Breaking News

ಹುಬ್ಬಳ್ಳಿ

‘ಪತಲಿ ಕಮರಿಯಾ’ ನಂತರ ‘.ಈ ಸ್ವತ್ತು ಬಿಟ್ಟು ಇರಲಾರೆ.’; ರೋಗಿಗಳ ಮುಂದೆ ರೀಲ್ಸ್ ಮಾಡಿದ ಆಸ್ಪತ್ರೆ ಸಿಬ್ಬಂದಿ!

ಹುಬ್ಬಳ್ಳಿ: ರೀಲ್ಸ್ ಮಾಡುವ ಅಭ್ಯಾಸ ಅನೇಕರಿಗೆ ಇದೆ. ಆದರೆ ಎಲ್ಲದ್ದಕ್ಕೂ ಸ್ಥಾನ ಸಮಯ ಎಂದಿರುತ್ತದೆ. ಈ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮಾತ್ರ ರೋಗಿಗಳ ಮುಂದೆಯೇ ರೀಲ್ಸ್ ಮಾಡಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಈ ವೈದ್ಯ ಮತ್ತು ನರ್ಸ್ ಸಿಬ್ಬಂದಿ ರೀಲ್ಸ್ ಮಾಡಲು ಆಸ್ಪತ್ರೆಯನ್ನೇ ಸ್ಪಾಟ್ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಮತ್ತೊಬ್ಬ ಸಿಬ್ಬಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೀಲ್ಸ್ …

Read More »

ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ನಿಂದ ಬಂದ್ ಕರೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಭ್ರಷ್ಟಾಚಾರದ ಕೂಪ ಕಾಂಗ್ರೆಸ್, ಅವರು ಮಾಡಿರುವ ಕರ್ಮಕಾಂಡ ಒಂದಾ ಎರಡೇ. ಕಾಂಗ್ರೆಸ್ ಪಕ್ಷವೇ ಬಂದಾಗುತ್ತಿದೆ. ಇಂತಹ ಪ್ರತಿಭಟನೆ ಮೂಲಕ ಮುಂದಿನ ಚುನಾವಣೆ ನಡೆಸಬೇಕು ಎಂದುಕೊಂಡಿದ್ದಾರೆ. ಜನರು ಬಹಳ ಬುದ್ಧಿವಂತರು ಎಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.   ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ವಿರುಪಾಕ್ಷಪ್ಪ ಮಾಡಾಳ ಅವರ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಅಸ್ತಿತ್ವಕ್ಕಾಗಿ ಬಂದ್ ಗೆ ಕರೆ ಕೊಟ್ಟಿದ್ದಾರೆ. ಆರೋಪ ಮಾಡುವವರು ಮೊದಲು ಶುದ್ಧ …

Read More »

ಮಾರ್ಚ್‌ 12ರಂದು ಮದ್ದೂರು, ಧಾರವಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಹುಬ್ಬಳ್ಳಿ: ಮಾರ್ಚ್‌ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ನೆರವೇರಿಸಿದ ಬಳಿಕ ಅಲ್ಲಿಯೇ ಸಮೀಪದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳುವರು.   ನಂತರ 2.40ಕ್ಕೆ ಮೋದಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. 3.15ಕ್ಕೆ ಧಾರವಾಡದ ಐಐಟಿ ಪಕ್ಕದಲ್ಲಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಪ್ರಧಾನಿ ಆಗಮನವನ್ನು ಅವರ ಕಚೇರಿ ಖಚಿತಪಡಿಸಿದೆ’ ಎಂದು ಭಾನುವಾರ …

Read More »

ಹುಬ್ಬಳ್ಳಿ ಉದ್ಯಮಿಯ ಮನೆಯಲ್ಲಿ ದಾಖಲೆಯಿಲ್ಲದ ಮೂರು ಕೋಟಿ ರೂ ಪತ್ತೆ

ಹುಬ್ಬಳ್ಳಿ: ನಗರದ ಕೈಗಾರಿಕೋದ್ಯಮಿಯೊಬ್ಬರ ಮನೆಯಲ್ಲಿ ದಾಖಲಾತಿಗಳಿಲ್ಲದ ಮೂರು ಕೋಟಿ ರೂ. ಅಕ್ರಮ ಹಣ ದೊರೆತಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಇಲ್ಲಿನ ಭವಾನಿ ನಗರದ ಕೀಟನಾಶಕಗಳ ಕೈಗಾರಿಕೋದ್ಯಮಿ ರಮೇಶ ಎಂಬುವರ ಮನೆಯಲ್ಲಿ ದಾಖಲಾತಿಗಳಿಲ್ಲದ ಹಣ ದೊರೆತಿದೆ.   ಸಿಸಿಬಿ ಎಸಿಪಿ ನಾರಾಯಣ ಭರಮನಿ ಹಾಗೂ ಅಶೋಕ ನಗರ ಠಾಣೆ ಇನ್ಸಪೆಕ್ಟರ್ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಉದ್ಯಮಿ ಮನೆ ಮೇಲೆ ದಾಳಿ ಮಾಡಿ ಹಣ ಪತ್ತೆ ಮಾಡಿದ್ದಾರೆ. ಈ …

Read More »

2023-24ನೇ ಸಾಲಿನಲ್ಲೇ 7ನೇ ವೇತನ ಆಯೋಗ ಜಾರಿಗೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಸರಕಾರಿ ನೌಕರರಿಗೆ 7 ನೇ ವೇತನ ಆಯೋಗ ನೀಡಲು ಹಣ ತೆಗದಿರಿಸಿದ್ದೇವೆ. ಮಧ್ಯಂತರ ವರದಿ ಸಿದ್ದಪಡಿಸುತ್ತಿದ್ದೇವೆ. ವರದಿ ಬಂದ ಕೂಡಲೇ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.   ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 7 ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಹಣ ಮೀಸಲಿರಿಸಿದ್ದು, 2023-24 ನೇ ಸಾಲಿನಲ್ಲೇ ಜಾರಿಗೆ ತರಲಾಗುವುದು. ಈ ಕುರಿತು ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ. ನೌಕರರ ಬೇಡಿಕೆಗಳನ್ನು …

Read More »

ಹುಬ್ಬಳ್ಳಿ: ಸುಟ್ಟು ಕರಕಲಾದ ಗುಜರಿ ವಸ್ತುಗಳು

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದ ಗುಜರಿ ಉಪಕರಣಗಳಿಗೆ ಭಾನುವಾರ ಬೆಂಕಿ ತಗುಲಿದ್ದು, ಹಲವು ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋದವು. ಅಗ್ನಿ ಶಾಮಕ ದಳ ಸಿಬ್ಬಂದಿ ಮೂರ್ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.   ಬಸ್‌ ಆಸನಕ್ಕೆ ಬಳಸಿ ಹಾಳಾದ ಸೀಟ್‌ ಕವರ್‌ಗಳು ಹಾಗೂ ರೆಗ್ಝಿನ್‌ ಅನ್ನು ಕಾರ್ಯಗಾರದ ಹಿಂಭಾಗದಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಸೀಟ್‌ ಕವರ್‌ಗಳು ಸೇರಿದಂತೆ ಅನುಪಯುಕ್ತ ವಸ್ತುಗಳನ್ನು …

Read More »

ಪ್ರಹ್ಲಾದ್ ಜೋಶಿ ದಳಪತಿಗಳಿಗೆ ವ್ಯಂಗ್ಯವಾಡಿದ್ದು, ಮನೆಯನ್ನೇ ನಿರ್ವಹಣೆ ಮಾಡಲು ಆಗದವರು ರಾಜ್ಯವನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂದರು

ಹುಬ್ಬಳ್ಳಿ: ಹಾಸನ ಕ್ಷೇತ್ರದ ಟಿಕೆಟ್ ಕಿತ್ತಾಟಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದಳಪತಿಗಳಿಗೆ ವ್ಯಂಗ್ಯವಾಡಿದ್ದು, ಮನೆಯನ್ನೇ ನಿರ್ವಹಣೆ ಮಾಡಲು ಆಗದವರು ರಾಜ್ಯವನ್ನು ಹೇಗೆ ನಿರ್ವಹಣೆ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರು ಮೊದಲು ಮನೆ ಸರಿ ಮಾಡಿಕೊಳ್ಳಲಿ ಅನಂತರ ರಾಜ್ಯ ಆಳೋಕೆ ಬರಲಿ ಎಂದು ಹೇಳಿದ್ದಾರೆ. ದಳಪತಿಗಳಿಗೆ ಮನೆಯವರೆಲ್ಲ ಎಲೆಕ್ಷನ್ ಗೆ ನಿಂತರೂ ಸಮಾಧಾನವಾಗಿಲ್ಲ. ಕುಟುಂಬದಲ್ಲಿ 12 ಜನವಿದ್ದರೂ 12 ಜನ ಚುನಾವಣೆಗೆ …

Read More »

ಮಾರ್ಚ್ 11 ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ : ಧಾರವಾಡ `IIT’ ನೂತನ ಕಟ್ಟಡ ಉದ್ಘಾಟನೆ

ಧಾರವಾಡ : ಮಾ.11 ರಂದು ಮಧ್ಯಾಹ್ನ 3 ಗಂಟೆಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಐಐಟಿ ಕಟ್ಟಡ ಹಾಗೂ ರಾಜ್ಯದ ಹಾಗೂ ಕೇಂದ್ರದ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸುವರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.   ಮುಮ್ಮಿಗಟ್ಟಿಯ ಐಐಟಿಯ ನೂತನ ಕಟ್ಟಡದ ನಿರ್ಮಾಣ ಹಂತದ ಕಾಮಗಾರಿಯನ್ನು ವೀಕ್ಷಿಸಿ, ಪರಿಶೀಲಿಸಿದ ಅವರು ಮಾತನಾಡುತ್ತಾ, ಶೀಘ್ರವೇ ಉಳಿದೆಲ್ಲ ಕೆಲಸವನ್ನು ಬೇಗನೆ …

Read More »

ಧಾರವಾಡದಲ್ಲಿ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಐವರು ಮೃತ್ಯು

ಧಾರವಾಡ : ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯ ತೇಗೂರ ಗ್ರಾಮದ ಬಳಿ ಗುರುವಾರ ರಾತ್ರಿ ಸಂಭವಿಸಿದ ಭೇಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿಯಿಂದ ಧಾರವಾಡದ ಕಡೆಗೆ ಬರುತ್ತಿದ್ದ ಕಾರು ಲಾರಿಗೆ ಹಿಂಬದಿಯಿಂದ ಗುದ್ದಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.   ಮೃತ ದುರ್ದೈವಿಗಳು ನಾಗಪ್ಪ ಈರಪ್ಪ ಮುದ್ದೊಜಿ(29)ಮಹಂತೇಶ್ ಬಸಪ್ಪ ಮುದ್ದೊಜಿ (40) ಬಸವರಾಜ್ ಶಿವಪುತ್ರಪ್ಪ ನರಗುಂದ(35) ನಿಚ್ಚಣಕಿ ಗ್ರಾಮದ ಶ್ರೀಕುಮಾರ್ ನರಗುಂದ (05) …

Read More »

ಯುವತಿಯ ಸೀಟಿನ ಮೇಲೆ ಸಹ ಪ್ರಯಾಣಿಕನಿಂದ ಮೂತ್ರ ವಿಸರ್ಜನೆ

ಹುಬ್ಬಳ್ಳಿ: ಮಹಿಳಾ ಪ್ರಯಾಣಿಕಳ ಸೀಟಿನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ವಿಜಯಪುರ ಮತ್ತು ಮಂಗಳೂರು ನಡುವೆ ಸಂಚರಿಸುವ ನಾನ್ ಎಸಿ ಸ್ಲೀಪರ್ ಬಸ್​ನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಹುಬ್ಬಳ್ಳಿ ತಾಲೂಕಿನ ಕಿರೇಸೂರ್ ಡಾಬಾ ಬಳಿ ಮಂಗಳೂರು-2ನೇ ಘಟಕಕ್ಕೆ‌ ಸೇರಿದ್ದ ನಾನ್ ಎಸಿ ಸ್ಲೀಪರ್ ಬಸ್​ನಲ್ಲಿ ನಡೆದಿದೆ. ಪ್ರಯಾಣಿಕರ ಊಟ, ತಿಂಡಿಗಾಗಿ ಡಾಬಾ ಬಳಿ ಬಸ್​ ನಿಲ್ಲಿಸಿದಾಗ ಎಲ್ಲ ಪ್ರಯಾಣಿಕರು ಕೆಳಗೆ ಇಳಿದಿದ್ದರು. ಈ ವೇಳೆ 30 ವರ್ಷದ ವ್ಯಕ್ತಿ ಮೂತ್ರ …

Read More »