Breaking News

ಸಿನೆಮಾ

ಸೆಪ್ಟಂಬರ್​ 18ರಂದು ‘ತೋತಾಪುರಿ 2’ ಚಿತ್ರದ ಟ್ರೈಲರ್​ ಅನ್ನು ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಬಿಡುಗಡೆ ಮಾಡಲಿದ್ದಾರೆ.

ಒಂದೇ ಸೂರಿನಡಿ ಬದುಕುತ್ತಿರುವ ನಾವೆಲ್ಲ ಒಂದೇ ಎನ್ನುವ ಭಾವೈಕ್ಯತೆಯ ಸಂದೇಶ ಹೊಂದಿದ್ದ ‘ತೋತಾಪುರಿ’ ಚಿತ್ರ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮುಂದುವರಿದ ಭಾಗ ‘ತೋತಾಪುರಿ 2’ ಶೀಘ್ರದಲ್ಲೇ ತೆರೆಕಾಣಲು ಸಿದ್ಧವಾಗಿದೆ. ‘ಸಿದ್ಲಿಂಗು’ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ತೋತಾಪುರಿ 2’ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಸಾಥ್ ಸಿಕ್ಕಿದೆ. ಇದೇ ಗಣೇಶ ಹಾಗೂ ಗೌರಿ ಹಬ್ಬಕ್ಕೆ ‘ತೋತಾಪುರಿ 2’ ಚಿತ್ರದ ಟ್ರೈಲರ್​ ಅನ್ನು ಹ್ಯಾಟ್ರಿಕ್ …

Read More »

ಉಪ್ಪಿ ಮನವಿ ಈ ವರ್ಷದ ಗಣೇಶ ಹಬ್ಬದಂದು ರಿಯಲ್​ ಸ್ಟಾರ್​ ಉಪೇಂದ್ರ ಅಭಿಮಾನಿಗಳಿಗೆ ಡಬಲ್​ ಖುಷಿ. ಒಂದೆಡೆ ಇಡೀ ದೇಶವೇ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಮುಳುಗಿದ್ರೆ, ಈ ಕಡೆ ಉಪ್ಪಿಗೆ ಹುಟ್ಟುಹಬ್ಬದ ಸಂಭ್ರಮ. ಅದರ ಜೊತೆಗೆ ಎಂಟು ವರ್ಷಗಳ ಬಳಿಕ ಆಯಕ್ಷನ್ ಕಟ್​ ಹೇಳಿರುವ ಯುಐ ಸಿನಿಮಾದ ಟೀಸರ್​ ಲಾಂಚ್​ ಕಾರ್ಯಕ್ರಮವಿದೆ. ಹೀಗಾಗಿ ಉಪ್ಪಿ ಸೆಪ್ಟೆಂಬರ್​ 18ರಂದು ಫುಲ್​ ಬ್ಯುಸಿಯಾಗಿರುತ್ತಾರೆ. ​ಈ ಕಾರಣಕ್ಕಾಗಿ ಅವರು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಬರ್ತ್​ಡೇ ದಿನ ಮನೆಯಲ್ಲಿ ಸಿಗಲ್ಲ ಉಪ್ಪಿ!: “ಎಲ್ಲಾ ಅಭಿಮಾನಿ ದೇವರುಗಳಿಗೆ ನಮಸ್ಕಾರ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೆಪ್ಟೆಂಬರ್​ 18 ಈ ವರ್ಷ ಬಾರಿ ವಿಶೇಷ. ಯಾಕಂದ್ರೆ ಗಣೇಶ ಚತುರ್ಥಿ ಹಬ್ಬ ಆ ದಿನಾನೇ. ಅಭಿಮಾನಿಗಳ ಹಬ್ಬನೂ ಅದೇ ದಿನ. ನಿಮ್ಮೆಲ್ಲರ ಬಹುನಿರೀಕ್ಷಿತ ‘ಯುಐ’ ಸಿನಿಮಾದ ಟೀಸರ್​ ಕೂಡ ಅಂದೇ ಲಾಂಚ್​ ಮಾಡುತ್ತಿದ್ದೇವೆ. ಈ ಪ್ರಯುಕ್ತ ನಾನು ತುಂಬಾ ಬ್ಯುಸಿ ಇರುತ್ತೇನೆ. ಸೆಪ್ಟೆಂಬರ್​ 17ರ ರಾತ್ರಿ ಅಥವಾ 18ರ ಬೆಳಗ್ಗೆ ಕತ್ರಿಗುಪ್ಪೆ ಹಾಗೂ ಸದಾಶಿವನಗರದ ಮನೆಯಲ್ಲಿ ಸಿಗುವುದಿಲ್ಲ. ನನಗೆ ತುಂಬಾ ಕೆಲಸಗಳಿರುವುದರಿಂದ ಸೆಪ್ಟೆಂಬರ್​ 18ರಂದು ಮಧ್ಯಾಹ್ನ 2 ಗಂಟೆಯ ಮೇಲೆ ಊರ್ವಶಿ ಥಿಯೇಟರ್​ನಲ್ಲಿ ನಿಮಗಾಗಿ ಕಾಯುತ್ತಿರುತ್ತೇನೆ. ನೀವೆಲ್ಲರೂ ಅಲ್ಲೇ ಬನ್ನಿ. ಕೇಕ್​ ಕತ್ತರಿಸೋಣ. ಎಲ್ಲ ಸಂಭ್ರಮವನ್ನು ಆಚರಿಸೋಣ. 2 ಗಂಟೆಯಿಂದ 8 ಗಂಟೆಯವರೆಗೂ ಈ ಸಂಭ್ರಮಾಚರಣೆ ಇರುತ್ತದೆ. 6 ಗಂಟೆಯ ನಂತರ ಥಿಯೇಟರ್​ ಒಳಗಡೆ ‘ಯುಐ’ ಟೀಸರ್​ ಲಾಂಚ್ ಮಾಡುತ್ತೇವೆ. ಬನ್ನಿ, ಎಲ್ಲರೂ ಪಾಲ್ಗೊಳ್ಳೋಣ” ಎಂದು ರಿಯಲ್​ ಸ್ಟಾರ್​ ಉಪೇಂದ್ರ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಯುಐ ಚಿತ್ರದಲ್ಲಿ ನಟ ಉಪೇಂದ್ರ ನಟಿಸುವುದರ ಜೊತೆಗೆ ಆಯಕ್ಷನ್​ ಕಟ್​ ಕೂಡ ಹೇಳಿದ್ದಾರೆ. ಉಪ್ಪಿ 2 ಸಿನಿಮಾ ಬಳಿಕ ಉಪೇಂದ್ರ ಡೈರೆಕ್ಟರ್​ ಕ್ಯಾಪ್​ ತೊಟ್ಟ ಚಿತ್ರವಿದು. ಉಪ್ಪಿ 2 ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಉಪೇಂದ್ರ ಅವರ ನಟನೆಗೆ ಮಾತ್ರವಲ್ಲ, ನಿರ್ದೇಶನ ಶೈಲಿಗೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರು ನಟಿಸುವುದರ ಜೊತೆಗೆ ನಿರ್ದೇಶನ ಮಾಡಿರುವ ಯುಐ ಚಿತ್ರದ ಟೀಸರ್ ಸೆಪ್ಟಂಬರ್​ 18ರಂದು ಅವರ ಹುಟ್ಟುಹಬ್ಬದ ದಿನವೇ ಅನಾವರಣಗೊಳ್ಳಲು ತಯಾರಾಗಿದೆ. ಸದ್ಯ ಯುಐ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಎಡಿಟಿಂಗ್​ ಕೆಲಸ ನಡೆಯುತ್ತಿದೆ. ಉಪೇಂದ್ರ ಈ ಚಿತ್ರದಲ್ಲಿ 3ಡಿ ಬಾಡಿ ಸ್ಕ್ಯಾನ್​ ಬಳಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿ ಶೂಟ್​ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಹೊಸ ತಂತ್ರಜ್ಞಾನವನ್ನು ಜೇಮ್ಸ್​ ಕ್ಯಾಮರಾನ್​ ‘ಅವತಾರ್​ 2’ ಸಿನಿಮಾಗೆ ಬಳಸಲಾಗಿತ್ತು. ಇಷ್ಟೇ ಅಲ್ಲ, ಸುಮಾರು 14 ಸಾವಿರ ವಿಎಫ್​ಎಕ್ಸ್​ ಶಾಟ್ಸ್​ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ ಅನ್ನೋದು ಗಮನಾರ್ಹ. ಉಪ್ಪಿ ನಿರ್ದೇಶಿಸಿದ ಈವರೆಗಿನ ಸಿನಿಮಾಗಳಲ್ಲಿ ಇದು ದುಬಾರಿ ಎನ್ನಲಾಗಿದೆ. ಸಿನಿಮಾ ಬಜೆಟ್​ ಸುಮಾರು 100 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಲ್ಲದೇ ತಾಂತ್ರಿಕವಾಗಿಯೂ ಈ ಚಿತ್ರ ಅಡ್ವಾನ್ಸ್​ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಮತ್ತೊಂದೆಡೆ ಯುಐ ಚಿತ್ರ ರಿಲೀಸ್​ ಯಾವಾಗ? ಅನ್ನೋ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ. ನಿರ್ಮಾಪಕರ ಮೂಲಗಳ ಪ್ರಕಾರ, ಈ ಸಿನಿಮಾ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಹೈ ಬಜೆಟ್​ ಚಿತ್ರಗಳಲ್ಲಿ ಯುಐ ಕೂಡ ಒಂದು. ಹಲವಾರು ಸ್ಪೆಷಾಲಿಟಿಗಳಿಗೆ ಸೌತ್​ ಇಂಡಸ್ಟ್ರಿಯಲ್ಲಿ ಟಾಕ್​ ಆಗುತ್ತಿರುವ ಈ ಚಿತ್ರದ ಮೂಲಕ ಉಪ್ಪಿ ಪ್ರೇಕ್ಷಕರಿಗೆ ಏನು ಹೇಳಲು ಹೊರಟಿದ್ದಾರೆ ಅನ್ನೋದನ್ನು ಕಾದು ನೋಡಬೇಕು.

ಉಪ್ಪಿ ಮನವಿಈ ವರ್ಷದ ಗಣೇಶ ಹಬ್ಬದಂದು ರಿಯಲ್​ ಸ್ಟಾರ್​ ಉಪೇಂದ್ರ ಅಭಿಮಾನಿಗಳಿಗೆ ಡಬಲ್​ ಖುಷಿ. ಒಂದೆಡೆ ಇಡೀ ದೇಶವೇ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಮುಳುಗಿದ್ರೆ, ಈ ಕಡೆ ಉಪ್ಪಿಗೆ ಹುಟ್ಟುಹಬ್ಬದ ಸಂಭ್ರಮ. ಅದರ ಜೊತೆಗೆ ಎಂಟು ವರ್ಷಗಳ ಬಳಿಕ ಆಯಕ್ಷನ್ ಕಟ್​ ಹೇಳಿರುವ ಯುಐ ಸಿನಿಮಾದ ಟೀಸರ್​ ಲಾಂಚ್​ ಕಾರ್ಯಕ್ರಮವಿದೆ. ಹೀಗಾಗಿ ಉಪ್ಪಿ ಸೆಪ್ಟೆಂಬರ್​ 18ರಂದು ಫುಲ್​ ಬ್ಯುಸಿಯಾಗಿರುತ್ತಾರೆ. ​ಈ ಕಾರಣಕ್ಕಾಗಿ ಅವರು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಬರ್ತ್​ಡೇ …

Read More »

ಜವಾನ್’​ ಸಿನಿಮಾ ಬಿಡುಗಡೆಯಾಗಿ ಕೇವಲ ನಾಲ್ಕೇ ದಿನಗಳಲ್ಲಿ 8 ಹೊಸ ದಾಖಲೆಯನ್ನು ಬರೆದಿದೆ.

ಜವಾನ್’​ ಸಿನಿಮಾ ಬಿಡುಗಡೆಯಾಗಿ ಕೇವಲ ನಾಲ್ಕೇ ದಿನಗಳಲ್ಲಿ 8 ಹೊಸ ದಾಖಲೆಯನ್ನು ಬರೆದಿದೆ. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿ.. ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಮತ್ತು ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಕಾಂಬೋದಲ್ಲಿ ಮೂಡಿಬಂದ ‘ಜವಾನ್’​ ಸಿನಿಮಾ ಸೆಪ್ಟೆಂಬರ್​ ​ 7, ಗುರುವಾರದಂದು ಬಿಡುಗಡೆಯಾಗಿ ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡ ಚಿತ್ರ ಕಲೆಕ್ಷನ್​ ವಿಚಾರದಲ್ಲಿ ಅಬ್ಬರದ ಓಟ ಮುಂದುವರೆಸಿದೆ. ಶಾರುಖ್​ ಸೇರಿದಂತೆ ನಯನತಾರಾ, …

Read More »

ಬಹುನಿರೀಕ್ಷಿತ ಯುಐ ಟೀಸರ್ ನಾಳೆ ಬೆಳಗ್ಗೆ 10 ಗಂಟೆಗೆ​ ಅನಾವರಣ

ಕನ್ನಡ ಚಿತ್ರರಂಗದ ರಿಯಲ್​ ಸ್ಟಾರ್​ ಉಪೇಂದ್ರ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಯುಐ’. ಶೀರ್ಷಿಕೆಯಿಂದಲೇ ದಕ್ಷಿಣ ಚಿತ್ರರಂಗದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಕಥೆ ಕುರಿತು ಕಿಂಚಿತ್ತೂ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಉಪ್ಪಿ ನಟನೆಯ ಅಥವಾ ನಿರ್ದೇಶನದ ಪ್ರತೀ ಸಿನಿಮಾ ಕೂಡ ವಿಭಿನ್ನ. ಹಾಗಾಗಿ ಉಪ್ಪಿ ಮುಂದಿನ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿರುವ ಯುಐ ಚಿತ್ರದಲ್ಲಿ ನಟ ಉಪೇಂದ್ರ ನಟಿಸುವುದರ ಜೊತೆಗೆ ಆಯಕ್ಷನ್​ …

Read More »

ಪಿ ಲಂಕೇಶ್ ಮೊಮ್ಮಗ, ಚಿತ್ರರಂಗಕ್ಕೆ

Samarjit Lankesh: ಪಿ ಲಂಕೇಶ್ ಮೊಮ್ಮಗ, ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಬರಲು ರೆಡಿಯಾಗಿದ್ದು, ಅವರ ನಟನೆಯ ಮೊದಲ ಸಿನಿಮಾ ‘ಗೌರಿ’ಯ ಮುಹೂರ್ತ ಇಂದು (ಆಗಸ್ಟ್ 31) ನಡೆದಿದೆ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಪುತ್ರ ಸಮರ್ಜಿತ್ ಲಂಕೇಶ್, ನಾಯನ ನಟನಾಗಿ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟನಾಗಲು ಅವಶ್ಯಕವಿರುವ ಕೆಲವು ಕಲೆಗಳನ್ನು ಕಲಿತು ಬಂದಿರುವ ಸಮರ್ಜಿತ್ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದು, ಮಗನ ಮೊದಲ …

Read More »

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ‘ಪುಷ್ಪ 2’

2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ‘ಪುಷ್ಪ: ದಿ ರೈಸ್’​ನ ಮುಂದುವರೆದ ಭಾಗ ಇದಾಗಿದೆ. ನಟ ಅಲ್ಲು ಅರ್ಜುನ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಮೇಲೆ ಮುಗಿಲೆತ್ತರದ ನಿರೀಕ್ಷೆಯಿದೆ. ಈಗಾಗಲೇ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್ ಬಿಡುಗಡೆಯಾಗಿದ್ದು, ದಾಖಲೆಯನ್ನು ಸೃಷ್ಟಿಸಿದೆ. ಇತಿಹಾಸದಲ್ಲಿ ಇದೇ ಮೊದಲು.. ಏಪ್ರಿಲ್​ 8 ರಂದು ಪುಷ್ಪ 2 ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ಈ ಪೋಸ್ಟರ್​ 4 ತಿಂಗಳಲ್ಲಿ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ನಲ್ಲಿ …

Read More »

ಹಾಸ್ಟೆಲ್ ಹುಡುಗರಿಂದ ಪ್ರೇಕ್ಷಕರಿಗೆ ಬಿಗ್​ ಆಫರ್ 2 ಟಿಕೆಟ್​ ತಗೊಂಡ್ರೆ 1 ಫ್ರೀ

ಬುಕ್​ ಮೈ ಶೋನಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ 2 ಟಿಕೆಟ್ ತೆಗೆದುಕೊಂಡರೆ 1 ಉಚಿತವಾಗಿ ಕೊಡುತ್ತಿದ್ದೇವೆ ಎಂದು ಚಿತ್ರತಂಡ ಹೇಳಿದೆ. ಯುವ ಪ್ರತಿಭೆಗಳ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಥಿಯೇಟರ್ ಅಂಗಳದಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್ ಓಟ ಮುಂದುವರೆದಿದೆ. ಮೂರನೇ ವಾರವೂ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ವಿಭಿನ್ನ ಬಗೆಯಲ್ಲಿ ಸಿನಿಮಾ ಪ್ರಮೋಷನ್ ಮಾಡಿ ಗೆದ್ದಿರುವ ಚಿತ್ರತಂಡಕ್ಕೆ ನಟಿ ಹಾಗೂ ಖ್ಯಾತ …

Read More »

ನ್ನಡ ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ

ಕನ್ನಡ ಚಿತ್ರರಂಗ ಸೇರಿದಂತೆ ಇತರೆ ಭಾಷೆ ಸಿನಿಮಾ ನಟ-ನಟಿಯರ ಹಠಾತ್​ ಸಾವು ಅವರ ಅಭಿಮಾನಿಗಳಲ್ಲಿ ತೀವ್ರ ನೋವು ಉಂಟು ಮಾಡುತ್ತಿದೆ. ಇತ್ತೀಚಿನ ದಿನದಲ್ಲಿ ಯುವ ಜನತೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಅನೇಕ ಪ್ರಕರಣಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಿವೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ರೀತಿ ಯುವ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಕೇವಲ ಉದ್ಯಮಕ್ಕೆ ಮಾತ್ರವಲ್ಲ, ರಾಜ್ಯಕ್ಕೆ ಬರಸಿಡಿಲು ಬಡಿಯುವಂತೆ ಮಾಡಿವೆ. ನಟ …

Read More »

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶ..

ಸ್ಯಾಂಡಲ್‌ವುಡ್ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನ ಅವರು ನಿಧನರಾಗಿದ್ದಾರೆ. ಪತಿ ಜೊತೆ ಸ್ಪಂದನಾ ಬ್ಯಾಂಕಾಕ್ ಗೆ ಹೋಗಿದ್ದು, ತೀವ್ರ ಹೃದಯಾಘಾತದಿಂದ ಸ್ಪಂದನಾ ಬ್ಯಾಂಕಾಕ್ ನಲ್ಲೇ ಸಾವನ್ನಪ್ಪಿದ್ದಾರೆ. ವಿಜಯ್ ಜೊತೆ ಸ್ಪಂದನಾ 2007ರಲ್ಲಿ ಸಪ್ತಪದಿ ತುಳಿದಿದ್ದರು. ವಿಜಯ್​- ಸ್ಪಂದನಾ ದಂಪತಿಗೆ ಶೌರ್ಯ ಎಂಬ ಪುತ್ರನಿದ್ದಾನೆ ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿದ್ದು, ಇದು ಇಡೀ ಕನ್ನಡ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಸ್ಪಂದನಾ ವಿಜಯ್​ ರಾಘವೇಂದ್ರ …

Read More »

ಶೂಟಿಂಗ್​ ವೇಳೆ ಗಾಯಗೊಂಡ ಶಾರುಖ್​ ಖಾನ್​

ನಟ ಶಾರುಖ್​ ಖಾನ್​ ಅಮೆರಿಕದಲ್ಲಿ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ. ಬಹಿರಂಗಪಡಿಸದ ಪ್ರಾಜೆಕ್ಟ್‌ನ ಚಿತ್ರೀಕರಣದಲ್ಲಿದ್ದಾಗ ಘಟನೆ ಸಂಭವಿಸಿದೆ. ಬಾಲಿವುಡ್​ ನಟ​ ಶಾರುಖ್​ ಖಾನ್ ಅಮೆರಿಕದಲ್ಲಿ​ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ. ಭಾರತಕ್ಕೆ ಮರಳುವ ಮುನ್ನ ಲಾಸ್​ ಏಂಜಲೀಸ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಲಾಸ್​ ಏಂಜಲೀಸ್​​ನಲ್ಲಿ ನಡೆದ ಸಣ್ಣ ಅವಘಡದಲ್ಲಿ ಶಾರುಖ್​ ಮೂಗಿಗೆ ಗಾಯವಾಗಿದೆ. ಹೀಗಾಗಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಎಸ್​​ಆರ್​ಕೆ …

Read More »