Home / ರಾಷ್ಟ್ರೀಯ (page 872)

ರಾಷ್ಟ್ರೀಯ

ಕರ್ನಾಟಕದ ಜಿಲ್ಲೆಗಳು ಕಲಬುರಗಿ ನಿಲ್ಲದ ಮಳೆ, ಬಾರದ ಜನಪ್ರತಿನಿಧಿ, ಕಲಬುರಗಿ ಜನ ಕಂಗಾಲು

ಕಳೆದ ಮೂರು ದಿನಗಳಿಂದ ಸತತವಾಗಿ ಮತ್ತು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಲಬುರಗಿ , ಯಾದಗಿರಿ , ಬಾಗಲಕೋಟೆ , ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ಬಹಳಷ್ಟು ಪ್ರದೇಶಗಳು ಜಲಾವೃತಗೊಂಡು ನಡುಗಡ್ಡೆಗಳಂತೆ ಗೋಚರಿಸುತ್ತಿವೆ . ಕುಂಭದ್ರೋಣದಿಂದ ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಪ್ರಭಾವಕ್ಕೊಳಗಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ . ಅನೇಕ ಕಡೆ ರಸ್ತೆ ಮತ್ತು ಸೇತುವೆಗಳು ಕೊಚ್ಚಿಹೋಗಿವೆ . ಕಮಲಾಪುರ ಹತ್ತಿರವಿರುವ ಜವಳಗಾ , ಸೇಡಂ ತಾಲುಕಿನಲ್ಲಿರುವ ಸಮಖೇಡ್ ತಾಂಡಾ …

Read More »

ರನ್​ ಮಳೆ ಹರಿಸುವ ಶಾರ್ಜಾದಲ್ಲಿ ಕೊಹ್ಲಿ ಬಾಯ್ಸ್ ಎಡವಿದ್ದು ಎಲ್ಲಿ?

ಶಾರ್ಜಾ ಪಂದ್ಯ RCB ಹುಡುಗ್ರು ಮತ್ತು ಕನ್ನಡಿಗರ ನಡುವಿನ ರಣ ರೋಚಕ ಕಾದಾಟವಾಗಿ ಮಾರ್ಪಟ್ಟಿತ್ತು. ರಾಯಲ್ ಹುಡುಗರಿಗೆ ಪಂಜಾಬ್ ವಿರುದ್ಧದ ಪಂದ್ಯ ಪ್ರತಿಷ್ಠೆಯ ಪಂದ್ಯವಾಗಿತ್ತು. ಕಾರಣ ಇದೇ ಸೀಸನ್​ನಲ್ಲಿ ಕಳೆದ ಬಾರಿ ರಾಹುಲ್ ಹುಡುಗರ ಜೊತೆ ಸೆಣಸಾಡಿದ್ದ ಕೊಹ್ಲಿ ಆರ್ಮಿ ಹೀನಾಯವಾಗಿ ಮುಗ್ಗರಿಸಿತ್ತು. ಹೀಗಾಗಿ, ಶಾರ್ಜಾ ಸಮರದಲ್ಲಿ ಪಂಜಾಬ್​ಗೆ ಸೋಲಿನ ಗುನ್ನಾ ನೀಡಬೇಕೆಂದುಕೊಂಡಿದ್ದ RCB ತಂಡ ಮತ್ತದೇ ಮಿಸ್ಟೇಕ್ ಮಾಡಿದೆ. ರನ್​ಮಳೆ ಹರಿಸುವ ಶಾರ್ಜಾದಲ್ಲಿ ಕೊಹ್ಲಿ ಬಾಯ್ಸ್ ಎಡವಿದ್ದೆಲ್ಲಿ? ದುಬೈನಲ್ಲಿ …

Read More »

ದಿನ ಭವಿಷ್ಯ 16/10/2020

ಮೇಷ: ಮಾನಸಿಕ ವ್ಯಥೆ, ಸಮಸ್ಯೆಗಳನ್ನು ಎಳೆದುಕೊಳ್ಳುವ ಸಾಧ್ಯತೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ ವೃಷಭ: ಮನಸ್ಸಿಗೆ ಸಮಾಧಾನ, ಸ್ತ್ರೀಯರಿಗೆ ಅನುಕೂಲದ ದಿನ, ಹಣ ವ್ಯಯವಿದೆ, ಸೂರ್ಯ ಪ್ರಾರ್ಥನೆ ಮಾಡಿ ಮಿಥುನ: ಸಮಾಧಾನದ ದಿನ, ಕುಟುಂಬದಲ್ಲಿ ಅನುಕೂಲದ ದಿನ, ದಾಂಪತ್ಯದಲ್ಲಿ ಕೊಂಚ ಏರುಪೇರು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ ಕಟಕ: ಭಾಗ್ಯ ಸಮೃದ್ಧಿ, ಸಮಾಧಾನದ ದಿನ, ಕೊಂಚ ಕಿರಿಕಿರಿ ಅನುಭವಿಸುತ್ತೀರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿ ಸಿಂಹ: ಆರೋಗ್ಯದಲ್ಲಿ ಸದೃಢತೆ, ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ, ಕಾರ್ಯ ಸಿದ್ಧಿ, ಆದಿತ್ಯ ಹೃದಯ ಸ್ತೋತ್ರ …

Read More »

ಕಲ್ಲು ಗಣಿಗಾರಿಕೆ ಮಾಫಿಯಾ ವಿರುದ್ಧ ತೊಡೆ ತಟ್ಟಿದ್ದ KAS ಅಧಿಕಾರಿ ಟ್ರಾನ್ಸ್​ಫರ್​!

ದಕ್ಷಿಣ ಕನ್ನಡ: ಭೂ ಮಾಫಿಯ ವಿರುದ್ಧ ತೊಡೆ ತಟ್ಟಿದ್ದ KAS ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. ಇದೀಗ, ಅಧಿಕಾರಿಯನ್ನು ವರ್ಗಾವಣೆ ಮಾಡಿಸಲು ಯತ್ನಿಸುತ್ತಿದ್ದ ಪ್ರಭಾವಿಗಳಿಗೆ ಕೋರ್ಟ್​ನ ಆದೇಶವೊಂದು ಪರೋಕ್ಷವಾಗಿ ವರದಾನದಂತೆ ಪರಿಣಮಿಸಿದೆ ಎಂದು ಹೇಳಲಾಗಿದೆ. ಮಂಗಳೂರು ಉಪವಿಭಾಗಾಧಿಕಾರಿಯಾಗಿದ್ದ ಮದನ್ ಮೋಹನ್​ರನ್ನು ವರ್ಗಾವಣೆ ಮಾಡಲಾಗಿದೆ. ಮದನ್​ ಇತ್ತೀಚೆಗೆ ನಗರದ ಮುಡಿಪು ಬಳಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ದಾಳಿ‌ ಮಾಡಿದ್ದರು. ಈ ದಾಳಿ ಸಾಕಷ್ಟು …

Read More »

ಶಾಂತವಾಗದ ವರುಣನ ಪ್ರತಾಪ, ಸೊಗಲ ಸೋಮೇಶ್ವರನಿಗೆ ವರುಣನ ದಿಗ್ಬಂಧನ

ಬೆಳಗಾವಿ: ವರುಣನ ರೌದ್ರಾವತಾರಕ್ಕೆ ಕರುನಾಡು ಕಂಗಾಲಾಗಿದೆ. ಕ್ಷಣ ಕ್ಷಣಕ್ಕೂ ವರುಣನ ಅವಾಂತರ ಹೆಚ್ಚಾಗ್ತಿದೆ. ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಸೊಗಲ ಸೋಮೇಶ್ವರ ದೇವಸ್ಥಾನ ಮುಳುಗಿದೆ. ಭಾರಿ ಮಳೆಯಿಂದಾಗಿ ನಿನ್ನೆ ಸಂಜೆ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿತ್ತು. ಅಪಾರ ಪ್ರಮಾಣದ ನೀರು ನುಗ್ಗಿದ ಹಿನ್ನೆಲೆಯಲ್ಲಿ ಸೋಮೇಶ್ವರನ ಮೂರ್ತಿ ಕೂಡ ಭಾಗಶಃ ಜಲಾವೃತಗೊಂಡಿದೆ. ದೇವಸ್ಥಾನದ ಹೊರ ಭಾಗದಲ್ಲಿ ಮಳೆ ನೀರು ಝರಿಯಂತೆ ಉಕ್ಕಿ ಹರಿಯುತ್ತಿದೆ. ದೇವಸ್ಥಾನಕ್ಕೆ ನೀರು ನುಗ್ಗಿದ ದೃಶ್ಯ ಸಾಮಾಜಿಕ …

Read More »

ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ರೈಲ್ವೆ ಟಿಕೆಟ್ ಕೌಂಟರ್ ನಾಳೆಯಿಂದ ಕಾರ್ಯಾರಂಭ, ಎಲ್ಲೆಲ್ಲಿ?

ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೇ ವಿಭಾಗವು ಹೆಚ್ಚುವರಿ ಟಿಕೆಟ್​ ಕಾಯ್ದಿರಿಸುವ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಿದೆ. ಇವೆಲ್ಲಾ ಕೇಂದ್ರಗಳು ನಾಳೆಯಿಂದ ಕಾರ್ಯಾರಂಭವಾಗಲಿದೆ. ಬೆಂಗಳೂರಿನಲ್ಲಿ ಮಲ್ಲೇಶ್ವರ, ಚಿಕ್ಕಬಾಣಾವರ, ಬಾಣಸವಾಡಿ, ಬೆಂಗಳೂರು ಪೂರ್ವ, ಕಾರ್ಮೆಲರಾಂ ಮತ್ತು ವೈಟ್​ಫೀಲ್ಡ್​ ರೈಲು ನಿಲ್ದಾಣಗಳಲ್ಲಿ ಈ ಹೆಚ್ಚುವರಿ ಕೌಂಟರ್​ಗಳನ್ನು ಕಾರ್ಯಾರಂಭಗೊಳಿಸಲಾಗುವುದು. ಜೊತೆಗೆ, ಕುಪ್ಪಂ, ಪೆನುಕೊಂಡ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಗೌರಿಬಿದನೂರು ಮತ್ತು ಮದ್ದೂರು ರೈಲ್ವೇ ನಿಲ್ದಾಣಗಳಲ್ಲಿ ಸಹ ಈ ಕೇಂದ್ರಗಳನ್ನು ಕಾರ್ಯಾರಂಭಗೊಳಿಸಲಾಗುವುದು. ಅಕ್ಟೋಬರ್​ 20 ರಿಂದ ನವೆಂಬರ್ 30ರವರೆಗೆ …

Read More »

ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್​​ಗಳ ಸ್ಪಿನ್ ಮೋಡಿಗೆ ಮಂಕಾದ RCB ಬ್ಯಾಟ್ಸ್​ಮನ್

ಕೊನೇ ಓವರ್. ಕೊನೇ ಎಸೆತದವರೆಗೂ ಅಭಿಮಾನಿಗಳ ಉಸಿರನ್ನ ಬಿಗಿ ಹಿಡಿಯುವಂತೆ RCB ವಿರುದ್ಧ ರಣರೋಚಕ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೊನೆಗೂ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ RCB ಗೆ ಓಪನರ್​ಗಳಾದ ದೇವದತ್ ಪಡಿಕ್ಕಲ್ ಹಾಗೂ ಌರೋನ್ ಫಿಂಚ್, ಉತ್ತಮ ಆರಂಭ ನೀಡುವಲ್ಲಿ ವಿಫಲವಾದ್ರು. 12ಬಾಲ್​ಗಳಲ್ಲಿ 18ರನ್ ಗಳಿಸಿದ್ದ ಪಡಿಕ್ಕಲ್, ಆರ್ಷ್​ದೀಪ್ ಸಿಂಗ್ ಎಸೆತದಲ್ಲಿ ನಿಕೋಲಸ್ ಪೂರನ್​ಗೆ ಕ್ಯಾಚ್ ನೀಡಿದ್ರು. ಇನ್ನೂ ಌರೋನ್ ಆಟ 20ರನ್​ಗೆ ಅಂತ್ಯವಾಯ್ತು. …

Read More »

ಮನೀಷ್ ಶೆಟ್ಟಿ ಕೊಲೆ ಪ್ರಕರಣ: ಬಾರ್ ಮಾಲೀಕನ ಹತ್ಯೆಗೆ ನಡೆದಿತ್ತು ಭರ್ಜರಿ ಸ್ಕೆಚ್​!

ಬೆಂಗಳೂರು: ಬಾರ್ ಮಾಲೀಕ ಮನೀಷ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳ ಪತ್ತೆಗೆ 9 ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಘಟನಾ ಸ್ಥಳದ ಮಾಹಿತಿ ಆಧರಿಸಿ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ. ಜೊತೆಗೆ, ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ, ಸಿಸಿಬಿ ಮತ್ತು ಕೇಂದ್ರ ವಿಭಾಗ ಪೊಲೀಸರಿಂದ ಹಂತಕರಿಗೆ ಶೋಧ ನಡೆಸಲಾಗುತ್ತಿದೆ. ಇತ್ತ, ಮನೀಷ್ ಶೆಟ್ಟಿ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರ ಹಾಗೂ ಬಂದೂಕು ಪತ್ತೆಯಾಗಿದೆ. …

Read More »

500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿ ವೆಡ್ಡಿಂಗ್ ಡೇ ಆಚರಿಸಿಕೊಂಡ ದಂಪತಿ

ಭುವನೇಶ್ವರ್: ಸಾಮಾನ್ಯವಾಗಿ ವಿವಾಹ ಮಹೋತ್ಸವವನ್ನು ತಮ್ಮ ಹತ್ತಿರದ ಸಂಬಂಧಿಗಳಿಗೆ ಪಾರ್ಟಿಗಳನ್ನು ಆಯೋಜಿಸುವ ಮೂಲಕ ಸೆಲೆಬ್ರೆಟ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ದಂಪತಿ ಮಾತ್ರ ವಿವಾಹವಾದ ದಿನವನ್ನು 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಹೌದು. ಒಡಿಶಾ ಮೂಲದ ಯುರೇಕಾ ಅಪ್ತಾ ಹಾಗೂ ಜೋವಾನ್ನಾ ವಾಂಗ್ ದಂಪತಿ ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೆಪ್ಟೆಂಬರ್ 25ರಂದು ದಂಪತಿ ಭುವನೇಶ್ವರದಲ್ಲಿ ವಿವಾಹವಾಗಿದ್ದಾರೆ. ಇದೇ …

Read More »

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆನಾಸೀರ್ ಬಾಗವಾನ್ ಪೆನಲ್ ಭರ್ಜರಿ ಜಯಗಳಿಸಿದೆ.

ಬೆಳಗಾವಿ: ಎಂ.ಕೆ.ಹುಬ್ಬಳ್ಳಿ ಗ್ರಾಮದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಾಸೀರ್ ಬಾಗವಾನ್ ಪೆನಲ್ ಭರ್ಜರಿ ಜಯಗಳಿಸಿದೆ. ನಿನ್ನೆ ಸಂಜೆ 7 ಗಂಟೆಗೆ ಮತ ಎಣಿಕೆ ಆರಂಭವಾಗಿ, ಮದ್ಯರಾತ್ರಿ 2 ಗಂಟೆಗೆ ಮುಕ್ತಾಯವಾಯಿತು. ನಾಸೀರ ಬಾಗವಾನ್ ಗುಂಪಿನ ಎಲ್ಲಾ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಅವರ ಪುತ್ರ ಪ್ರಕಾಶಗೌಡ ಪಾಟೀಲ ಅವರ ತಂಡ ಸೋಲು ಅನುಭವಿಸಿದೆ. ಆರಂಭದಲ್ಲಿ ನಾಸೀರ್ ಬಾಗವಾನ್ ಬೆಂಬಲಿತ …

Read More »