Breaking News

ಸಿನೆಮಾ

ಸ್ಯಾಂಡಲ್‌ವುಡ್‌ನ ಬೇಡಿಕೆಯ ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನ

ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ಡೈಲಾಗ್ ರೈಟರ್ ಗುರು ಕಶ್ಯಪ್ ಹೃದಯಾಘಾತದಿಂದ ನಿಧನ ಹೊಂದಿದರು. ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಗುರು ಕಶ್ಯಪ್​ ಸೋಮವಾರ (ಸೆಪ್ಟಂಬರ್ 13) ರಾತ್ರಿ ನಿಧನರಾದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲೇ ಗುರು ಕಶ್ಯಪ್ ಕೊನೆಯುಸಿರು ಎಳೆದರು ಎನ್ನುವ ಮಾಹಿತಿ ತಿಳಿದುಬಂದಿದೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಗುರು ಕಶ್ಯಪ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿಯುತ್ತಿದ್ದಾರೆ. ಗಣೇಶ್​ ಅಭಿನಯದ ‘ಸುಂದರಾಂಗ ಜಾಣ’, ರಮೇಶ್​ ಅರವಿಂದ್​ ನಟನೆಯ …

Read More »

ಹಂಸಲೇಖ, ನಾನು ಗುಡ್ ಫ್ರೆಂಡ್ಸ್ ಅಲ್ಲವೇ ಅಲ್ಲ’ ಎಂದು ಹೇಳಿ ಅಚ್ಚರಿ ಮೂಡಿಸಿದ ರವಿಚಂದ್ರನ್

ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮತ್ತು ಖ್ಯಾತ ಸಂಗೀತ ಸಂಯೋಜಕ ಹಂಸಲೇಖ ಅವರ ಸಂಬಂಧದ ಕುರಿತು ಟಿವಿ9ನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ನಾವೀರ್ವರೂ ಉತ್ತಮ ಗೆಳೆಯರೇ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಹಾಗಾದರೆ ಅವರೀರ್ವರ ಸಂಬಂಧ ಹೇಗಿತ್ತು? ವಿಡಿಯೊ ನೋಡಿ ಕನ್ನಡ ಬೆಳ್ಳಿತೆರೆಯಲ್ಲಿ ತಮ್ಮ ಸೂಪರ್ ಹಿಟ್ ಕಾಂಬಿನೇಷನ್​ನಿಂದ ಗಮನ ಸೆಳೆದ ಜೋಡಿಗಳಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ ಪ್ರಮುಖರು. ದೃಶ್ಯ 2 ಚಿತ್ರದ ಬಿಡುಗಡೆಯ ಸಂದರ್ಭದಲ್ಲಿಮಾತನಾಡಿರುವ ರವಿಚಂದ್ರನ್ ಹಳೆಯ ದಿನಗಳನ್ನು …

Read More »

ಡ್ರಗ್ಸ್ ಆರೋಪಕ್ಕೆ ಅನುಶ್ರೀ ಮೊದಲ ಪ್ರತಿಕ್ರಿಯೆ: ಸಂಬರಗಿ ಬಗ್ಗೆ ಏನೆಂದರು?

​  ಡ್ರಗ್ಸ್     ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅನುಶ್ರೀ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲದೆ, ಅವರು ಮುಂಬೈಗೆ ಹಾರಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ಅನುಶ್ರೀ ವಿರುದ್ಧ ಬಿಗ್​ ಬಾಸ್​ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಸಾಕಷ್ಟು ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಈ ವಿಚಾರದಲ್ಲಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಪ್ರಶಾಂತ್​ ಸಂಬರಗಿ …

Read More »

ಉಪೇಂದ್ರ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್

ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಖ್ಯಾತ ನಿರ್ದೇಶಕ ಶಂಕರ್ ಮತ್ತು ರಾಮ್ ಚರಣ್ ಪ್ಯಾನ್ ಇಂಡಿಯಾ ಸಿನಿಮಾದ ಮುಹೂರ್ತ ಸಮಾರಂಭ ಸೆಪ್ಟಂಬರ್ 08ರಂದು ಅದ್ದೂರಿಯಾಗಿ ನೆರವೇರಿತು. ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಿನ್ನೆ ಬಳೆಗ್ಗೆ 10.15ಕ್ಕೆ ನಡೆದ ಮುಹೂರ್ತ ಸಮಾರಂಭದಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್ ನ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗಿರುವುದು ಅಚ್ಚರಿ ಮೂಡಿಸಿದೆ. ಅದ್ದೂರಿಯಾಗಿ ನಡೆದ ಪೂಜಾ ಕಾರ್ಯದಲ್ಲಿ ಸಿನಿಮಾತಂಡ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳ ಸಮಾಗಮ ಅಭಿಮಾನಿಗಳ …

Read More »

ಸೋಷಿಯಲ್ ಮೀಡಿಯಾ ಕಿಂಗ್ ವಿರಾಟ್ ಕೊಹ್ಲಿ ಗಳಿಸುವ ಆದಾಯವೆಷ್ಟು ಗೊತ್ತಾ?

ನವದೆಹಲಿ: ಅತ್ತ ಮೈದಾನದಲ್ಲಿ ದಾಖಲೆ ಮಾಡುವ ವಿರಾಟ್ ಕೊಹ್ಲಿ ಈಗ ಸೋಷಿಯಲ್ ಮೀಡಿಯಾದಲ್ಲೂ ಹೊಸ ದಾಖಲೆ ಮಾಡಿದ್ದಾರೆ. ಇನ್ ‍ಸ್ಟಾಗ್ರಾಂ ಪುಟದಲ್ಲಿ ಸಕ್ರಿಯರಾಗಿರುವ ಕೊಹ್ಲಿ, 150 ಮಿಲಿಯನ್ ಹಿಂಬಾಲಕರನ್ನು ಹೊಂದಿದ ಏಷ್ಯಾದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಮಾಡಿದ್ದಾರೆ. ಕೊಹ್ಲಿ ಕೇವಲ ಫಾಲೋವರ್ ಗಳ ವಿಚಾರ ಮಾತ್ರವಲ್ಲ. ಗಳಿಕೆಯಲ್ಲೂ ಏಷ್ಯಾ ಸೆಲೆಬ್ರಿಟಿಗಳ ಪೈಕಿ ಮುಂದಿದ್ದಾರೆ. ಜಾಗತಿಕವಾಗಿಯೂ 150 ಮಿಲಿಯನ್ ಫಾಲೋವರ್ ಗಳನ್ನು ದಾಟಿದ ವಿಶ್ವದ ನಾಲ್ಕನೇ ಕ್ರೀಡಾಪಟು ಎಂಬ ಹೆಗ್ಗಳಿಕೆ ಕೊಹ್ಲಿಯದ್ದಾಗಿದೆ. …

Read More »

ಮರು ಬಿಡುಗಡೆಯಾಗುತ್ತಿದೆ ‘ಟಗರು’

ಶಿವರಾಜ್‌ಕುಮಾರ್‌ ಅಭಿನಯದ ಟಗರು ಚಿತ್ರವನ್ನು ಶುಕ್ರವಾರ ಮರು-ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಿಡುಗಡೆಯಾಗಿ ಮೂರೂವರೆ ವರ್ಷಗಳಾದ ಬಳಿಕವೂ ಸಹ ಶಿವಣ್ಣನೊಂದಿಗೆ, ಧನಂಜಯ್‌, ವಸಿಷ್ಠ ಎನ್ ಸಿಂಹ, ಮನ್ವಿತಾ ಕಾಮತ್‌ ಹಾಗೂ ಭಾವನಾ ಮುಖ್ಯ ಪಾತ್ರಗಳಲ್ಲಿ ಅಭಿನಿಯಿಸಿರುವ ಈ ಚಿತ್ರದ ಕಥೆ ಹಾಗೂ ಸಾಹಸ ದೃಶ್ಯಗಳು ಚಿತ್ರ ಪ್ರಿಯರಿಗೆ ಇನ್ನೂ ಇಷ್ಟವಾಗುತ್ತಿದೆ. ‘ಕಡ್ಡಿಪುಡಿ’ ಬಳಿಕ ಎರಡನೇ ಬಾರಿಗೆ ಕೈಜೋಡಿಸಿರುವ ಶಿವರಾಜ್ ಕುಮಾರ್‌ ಹಾಗೂ ನಿದೇರ್ಶಕ ದುನಿಯಾ ಸೂರಿ ‘ಟಗರು’ ಚಿತ್ರ ಮಾಡಿದ್ದಾರೆ. …

Read More »

ಯೂಟ್ಯೂಬ್ ಚಾಟ್ ಶೋನಲ್ಲಿ ಬಿದ್ದು ಬಿದ್ದು ನಕ್ಕ ನಟಿ ಶಿಲ್ಪಾ ಶೆಟ್ಟಿ..!

ಅಶ್ಲೀಲ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಬಂಧಿಸಿದಾಗಿನಿಂದಲೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಒಂದು ತಿಂಗಳಿನಿಂದ ತನ್ನ ಕುಟುಂಬದೊಂದಿಗೆ ಸಮಯ ಕಳೆದ ಶಿಲ್ಪಾ, ಡ್ಯಾನ್ಸ್ ಶೋ, ಸೂಪರ್ ಡ್ಯಾನ್ಸರ್ 4ಗೆ ಗೈರುಹಾಜರಾಗಿದ್ದರು. ಸದ್ಯ, ಮತ್ತೆ ಕಾರ್ಯಕ್ರಮದತ್ತ ಮುಖಮಾಡಿರುವ ಶಿಲ್ಪಾ, ಎಲ್ಲರನ್ನೂ ರೋಮಾಂಚನಗೊಳಿಸಿದ್ದಾರೆ. ಹಾಸ್ಯ ನಟ ನಿಕ್ ಜೊತೆ ಚಾಟ್ ಶೋ ಸೋಷಿಯಲ್ ಮೀಡಿಯಾ ಸ್ಟಾರ್ ವಿತ್ ಜಾನಿಸ್ ಕಾರ್ಯಕ್ರಮದ ಪ್ರೋಮೋದಲ್ಲಿ ಶಿಲ್ಪಾ ಶೆಟ್ಟಿ ತನ್ನ ಬಿದ್ದು …

Read More »

ʼಬಿಗ್‌ ಬಾಸ್‌ 13ʼ ರ ವಿಜೇತ ಸಿದ್ದಾರ್ಥ್‌ ಶುಕ್ಲಾ ಇನ್ನಿಲ್ಲ

ಜನಪ್ರಿಯ ರಿಯಾಲಿಟಿ ಶೋ ʼಬಿಗ್‌ ಬಾಸ್‌ 13ʼ ರ ವಿಜೇತರಾಗಿದ್ದ ಸಿದ್ದಾರ್ಥ್‌ ಶುಕ್ಲಾ ವಿಧಿವಶರಾಗಿದ್ದಾರೆ. 40 ವರ್ಷದ ಸಿದ್ದಾರ್ಥ್‌ ಶುಕ್ಲಾ ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ. ಡ್ಯಾನ್ಸ್‌ ದಿವಾನೆ 3 ರಲ್ಲೂ ತಮ್ಮ ಗೆಳತಿ ಶೆಹನಾಜ್‌ ಗಿಲ್‌ ಜೊತೆ ಸಿದ್ದಾರ್ಥ್‌ ಶುಕ್ಲಾ ಕಾಣಿಸಿಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿಯೇ ಸಿದ್ದಾರ್ಥ್‌ ಶುಕ್ಲಾ ಇಹಲೋಕ ತ್ಯಜಿಸಿರುವುದು ಚಿತ್ರರಂಗದವರನ್ನು ದಿಗ್ಬ್ರಮೆಗೊಳಿಸಿದೆ. ಡಿಸೆಂಬರ್‌ 12, 1980 ರಂದು ಮುಂಬೈನಲ್ಲಿ ಸಿದ್ದಾರ್ಥ್‌ ಶುಕ್ಲಾ ಜನಿಸಿದ್ದು, ಮೂಲತಃ ಉತ್ತರ …

Read More »

ಸಹೋದರನ ಮಗನೊಂದಿಗೆ ರಷ್ಯಾದಲ್ಲಿ ಚಿಲ್ ಮಾಡುತ್ತಿರುವ ಸಲ್ಮಾನ್‌

ರಷ್ಯಾದಲ್ಲಿ ಪ್ರಾಜೆಕ್ಟ್ ಒಂದರಲ್ಲಿ ಬ್ಯುಸಿಯಾಗಿರುವ ನಟ ಸಲ್ಮಾನ್ ಖಾನ್, ಅಲ್ಲಿನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ತಮ್ಮ ಮುಂಬರುವ ‘ಟೈಗರ್‌ 3’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಲು ಹೋಗಿದ್ದಾರೆ. ‘ಟೈಗರ್‌ ಜ಼ಿಂದಾ ಹೈ’ ಸೀರೀಸ್‌ನ ಈ ಚಿತ್ರದ ಕೆಲಸದ ಮೇಲೆ ಇಲ್ಲಿಗೆ ಬಂದಿರುವ 55 ವರ್ಷದ ನಟ ತಮ್ಮ ಸಹೋದರನ ಮಗ ನಿರ್ವಾನ್ ಖಾನ್ ಜೊತೆಗೆ ಔಟಿಂಗ್ ಹೋಗಿದ್ದಾರೆ. ಸೊಹೇಲ್ ಖಾನ್‌ನ ಪುತ್ರನೊಂದಿಗೆ ಹೀಗೆ ಅಡ್ಡಾಡುತ್ತಿರುವ ಚಿತ್ರವೊಂದನ್ನು ಶೇರ್‌ ಮಾಡಿಕೊಂಡ ಸಲ್ಮಾನ್ ಖಾನ್, ‘ಚಿಕ್ಕಪ್ಪ-ಮಗ’ …

Read More »

ಲವ್‌ ಯೂ ರಚ್ಚು’ ದುರಂತ: ಅಜಯ್‌ ರಾವ್‌ ಸೇರಿ ಚಿತ್ರತಂಡದ 6 ಮಂದಿಗೆ ಜಾಮೀನು

ರಾಮನಗರ: ‘ಲವ್‌ ಯೂ ರಚ್ಚು’ ಚಿತ್ರ ತಂಡದ ಆರು ಮಂದಿಗೆ ಇಲ್ಲಿನ ಜಿಲ್ಲಾ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿತು. ಚಿತ್ರದ ನಿರ್ದೇಶಕ ಶಂಕರ್, ನಿರ್ಮಾಪಕ ಗುರು ದೇಶಪಾಂಡೆ, ನಾಯಕ ಅಜಯ್‌ ರಾವ್‌, ಸಾಹಸ ನಿರ್ದೇಶಕ ವಿನೋದ್‌ಕುಮಾರ್, ಪ್ರೊಡಕ್ಷನ್‌ ಮ್ಯಾನೇಜರ್‌ ಫರ್ನಾಂಡೀಸ್‌ ಹಾಗೂ ಕ್ರೇನ್‌ ಚಾಲಕ ಮಹದೇವ ಅವರಿಗೆ ನ್ಯಾಯಾಧೀಶ ಸಿದ್ಧಲಿಂಗಪ್ರಭು ಜಾಮೀನು ನೀಡಿ ಆದೇಶಿಸಿದರು. ಇದೇ ತಿಂಗಳ 9ರಂದು ಬಿಡದಿಯ ಜೋಗರಪಾಳ್ಯ ಸಮೀಪ …

Read More »