Breaking News

ಹುಬ್ಬಳ್ಳಿ

ದರೋಡೆಗೆ ಯತ್ನ. ಪೊಲೀಸರಿಂದ ಓರ್ವನ ಕಾಲಿಗೆ ಗುಂಡು

ಹುಬ್ಬಳ್ಳಿ: ದರೋಡೆಗೆ ಯತ್ನಿಸಿದ ತಂಡದ ಮೇಲೆ ಪೊಲೀಸರು ಗುಂಡಿನ‌ ದಾಳಿ‌ ನಡಸಿದ್ದು, ಒಬ್ಬ ದರೋಡಕೋರನ ಕಾಲಿಗೆ ಗುಂಡು ತಗುಲಿದ ಘಟನೆ ರೇವಡಿಹಾಳ ಸೇತುವೆ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ. ಸೋಮವಾರ ಬೆಳಗಿನ‌ ಜಾವ 3:00 ಗಂಟೆ ಸುಮಾರಿಗೆ ಗೋಕುಲ ಗ್ರಾಮದಲ್ಲಿ 5-6 ಜನರ ತಂಡವು ರಜನಿಕಾಂತ ದೊಡ್ಡಮನಿ ಎಂಬುವರ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದೆ. ಈ ವೇಳೆ ಮನೆಯವರು ಎಚ್ಚರಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಗೋಕುಲ …

Read More »

ಓದಿನ ಹಸಿವು ನೀಗಿಸುವ ‘ಪುಸ್ತಕ ದಾಸೋಹ’

ಹುಬ್ಬಳ್ಳಿ: ನಿಮ್ಮ ಮನೆಯಲ್ಲಿ ಪುಸ್ತಕಗಳಿವೆಯೇ? ಬೇರೆಯವರೂ ಅವುಗಳನ್ನು ಓದಬೇಕೆ? ಹಾಗಿದ್ದರೆ, ಅವುಗಳನ್ನು ಅಲ್ಲಿಯೇ ದೂಳು ಹಿಡಿಸುವ ಅಥವಾ ಬಿಸಾಡುವ ಬದಲು; ಚುಟುಕು ಸಾಹಿತ್ಯ ಪರಿಷತ್ತಿಗೆ ನೀಡಿ. ನೀವು ಓದಿ, ಆಸ್ವಾದಿಸಿದ ಪುಸ್ತಕಗಳನ್ನು ಇತರರೂ ಓದಿ, ಆನಂದಿಸುವರು. ಓದಿನ ಅಭಿರುಚಿ, ಜ್ಞಾನ ಪಸರಿಸಿದ ಖುಷಿ ನಿಮಗೂ ಲಭಿಸುತ್ತದೆ.  ಹೌದು, ಮನೆಯಲ್ಲಿ ಹೆಚ್ಚು ಪುಸ್ತಕ ಇಟ್ಟುಕೊಂಡವರಿಗೆ, ಅವುಗಳ ನಿರ್ವಹಣೆ ದೊಡ್ಡ ಸವಾಲು. ಓದಿನ ಆಸಕ್ತಿ ಇದ್ದವರಿಗೆ ಪುಸ್ತಕ ಕೊಳ್ಳುವುದು ಕಷ್ಟಸಾಧ್ಯ. ಇಂತಹವರ ನಡುವೆ …

Read More »

ಹಾಲಿನ ಪುಡಿ ಬಿಕರಿಗೆ ಗ್ರಹಣ: ಗೋದಾಮಿನಲ್ಲಿ ಉಳಿದ 3,854 ಕ್ವಿಂಟಲ್‌ ದಾಸ್ತಾನು

ಧಾರವಾಡ/ ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಯ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಿಂದ ಪೂರೈಸಿದ ಹಾಲಿನಿಂದ ತಯಾರಿಸಿದ್ದ 3,854 ಕ್ವಿಂಟಲ್‌ ಕೆನೆರಹಿತ ಹಾಲಿನ ಪುಡಿ ಮಾರಾಟವಾಗದೆ ಧಾರವಾಡ ಜಿಲ್ಲಾ ಹಾಲು ಒಕ್ಕೂಟದ (ಧಾಮುಲ್‌) ಗೋದಾಮಿನಲ್ಲಿಯೇ ಉಳಿದಿದೆ. ಒಕ್ಕೂಟಗಳಿಗೆ ಪೂರೈಸುವ ಹಾಲು ಮಾರಾಟ ಮಾಡಿದ ನಂತರವೂ ಉಳಿಯುವ ಹಾಲಿನಿಂದ ಈ ಕೆನೆರಹಿತ ಪುಡಿ ತಯಾರಿಸಲಾಗುತ್ತಿದೆ. ಹಾಲಿನ ಕೊರತೆ ಎದುರಿಸುತ್ತಿದ್ದ ರಾಜಸ್ಥಾನ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳ ಡೇರಿಗಳು ಟೆಂಡರ್ ಪ್ರಕ್ರಿಯೆ …

Read More »

ಬೆಂಗಳೂರಿನಲ್ಲಿ ಪಾಕ್ ಪ್ರಜೆ ಬಂಧನ ಪ್ರಕರಣ: ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ: ಗೃಹ ಸಚಿವ ಪರಮೇಶ್ವರ್ ವಾಗ್ದಾಳಿ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಪಾಕಿಸ್ತಾನ ಪ್ರಜೆ ಸೇರಿದಂತೆ ಅಕ್ರಮವಾಗಿ ನೆಲೆಸಿದ್ದ ವಿದೇಶಿಗರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇದು ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯ ಎಂದು ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪಾಕಿಸ್ತಾನ ಪ್ರಜೆ ಬೆಂಗಳೂರಿನಲ್ಲಿ ವಾಸವಾಗಿರುವ ವಿಷಯ ತಿಳಿದ ಕೂಡಲೇ ನಮ್ಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ. ಉಳಿದವರನ್ನೂ ಪತ್ತೆ ಹಚ್ಚುತ್ತೇವೆ ಎಂದರು. ಪಾಕಿಸ್ತಾನ ಪ್ರಜೆ ಸೇರಿದಂತೆ ವಿದೇಶಿಗರು ಬೆಂಗಳೂರಿಗೆ …

Read More »

ಮುಡಾ ನಿವೇಶನ ವಾಪಸ್‌ ಕೊಟ್ಟರೆ ತಪ್ಪೇನು: ಸಚಿವ ಸಂತೋಷ್‌ ಲಾಡ್‌

ಧಾರವಾಡ: ‘ಮುಡಾ ಹಂಚಿಕೆ ಮಾಡಿದ್ದ ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ‌ ವಾಪಸ್‌ ನೀಡಿದ್ದರಲ್ಲಿ ತಪ್ಪೇನಿದೆ? ಸಿದ್ದರಾಮಯ್ಯ ಅವರ ಗೌರವ ಮತ್ತು ಪ್ರತಿಷ್ಠೆ ತುಂಬಾ ಮುಖ್ಯ. ಅದಕ್ಕೆ ನಿವೇಶನಗಳನ್ನು ವಾಪಸ್‌ ನೀಡಿದ್ದಾರೆ’ ಎಂದು ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.   ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿಯವರೇ ನಿವೇಶನಗಳನ್ನು ಹಂಚಿಕೆ ಮಾಡಿದ್ದರು. ನಿವೇಶನಗಳನ್ನು ವಾಪಸ್‌ ನೀಡಿದ್ದಕ್ಕೆ ‘ಯು ಟರ್ನ್‌’ ಎಂದರೆ ಏನರ್ಥ? ನಿವೇಶನಗಳನ್ನು ವಾಪಸ್‌ ನೀಡಬಾರದು ಎಂಬ ಕಾನೂನು …

Read More »

ಕಾರ್ಮಿಕ ಇಲಾಖೆಯ 101 ಲ್ಯಾಪ್ ಟಾಪ್ ಕಳ್ಳತನ ಪ್ರಕರಣ; 26 ಮಂದಿ ಅರೆಸ್ಟ್​

ಹುಬ್ಬಳ್ಳಿ, ಸೆ.28: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿತರಿಸಲು ತಂದಿದ್ದ 101 ಲ್ಯಾಪ್‌ಟಾಪ್​ಗಳು (laptops) ಕಾರ್ಮಿಕ ಇಲಾಖೆ ಕಚೇರಿಯಿಂದಲೇಕಳ್ಳತನಆಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದಕ್ಕೆ ಕಿಡಿಕಾರಿದ್ದ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಫೆಡರೇಶನ್, ‘ಕಾರ್ಮಿಕ ಇಲಾಖೆಯ ಅಧಿಕಾರಿಗಳ ಅಪ್ರಾಮಾಣಿಕತೆ ಮತ್ತು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿತ್ತು. ಇದೀಗ ಘಟನೆಗೆ ಸಂಬಂಧಪಟ್ಟಂತೆ 26 ಜನ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಕಳ್ಳತನವಾಗಿದ್ದ ಲ್ಯಾಪ್ …

Read More »

ಗಾಂಜಾ ಗುಂಗಲ್ಲಿದ್ದವರ ನಶೆ ಇಳಿಸಿದ ಹುಬ್ಬಳ್ಳಿ ಪೊಲೀಸರು ​

ಹುಬ್ಬಳ್ಳಿ-ಧಾರವಾಡ ಪೊಲೀಸರು ಗಾಂಜಾ ಮಾರಾಟ ಮತ್ತು ವ್ಯಸನಿಗಳ ವಿರುದ್ಧ ಸಮರ ಸಾರಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸರು 518 ಗಾಂಜಾ ವ್ಯಸನಿಗಳನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆ ನಡೆಸಿದರು. 34 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.ಹುಬ್ಬಳ್ಳಿ, ಸೆಪ್ಟೆಂಬರ್​ 29: ಹುಬ್ಬಳ್ಳಿ-ಧಾರವಾಡ ಪೊಲೀಸರು ( Hubballi-Dharwad Police) ಗಾಂಜಾ ( Ganja ) ಮಾರಾಟ ಮತ್ತು ವ್ಯಸನಿಗಳ ವಿರುದ್ಧ ಸಮರ ಸಾರಿದ್ದಾರೆ. ಇತ್ತೀಚಿಗೆ ಅವಳಿನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತ ಪೊಲೀಸರು ಮೇಲಿಂದ …

Read More »

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೀದಿ ಕಾಮಣ್ಣರ ಕಿಟಲೇ ಜಾಸ್ತಿ

ಹುಬ್ಬಳ್ಳಿ, : ವಾಣಿಜ್ಯ ನಗರಿಹುಬ್ಬಳ್ಳಿಯಲ್ಲಿಕಳೆದ ಎರಡು ದಿನಗಳ ಹಿಂದೆ ರಾತ್ರಿ ತನ್ನ ಮನೆಗೆ KA25 EM0446 ನೊಂದಣಿ ಸಂಖ್ಯೆಯ ಬೈಕ್​ನಲ್ಲಿ ಮಕ್ತುಂ ತೆರಳುತ್ತಿದ್ದ, ಈ ವೇಳೆ ಕಾರಿ​ನಲ್ಲಿ ಕೃತಿಕಾ ಎಂಬ ಯುವತಿ ಪ್ರಯಾಣ ಮಾಡುತ್ತಿದ್ದಳು. ಕಾರಿನಲ್ಲಿದ್ದ ಕೃತಿಕಾಳನ್ನು ಕಂಡ ಮಕ್ತುಂ ಅಸಭ್ಯವಾಗಿ ಸನ್ನೆ ಮಾಡಿದ್ದಾನೆ. ಅಲ್ಲದೆ ಬೈರಿದೇವರಕೊಪ್ಪದಿಂದ ಸಹನಾ ಕಾಲೇಜಿನ ತನಕ ಕೃತಿಕಾ ಕಾರನ್ನು ಫಾಲೋ ಮಾಡಿದ್ದಾನೆ. ಕಾರ್ ಸ್ಲೋ ಮಾಡಿದ ಕೃತಿಕಾ ಏನು ಎಂದು ಕೇಳಿದ್ದಾಳೆ. ಆಗ ನೀನು …

Read More »

ಹೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಪ್ರವಹಿಸಿ 11 ಕುರಿ, 1 ನಾಯಿ ಸಾವು. ತಪ್ಪಿದ ಅನಾಹುತ

ಗದಗ: ಹೆಸ್ಕಾಂ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಪ್ರವಹಿಸಿ 11 ಕುರಿ ಮತ್ತು 1 ನಾಯಿ ಸಾವಿಗೀಡಾದ ಘಟನೆ ಗಜೇಂದ್ರಗಡ ತಾಲೂಕಿನ ನರೇಗಲ್ ಹೋಬಳಿಯಲ್ಲಿ ಸೋಮವಾರ (ಸೆ.30) ಸಂಜೆ ನಡೆದಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ನವಲಪ್ಪ ಹೆಗಡೆ ಸಂಚಾರಿ ಕುರಿಗಾಯಿ ನರೇಗಲ್ ಭಾಗದ ಜಮೀನೊಂದರಲ್ಲಿ‌ ಕುರಿ ಮೇಯಿಸುವ ಸಂದರ್ಭದಲ್ಲಿ, ಹೊಲದಲ್ಲಿ ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದೆ. ಆದರೆ, ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಸಂಚಾರ ನಿಷ್ಕ್ರಿಯವಾಗದ ಕಾರಣ ವಿದ್ಯುತ್ ತಂತಿಯ …

Read More »

ಕಬ್ಬಿನ ಗದ್ದೆಯಲ್ಲಿ ಪತ್ತೆಯಾಯ್ತು ಆರು ಅಡಿ ಉದ್ದದ ಹೆಬ್ಬಾವು

ಧಾರವಾಡ: ಧಾರವಾಡ ತಾಲೂಕಿನ ನಿಗದಿ ಗ್ರಾಮದ ರೈತರ ಕಬ್ಬಿನ ಗದ್ದೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅದನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಮರಳಿ ಅರಣ್ಯಕ್ಕೆ ಬಿಡಲಾಗಿದೆ. ನಿಗದಿ ಗ್ರಾಮದ ರೈತ ಸಿದ್ಧಬಸಪ್ಪ ಹಳಿಯಾಳ ಎಂಬ ರೈತ ಅಂಬ್ಲಿಕೊಪ್ಪ ಗ್ರಾಮದ ಹದ್ದಿನಲ್ಲಿ ಕಬ್ಬಿನ ಜಮೀನು ಹೊಂದಿದ್ದು, ಕಬ್ಬಿನ ಸೋಗೆ ಸುಲಿಯುವ ಸಂದರ್ಭದಲ್ಲಿ ಈ ಹೆಬ್ಬಾವು ರೈತನ ಕಣ್ಣಿಗೆ ಬಿದ್ದಿದೆ. ಕೂಡಲೇ ಈ ಮಾಹಿತಿಯನ್ನು ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿ ಅವರ ಗಮನಕ್ಕೆ ತಂದಾಗ …

Read More »