Breaking News

ಸಿನೆಮಾ

ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮ: ಎಡಿಜಿಪಿ ಅಲೋಕ್‌ ಕುಮಾರ್‌

ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್ ಮಾಡುತ್ತಿರುವುದನ್ನು ಗಮನಿಸಲಾಗಿದೆ. ನಾವು ಅಂತಹ ಪೋಸ್ಟ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಅಲ್ಲದೇ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ಪ್ರಚೋದನಕಾರಿ ಭಾಷಣ ಮಾಡಿದ ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮ …

Read More »

ಇಷ್ಟು ದಿನ ಮದುವೆ ಅಂತಿದ್ರು ಈಗ ಅಣ್ಣ-ತಂಗಿಯಾಗಿಬಿಟ್ರಾ!

ಕಳೆದ ಕೆಲವು ದಿನಗಳಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್ ಅಫೇರ್ ವೈರಲ್ ಆಗುತ್ತಿರುವುದು ಗೊತ್ತೇ ಇದೆ. ನರೇಶ್ ಪವಿತ್ರಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜನರಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಮೇಲಾಗಿ ಈ ರೀತಿ ನಡೆದರೆ ನರೇಶ್ ಗೆ ಇದು ನಾಲ್ಕನೇ ಮದುವೆ ಆಗಿದ್ದು ಹಾಟ್ ಟಾಪಿಕ್ ಆಗಿದೆ. ಸಿನಿನಗರದ ಟಾಕ್ ಪ್ರಕಾರ ವಿಜಯ್ ನಿರ್ಮಲಾ ಅವರ ಪುತ್ರ ಹಿರಿಯ ನಟ ನರೇಶ್ (ಹಿರಿಯ ನರೇಶ್) ಈಗಾಗಲೇ ಮೂರು ಮದುವೆಯಾಗಿದ್ದಾರೆ. …

Read More »

ವಿಕ್ರಂತ್ ರೋಣ ಪ್ರಪಂಚ ತೆರೆ ಮೇಲೆ‌ ತೆರೆದುಕೊಂಡಿದೆ. ವಿಅರ್ world ಒಳಗೆ ಹೋದವರೆಲ್ಲಾ ವಾವ್ಹಾ ಎನ್ನುತ್ತಿದ್ದಾರೆ‌.

VR ಪ್ರಪಂಚ..!ವಿಕ್ರಂತ್ ರೋಣ ಪ್ರಪಂಚ ತೆರೆ ಮೇಲೆ‌ ತೆರೆದುಕೊಂಡಿದೆ. ವಿಅರ್ world ಒಳಗೆ ಹೋದವರೆಲ್ಲಾ ವಾವ್ಹಾ ಎನ್ನುತ್ತಿದ್ದಾರೆ‌. ಹಾಗಾದ್ರೆ ವಿಕ್ರಾಂತ್ ರೋಣ ಹೇಗಿದ್ದಾನೆ ಅಂದ್ರೆ…. ಅದೊಂದು ದಟ್ಟಾರಣ್ಯದ ಮಧ್ಯೆ‌ ಇರೋ ಊರು. ಆ ಊರ ಹೆಸರು ಕಮರೊಟ್ಟು.. ಅಲ್ಲಿ ಹೆಣ್ಣು ಮಕ್ಕಳ ಸರಣಿ ಕೊಲೆಗಳು ಆಗುತ್ತಿರುತ್ತವೆ. ಪೋಲಿಸ್ ಇನ್ಸ್‌ಪೆಕ್ಟರ್ ಆಗಿ ಕೊಲೆಗಳ ತನಿಖೆಗೆಗಾಗಿ ಕಮರೊಟ್ಟು ಊರಿಗೆ ಬರೋ ವಿಕ್ರಾಂತ್ ರೋಣ. ಈ ಇನ್ಸ್‌ಪೆಕ್ಟರ್‌ಗೆ ಈ ಸರಣಿ ಕೊಲೆಗಳ ಕೇಸುಗಳ ಮೇಲೆ …

Read More »

ವಿಕ್ರಾಂತ್ ರೋಣ’ ಸಿನಿಮಾ ರಿವ್ಯೂ ಔಟ್..!‌ ಜಗತ್ತಿನಾದ್ಯಂತ ಕಿಚ್ಚನ ಸುನಾಮಿ..

ಅಬ್ಬಬ್ಬಾ.. ಎಲ್ಲಿ ನೋಡಿದ್ರೂ ಬರೀ ‘ವಿಕ್ರಾಂತ್ ರೋಣ’.. ‘ವಿಕ್ರಾಂತ್ ರೋಣ’ .. ‘ವಿಕ್ರಾಂತ್ ರೋಣ’.. ಅರೆರೆ ಇದು ಇರಲೇಬೇಕಲ್ವಾ..? ಯಾಕಂದ್ರೆ ‘ವಿಕ್ರಾಂತ್ ರೋಣ’ ಇಟ್ಟಿರೋ ಹವಾ ಅಂತಹದ್ದು. ಇದು ಬರೀ ಹವಾ ಮಾತ್ರ ಅಲ್ಲ ಕನ್ನಡ ಸಿನಿಮಾಗಳ ತಾಕತ್ತು ಈ ‘ವಿಕ್ರಾಂತ್ ರೋಣ’ ಎನ್ನಬಹುದು. ಯಾಕಂದ್ರೆ ಬಹುನಿರೀಕ್ಷಿತ ಸ್ಯಾಂಡಲ್‌ವುಡ್ ಸಿನಿಮಾದ ರಿವ್ಯೂವ್‌ ಔಟ್‌ ಆಗಿದ್ದು, ‘ವಿಕ್ರಾಂತ್ ರೋಣ’ ಸುನಾಮಿ ಜಗತ್ತಿನಾದ್ಯಂತ ಸೃಷ್ಟಿಯಾಗಿದೆ.     ‘ವಿಕ್ರಾಂತ್ ರೋಣ’ ಪದ ಕಿವಿಗೆ …

Read More »

ಜುಲೈ 28ಕ್ಕೆ ವಿಶ್ವದಾದ್ಯಂತ 3,200 ಚಿತ್ರಮಂದಿರಗಳಲ್ಲಿ ‘ವಿಕ್ರಾಂತ್‌ ರೋಣ’:

ಕಿಚ್ಚ ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ಬಿಡುಗಡೆ ಹೊಸ್ತಿಲಲ್ಲಿದೆ. ಜುಲೈ 28ಕ್ಕೆ ವಿಶ್ವದಾದ್ಯಂತದ 3,200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಜಾಕ್‌ ಮಂಜು ಮಾಹಿತಿ ನೀಡಿದ್ದಾರೆ.   ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಸದ್ಯ 390 ಚಿತ್ರಮಂದಿರಗಳು ಬುಕ್‌ ಆಗಿವೆ. ಜುಲೈ 28ರ ವೇಳೆಗೆ 400-425 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ವಿಶ್ವದಾದ್ಯಂತ 3,200 ಚಿತ್ರಮಂದಿರಗಳಲ್ಲಿ ವಿಕ್ರಾಂತ್‌ ರೋಣ ತೆರೆಕಾಣಲಿದ್ದು, ಹಿಂದಿಯಲ್ಲೇ …

Read More »

ಸುಷ್ಮಿತಾ ಸೇನ್ ಕನ್ನಡಕ ‌ʼಝೂಮ್ʼ ಮಾಡಿದಾಗ ಕಂಡಿದ್ದೇನು

ಉದ್ಯಮಿ‌ ಲಲಿತ್ ಮೋದಿ ಜೊತೆಗಿನ ಒಡನಾಟದಿಂದ ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ಈಗ ಹೆಚ್ಚು ಪ್ರಚಲಿತದಲ್ಲಿದ್ದಾರೆ.ಲಲಿತ್ ಮೋದಿ ಜೊತೆಗೆ ಡೇಟಿಂಗ್ ಇಳಿದಿದ್ದಕ್ಕೆ ಆಕೆಯನ್ನು ‘ಗೋಲ್ಡ್ ಡಿಗ್ಗರ್’ ಎಂದು ಕರೆಯುವುದರಿಂದ ಹಿಡಿದು ಮೀಮ್‌ಗಳನ್ನು ರಚಿಸುವವರೆಗೆ ಸಾಮಾಜಿಕ ಜಾಲತಾಣದಲ್ಲಿ ಗೋಳಾಡಿಸಿದ್ದಾರೆ. ಈಗ ಹೊಸ ವಿಷಯದ ಮೂಲಕ‌ ಪುನಃ ಆಕೆಯನ್ನು ಎಳೆದುತಂದಿದ್ದಾರೆ. ಆಕೆ ಇತ್ತೀಚೆಗೆ ತನ್ನ ಸಾಮಾಜಿಕ ಜಾಲತಾಣದ ಪ್ರೊಫೈಲ್‌ನಲ್ಲಿ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ಆ ಫೋಟೋ ಸಾಮಾನ್ಯ ಸೆಲ್ಫಿಯಂತೆ ಕಂಡುಬಂದಿದೆ. …

Read More »

ಹೊಸಪೇಟೆಯ ಅಪ್ಪು ಪುತ್ಥಳಿ ಮುಂದೆ ಯುವರಾಜ್‌ಕುಮಾರ್, ಅನುಶ್ರೀ: ಯುವರತ್ನನಿಗೆ ನಮನ!

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡಿಗರು ಎಂದೆಂದಿಗೂ ಮರೆಯಲು ಸಾಧ್ಯವೇ ಇಲ್ಲ. ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಮಾಡಿದ ಕಲಾಸೇವೆ ಒಂದೆಡೆಯಾದರೆ, ಅವರ ಸಮಾಜಮುಖಿ ಕೆಲಸಗಳು ಅದೆಷ್ಟೋ ಯುವಕರ ಪ್ರೇರಣೆಗೆ ಕಾರಣವಾಗಿದೆ. ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಅವರನ್ನು ಯುವರಾಜ್‌ಕುಮಾರ್‌ರಲ್ಲಿ ಕಾಣುತ್ತಿದ್ದಾರೆ. ಇತ್ತ ಅಣ್ಣಾವ್ರ ಮೊಮ್ಮಗ ಕೂಡ ಅಪ್ಪು ಅಭಿಮಾನಿಗಳನ್ನು ತನ್ನ ಅಭಿಮಾನಿಗಳು ಅಂತಲೇ ನೋಡುತ್ತಿದ್ದಾರೆ. ಯುವ ರಾಜ್‌ಕುಮಾರ್ ಹೋದಲ್ಲೆಲ್ಲಾ ಪವರ್‌ಸ್ಟಾರ್ ಅಭಿಮಾನಿಗಳು ಅವರೊಂದಿಗೆ ಮಾತಾಡಲು ತವಕಿಸುತ್ತಿದ್ದಾರೆ. ಇತ್ತೀಚೆಗೆ ಯುವರಾಜ್‌ಕುಮಾರ್ ಹೊಸಪೇಟೆಗೆ …

Read More »

ಹೆಚ್ಚು ತೆರಿಗೆ ಪಾವತಿಸಿದ ಅಕ್ಷಯ್‌ಗೆ ಭೇಷ್ ಎಂದ ಐಟಿ

ಅಕ್ಷಯ್ ಕುಮಾರ್ ಬಾಲಿವುಡ್‌ನ ಸ್ಟಾರ್ ನಟ. ಭಾರತದ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರಾಗಿರುವ ಅಕ್ಷಯ್ ವರ್ಷಕ್ಕೆ ಅತಿ ಹೆಚ್ಚು ಸಿನಿಮಾ ಮಾಡುವ ಏಕೈಕ ಸ್ಟಾರ್ ನಟ ಸಹ ಹೌದು. ಅಕ್ಷಯ್ ಕುಮಾರ್ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಹಣ ದೋಚುವುದು ಮಾತ್ರವಲ್ಲ ಸ್ವತಃ ಅಕ್ಷಯ್ ಕುಮಾರ್ ಸಹ ಭಾರಿ ಮೊತ್ತದ ಸಂಭಾವನೆಯನ್ನೇ ನಿರ್ಮಾಪಕರಿಂದ ಪಡೆಯುತ್ತಾರೆ. ವಾರ್ಷಿಕವಾಗಿ ಅತಿ ಹೆಚ್ಚು ಹಣ ಗಳಿಸುವ ವಿಶ್ವ ನಟರ ಪಟ್ಟಿಯಲ್ಲಿ ಸಹ …

Read More »

ಬೆಳಗಾವಿ ನೂತನ S.P. ಆಗಿ ನೇಮಿಸಿ ಸಂಜೀವ್ ಪಾಟೀಲ ನೇಮಕ,ಬೆಳಗಾವಿ ನೂತನ ಎಸ್ಪಿ ಆಗಿ ನೇಮಿಸಿ

ಧಾರವಾಡ : 16 ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಲ್ಲಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಕೂಡ ವರ್ಗಾವಣೆಯಾಗಿದ್ದಾರೆ. ಅವರ ಸ್ಥಾನಕ್ಕೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಲೋಕೇಶ್ ಜಗಲಸರ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಪಿ.ಕೃಷ್ಣಕಾಂತ್‌ ಅವರನ್ನು ಬೆಂಗಳೂರಿನ ಸೌತ್ ಡಿವಿಜನ್‌ಗೆ ಡೆಪ್ಯುಟಿ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಇವರಿಂದ ತೆರವಾದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ …

Read More »

ಕಾಶ್ಮೀರಿ ಪಂಡಿತರ ಕುರಿತು ವಿವಾದಾತ್ಮಕ ಹೇಳಿಕೆ : ʼನಟಿ ಸಾಯಿ ಪಲ್ಲವಿʼ ವಿರುದ್ಧ ಕೇಸ್‌ ದಾಖಲು

ನಟಿ ಸಾಯಿ ಪಲ್ಲವಿ ತನ್ನ ಇತ್ತೀಚಿನ ಚಿತ್ರ ವಿರಾಟ ಪರ್ವಂ ಚಿತ್ರ ಪ್ರಚಾರ ಮಾಡುವಾಗ ಯೂಟ್ಯೂಬ್‌ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರಿ ಪಂಡಿತರ ಪಲಾಯನವನ್ನ ಗೋರಕ್ಷಣೆಯೊಂದಿಗೆ ಹೋಲಿಸಿ, ವಿವಾದಕ್ಕೆ ಗುರಿಯಾಗಿದ್ದಾರೆ. ಸಧ್ಯ ಈ ನಟಿಮಣಿಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೌದು, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಟಿಯ ವಿರುದ್ಧ ಬಜರಂಗದಳ ವಿದ್ಯಾನಗರ ಜಿಲ್ಲಾ ಸಮಿಯೋಜಕ್ ದೂರು ನೀಡಿದ್ದು, ಹೈದರಾಬಾದ್ʼನಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಟ್ವೀಟ್‌ …

Read More »