ಹುಬ್ಬಳ್ಳಿ :ಜಿಲ್ಲಾ ಪಂಚಾಯಿತಿ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶ ಮಾಡದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಇಂಥ ಸನ್ನಿವೇಶದಲ್ಲಿ, ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಧಾರವಾಡ ಕ್ಷೇತ್ರದಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ವಿನಯ ಕುಲಕರ್ಣಿ ನೀಡಿರುವ ಹೇಳಿಕೆ ಸಹಜವಾಗಿ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧಿಸಿರುವುದರಿಂದ ವಿನಯ ಕುಲಕರ್ಣಿ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಆದರೆ, ಮೇಲಿಂದ …
Read More »ಹೋಟೆಲ್ ನಲ್ಲಿ ಚಟ್ನಿ ವಿಚಾರಕ್ಕೆ ಕಿರಿಕ್;ಪೊಲೀಸರೆದುರು ಬ್ಲೇಡ್ ನಿಂದ ಕುತ್ತಿಗೆ ಕುಯ್ದ ಯುವಕ
ಹುಬ್ಬಳ್ಳಿ: ಹೊಟೇಲ್ ನಲ್ಲಿ ಊಟದ ವಿಷಯವಾಗಿ ಮಾಲಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಓರ್ವನನ್ನು ಠಾಣೆಗೆ ವಿಚಾರಣೆಗೆಂದು ಪೊಲೀಸರ ಬಳಿ ಕರೆದುಕೊಂಡು ಬಂದಾಗ, ಆತ ಕುತ್ತಿಗೆಗೆ ಬ್ಲೇಡ್ ನಿಂದ ಕೊಯ್ದುಕೊಂಡು ಬೆದರಿಕೆ ಹಾಕಲು ಮುಂದಾದ ಘಟನೆ ಇಲ್ಲಿನ ಹಳೇಹುಬ್ಬಳ್ಳಿ ಠಾಣೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಇಲ್ಲಿನ ಗಣೇಶಪೇಟೆ ಮೀನು ಮಾರುಕಟ್ಟೆಯ ರಾಘವೇಂದ್ರ ನಾಯಕ ಎಂಬಾತನೆ ಕುತ್ತಿಗೆಗೆ ಬ್ಲೇಡ್ ಇರಿದುಕೊಂಡವ. ಈತನು ಗುರುವಾರ ಇಂಡಿ ಪಂಪ್ ವೃತ್ತ ಬಳಿಯ ಬಿರಿಯಾನಿ ಹೌಸ್ ಅಂಗಡಿಯ …
Read More »ಹುಬ್ಬಳ್ಳಿ: ಇದು ಎರಡು ನಾಯಿಗಳ ಕಥೆ; ರಕ್ತದಾನ ಮಾಡಿ ಮಾಯಾಳ ಜೀವ ಉಳಿಸಿದ ಚಾರ್ಲಿ!
ಹುಬ್ಬಳ್ಳಿ: ಸಮಯೋಚಿತ ಸಹಾಯವು ಜೀವಗಳನ್ನು ಉಳಿಸುತ್ತದೆ. ಅಂತಹ ಒಂದು ಘಟನೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವರದಿಯಾಗಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಡಾಗ್ ಆಗಿ ಕಾರ್ಯನಿರ್ವಹಿಸುತ್ತಿರುವ ಬೆಲ್ಜಿಯಂ ಶೆಫರ್ಡ್ ಅಸ್ವಸ್ಥ ನಾಯಿ ಮಾಯಾಳ ಜೀವ ಉಳಿಸಲು ಜರ್ಮನ್ ಶೆಫರ್ಡ್ ಚಾರ್ಲಿ ರಕ್ತದಾನ ಮಾಡಿದ್ದಾನೆ. ಈಗ ಮಾಯಾ ಚೇತರಿಸಿಕೊಂಡಿದ್ದು, ವಾರದೊಳಗೆ ಮತ್ತೆ ಏರ್‌ಪೋರ್ಟ್ ಡ್ಯೂಟಿಗೆ ಹಾಜರಾಗಲಿದ್ದಾಳೆ. ಇದು ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳ ಎರಡು ನಾಯಿಗಳ ಕಥೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ …
Read More »ಹುಬ್ಬಳ್ಳಿ| ಮನೆ ಮನೆಯಲ್ಲೂ ಹಿಟ್ಟಿನ ಗಿರಣಿ…
ಹುಬ್ಬಳ್ಳಿ: ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಗೋಧಿ, ಜೋಳವನ್ನು ಗಿರಣಿಗೆ ಹಾಕಿಸಿಕೊಂಡು ಬರುವುದು ಸಾಕಾಗಿದ್ದರೆ, ನಿಮಗಾಗಿಯೇ ಬಂದಿದೆ ಹೊಸದೊಂದು ಪೋರ್ಟೆಬಲ್ ಗಿರಣಿ. ಇದು ಧಾರವಾಡದ ಕೃಷಿ ಮೇಳದಲ್ಲಿನ ಒಂದು ಆಕರ್ಷಣೆ. ಪ್ರತಿ ಬಾರಿ ಗಿರಣಿಗೆ ಕಾಳು ಒಯ್ದು ಕೊಡುವುದು, ಅಲ್ಲಿ ಕಾಯುವುದು ಇಂಥ ಜಂಜಾಟಗಳಿಂದ ತಪ್ಪಿಸಲು ಮನೆಯಲ್ಲೇ ಎಲ್ಲ ರೀತಿಯ ಕಾಳುಗಳನ್ನು ಹಿಟ್ಟು ಮಾಡಲು ‘ಗ್ರೈಂಡ್‌ಮಾ’ ಕಂಪನಿಯು ಸಂಪೂರ್ಣ ಸ್ವಯಂ ಚಾಲಿತ ‘ಹೈಟೆಕ್’ ಯಂತ್ರವೊಂದನ್ನು ಪರಿಚಯಿಸಿದೆ. ಇದು ನಿಮ್ಮ …
Read More »ಶ್ವಾನಕ್ಕೆ ಶ್ವಾನದಿಂದಲೇ ರಕ್ತದಾನ
ಧಾರವಾಡ: ಕೃಷಿ ಮೇಳದಲ್ಲಿ(Krishi Mela) ಶ್ವಾನವೊಂದಕ್ಕೆ ಶ್ವಾನವೇ(Dog) ರಕ್ತದಾನ(Blood Donation) ಮಾಡಿ ಸುದ್ದಿಯಾಗಿದೆ. ಧಾರವಾಡ(Dharawada) ಕೃಷಿ ಮೇಳಕ್ಕೆ ಆಗಮಿಸಿರುವ ಡಾಗ್ ಸ್ಕ್ವಾಡ್ ʼಮಾಯಾʼಗೆ ಅನಾರೋಗ್ಯ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ರೆಸ್ಕ್ಯೂ ಟೀಂ ಸದಸ್ಯರಾಗಿರುವ ಸೋಮು ಅವರ ಜರ್ಮನ್ ಶೆಫರ್ಡ್ ʼಚಾರ್ಲಿʼ ರಕ್ತ ನೀಡಿದೆ.ಕೃಷಿ ವಿಶ್ವವಿದ್ಯಾಲಯ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ರಕ್ತದಾನ ಮಾಡಿಸಿದ್ದಾರೆ. ಎರಡನೇ ಬಾರಿ ರಕ್ತದಾನ ಮಾಡುವ ಮೂಲಕ ಚಾರ್ಲಿ ಗಮನ ಸೆಳೆದಿದೆ.
Read More »ಹುಬ್ಬಳ್ಳಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
ಹುಬ್ಬಳ್ಳಿ, ಸೆಪ್ಟೆಂಬರ್, 19: ಸೆಪ್ಟೆಂಬರ್ 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ಅವರು ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿ ಧಾರವಾಡ ನಗರಕ್ಕೆ ಭೇಟಿ ನೀಡಲಿದ್ದಾರೆ. ಈ ಬಾರಿ ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡಿದ್ದಾರೆ. ವಿಶ್ವ ವಿಖ್ಯಾತ …
Read More »ಬಸವರಾಜ ಹೊರಟ್ಟಿ ಅತಂತ್ರಕ್ಕೆ ಬಿಜೆಪಿ ಯತ್ನ? ಡಿಸೆಂಬರ್‌ವರೆಗೆ ಸಭಾಪತಿ ಆಯ್ಕೆ ಇಲ್ಲ
ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತಲ್ಲದೆ, ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಯ್ಕೆ ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಆಯ್ಕೆ ಪ್ರಕ್ರಿಯೆಗೆ ದಿಢೀರ್ ತಡೆಯೊಡ್ಡುವ ಮೂಲಕ ಬಿಜೆಪಿ ನಾಯಕರು ಹೊರಟ್ಟಿ ಅವರನ್ನು ಅತಂತ್ರ ಮಾಡುವ ಯತ್ನಕ್ಕೆ ಮುಂದಾಗಿ ದ್ದಾರೆಯೇ ಎಂಬ ಶಂಕೆ ಮೂಡಿದೆ. ಹೊರಟ್ಟಿ ಸುಮಾರು ಮೂರು ದಶಕಗಳ ಕಾಲದ ಜನತಾ ಪರಿವಾರದ ನಂಟು ತೊರೆದು ಬಿಜೆಪಿ ಸೇರಿ ಪಶ್ಚಿಮ …
Read More »BSY ಸ್ವಾಗತಕ್ಕೆ ಬರಲಿಲ್ಲ ಹುಬ್ಬಳ್ಳಿ ಬಿಜೆಪಿ ನಾಯಕರು!
ಹುಬ್ಬಳ್ಳಿ (ಸೆ.18): ಮಾಜಿ ಸಿಎಂ ಯಡಿಯೂರಪ್ಪ (B S Yediyurappa) ಏಕಾಂಗಿ ಆದ್ರಾ? ಅನ್ನೋ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡಲಾರಂಭಿಸಿದೆ. ಅದಕ್ಕೆ ಕಾರಣ ಯಡಿಯೂರಪ್ಪ ಹುಬ್ಬಳ್ಳಿಗೆ (Hubballi) ಆಗಮಿಸಿದ ಸಂದರ್ಭದಲ್ಲಿ ಯಾವೊಬ್ಬ ಸ್ಥಳೀಯ ನಾಯಕರು ಅತ್ತ ಸುಳಿಯದೇ ಇರೋದು ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ (Airport) ಆಗಮಿಸಿದ ಸಂದರ್ಭದಲ್ಲಿ ಒಬ್ಬ ಸ್ಥಳೀಯ ಬಿಜೆಪಿ ನಾಯಕರೂ (BJP Leaders) ಸಹ ಸ್ವಾಗತಕ್ಕೆ ಬಂದಿರಲಿಲ್ಲ. ಬಿಎಸ್ವೈ ಸ್ವಾಗತಕ್ಕೆ ಬರಲಿಲ್ಲ ನಾಯಕರು ಬಿಜೆಪಿ …
Read More »17 ರಿಂದ ನಾಲ್ಕು ದಿನಗಳ ಕೃಷಿ ಹಬ್ಬ; 10 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ
ಧಾರವಾಡ: ಕೊರೊನಾ ಮಹಾಮಾರಿಯಿಂದಾಗಿ ಕಳೆದೆರಡು ವರ್ಷಗಳಿಂದ ಕೈ ಬಿಟ್ಟಿದ್ದ ಪ್ರತಿಷ್ಠಿತ ಧಾರವಾಡ ಕೃಷಿ ವಿವಿ ನಡೆಸುವ ಧಾರವಾಡ ಕೃಷಿ ಮೇಳವನ್ನು ಸೆ.17ರಿಂದ ಸೆ.20ರವರೆಗೆ ನಡೆಸಲು ಕೃಷಿ ವಿಶ್ವವಿದ್ಯಾಲಯ ತೀರ್ಮಾನಿಸಿದೆ. ನಾಲ್ಕು ದಿನಗಳವರೆಗೆ ನಡೆಯುವ ಈ ವರ್ಷದ ಕೃಷಿ ಮೇಳವನ್ನು “ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದು, ಶನಿವಾರವೇ ಬೀಜ ಮೇಳದ ಮೂಲಕ ರೈತರ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಕಳೆದ 2-3 ವರ್ಷಗಳಿಂದ ನೆರೆ ಹಾವಳಿ, ಕೋವಿಡ್-19 ಹೊಡೆತದಿಂದ …
Read More »ಬಿಜೆಪಿಯವರು ಲಂಚದ ಹಣದಲ್ಲಿ ಮಜಾ ಮಾಡುತ್ತಿದ್ದಾರೆ: ಸಿದ್ದರಾಮಯ್ಯ ಕಿಡಿ
ಹುಬ್ಬಳ್ಳಿ: ”ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಬಿಜೆಪಿಯವರು ಲಂಚದ ಹಣದಲ್ಲಿ ಮಜಾ ಮಾಡುತ್ತಿದ್ದಾರೆ” ಎಂದು ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಕಿಡಿ ಕಾರಿದ್ದಾರೆ. ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ರಾಜ್ಯದಲ್ಲಿ ಪ್ರವಾಹದಿಂದ 7 ಲಕ್ಷ ಹೆಕ್ಟೇರ್ ನಷ್ಟು ಬೆಳೆ ಹಾನಿಯಾಗಿದೆ. ರೈತರಿಗೆ ಇಲ್ಲಿವರೆಗೂ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಜನಸ್ಪಂದನ ಹೆಸರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ” ಎಂದು ಸರಕಾರದ ವಿರುದ್ಧ ಹರಿಹಾಯ್ದರು. ”ರಾಜ್ಯದಲ್ಲಿ …
Read More »
Laxmi News 24×7