Breaking News

ಹುಬ್ಬಳ್ಳಿ

ಮನೆಯಲ್ಲಿನ ಅಡುಗೆ ಅನಿಲ ಸೋರಿಕೆ ಸುಟ್ಟು ಕರಕಲಾಗಿರುವ ವಸ್ತುಗಳು

ಮನೆಯಲ್ಲಿನ ಅಡುಗೆ ಅನಿಲ ಸೋರಿಕೆಯಾಗಿರುವ ಪರಿಣಾಮ ಬೆಂಕಿ ಹತ್ತಿದ್ದು, ದೊಡ್ಡ ಪ್ರಮಾಣದಲ್ಲಿನ ಗೃಹಬಳಕೆಯ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ನಡೆದಿದೆ.   ದೀಪಾವಳಿ ಹಿನ್ನೆಲೆಯಲ್ಲಿ ಮನೆಯವರೆಲ್ಲರೂ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಸಿಲಿಂಡರ್ ಲೀಕ್ ಆಗಿದ್ದು, ಸೋರಿಕೆಯಾದ ಸಿಲಿಂಡರ್ ಏರ್ ಪಾಸ್ ಆಗಲು ಯಾವುದೇ ಸ್ಥಳಾವಕಾಶ ಇಲ್ಲದೇ ಇರುವುದರಿಂದ ಆಕಸ್ಮಿಕ ಬೆಂಕಿ ತಗುಲಿದ್ದು, ದೊಡ್ಡ ಪ್ರಮಾಣದಲ್ಲಿ ಮನೆಯಲ್ಲಿರುವ ವಸ್ತುಗಳು ಸುಟ್ಟು ಕರಕಲಾಗಿವೆ.

Read More »

ಭಕ್ತಿ ಭಾವದಿಂದ ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬ

ಹುಬ್ಬಳ್ಳಿ, ಅಕ್ಟೋಬರ್ 26 : ರಾಜ್ಯದ ಹಲವೆಡೆ ಈಗ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ. ವರ್ಷಗಳಿಂದ ಒಂದಿಲ್ಲೊಂದು ವಿಷಯಕ್ಕೆ ಕೋಮು ಭಾವನೆ ಕೆರಳಿಸುವ ಪ್ರಕರಣಗಳು ನಡೀಯುತ್ತಲೇ ಇವೆ. ಆದರೆ ಕುಂದಗೋಳ ತಾಲೂಕ ಗುಡನಕಟ್ಟಿ ಗ್ರಾಮದ ಮುಸ್ಲಿಂ ಕುಟುಂಬ ದೀಪಾವಳಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಸಾರೆ.   ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಒಂದಿಲ್ಲೊಂದು ವಿಷಯದಲ್ಲಿ ಕೋಮು ಸಂಘರ್ಷಗಳು ನಡೆಯುತ್ತಲೆ ಇವೆ. ಆದರೆ ದೇಶದಲ್ಲಿ ಕೆಲವು ಭಾಗದ ಜನ ಈಗಲೂ …

Read More »

ಬಿಜೆಪಿ, ಕಾಂಗ್ರೆಸ್‌ನವರು ಬಸ್ ಸ್ಟಾಂಡ್ ಬಸವೆಯರ ತರಹ ಅಗಿದ್ದಾರೆ-ಸಿ.ಎಂ. ಇಬ್ರಾಹಿಂ

ಹುಬ್ಬಳ್ಳಿ ಅಕ್ಟೋಬರ್‌ 26: ಬಿಜೆಪಿ, ಕಾಂಗ್ರೆಸ್‌ನವರು ಬಸ್ ಸ್ಟಾಂಡ್ ಬಸವೆಯರ ತರಹ ಆಗಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ನವರೆಗೆ ಮಾನ ಮರ್ಯಾದೆ,ಜೈಲ್, ಬೇಲು ಇಲ್ಲದಂತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.   ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸ್ಥಾನ ಇಲ್ಲ ಮಾನ ಇದೆ ಆದರೆ ಬಿಜೆಪಿಯಲ್ಲಿ 12 ಜನರ ವಿಡಿಯೋ ಸಲುವಾಗಿ ಬೇಲ್ ತೆಗೆದುಕೊಂಡು ಕುಳಿತಿದ್ದಾರೆ. ಅದರಲ್ಲಿ ಏನು ಇದೆ ಅಂತ …

Read More »

ಮೀಸಲು ಅಧ್ಯಾದೇಶಕ್ಕೆ ಅಧಿವೇಶನದಲ್ಲಿ ಒಪ್ಪಿಗೆ: ಮುಖ್ಯಮಂತ್ರಿ

ಹುಬ್ಬಳ್ಳಿ: ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ಅಧ್ಯಾದೇಶಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಮೀಸಲಾತಿ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಜಾರಿಗಾಗಿ ಕಾನೂನು ರಕ್ಷಣೆ ಕೊಡಲು ಎಲ್ಲ ಸಾಧ್ಯತೆಗಳನ್ನು ಮಾಡಲಾಗುವುದು. ಅಧ್ಯಾದೇಶಕ್ಕೆ ಮುಂಬರುವ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುವುದು. ಪಂಚಮಸಾಲಿ ಸಹಿತ ಎಲ್ಲ ಮೀಸಲಾತಿ ಕುರಿತು ಬೇರೆ ಬೇರೆ ಹಂತಗಳಲ್ಲಿ ಹಿಂದುಳಿದ ವರ್ಗಗಳ …

Read More »

ಬಂಗಾರದ ಆಶೆಗೆ ದೊಡ್ಡಮನನ್ನೆ ಕೊಲೆ ಮಾಡಿ ಮಗ ಪರಾರಿ

ಬಂಗಾರದ ಆಶೆಗೆ ದೊಡ್ಡಮನನ್ನೆ ಕೊಲೆ ಮಾಡಿ ಮಗ ಪರಾರಿಯಾದ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಹೌದು,,, ಚಿನ್ನದ ಆಶೆಗಾಗಿ ತಂಗಿಯ ಮಗ ಮಾಲತೇಶ 70 ವರ್ಷದ ದೊಡ್ಡಮ್ಮ ಕಮಲಮ್ಮನ್ನ ಕೊಲೆ ಮಾಡಿ‌ ಮಗ ಮಾಲತೇಶ್ ಎಸ್ಕೇಪ್ ಆಗಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಕಮಲಮ್ಮನ ಮನೆಗೆ ಬಂದಿದ್ದ ಮಾಲತೇಶ, ಮಲಗಿದಲ್ಲೇ ಕಮಲಮ್ಮನ ಕಿವಿ ಕಟ್ ಮಾಡಿ ಕಿವಿಯೋಲೆ, ಕೊರಳಲ್ಲಿರೊ ಸರವನ್ನು ದೋಚಿ ಪರಾರಿಯಾಗಿದ್ದಾನೆ. ಇನ್ನುಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಕಮಲಮ್ಮ …

Read More »

ಧಾರವಾಡ: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ, ಆರೋಪಿಯ ಬಂಧನ

ಧಾರವಾಡ:ನಗರದಲ್ಲಿ ಯುವಕನೊಬ್ಬನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಲಿಂಗಕಾಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಪವನ್ ಬಯಾಲಿ ಎಂದು ಗುರುತಿಸಲಾಗಿದೆ. ಮೃತ ಯಾಸಿನ್ ರೊಟ್ಟಿವಾಲೆ ಪೋಷಕರು ನೀಡಿದ ದೂರಿನ ಮೇರೆಗೆ ಪವನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಅತ್ತಿಕೊಲ್ಲ ನಿವಾಸಿ ಯಾಸಿನ್ ಅಕ್ಟೋಬರ್ 12ರಂದು ನಾಪತ್ತೆಯಾಗಿದ್ದ. ನಂತರ, ಅವನ ದೇಹವು ಕೆಳಗೇರಿ ಕೆರೆಯಲ್ಲಿ ಪತ್ತೆಯಾಗಿತ್ತು. ಯಾಸಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪವನ್ …

Read More »

ಬಸನಗೌಡ ಯತ್ನಾಳ್ ಮತ್ತು ಅರವಿಂದ ಬೆಲ್ಲದ ಪಕ್ಷದ ನಾಯಕರಲ್ಲ: ಉಸ್ತುವಾರಿ ಅರುಣ್ ಸಿಂಗ್

ಹುಬ್ಬಳ್ಳಿ: ಬಸನಗೌಡ ಪಾಟೀಲ ಯತ್ನಾಳ ಪಕ್ಷದ ನಾಯಕಲ್ಲ. ಅವರೇನೋ ರಾಜ್ಯ- ರಾಷ್ಟ್ರ ನಾಯಕರಲ್ಲ. ಪಕ್ಷದ ಕೋರ್ ಕಮಿಟಿಯಲ್ಲಿ ಇಲ್ಲ. ಹೀಗಾಗಿ ಅವರ ಮಾತಿಗೆ ಮನ್ನಣೆ ಕೊಡಬೇಕಾಗಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.   ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರ ಬಗ್ಗೆ ಮಾತನಾಡಿದ್ದರ ಬಗ್ಗೆ ಹಿಂದೆಯೇ ನೋಟೀಸ್ ನೀಡಲಾಗಿದೆ. ಅದಕ್ಕೆ ಉತ್ತರ ನೀಡಿದ್ದಾರೆ. ಹಲವು ಬಾರಿ ಹೇಳಿದರೂ ಅದು ಪುನರಾವರ್ತನೆಯಾಗಿದೆ. ಅವರ ಸ್ವಭಾವ ಇರುವುದೇ ಹಾಗೆ. …

Read More »

ಧಾರವಾಡ ಜಿಲ್ಲಾ ಆಸ್ಪತ್ರೆ ಬಳಿ ಮಹಿಳೆಯ ಕೊಲೆ.

ಧಾರವಾಡ: ತಲೆ ಮೇಲೆ‌ ಕಲ್ಲು ಎತ್ತಿ ಹಾಕಿ ಮಹಿಳೆ ಕೊಲೆ ಮಾಡಿರುವ ಘಟನೆ ಧಾರವಾಡದ ಜಿಲ್ಲಾಸ್ಪತ್ರೆ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಜಿಲ್ಲಾಸ್ಪತ್ರೆ ‌ಬಳಿಯ ಸ್ಪರ್ಶ ಆಸ್ಪತ್ರೆ ಹತ್ತಿರ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಲೆ ಮಾಡಿ‌ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಎರಡು ತಲೆ ಹಾವು ಮಾರಾಟ ಯತ್ನ: ಹುಬ್ಬಳ್ಳಿಯಲ್ಲಿ ಮೂವರ ಬಂಧನ

ಹುಬ್ಬಳ್ಳಿ: ಅಕ್ರಮವಾಗಿ ಎರಡು ತಲೆ ಹಾವು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ಅವರಿಂದ ಕಾರು ವಶಪಡಿಸಿಕೊಳ್ಳುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ರಾಯಚೂರು ಮೂಲದವರು ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ಎರಡು ತಲೆಯ ಹಾವನ್ನು ಮಾರಾಟ ಮಾಡಲು ಆರೋಪಿಗಳು ಆಗಮಿಸಿದ್ದರು. ಇದರ …

Read More »

ಹಲಾಲ್‌ ಮುಕ್ತ ದೀಪಾವಳಿ: ಪ್ರಮೋದ್‌ ಮುತಾಲಿಕ್‌ ಕರೆ

ಹುಬ್ಬಳ್ಳಿ: ಹಲಾಲ್‌ ಮುಕ್ತ ದೀಪಾವಳಿ ಆಚರಿಸುವ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಂದ ಹಬ್ಬದ ಸಾಮಗ್ರಿ ಖರೀದಿಸ ಬಾರದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.   ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಮರಿಂದ ಹಬ್ಬದ ಸಾಮಗ್ರಿ ಖರೀದಿಸಿ ದರೆ ಅದು ಶಾಸ್ತ್ರೋಕ್ತ ಎನ್ನಿಸುವುದಿಲ್ಲ. ಇದರೊಂದಿಗೆ ಹಲಾಲ್‌ ಗುರುತು ಇರುವ ವಸ್ತುಗಳನ್ನು ಕಡೆಗಣಿಸಬೇಕು. ಈ ಗುರುತಿಗೆ ಸರಕಾರದಿಂದ ಯಾವುದೇ ಮಾನ್ಯತೆ ಇಲ್ಲ ಎಂದು ಅವರು ಹೇಳಿದರು.

Read More »