗುತ್ತೆ. ಪ್ರಧಾನಿ ಮೋದಿ ಬಂದಾಗ ಜನ ಸೇರಿದರೆ …
Read More »ಕರುಳ ಕುಡಿಯನ್ನೇ ಸಾಯಿಸಲು ಹೋಗಿದ್ದಾಕೆ ಅರೆಸ್ಟ್: ಹತ್ಯೆಗೆ ಸ್ಕೆಚ್ ಹಾಕಿದ್ದೇಕೆ? ಕೊನೆಗೂ ಬಾಯ್ಬಿಟ್ಟ ಮಹಾತಾಯಿ!
ಹುಬ್ಬಳ್ಳಿ: ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಸ್ಪತ್ರೆಯಲ್ಲಿ ಕಳೆದ ಸೋಮವಾರ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಮತ್ತು ಸಲ್ಮಾ ದಂಪತಿಯ 40 ದಿನದ ಮಗು ಕಾಣೆಯಾಗಿತ್ತು. ಸಲ್ಮಾ ಚಿಕಿತ್ಸೆಗೆಂದು ಮಗುವನ್ನು ಕರೆದುಕೊಂಡು ಬಂದಿದ್ದರು. ಕೊನೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಏಕಾಏಕಿ ಕಣ್ಮರೆಯಾಗಿತ್ತು. ಮಗು ಇಲ್ಲದಿದ್ದರಿಂದ ಆಸ್ಪತ್ರೆ ಸಿಬ್ಬಂದಿ ದಿಗಿಲುಗೊಂಡಿದ್ದರು. ಕೂಡಲೇ ಸಿಸಿಟಿವಿ ಪರಿಶೀಲಿಸಲಾಗಿತ್ತು. ವಾರ್ಡ್ನಿಂದಾಗಲಿ, ಕಾರಿಡಾರ್ನಿಂದಾಗಲಿ ಮಗು …
Read More »
Laxmi News 24×7