Breaking News

ಸಿನೆಮಾ

ಬಿಗ್‌ಬಾಸ್‌ ಮನೆಯಿಂದ ಧನುಶ್ರೀ ಔಟ್‌?

ಬಿಗ್‌ಬಾಸ್‌ ಸೀಸನ್‌-8ರ ಮೊದಲ ವಾರ ಮನೆಯಿಂದ ಹೊರಹೋಗೋ ಸ್ಪರ್ಧಿ ಯಾರು? ಭಾನುವಾರ ಎಲ್ಲರ ತಲೆಗೆ ಹುಳ ಬಿಟ್ಟಿರೋ ಪ್ರಶ್ನೆ ಇದು. ಶನಿವಾರ ಎಪಿಸೋಡ್‌ಗಳಲ್ಲಿ ಎಲಿಮನೇಷನ್‌ ನಡೀತಾ ಇತ್ತು. ಆದ್ರೆ, ಈ ವಾರ ಎಲಿಮನೇಷನ್‌ ರೌಂಡ್‌ನ ಭಾನುವಾರಕ್ಕೆ ಮುಂದೂಡಲಾಗಿದ.   ನಿನ್ನೆಯ ಎಪಿಸೋಡ್‌ನಲ್ಲಿ ಶುಭಾ ಪೂಂಜಾ ಹಾಗೂ ಗಾಯಕ ವಿಶ್ವನಾಥ್‌ ಸೇವ್ ಆಗಿದ್ದಾರೆ. ಇನ್ನೂ ನೇರವಾಗಿ ನಾಮಿನೇಟ್ ಆಗಿರೋ ನಿರ್ಮಲಾ, ರಘು ಗೌಡ ಹಾಗೂ ಟಿಕ್‌ಟಾಕ್‌ ಸ್ಟಾರ್ ಧನುಶ್ರೀ ಡೇಂಜರ್‌ ಝೋನ್‌ನಲ್ಲಿದ್ದಾರೆ. …

Read More »

ರಾಬರ್ಟ್ ಗೆ 2 ಮುಖ್ಯ ಚಿತ್ರಮಂದಿರಗಳು..!

ಈ ಹಿಂದೆ ಸಿನಿಮಾಗಳು 1ಮುಖ್ಯ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದ್ದವು. ಹೌದು ಬೆಂಗಳೂರಿನ ಕೆ ಜಿ ರಸ್ತೆಯಲ್ಲಿರುವ ಯಾವುದಾದರೂ ಒಂದು ಚಿತ್ರಮಂದಿರವನ್ನು ಮುಖ್ಯ ಚಿತ್ರಮಂದಿರ ಎಂದು ಘೋಷಿಸಿ ಚಿತ್ರಗಳನ್ನ ಬಿಡುಗಡೆ ಮಾಡಲಾಗುತ್ತಿತ್ತು ಆದರೆ ಇದೀಗ ಕಾಲ ಬದಲಾಗಿದೆ ಕೆಜಿ ರಸ್ತೆಯ ಚಿತ್ರಮಂದಿರ ಮಾತ್ರವಲ್ಲದೆ ಬೇರೆ ಚಿತ್ರಮಂದಿರಗಳನ್ನು ಸಹ ಮುಖ್ಯ ಚಿತ್ರಮಂದಿರ ಎಂದು ಘೋಷಿಸಲಾಗುತ್ತಿದೆ. ಇದೀಗ ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ಸಹ 2ಮುಖ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮಾರ್ಚ್ 11 ರಂದು …

Read More »

ದಿವ್ಯಳನ್ನು ಬಿಗ್‍ ಮನೆಯಿಂದ ಕಳಿಸಿಕೊಡ್ಬೇಕು ಅಂತ ಮಂಜು ಹೇಳಿದ್ಯಾಕೆ..?

ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರ ಮೊದಲ ವೀಕೆಂಡ್ ಎಪಿಸೋಡ್ ಪ್ರಸಾರವಾಗಿದೆ. ‘ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಸುದೀಪ್ ಎಂದಿನಂತೆ ತಮ್ಮ ಮಾತುಗಾರಿಕೆ, ಹಾಸ್ಯದಿಂದ ಮನೆಯ ಸದಸ್ಯರು ತಮ್ಮ ಮಾತಿಗೆ ತಲೆದೂಗುವಂತೆ ಮಾಡಿದರು. ಅಂತೆಯೇ ಸುದೀಪ್ ಅವರು ಎಲ್ಲರ ಬಳಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಹೇಳಿದರು. ಹೌದು. ಬಿಗ್ ಮನೆಯಲ್ಲಿ ಅತ್ಯಂತ ಉತ್ಸಾಹದಿಂದ ಮನೆಮಂದಿಯನ್ನು ನಗಿಸುವ ಲ್ಯಾಗ್ ಮಂಜು ಬಳಿ ಮನೆಯ ಸದಸ್ಯರ ಯಾವ ಒಂದು ವಿಚಾರ ಒಳ್ಳೆಯದಿದೆ ಹಾಗೂ …

Read More »

ಸದ್ದಿಲ್ಲದೆ ಸೆಟ್ಟೇರಿದ ಶಿವಣ್ಣನ ‘ಭಜರಂಗಿ-2’..!

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭಜರಂಗಿ-2 ಚಿತ್ರ ಇದೀಗ ಸೆಟ್ಟೇರಿದೆ. ಇಂದು ಚಿತ್ರದ ಮುಹೂರ್ತ ನೆರವೇರಿದ್ದು ಶೂಟಿಂಗ್ ಭರದಿಂದ ಸಾಗಲಿದೆ. ಯಡಿಯೂರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇವತ್ತು ಶಿವಣ್ಣ ಮುಂದಿನ ಚಿತ್ರ ಭಜರಂಗಿ-2 ಮುಹೂರ್ತ ನೆರವೇರಿತು. ಭಜರಂಗಿ, ವಜ್ರಕಾಯ ನಂತರ ಮತ್ತೆ ಹರ್ಷ- ಶಿವಣ್ಣ ಜೋಡಿ ಒಂದಾಗಿದೆ. ಹರ್ಷ ನಿರ್ದೇಶನದ ಈ ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿತ್ತು, ಇನ್ನು ಇದೀಗ ಸೆಟ್ಟೇರಿರೋ ಭಜರಂಗಿ-2 ಕೂಡ ಇವುಗಳಂತೆಯೇ …

Read More »

ಕ್ಷಮೆ ಯಾಚಿಸಿದ ನಿರ್ದೇಶಕ ನಂದಕಿಶೋರ್ :’ಪೊಗರು’ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುವ ಭರವಸೆ

ಮಹದೇವಪುರ: ಮಹದೇವಪುರದ ವೈಟ್ ಫೀಲ್ಡ್​ನ ಫೋರಂ ಮಾಲ್​ನಲ್ಲಿ ಪೊಗರು ಚಿತ್ರತಂಡ, ರಾಜೇಶ್ ಮತ್ತು ಡಬ್ಲ್ಯೂಟಿಎಫ್​ನ ಸದಸ್ಯರು ಹಾಗೂ ಸಚಿವ ಅರವಿಂದ ಲಿಂಬಾವಳಿ ಸಿನಿಮಾ ವೀಕ್ಷಣೆ ಮಾಡಿದರು. ಇದಕ್ಕೂ ಮುನ್ನ ವೈಟ್ ಫೀಲ್ಡ್​ನ ಫೋರಂ ಮಾಲ್​ಗೆ ಭೇಟಿ ನೀಡಿದ್ದ ಪೋಗರು ಚಿತ್ರತಂಡ, ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರ ನೀಡಿತು. ಅಭಿಮಾನಿಗಳ ಕೋರಿಕೆ ಮೇರೆಗೆ ಸಿನಿಮಾದ ಡೈಲಾಗ್ ಹೇಳಿ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ನಟ ಧ್ರುವ ಸರ್ಜಾ ರಂಜಿಸಿದರು. ಇದೇ ವೇಳೆ ರಾಜೇಶ್ ಮತ್ತು …

Read More »

ಕೊನೆಗೂ ಯುವರತ್ನ ಮೂರನೇ ಹಾಡಿಗೆ ಮುಹೂರ್ತ ಕೂಡಿಬಂತು

ಬೆಂಗಳೂರು: ಯುವರತ್ನ ಸಿನಿಮಾದ ಮೂರನೇ ಹಾಡಿನ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಕಳೆದ ಭಾನುವಾರ ಬಿಡುಗಡೆಯಾಗಬೇಕಿದ್ದ ಈ ಹಾಡು ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ಊರಿಗೊಬ್ಬ ರಾಜ ಎನ್ನುವ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಹಾಡಿದ್ದಾರೆ. ಈ ಹಾಡು ಫೆಬ್ರವರಿ 25 ರಂದು ಅಂದರೆ ನಾಳೆ 3.33 ಕ್ಕೆ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ತೆಲುಗಿನಲ್ಲೂ ಈ ಹಾಡು ಬಿಡುಗಡೆಯಾಗುತ್ತಿದೆ. ತಮನ್ ಸಂಗೀತ ಸಂಯೋಜಿಸಿರುವ …

Read More »

ಅಪ್ಪನಿಗೆ ಹುಟ್ಟಿದ ಮಗ ನಾನು. ನನಗೆ ಅವಮಾನ ಮಾಡಲು ಬರಬೇಡಿ. ಇದು ರೌಡಿಸಂ ವೇದಿಕೆ ಅಲ್ಲ….:ನಟ ಜಗ್ಗೇಶ್‌

ಬೆಂಗಳೂರು: ಅಪ್ಪನಿಗೆ ಹುಟ್ಟಿದ ಮಗ ನಾನು. ನನಗೆ ಅವಮಾನ ಮಾಡಲು ಬರಬೇಡಿ. ಇದು ರೌಡಿಸಂ ವೇದಿಕೆ ಅಲ್ಲ…. ಇದು ನಟ ಜಗ್ಗೇಶ್‌ ಅವರ ಕಟು ಆಕ್ರೋಶದ ಮಾತು. ಮೈಸೂರು ಸಮೀಪ ತಿ. ನರಸೀಪುರದ ಅತ್ತಳ್ಳಿಯಲ್ಲಿ ದರ್ಶನ್‌ ಅಭಿಮಾನಿಗಳಿಂದ ತರಾಟೆಗೆ ಒಳಗಾಗಿದ್ದ ಜಗ್ಗೇಶ್‌ ಅವರು ಘಟನೆಯ ಸಂದರ್ಭ ಇದ್ದ ಯುವಕರಿಗೆ ಹಾಗೂ ಚಿತ್ರರಂಗದ ಪ್ರಮುಖರಿಗೆ ಕಟು ಮಾತುಗಳಲ್ಲಿ ಎಚ್ಚರಿಕೆಯನ್ನೂ ನೀಡಿದರು. ‘ನನಗೆ ಬುದ್ಧಿಹೇಳಬೇಕಾದವರು ಕನ್ನಡದ ಜನ. ನನ್ನನ್ನು ಹೆತ್ತ ಜನ. ಯಾರೋ …

Read More »

ಸಿನಿಮಾ ಕ್ಷೇತ್ರದಲ್ಲಿ ರಾಜಕೀಯ ಆರಂಭವಾಗಿದೆ. ಇದೊಂದು ದೊಡ್ಡ ಹುನ್ನಾರ: ಜಗ್ಗೇಶ್​

ಬೆಂಗಳೂರು: ಜಾಹೀರಾತು ನೀಡುವ ಬಗ್ಗೆ ಮಾತನಾಡುವ ಭರದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್​ ದರ್ಶನ್​ ತೂಗುದೀಪ್​ ಅವರ ಬಗ್ಗೆ ಜಗ್ಗೇಶ್​ ಮಾತನಾಡಿರುವ ಆಡಿಯೋ ಎನ್ನಲಾದ ಆಡಿಯೋ ಕ್ಲಿಪ್​ ಒಂದು ಹರಿದಾಡಿದ್ದು, ಅದರಿಂದಲೇ ನವರಸ ನಾಯಕ ಜಗ್ಗೇಶ್​ ಪೇಚಿಗೆ ಸಿಲುಕುವಂತಾಗಿದೆ. ನೆಚ್ಚಿನ ನಾಯಕನ ಬಗ್ಗೆ ಕೆಟ್ಟದಾಗಿ ಮಾತನಾಡಿದ ಜಗ್ಗೇಶ್​ಗೆ ದರ್ಶನ್​ ಅಭಿಮಾನಿಗಳು ಸಿನಿಮಾ ಸೆಟ್​ನಲ್ಲೇ ಬೆವರಳಿಸಿದ್ದಾರೆ. ಇತ್ತೀಚೆಗೆ ಜಗ್ಗೇಶ್​ ಅವರ ಧ್ವನಿ ಎನ್ನಲಾದ ಆಡಿಯೋ ಒಂದು ಹರಿದಾಡಿದೆ. ಅದರಲ್ಲಿ ಅವರು ದರ್ಶನ್​ ಬಗ್ಗೆ ಅವಹೇಳನಕಾರಿಯಾಗಿ …

Read More »

ಜಗ್ಗೇಶ್ ವಿರುದ್ಧ ಸಿಡಿದೆದ್ದ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು

ಮೈಸೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರದ ಶೂಟಿಂಗ್ ಸ್ಪಾಟ್ ಗೆ ತೆರಳಿ, ಜಗ್ಗೇಶ್ ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಮೈಸೂರಿನ ಬನ್ನೂರು ಬಳಿಯ ಗ್ರಾಮದಲ್ಲಿ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಶೂಟಿಂಗ್ ಸ್ಪಾಟ್ ಗೆ ಬಂದ ದರ್ಶನ್ ಅಭಿಮಾನಿಗಳು ಏಕಾಏಕಿ ಜಗ್ಗೇಶ್ ಗೆ ಘೇರಾವ್ ಹಾಕಿದ್ದಾರೆ. ದರ್ಶನ್ ಅಭಿಮಾನಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. …

Read More »

ಟ್ರಾಫಿಕ್​ ಪೊಲೀಸರು ದಂಡ ಹಾಕಿದ್ದಾರೆ ಪೊಲೀಸರಿಗೆ ಧನ್ಯವಾದಗಳನ್ನ ಸಮರ್ಪಿಸುತ್ತೇನೆ.: ವಿವೇಕ್​ ಒಬೆರಾಯ್​

ಮುಂಬೈ : ಮಾಸ್ಕ್​ ಧರಿಸದೇ ಬೈಕ್​ ರೈಡ್​ ಮಾಡಿದ್ದಕ್ಕೆ ಮುಂಬೈ ಪೊಲೀಸರು ದಂಡ ಹಾಕಿದ್ದಾರೆ. ಟ್ರಾಫಿಕ್​ ಪೊಲೀಸರು ಅವರ ಕೆಲಸ ಮಾಡಿದ್ದಾರೆ ಎಂದು ನಟ ವಿವೇಕ್​ ಒಬೆರಾಯ್​ ಹೇಳಿದ್ದಾರೆ. ಮುಂಬೈ ಪೊಲೀಸರಿಗೆ ಧನ್ಯವಾದಗಳನ್ನ ಸಮರ್ಪಿಸುತ್ತೇನೆ. ಅವರು ಸುರಕ್ಷತೆ ಬಹಳ ಮುಖ್ಯ ಎಂಬುದನ್ನ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆ ವಿವೇಕ್​ ಸುರಕ್ಷಿತವಾಗಿರಿ, ಮಾಸ್ಕ್​ ಧರಿಸಿ, ಹೆಲ್ಮೆಟ್​ ಹಾಕಿ ಎಂದು ಟ್ವೀಟ್​ ಮಾಡಿದ್ದಾರೆ. ವಿವೇಕ್​ ಪತ್ನಿ ಪ್ರಿಯಾಂಕಾ ಜತೆ ಹರ್ಲೆ ಡೇವಿಡ್ಸನ್​ ಬೈಕ್​ನಲ್ಲಿ …

Read More »