Breaking News

ಸಿನೆಮಾ

ಯೂಟ್ಯೂಬ್ ಚಾಟ್ ಶೋನಲ್ಲಿ ಬಿದ್ದು ಬಿದ್ದು ನಕ್ಕ ನಟಿ ಶಿಲ್ಪಾ ಶೆಟ್ಟಿ..!

ಅಶ್ಲೀಲ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಬಂಧಿಸಿದಾಗಿನಿಂದಲೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಒಂದು ತಿಂಗಳಿನಿಂದ ತನ್ನ ಕುಟುಂಬದೊಂದಿಗೆ ಸಮಯ ಕಳೆದ ಶಿಲ್ಪಾ, ಡ್ಯಾನ್ಸ್ ಶೋ, ಸೂಪರ್ ಡ್ಯಾನ್ಸರ್ 4ಗೆ ಗೈರುಹಾಜರಾಗಿದ್ದರು. ಸದ್ಯ, ಮತ್ತೆ ಕಾರ್ಯಕ್ರಮದತ್ತ ಮುಖಮಾಡಿರುವ ಶಿಲ್ಪಾ, ಎಲ್ಲರನ್ನೂ ರೋಮಾಂಚನಗೊಳಿಸಿದ್ದಾರೆ. ಹಾಸ್ಯ ನಟ ನಿಕ್ ಜೊತೆ ಚಾಟ್ ಶೋ ಸೋಷಿಯಲ್ ಮೀಡಿಯಾ ಸ್ಟಾರ್ ವಿತ್ ಜಾನಿಸ್ ಕಾರ್ಯಕ್ರಮದ ಪ್ರೋಮೋದಲ್ಲಿ ಶಿಲ್ಪಾ ಶೆಟ್ಟಿ ತನ್ನ ಬಿದ್ದು …

Read More »

ʼಬಿಗ್‌ ಬಾಸ್‌ 13ʼ ರ ವಿಜೇತ ಸಿದ್ದಾರ್ಥ್‌ ಶುಕ್ಲಾ ಇನ್ನಿಲ್ಲ

ಜನಪ್ರಿಯ ರಿಯಾಲಿಟಿ ಶೋ ʼಬಿಗ್‌ ಬಾಸ್‌ 13ʼ ರ ವಿಜೇತರಾಗಿದ್ದ ಸಿದ್ದಾರ್ಥ್‌ ಶುಕ್ಲಾ ವಿಧಿವಶರಾಗಿದ್ದಾರೆ. 40 ವರ್ಷದ ಸಿದ್ದಾರ್ಥ್‌ ಶುಕ್ಲಾ ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ. ಡ್ಯಾನ್ಸ್‌ ದಿವಾನೆ 3 ರಲ್ಲೂ ತಮ್ಮ ಗೆಳತಿ ಶೆಹನಾಜ್‌ ಗಿಲ್‌ ಜೊತೆ ಸಿದ್ದಾರ್ಥ್‌ ಶುಕ್ಲಾ ಕಾಣಿಸಿಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿಯೇ ಸಿದ್ದಾರ್ಥ್‌ ಶುಕ್ಲಾ ಇಹಲೋಕ ತ್ಯಜಿಸಿರುವುದು ಚಿತ್ರರಂಗದವರನ್ನು ದಿಗ್ಬ್ರಮೆಗೊಳಿಸಿದೆ. ಡಿಸೆಂಬರ್‌ 12, 1980 ರಂದು ಮುಂಬೈನಲ್ಲಿ ಸಿದ್ದಾರ್ಥ್‌ ಶುಕ್ಲಾ ಜನಿಸಿದ್ದು, ಮೂಲತಃ ಉತ್ತರ …

Read More »

ಸಹೋದರನ ಮಗನೊಂದಿಗೆ ರಷ್ಯಾದಲ್ಲಿ ಚಿಲ್ ಮಾಡುತ್ತಿರುವ ಸಲ್ಮಾನ್‌

ರಷ್ಯಾದಲ್ಲಿ ಪ್ರಾಜೆಕ್ಟ್ ಒಂದರಲ್ಲಿ ಬ್ಯುಸಿಯಾಗಿರುವ ನಟ ಸಲ್ಮಾನ್ ಖಾನ್, ಅಲ್ಲಿನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ತಮ್ಮ ಮುಂಬರುವ ‘ಟೈಗರ್‌ 3’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಲು ಹೋಗಿದ್ದಾರೆ. ‘ಟೈಗರ್‌ ಜ಼ಿಂದಾ ಹೈ’ ಸೀರೀಸ್‌ನ ಈ ಚಿತ್ರದ ಕೆಲಸದ ಮೇಲೆ ಇಲ್ಲಿಗೆ ಬಂದಿರುವ 55 ವರ್ಷದ ನಟ ತಮ್ಮ ಸಹೋದರನ ಮಗ ನಿರ್ವಾನ್ ಖಾನ್ ಜೊತೆಗೆ ಔಟಿಂಗ್ ಹೋಗಿದ್ದಾರೆ. ಸೊಹೇಲ್ ಖಾನ್‌ನ ಪುತ್ರನೊಂದಿಗೆ ಹೀಗೆ ಅಡ್ಡಾಡುತ್ತಿರುವ ಚಿತ್ರವೊಂದನ್ನು ಶೇರ್‌ ಮಾಡಿಕೊಂಡ ಸಲ್ಮಾನ್ ಖಾನ್, ‘ಚಿಕ್ಕಪ್ಪ-ಮಗ’ …

Read More »

ಲವ್‌ ಯೂ ರಚ್ಚು’ ದುರಂತ: ಅಜಯ್‌ ರಾವ್‌ ಸೇರಿ ಚಿತ್ರತಂಡದ 6 ಮಂದಿಗೆ ಜಾಮೀನು

ರಾಮನಗರ: ‘ಲವ್‌ ಯೂ ರಚ್ಚು’ ಚಿತ್ರ ತಂಡದ ಆರು ಮಂದಿಗೆ ಇಲ್ಲಿನ ಜಿಲ್ಲಾ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿತು. ಚಿತ್ರದ ನಿರ್ದೇಶಕ ಶಂಕರ್, ನಿರ್ಮಾಪಕ ಗುರು ದೇಶಪಾಂಡೆ, ನಾಯಕ ಅಜಯ್‌ ರಾವ್‌, ಸಾಹಸ ನಿರ್ದೇಶಕ ವಿನೋದ್‌ಕುಮಾರ್, ಪ್ರೊಡಕ್ಷನ್‌ ಮ್ಯಾನೇಜರ್‌ ಫರ್ನಾಂಡೀಸ್‌ ಹಾಗೂ ಕ್ರೇನ್‌ ಚಾಲಕ ಮಹದೇವ ಅವರಿಗೆ ನ್ಯಾಯಾಧೀಶ ಸಿದ್ಧಲಿಂಗಪ್ರಭು ಜಾಮೀನು ನೀಡಿ ಆದೇಶಿಸಿದರು. ಇದೇ ತಿಂಗಳ 9ರಂದು ಬಿಡದಿಯ ಜೋಗರಪಾಳ್ಯ ಸಮೀಪ …

Read More »

ಕ್ರಿಶ್ಚಿಯನ್​ ಹೆಸರುಗಳ ಹಿಂದೆ ಬಿದ್ದಿರುವುದೇಕೆ ಸ್ಯಾಂಡಲ್​ವುಡ್​? ಗಾಂಧಿನಗರದಲ್ಲಿ ಇದು ಹೊಸ ಟ್ರೆಂಡ್​​

ಸದ್ಯದ ಪರಿಸ್ಥಿತಿ ಗಮನಿಸಿದರೆ ಗಾಂಧಿನಗರದಲ್ಲಿ ಕ್ರಿಶ್ಚಿಯನ್​ ಹೆಸರುಗಳನ್ನು ಸಿನಿಮಾಗೆ ಶೀರ್ಷಿಕೆಯನ್ನಾಗಿರುವ ಟ್ರೆಂಡ್​ ಚಾಲ್ತಿಗೆ ಬಂದಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ಈ ರೀತಿಯ ಹೆಸರುಗಳನ್ನು ಇಟ್ಟುಕೊಳ್ಳುತ್ತಿವೆ. ಒಂದು ಸಿನಿಮಾದ ಶೀರ್ಷಿಕೆ ಆಕರ್ಷಕವಾಗಿದ್ದರೆ ಆ ಸಿನಿಮಾ ಅರ್ಧ ಗೆದ್ದಂತೆಯೇ ಸರಿ. ಹಾಗಾಗಿ ತಮ್ಮ ಚಿತ್ರಕ್ಕೆ ಟೈಟಲ್​ ಇಡುವಾಗ ನಿರ್ದೇಶಕರು ಸಖತ್​ ಎಚ್ಚರಿಕೆ ವಹಿಸುತ್ತಾರೆ. ಇನ್ನೂ ಕೆಲವೊಮ್ಮೆ ಫ್ಯಾನ್ಸಿ ಟೈಟಲ್​ಗಳ ಮೊರೆ ಹೋಗಲಾಗುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ಸಿನಿಮಾ ಹೆಸರುಗಳ ಟ್ರೆಂಡ್​ ಬದಲಾಗುತ್ತವೆ. …

Read More »

ಎಫ್​ಎಸ್​ಎಲ್​ ವರದಿ ನೋಡಿ ಸಮಾಧಾನವಾಗಿದೆ: ಇಂದ್ರಜಿತ್ ಲಂಕೇಶ್

ಬೆಂಗಳೂರು: ಎಫ್​ಎಸ್​ಎಲ್ ಪರೀಕ್ಷೆಯಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟ ಬೆನ್ನಲ್ಲೇ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿ, ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇವತ್ತಿನ ಎಫ್​ಎಸ್​ಎಲ್​ ವರದಿ ನೋಡಿ ಸಮಾಧಾನವಾಗಿದೆ. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಈ ಪ್ರಕರಣದಲ್ಲಿ ಇನ್ನೂ ದೊಡ್ಡದೊಡ್ಡ ತಿಮಿಂಗಿಲಗಳಿವೆ. ಅವರನ್ನು ಹಿಡಿಯುವುದು ಇನ್ನೂ ಬಾಕಿ ಇದೆ. ಈ ಬಗ್ಗೆ ಕೋರ್ಟ್​ನಲ್ಲಿ ತನಿಖೆ ನಡೆಯುತ್ತಿದೆ. ಹಾಗಾಗಿ, ನಾನು …

Read More »

ಆಕ್ಷನ್ ಪ್ರಿನ್ಸ್’ಗೆ ಜೋಗಿ `ಪ್ರೇಮ್ ಆಕ್ಷನ್ ಕಟ್’..!

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ನಿರ್ದೇಶಕ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ. ಧ್ರುವ ಸರ್ಜಾ ಜೊತೆ ಪ್ರೇಮ್ ಸಿನಿಮಾ ಮಾಡಲಿದ್ದಾರೆ ಎಂದು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದ್ದ ಗಾಳಿ ಸುದ್ದಿ ಇದೀಗ ಅಧಿಕೃತವಾಗಿದೆ. ಹೌದು..! ನಿನ್ನೆ ಮೊನ್ನೆಯಷ್ಟೆ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಘೋಷಣೆ ಮಾಡಿದ ಧ್ರುವ ಇದೀಗ, ಪ್ರೇಮ್ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಇನ್ಸ್ ಸ್ಟಾಗ್ರಾಮ್ ನಲ್ಲಿ ಮಾಹಿತಿ …

Read More »

ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದ್ದಾನೆ ‘ಕೋಟಿಗೊಬ್ಬ-3’

ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಶಿವ ಕಾರ್ತಿಕ್ ನಿರ್ದೇಶಿಸಿ, ಸೂರಪ್ಪ ಬಾಬು ನಿರ್ಮಿಸಿರುವ ಈ ಚಿತ್ರ ಅಕ್ಟೋಬರ್ 14 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿದುಬಂದಿದೆ. ಸೆಪ್ಟಂಬರ್ 2 ರಂದು ಸುದೀಪ್ ಹುಟ್ಟುಹಬ್ಬವಿದ್ದು, ಅಂದು ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದೆ. ಮಾರ್ಚ್‌ನಲ್ಲಿ ಆಡಿಯೋ ಬಿಡುಗಡೆ ಮಾಡಲು ನಿರ್ಧರಿಸಿದ್ದ ಚಿತ್ರತಂಡ ಏಪ್ರಿಲ್ ಕೊನೆಯ ವಾರದಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ಲಾನ್ …

Read More »

ಜಿಮ್​​ನಲ್ಲಿ ಒಟ್ಟಿಗೇ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ, ದೇವರಕೊಂಡ

ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಜೋಡಿ ಟಾಲಿವುಡ್​ ಅಂಗಳದಲ್ಲಿ ಈಗಾಗಲೇ ಸಖತ್​ ಫೇರ್ ಎನಿಸಿಕೊಂಡಿದೆ. ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳ ಬಳಿಕ ಈ ಜೋಡಿ ಸಿನಿ ಪ್ರೇಕ್ಷಕರ ಹೃದಯವನ್ನ ಗೆದ್ದಿತ್ತು. ಇನ್ನು ಇಬ್ಬರ ಸಂಬಂಧದ ಬಗ್ಗೆ ಅಂತೆ ಕಂತೆಗಳು ಆಗಾಗ ಕೇಳೆ ಬರುತ್ತಲೇ ಇರುತ್ತೆ. ಸದ್ಯ ಇಬ್ಬರು ಈಗ ಒಟ್ಟಿಗೆ ಸಿನಿಮಾ ಮಾಡದೆ ಇದ್ದರೂ ಕೂಡ ವಿಜಯ್​, ರಶ್ಮಿಕಾ ಅಗಾಗ ಭೇಟಿಯಾಗಿ ಸದಾ ಸುದ್ದಿಯಾಗುತ್ತಾರೆ. ಇದೀಗ ರಶ್ಮಿಕಾ …

Read More »

ಪುಟ್ಟಕ್ಕನಾಗಿ ಕಿರುತೆರೆಗೆ ಬಂದ ಪುಟ್ಮಲ್ಲಿ ಉಮಾಶ್ರೀ

ಕನ್ನಡ ಚಿತ್ರರಂಗ ಎಂದೂ ಮರೆಯಲಾಗದ ಹಲವು ಪಾತ್ರಗಳಲ್ಲಿ ನಟಿಸಿರುವ ಉಮಾಶ್ರಿ ಇದೀಗ ಮತ್ತೆ ಕಿರುತೆರೆಗೆ ಬಂದಿದ್ದಾರೆ. ಹಿರಿತೆರೆಯಲ್ಲಿ ಪುಟ್ಮಲ್ಲಿಯಾಗಿ ಈಗಾಗಲೇ ಮೋಡಿ ಮಾಡಿರುವ ಉಮಾಶ್ರೀ ಕಿರುತೆರೆಯಲ್ಲಿ ಪುಟ್ಟಕ್ಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು ಕೆಲವೇ ದಿನಗಳಲ್ಲಿ ಧಾರಾವಾಹಿ ಪ್ರಸಾರ ಆರಂಭವಾಗಲಿದೆ. ಧಾರಾವಾಹಿಯ ಕೇಂದ್ರ ಪಾತ್ರ ಉಮಾಶ್ರೀ ಅವರದ್ದೇ ಆಗಿರುತ್ತದೆ. ಉಮಾಶ್ರೀಗೆ ಕಿರುತೆರೆ ಹೊಸದೇನೂ ಅಲ್ಲ ಈಗಾಗಲೇ ಹಲವು ಧಾರಾವಾಹಿಗಳಲ್ಲಿ …

Read More »