Breaking News

ರಾಷ್ಟ್ರೀಯ

ದೇಸಿ ಬೀಡಿ ಪ್ರಚಾರಕ್ಕಿಳಿದ್ರಾ ಫುಟ್​ಬಾಲ್​ ಆಟಗಾರ ಲಿಯೋನೆಲ್ ಮೆಸ್ಸಿ?

ದಕ್ಷಿಣ ಅಮೆರಿಕಾ ತಂಡ ಬ್ರೆಜಿಲ್​ಅನ್ನು ಸೋಲಿಸಿ ಕೋಪಾ ಅಮೇರಿಕಾ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ, ಅರ್ಜೆಂಟೀನಾದ ಫುಟ್​ಬಾಲ್​ ಆಟಗಾರ ಲಿಯೋನೆಲ್​ ಮೆಸ್ಸಿ. ಇದೀಗ ಭಾರೀ ಸುದ್ದಿಯಲ್ಲಿರುವ ವಿಷಯ ಏನಂದ್ರೆ.. ಮೆಸ್ಸಿ ಬಿಡಿ ಪ್ಯಾಕೆಟ್​. ತಂಬಾಕು ಉತ್ಪನ್ನದ ಪ್ಯಾಕೆಟ್​ನಲ್ಲಿರುವ ಮೆಸ್ಸಿ ಅವರ ಫೋಟೋ ಫುಲ್​ ವೈರಲ್​ ಆಗುತ್ತಿದೆ. ಹಳದಿ ಬಣ್ಣದ ಬಾಕ್ಸ್​ ಒಳಗೆ ಮೆಸ್ಸಿ ಅವರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೀಡಿ, ತಂಬಾಕು ಪದರಗಳಿಂದ ತುಂಬಿದ ತೆಳುವಾದ ಸಿಗರೇಟ್​ ಮತ್ತು ಸಾಮಾನ್ಯವಾಗಿ …

Read More »

ರಸ್ತೆಯಲ್ಲೇ ಚಾಕಲೇಟ್‌ ಎಸೆದ ವ್ಯಾಪಾರಿ ..!

ಕಾರವಾರ: ಸಗಟು ವ್ಯಾಪಾರಿಯೊಬ್ಬರು ಒಬ್ಬರು ಕ್ವಿಂಟಾಲ್ ಗೂ ಹೆಚ್ಚು ತೂಕದ ಚಾಕ್ಲೇಟ್ ಅನ್ನು ರಸ್ತೆಯಲ್ಲಿ ಎಸೆದು ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಹುಡ್ಲಮನೆ ರಸ್ತೆಯಲ್ಲಿ ನಡೆದಿದೆ. ಕ್ಯಾಂಡಿ ಕಂಪನಿಗೆ ಸೇರಿದ ವಿವಿಧ ಬಗೆಯ ಪ್ಲೇವರ್ ಹೊಂದಿದ ಚಾಕ್ಲೇಟ್ ಇದಾಗಿದ್ದು ಕೊರೊನಾ ಲಾಕ್ ಡೌನ್ ನಿಂದ ಈ ಕಂಪನಿಯ ಚಾಕ್ಲೇಟ್ ಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿಲ್ಲ. ಈ ಕಾರಣದಿಂದ ಇದರ ಅವಧಿ ಮುಗಿದಿದ್ದು, ಕಂಪನಿಯ ಡೀಲರ್ ನಗರಸಭೆಯ ಕಸ …

Read More »

ಬಾಲಕಿಯನ್ನು ಕಾಪಾಡಲು ಹೋದವರನ್ನು ಒಬ್ಬರ ಹಿಂದೆ ಒಬ್ಬರಂತೆ ಹೊತ್ತೊಯ್ದ ಜವರಾಯ..!

ಚೆನ್ನೈ: ಅವರೆಲ್ಲರೂ ಒಂದೇ ಗ್ರಾಮಕ್ಕೆ ಸೇರಿದವರು. ಎಲ್ಲರೂ ಒಟ್ಟಿಗೆ ತಮ್ಮ ಗ್ರಾಮದ ದೇವಸ್ಥಾನದ ಬಳಿಯಿರುವ ಕೆರೆಗೆ ಮಕ್ಕಳ ಜತೆಯಲ್ಲಿ ತೆರಳಿದ್ದರು. ಮಕ್ಕಳೆಂದ ಮೇಲೆ ಅಲ್ಲಿ ತುಂಟಾಟ, ಕಿತ್ತಾಟ ಇದ್ದೇ ಇರುತ್ತದೆ. ಮಹಿಳೆಯರು ನದಿಯಲ್ಲಿ ಬಟ್ಟೆ ಹೊಗೆಯುತ್ತಿರಬೇಕಾದರೆ ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದರು. ಹೀಗಿರುವಾಗ ಬಾಲಕಿಯೊಬ್ಬಳು ನೀರಿನಲ್ಲಿ ಸಿಲುಕಿಕೊಂಡಾಗ ಆಕೆಯ ರಕ್ಷಣೆಗೆ ಹೋದ ಐವರು ನೀರುಪಾಲಾಗಿರುವ ದುರಂತ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ಬುಧವಾರ ನಡೆದಿದೆ. ಮೃತರನ್ನು ರಾಜು ಪತ್ನಿ ಸುಮತಿ (35), ಮಗಳು …

Read More »

ಗೋಕಾಕ ತಾಲೂಕಿನ ಪ್ರವಾಸಿ ಕೇಂದ್ರಗಳ ವೀಕ್ಷಣೆಗೆ ನಿರ್ಭಂದ:

ಗೋಕಾಕ ತಾಲೂಕಿನ ಪ್ರವಾಸಿ ಕೇಂದ್ರಗಳ ವೀಕ್ಷಣೆಗೆ ನಿರ್ಭಂದ:   ಕೊವಿಡ್-19 ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರು ಮತ್ತು ಪ್ರವಾಸಿಗರ ಆರೋಗ್ಯದ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗೋಕಾಕ ತಾಲೂಕಿನ ಗೋಕಾಕ ಫಾಲ್ಸ್, ದೂಪದಾಳ ಹಾಗೂ ಗೊಡಚಿನಮಲ್ಕಿ ಪ್ರವಾಸಿ ತಾಣಗಳಿಗೆ ವಾರಾಂತ್ಯ ಶನಿವಾರ, ರವಿವಾರ ಮತ್ತು ಸಾರ್ವಜನಿಕ ರಜೆ ದಿನಗಳಂದು ಸಾರ್ವಜನಿಕ ವೀಕ್ಷಣೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಬೆಳಗಾವಿ ಇವರು ಆದೇಶ ಹೊರಡಿಸಿದ್ದಾರೆ. ಈ ಸ್ಥಳಗಳಿಗೆ ಮಹಾರಾಷ್ಟ್ರ ರಾಜ್ಯದಿಂದ ಮತ್ತು ರಾಜ್ಯದ …

Read More »

ಡೇಟಿಂಗ್ ಅಪ್ ಮೂಲಕ ಕೋಟ್ಯಧಿಪತಿಯಾಗುವ ಕನಸು ಕಂಡಿದ್ದಳು ಆಕೆ. ಆದರೆ ಮುಂದೆ ಆದದ್ದೇ ಬೇರೆ

ನ್ಯೂಸ್ ಡೆಸ್ಕ್ : ಪ್ರೀತಿ ವ್ಯಕ್ತಿಯನ್ನು ಕುರುಡನನ್ನಾಗಿ ಮಾಡುತ್ತದೆ ಎಂದು ಹೇಳಲಾಗುತ್ತದೆ. ಬ್ರಿಟನ್ ನಲ್ಲಿ ಮಹಿಳೆಯೊಬ್ಬಳು ಇಂತಹುದೇ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಡೇಟಿಂಗ್ ಅಪ್ ಮೂಲಕ ಪರಿಚಯವಾದ ವ್ಯಕ್ತಿಯ ಮೋಸದ ಪ್ರೀತಿಗೆ ಬಲಿಯಾಗುವ ಮೂಲಕ ಲಕ್ಷಾಂತರ ಹಣ ಕಳೆದುಕೊಂಡಿದ್ದಾಳೆ. ಮಹಿಳೆ ವ್ಯಕ್ತಿಯನ್ನು ಮುಖತಃ ಭೇಟಿಯಾಗದೆ ತನ್ನ ಜೀವಿತಾವಧಿಯ ಗಳಿಕೆಯನ್ನು ಆ ವ್ಯಕ್ತಿಗೆ ಹಸ್ತಾಂತರಿಸಿದಳು. ಅದಾದ ಬಳಿಕ ಮತ್ತೆ ಆ ವ್ಯಕ್ತಿ ಆಕೆಯನ್ನು ಭೇಟಿಯಾಗಲು ಬರಲಿಲ್ಲ ಅಥವಾ ಮಾತನಾಡಲಿಲ್ಲ. ಡೈಲಿ ಮೇಲ್ ವರದಿಯ …

Read More »

ಪ್ರೀತಿಸಿ ಮದ್ವೆಯಾದ ಕೆಲವೇ ದಿನಗಳಲ್ಲಿ ಮಹಿಳೆ ಎಸ್ಕೇಪ್: ಆಕೆಯ ಆಧಾರ್​ ಕಾರ್ಡ್ ನೋಡಿ ಕುಸಿದುಬಿದ್ದ ಪತಿ!​

ಚಿತ್ತೂರು: ಪ್ರೀತಿ ಹೆಸರಲ್ಲಿ ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡುವ ಅನೇಕ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಯಾರದ್ದೇ ಸ್ನೇಹ ಮಾಡುವ ಮುನ್ನ ಅವರ ಪೂರ್ವಾಪರ ತಿಳಿದುಕೊಳ್ಳಬೇಕೆಂಬ ಸಲಹೆಗಳ ಹೊರತಾಗಿಯೂ ವಂಚನೆ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ಸಂಗತಿಯೇ. ಇದೀಗ ಮತ್ತೊಂದು ವಂಚನೆ ಪ್ರಕರಣ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ. ಅನಾಥ ಯುವಕರನ್ನು ಗುರಿಯಾಗಿರಿಸಿ ಅವರನ್ನು ಪ್ರೀತಿಯ ಬಲೆಯಲ್ಲಿ ಕೆಡವಿ ಮದುವೆ ಎಂಬ ಹೆಸರಿನಲ್ಲಿ ಹಣ ಪೀಕಿ ವಂಚಿಸುತ್ತಿದ್ದ …

Read More »

ವಿಜಯಪುರ ಹೆಸ್ಕಾಂ ಎಇಇ ಸಿದ್ದರಾಮ ಬಿರಾದಾರ ಮನೆ ಮೇಲೆ ಎಸಿಬಿ ದಾಳಿ; ದಾಖಲೆ ಪರಿಶೀಲನೆ

ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ನಗರದಲ್ಲಿರುವ ಕೆಪಿಟಿಸಿಎಲ್ ಎಇಇ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ ಎಂಬ ಕೆಪಿಟಿಸಿಎಲ್ ಕಚೇರಿಯ ಎಇಇ ಮನೆ ಮೇಲೆ ದಾಳಿ ನಡೆಸಿದ್ದಾರೆ. ವಿಜಯಪುರ ನಗರದ ಸುಕೂನ್ ಲೇಔಟ್ ನಲ್ಲಿರುವ ಕೆಪಿಟಿಸಿಎಲ್ ಎಇಇ ಸಿದ್ದರಾಮ ಬಿರಾದಾರಗೆ ಸೇರಿದ ನಗರದ ಸುಕೂನ್ ಕಾಲೋನಿಯಲ್ಲಿರುವ ನಿವಾಸ, ಬಿ.ಕೆ.ಲೋಣಿ ಗ್ರಾಮದ‌ ಮನೆ, ತೋಟದ ಮನೆ ಮಾತ್ರವಲ್ಲದೇ ಸಿದ್ದರಾಮ ಅಳಿಯ ಅರ್ಜುನ ಬಿರಾದಾರ್ ಮನೆ ಮೇಲೂ …

Read More »

ಉತ್ತರ ಕನ್ನಡ: ಅಶ್ಲೀಲ ವಿಡಿಯೊ ನೋಡಿದರೆ ಪ್ರಕರಣ!

ಕಾರವಾರ: ಫೇಸ್‌ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊ ಅಪ್‌ಲೋಡ್ ಮಾಡಿದವರಿಗೆ, ಅದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡವರಿಗೆ (ಶೇರ್) ಪೊಲೀಸ್ ಇಲಾಖೆಯಿಂದ ಬಿಸಿ ಮುಟ್ಟತೊಡಗಿದೆ. ಒಂದೊಂದೇ ಪ್ರಕರಣಗಳನ್ನು ಹುಡುಕಿ ತೆಗೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಮಕ್ಕಳಿಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯದ, ಅಶ್ಲೀಲ ವಿಡಿಯೊಗಳನ್ನು ನೋಡುವುದೂ ಭಾರತೀಯ ದಂಡಸಂಹಿತೆಯ ಪ್ರಕಾರ ಅಪರಾಧ. ಅದರಲ್ಲೂ ಫೇಸ್‌ಬುಕ್, ವಾಟ್ಸ್‌ಆಯಪ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು, ಡೌನ್‌ಲೋಡ್ ಮಾಡುವುದು ಕಠಿಣ ಶಿಕ್ಷಾರ್ಹ ಅಪರಾಧವಾಗಿದೆ. ಜಿಲ್ಲೆಯಲ್ಲಿ ಒಂದು ವರ್ಷದ …

Read More »

ಅಕ್ರಮ ವಿದ್ಯುತ್​ ಸಂಪರ್ಕ ಪಡೆದಿದ್ದ ವ್ಯಕ್ತಿ ಅಧಿಕಾರಿಗಳ ಕಣ್ತಪ್ಪಿಸಲು ಮಾಡಿದ್ದೇನು ಗೊತ್ತಾ…?

ಮನೆಗೆ ಹಾಕಲಾಗಿದ್ದ ಅಕ್ರಮ ವಿದ್ಯುತ್​ ಸಂಪರ್ಕವನ್ನ ಕಡಿತಗೊಳಿಸಲು ವ್ಯಕ್ತಿಯೊಬ್ಬ ಹಾವಿನಂತೆ ತೆವಳುತ್ತಾ ಮನೆಯ ಛಾವಣಿ ತಲುಪಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಉತ್ತರ ಪ್ರದೇಶದ ಮುರಾದ್​​ನಗರದಲ್ಲಿ ಅಕ್ರಮ ವಿದ್ಯುತ್​ ಸಂಪರ್ಕ ಹೊಂದಿದ್ದ ಮನೆಯ ಮೇಲೆ ದಾಳಿ ನಡೆಸಿದ ವೇಳೆ ವಿದ್ಯುತ್​ ಇಲಾಖೆ ಸಿಬ್ಬಂದಿ ಈ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ. ತಮ್ಮ ಮನೆಗೆ ವಿದ್ಯುತ್​ ಇಲಾಖೆ ಅಧಿಕಾರಿಗಳು ದಾಳಿ ಮಾಡ್ತಿದ್ದಾರೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ವ್ಯಕ್ತಿ ಹಾವಿನಂತೆ ತೆವಳುತ್ತಾ …

Read More »

ಪುಡ್​ಕಿಟ್​ ವಿತರಣೆಯಲ್ಲಿ ನೂಕಾಟ ಉಂಟಾಗಿ ಗಲಾಟೆ ಆರಂಭ

ಚಿಕ್ಕಬಳ್ಳಾಪುರ: ಫುಡ್​ಕಿಟ್​ ವಿತರಣೆ ಸಂದರ್ಭದಲ್ಲಿ ಜನ ಕಿತ್ತಾಟ ನಡೆಸಿ ಕಿಟ್​ಗಳನ್ನು ಹೊತ್ತೊಯ್ದ ಘಟನೆ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ. ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಇಂದು ಪಟ್ಟಣದ ಶಾದಿ ಮಹಲ್​ನಲ್ಲಿ ಪುಡ್​ಕಿಟ್​ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದರು. ಫುಡ್​ ಕಿಟ್​ ವಿತರಣಾ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆಗಮಿಸಿದ್ದರು. ಸಾಂಕೇತಿಕವಾಗಿ ಪುಡ್​ಕಿಟ್​ಗೆ ಚಾಲನೆ ನೀಡಿ ನಾಯಕರು ತೆರಳಿದ ಬಳಿಕ ಶಾಸಕರು ಪುಡ್​ಕಿಟ್​ ವಿತರಿಸಲು ಆರಂಭಿಸಿದ್ದಾರೆ. ಈ …

Read More »