Breaking News

ಹುಬ್ಬಳ್ಳಿ

ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ: ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಒಂದೂವರೆ ವರ್ಷದಲ್ಲಿ ಸರ್ಕಾರ ಹಾಗೂ ರಾಹುಲ್ ಗಾಂಧಿ, ಇನ್ನಿತರ ನಾಯಕರಿಂದ ಭಯಂಕರ ಭ್ರಷ್ಟಾಚಾರ ಶುರುವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗಂಭೀರ ಆರೋಪ ಮಾಡಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ‌ ಸಾವಿರಾರು ಕೋಟಿ ರೂ. ಸಂಗ್ರಹ ಮಾಡಿ ತೆಲಂಗಾಣಕ್ಕೆ ಕೊಟ್ಟಿದೆ ಎಂದಾಗ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನೂರಾರು ಜನರಿಗೆ ವರ್ಗಾವಣೆ ಮಾಡಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಕೆಲ …

Read More »

ಹುಬ್ಬಳ್ಳಿ | ನಗರಲ್ಲೊಂದು ಹಳ್ಳಿ ಸೊಗಡು

ಹುಬ್ಬಳ್ಳಿ: ನೋಡಲಷ್ಟೇ ಪುಟ್ಟ ಪುಟ್ಟ ಮನೆಗಳು. ಒಳ ಪ್ರವೇಶಿಸಿದರೆ ವಿಶಾಲ ಪಡಶಾಲೆ, ಅದಕ್ಕೆ ಹೊಂದಿಕೊಂಡು ಅಷ್ಟೇ ದೊಡ್ಡ ಕೊಟ್ಟಿಗೆಗಳು. ನೂರಾರು ದನ-ಕರುಗಳ ಜೊತೆಗೆ, ಆಡು-ಮೇಕೆಗಳ ಸಹ ಜೀವನ… ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಗೋಪನಕೊಪ್ಪ ಗ್ರಾಮದ ಸಿದ್ದರಾಮೇಶ್ವರ ಬಡಾವಣೆಯ ಹಳ್ಳಿ ಸೊಗಡು. ಹೇಳಿಕೊಳ್ಳಲಷ್ಟೇ ಕಂದಾಯ ಗ್ರಾಮವಾಗಿ, ನಗರ ಪ್ರದೇಶ ಎಂದು ಗುರುತಿಸಿಕೊಂಡಿದೆ. ಆದರೆ, ಜನರ ಜೀವನಶೈಲಿ, ಆಚಾರ-ವಿಚಾರಗಳೆಲ್ಲ ಈಗಲೂ ಪುಟ್ಟ ಗ್ರಾಮೀಣ ಪ್ರದೇಶದಂತಿದೆ. ಮನೆ ಎದುರಿಗೆ ಇರುವ …

Read More »

ಹುಬ್ಬಳ್ಳಿ: ಆಗದ ವಲಯ ವರ್ಗಾವಣೆ; ಶಿಕ್ಷಕರಿಗೆ ನಿರಾಸೆ

ಹುಬ್ಬಳ್ಳಿ: ವಲಯ ವರ್ಗಾವಣೆ ನಡೆಸದಿರಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿರುವುದು ಬಹುತೇಕ ಶಿಕ್ಷಕರಲ್ಲಿ ನಿರಾಸೆ ಮೂಡಿಸಿದೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವರ್ಗಾವಣೆ ಆಗುವ ಅವರ ನಿರೀಕ್ಷೆ ಹುಸಿಯಾಗಿದೆ. ಕರ್ನಾಟಕ ಶಿಕ್ಷಕರ ವರ್ಗಾವಣೆ ಮತ್ತು ನಿಯಂತ್ರಣ ಕಾಯ್ದೆ (ತಿದ್ದುಪಡಿ)-2022ರ ಪ್ರಕಾರ, ಹೆಚ್ಚುವರಿ ವರ್ಗಾವಣೆ ನಂತರದ ವರ್ಷದಲ್ಲಿ ವಲಯ (ಕಡ್ಡಾಯ) ವರ್ಗಾವಣೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ 10 ವರ್ಷಕ್ಕೂ ಹೆಚ್ಚು ಸಮಯದಿಂದ ನಗರ ಪ್ರದೇಶದಲ್ಲಿ (ಎ-ವಲಯ) ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಗ್ರಾಮೀಣ (ಸಿ-ವಲಯ) …

Read More »

ಹುಬ್ಬಳ್ಳಿಯಲ್ಲಿ ಡೆಂಘೀಗೆ ನಾಲ್ವರು ಸಾವು

ಹುಬ್ಬಳ್ಳಿ,ಜು.8- ದಿನದಿಂದ ದಿನಕ್ಕೆ ಮಾರಕ ರೋಗ ಡೆಂಘೀ ಉಲ್ಬಣಗೊಳ್ಳುತ್ತಿದ್ದು, ರಾಜ್ಯಾದ್ಯಂತ ಸಾವಿರಾರು ಜನ ಡೆಂಘೀ ಲಕ್ಷಣಗಳಿಂದ ನಲುಗುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಡೆಂಘೀ ಕಾಯಿಲೆಯಿಂದ ನಾಲ್ವರು ಮೃತಪಟ್ಟಿರುವುದಾಗಿ ಹುಬ್ಬಳ್ಳಿ ಕಿಮ್ಸ್‌‍ ಆಸ್ಪತ್ರೆ ನಿರ್ದೇಶಕ ಡಾ.ಎಸ್‌‍.ಎಸ್‌‍.ಕಮಾರ್‌ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಕ್ಕಳ ವಾರ್ಡ್‌ನಲ್ಲಿ ಡೆಂಘೀಯಿಂದ ನಾಲ್ವರು ಮೃತಪಟ್ಟಿದ್ದಾರೆ. ಕಿಮ್ಸ್‌‍ ಆಸ್ಪತ್ರೆಯ ಮೆಡಿಸನ್‌ ವಾರ್ಡ್‌ನಲ್ಲಿ ಯಾವುದೇ ಸಾವು ಆಗಿಲ್ಲ ಎಂದು ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಡೆಂಘೀಯಿಂದ ಯಾವುದೇ ಸಾವು ಸಂಭವಿಸಿಲ್ಲ. ಬೇರೆ ಜಿಲ್ಲೆಗಳಿಂದ ಬಂದಿರುವ ನಾಲ್ವರು …

Read More »

ತರಾತುರಿಯ ಡಿಸಿ ವರ್ಗಾವಣೆಯು ಸಿಎಂ ಭ್ರಷ್ಟಾಚಾರವನ್ನು ಸಾಬೀತುಪಡಿಸಿದೆ: ಪ್ರಹ್ಲಾದಜೋಶಿ

ತರಾತುರಿಯ ಡಿಸಿ ವರ್ಗಾವಣೆಯು ಸಿಎಂ ಭ್ರಷ್ಟಾಚಾರವನ್ನು ಸಾಬೀತುಪಡಿಸಿದೆ: ಪ್ರಹ್ಲಾದಜೋಶಿ   ಹುಬ್ಬಳ್ಳಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಹಗರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರನ ನೇರಕ್ಕೆ ನಡೆದಿರುವ ಹಗರಣವಾಗಿದೆ. ತರಾತುರಿಯಲ್ಲಿ ಜಿಲ್ಲಾಧಿಕಾರಿ ಅವರನ್ನು ವರ್ಗಾವಣೆ ಮಾಡಿರುವುದು ಭ್ರಷ್ಟಾಚಾರದಲ್ಲಿ ತಾವು ಭಾಗಿ ಎಂಬುವುದನ್ನು ಸಾಬೀತುಪಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಬಹುದೊಡ್ಡ …

Read More »

ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಅರ್ಧಕ್ಕೆ ನಿಂತ ಧಾರವಾಡ-ಗೋವಾ ಎರಡು ಮೇಲ್ಸೇತುವೆ ಕಾಮಗಾರಿ

ಧಾರವಾಡ, ಜುಲೈ 03: ಪ್ರವಾಸಿಗರ ನೆಚ್ಚಿನ ತಾಣವಾದ ಗೋವಾಕ್ಕೆ (Goa) ಹೋಗಬೇಕೆಂದರೆ ಉತ್ತರ ಕರ್ನಾಟಕದ ಬಹುತೇಕ ಜನರು ಧಾರವಾಡದ (Dharwad) ಮೂಲಕವೇ ಹೋಗಬೇಕು. ಧಾರವಾಡದಿಂದ ಗೋವಾಕ್ಕೆ ಹೋಗಬೇಕೆಂದರೆ ಎರಡು ರೈಲ್ವೆ ಗೇಟ್ ಬರುತ್ತವೆ. ಇದನ್ನು ತಪ್ಪಿಸಲು ಹಲವಾರು ವರ್ಷಗಳ ಹಿಂದೆ ನಿರ್ಮಿಸಲು ಉದ್ದೇಶಿಸಿದ್ದ ಮೇಲ್ಸೇತುವೆಗಳು (Flyover) ಅರ್ಧಕ್ಕೆ ನಿಂತು ಹೋಗಿದ್ದವು. ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕೇಂದ್ರ ಸರಕಾರದಿಂದ ವಿಶೇಷ ಅನುದಾನ ತಂದಿದ್ದರು. ಈ ಸೇತುವೆಗಳು ಮುಗಿಯುವ …

Read More »

ಕೊಲೆಗೆ ಸಂಚು; ಆರು ಮಂದಿ ಬಂಧನ

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೆ ಸಂಚು ರೂಪಿಸಿದ್ದ ತಂಡವೊಂದನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ, ಎರಡು ತಲ್ವಾರ್‌, ಎರಡು ಚಾಕು, ಎರಡು ಬೈಕ್‌ ಹಾಗೂ ಆಟೊ ವಶಪಡಿಸಿಕೊಂಡಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಹಳೇಹುಬ್ಬಳ್ಳಿ ನಿವಾಸಿಗಳಾದ ಮಂಜುನಾಥ ಪಾಂಚಾನ, ಪವನ ಗಬ್ಬೂರ, ವಿನಾಯಕ ದುಂಡಿ, ನಾಗರಾಜ ಮೀರಜಕರ, ರಾಜಪ್ಪ ಹನಮನಹಳ್ಳಿ ಬಂಧಿತರು. ಮತ್ತೊಬ್ಬ ಆರೋಪಿ ಗಣೇಶ ಬಿಲಾನಾ ತಲೆಮರೆಸಿಕೊಂಡಿದ್ದಾನೆ. ಹಳೇಹುಬ್ಬಳ್ಳಿಯ ಸಿಕ್ಕಲಗಾರ ಓಣಿಯ ನಿವಾಸಿ ದೀಪಕ ಧಾರವಾಡ ಅವರನ್ನು …

Read More »

ಸಿ.ಟಿ.ರವಿ ವಿರುದ್ಧ ಕೇಸ್ ದಾಖಲು

ಹುಬ್ಬಳ್ಳಿ: ಭಾಷಣದ ಬರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ದೂರು ದಾಖಲಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇದೇ ವೇಳೆ ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿ.ಟಿ.ರವಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ಕಿಡಿಕಾರಿದ್ದರು. ಮೂರು ಬಿಟ್ಟವರು ಭಂಡತನದ ಸಮರ್ಥನೆ …

Read More »

ರೇಣುಕಸ್ವಾಮಿ ಕೊಲೆ ಪ್ರಕರಣ| ಕಲಾವಿದರ ವ್ಯಕ್ತಿತ್ವ ಮಾದರಿಯಾಗಿರಲಿ: ಕೂಡಲಸಂಗಮಶ್ರೀ

ರೇಣುಕಸ್ವಾಮಿ ಕೊಲೆ ಪ್ರಕರಣ| ಕಲಾವಿದರ ವ್ಯಕ್ತಿತ್ವ ಮಾದರಿಯಾಗಿರಲಿ: ಕೂಡಲಸಂಗಮಶ್ರೀ   ಅಥಣಿ : ‘ಯಾವುದೇ ಕಲಾವಿದರು ಜನರಿಗೆ ಮಾದರಿಯಾಗುವಂಥ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ ರೇಣುಕಸ್ವಾಮಿ ಕೊಲೆಯಂಥ ಘಟನೆ ನಡೆಯುತ್ತವೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ರಾಜಕುಮಾರ್, ವಿಷ್ಣುವರ್ಧನ್ ಅವರಂಥ ನಟರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು. ಪರದೆ ಮೇಲೆ ವಿವಿಧ ಪಾತ್ರಗಳನ್ನು ನಿರ್ವಹಿಸುವ ಕಲಾವಿದರು, ವಾಸ್ತವ ಬದುಕಿನಲ್ಲಿ ಜನರಿಗೆ ಮಾದರಿಯಾಗುವಂತೆ …

Read More »

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರಿಂದ ಸಾಮೂಹಿಕ ಪ್ರಾರ್ಥನೆ

ಹುಬ್ಬಳ್ಳಿ: ಇಲ್ಲಿನ ಕಿತ್ತೂರು ಚೆನ್ನಮ್ಮ ವೃತ್ತ ಬಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಮೌಲಾನಾ ಜಹೀರುದ್ದೀನ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮೊಹಮ್ಮದ ಯುಸೂಫ ಸವಣೂರ, ಅಲ್ತಾಫ ಹಳ್ಳೂರ, ಬಸೀರ ಗೂಡಮಾಲೆ, ಮೆಹಮೂದ ಕೋಳೂರ, ಶಿರಾಜ‌ಅಹ್ಮದ ಕುಡಚಿವಾಲೆ, ಸಲೀಂ ಸುಂಡಕೆ, ಶಾರೂಖಖಾನ ಮುಲ್ಲಾ, ಮಲ್ಲಿಕ ಸಿಕಂದರ, ಕೆ.ಡಿ. ಕಮ್ಮಾರ ಸೇರಿದಂತೆ ಸಾವಿರಾರು ಮುಸ್ಲಿಮರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಮುಸ್ಲಿಂ …

Read More »