Breaking News

ರಾಷ್ಟ್ರೀಯ

ತಾಲಿಬಾನ್‌ನ ಸೂತ್ರ ಹಿಡಿದಿರುವ ಏಳು ಮಂದಿ ನಾಯಕರು ಯಾರು? ಅವರ ಜವಾಬ್ದಾರಿಗಳೇನು? ಎನ್ನುವ ವಿವರ ಇಲ್ಲಿದೆ.

  ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಅಧಿಕೃತ ಆಳ್ವಿಕೆ ಆರಂಭಿಸುವುದಷ್ಟೇ ಬಾಕಿಯಿದೆ. ತಾಲಿಬಾನ್ ಸಂಘಟನೆಯಲ್ಲಿ ಈ ಪ್ರಮುಖ 7 ಮಂದಿ ನಾಯಕರೇ ಎಲ್ಲ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ.   ತಾಲಿಬಾನ್‌ನ ಸೂತ್ರ ಹಿಡಿದಿರುವ ಏಳು ಮಂದಿ ನಾಯಕರು ಯಾರು? ಅವರ ಜವಾಬ್ದಾರಿಗಳೇನು? ಎನ್ನುವ ವಿವರ ಇಲ್ಲಿದೆ. ತಾಲಿಬಾನ್‌ ಸಂಘಟನೆಯು ತನ್ನದೇ ಆದ ಏಣಿಶ್ರೇಣಿ ವ್ಯವಸ್ಥೆ ಹೊಂದಿದೆ. ಸಂಘಟನೆಯಲ್ಲಿ 7 ಪ್ರಮುಖ ನಾಯಕರೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ತಾಲಿಬಾನ್ ಸಂಘಟನೆಯ …

Read More »

ಗಡಿ ಕಣ್ಗಾವಲು ವಿಸ್ತರಿಸಿ ಸರಕಾರ ಆದೇಶ

ಬೆಂಗಳೂರು – ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಪ್ರದೇಶಗಳಲ್ಲಿ ಹಾಕಲಾಗಿರುವ ಕಣ್ಗಾವಲನ್ನು ಆಗಸ್ಟ್ 30ರ ವರೆಗೂ ವಿಸ್ತರಿಸಿದ ಸರಕಾರ ಆದೇಶ ಹೊರಡಿಸಿದೆ.   ಕರ್ನಾಟಕ -ಮಹಾರಾಷ್ಟ್ರ, ಕರ್ನಾಟಕ – ಕೇರಳ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಹಾಕಿ ಈ ಹಿಂದೆ ಜುಲೈ 3ರಂದು ಆದೇಶ ಹೊರಡಿಸಲಾಗಿತ್ತು. ಇದೀಗ ಈ ಆದೇಶವನ್ನು ಆಗಸ್ಟ್ 30ರ ವರೆಗೆ ವಿಸ್ತರಿಸಲಾಗಿದೆ.

Read More »

ಹಣಕ್ಕಾಗಿ ಅಪ್ಪ, ಅಮ್ಮ, ಅಣ್ಣ ಸೇರಿ ಯುವತಿಯನ್ನು ವೇಶ್ಯಾವಾಟಿಕೆಗೆ ದೂಡಿದ್ದಾರೆ.

  ನವದೆಹಲಿ: ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಂದೆ-ತಾಯಿ ಇರಲಾರರು ಎಂಬ ಮಾತೊಂದಿದೆ. ಈ ಮಾತು ಸುಳ್ಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ದುಡ್ಡಿಗಾಗಿ ಹೆತ್ತವರೇ ತಮ್ಮ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ ನೀಚ ಕೃತ್ಯ ಬೆಳಕಿಗೆ ಬಂದಿದೆ. ಹಿಮಾಚಲ ಪ್ರದೇಶದಲ್ಲಿ ಈ ಪ್ರಕರಣ ನಡೆದಿದ್ದು, ಹಣಕ್ಕಾಗಿ ಅಪ್ಪ, ಅಮ್ಮ, ಅಣ್ಣ ಸೇರಿ ಯುವತಿಯನ್ನು ವೇಶ್ಯಾವಾಟಿಕೆಗೆ ದೂಡಿದ್ದಾರೆ. ತನಗೆ ಗೌರವದಿಂದ ಬದುಕಲು ಬಿಡಿ ಎಂದು ಬೇಡಿಕೊಂಡರೂ ಕೇಳದ ಅವರು ಆಕೆಗೆ ಹೊಡೆದು, ಈ …

Read More »

2 ರಿಂದ 18 ವರ್ಷದೊಳಗಿನ ಮಕ್ಕಳು ಈ ವರ್ಷದ ಸೆಪ್ಟೆಂಬರ್ ವೇಳೆಗೆ ಕೊವಿಡ್ -19 ವಿರುದ್ಧ ಲಸಿಕೆ ಹಾಕಿಸಿಕೊಳ್ಳಬಹುದು

ಲಸಿಕೆಗಳಿಗಾಗಿ ಹಂತ 2-3 ಕ್ಲಿನಿಕಲ್ ಪ್ರಯೋಗಗಳು ಪ್ರಸ್ತುತ ಮಕ್ಕಳ ಮೇಲೆ ನಡೆಯುತ್ತಿವೆ. ಭಾರತದಲ್ಲಿ ಮಕ್ಕಳಲ್ಲಿ ಎರಡು ಲಸಿಕೆಗಳನ್ನು ಪರೀಕ್ಷಿಸಲಾಗಿದೆ. ಅವುಗಳೆಂದರೆ ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಮತ್ತು ಜೈಡಸ್ ಕ್ಯಾಡಿಲಾದ ಜೈಕೋವ್-ಡಿ. ಕೊವಾಕ್ಸಿನ್ ಪ್ರಯೋಗವು 525 ಸ್ವಯಂಸೇವಕರನ್ನು ಒಳಗೊಂಡಿದೆ ಆದರೆ ಜೈಕೋವ್-ಡಿ ಯ ಪ್ರಯೋಗಗಳು-ಹಂತ II/III ಕ್ಲಿನಿಕಲ್ ಅಧ್ಯಯನದ ಭಾಗವಾಗಿ-12-18 ವಯಸ್ಸಿನ ಗುಂಪಿನಲ್ಲಿ 1,000 ಸ್ವಯಂಸೇವಕರನ್ನು ಒಳಗೊಂಡಿದೆ.   ಈ ಹಿಂದೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನಿರ್ದೇಶಕ …

Read More »

ವರಮಹಾಲಕ್ಷ್ಮೀ ವ್ರತ : ಆಚರಣೆ, ಹುಟ್ಟಿನ ಕಥೆ ನಿಮಗೆ ಗೊತ್ತಾ..?

ಈ ವರಮಹಾಲಕ್ಷ್ಮೀ ವ್ರತವನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಎರಡನೇ ಶುಕ್ರವಾರದಂದು ಅಂದರೆ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ಆಚರಿಸುವುದು ರೂಢಿಯಾದರೂ ಹಿಂದೂಗಳ ಮನೆಯಲ್ಲಿ ಪ್ರತಿ ದಿನವೂ ಹೊಸ್ತಿಲು ಪೂಜೆಯನ್ನು ಮಾಡುವ ಮೂಲಕ ಲಕ್ಷ್ಮಿಯನ್ನು ಪೂಜಿಸುತ್ತಾರೆ.   ಮಹಾಲಕ್ಷ್ಮೀ ಅಂದರೆ ಶ್ರೀಮನ್ನಾರಾಯಣನ ಮಡದಿ. ತನ್ನನ್ನು ಪೂಜಿಸಿದವರಿಗೆ ಬೇಕಾದ ವರಗಳನ್ನು ನೀಡುವವಳೇ ವರಮಹಾಲಕ್ಷ್ಮೀ ಎಂದುಕೊಳ್ಳಬಹುದು. ‘ವರ’ ಅಂದರೆ ಶ್ರೇಷ್ಠ ಅಂತಲೂ ಅರ್ಥವಿದೆ. ಆದ್ದರಿಂದ ವರಮಹಾಲಕ್ಷ್ಮೀ ಅಂದರೆ ಶ್ರೇಷ್ಠಳಾದ ಮಹಲಾಕ್ಷ್ಮೀ ಎಂದೂ ಅರ್ಥವಾಗುತ್ತದೆ. ಇಂತಹ ಮಹಾಲಕ್ಷ್ಮಿಯು …

Read More »

Ek Love Ya ಸಿನಿಮಾ ಚಿತ್ರೀಕರಣಕ್ಕೆ ತೆರೆ: ಭಾವುಕ ಪೋಸ್ಟ್​ ಮಾಡಿದ ರಕ್ಷಿತಾ ಪ್ರೇಮ್​..!

ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾದ ನಂತರ ಬೆಳ್ಳಿತೆರೆಯಿಂದ ದೂರ ಉಳಿದುಕೊಂಡಿರುವ ರಕ್ಷಿತಾ ನಿರ್ಮಾಪಕಿಯಾಗಿ ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಕಿರುತೆರೆಯಲ್ಲಿ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ತೀರ್ಫುಗಾರರಾಗಿರುವ ರಕ್ಷಿತಾ ತಮ್ಮ ಸಹೋದರ ರಾಣಾಗಾಗಿ ಸಿನಿಮಾ ನಿರ್ಮಿಸುತ್ತಿರುವ ವಿಷಯ ಗೊತ್ತೇ ಇದೆ. ರಾಣಾ ನಾಯಕನಾಗಿ ಅಭಿನಯಿಸುತ್ತಿರುವ ಏಕ್​ ಲವ್​ ಯಾ ಸಿನಿಮಾದ ಚಿತ್ರೀಕರಣ ಈಗ ಪೂರ್ಣಗೊಂಡಿದೆ. ಸಿನಿಮಾದ ಕೊನೆಯ ದಿನದ ಚಿತ್ರೀಕರಣ ಮುಗಿದೆ ಎಂದು ರಕ್ಷಿತಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್​ ಹಂಚಿಕೊಂಡಿದ್ದಾರೆ. ಕೊನೆಯ ದಿನದ ಚಿತ್ರೀಕರಣ …

Read More »

ಜೈಲಿನಿಂದ ಬಿಡುಗಡೆ ಆದವನಿಗೆ ಯುದ್ದ ಗೆದ್ದು ಬಂದವರ ರೀತಿ ಅದ್ಧೂರಿ ಸ್ವಾಗತ, ಸನ್ಮಾನ; ವಿಡಿಯೋ ವೈರಲ್

ಜೈಲಿನಿಂದ ಬಿಡುಗಡೆ ಆದವನಿಗೆ ಅದ್ಧೂರಿ ಸ್ವಾಗತ ಮಾಡಿ ಕರೆಸಿಕೊಂಡಿರುವ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೈಲಿನಿಂದ ಬಿಡುಗಡೆಯಾದ ರಾಜು ದೇಸಾಯಿಗೆ ಅದ್ಧೂರಿ ಸ್ವಾಗತ ಮಾಡಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಗ್ರಾಮಕ್ಕೆ ಕರೆಸಿಕೊಳ್ಳಲಾಗಿದೆ. ಬಾಗಲಕೋಟೆ: ಜೈಲಿನಿಂದ ಬಿಡುಗಡೆ ಆದವನಿಗೆ ಅದ್ಧೂರಿ ಸ್ವಾಗತ ಮಾಡಿ ಕರೆಸಿಕೊಂಡಿರುವ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೈಲಿನಿಂದ ಬಿಡುಗಡೆಯಾದ ರಾಜು ದೇಸಾಯಿಗೆ ಅದ್ಧೂರಿ ಸ್ವಾಗತ ಮಾಡಿ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ …

Read More »

ಗೋವಾ ಗಡಿ ತೆರೆಯಲು ಆತುರು ಬೇಡ : ಕಾಂಗ್ರೆಸ್

ಪಣಜಿ : ಗೋವಾದಲ್ಲಿ ಕೋವಿಡ್ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾ ಗಡಿಗಳನ್ನು ಓಪನ್ ಮಾಡಿ ಹೊರ ರಾಜ್ಯಗಳಿಂದ ಗೋವಾಕ್ಕೆ ಪ್ರವಾಸಿಗರು ಬರಮಾಡಿಕೊಳ್ಳಲು ಸರ್ಕಾರ ನೋಡುತ್ತಿದೆ. ಆದರೆ ಇದಕ್ಕೂ ಮುನ್ನ ಸರ್ಕಾರ ಗೋವಾದ ಎಲ್ಲಾ ಗಡಿಗಳಲ್ಲಿ ಸುಸಜ್ಜಿತ ಕೋವಿಡ್ ತಪಾಸಣಾ ಕೇಂದ್ರವನ್ನು ಸ್ಥಾಪನೆ ಮಾಡಬೇಕು, ನಂತರ ಗಡಿಗಳನ್ನು ತೆರೆಯಬೇಕು ಎಂದು ಗೋವಾ ಕಾಂಗ್ರೇಸ್ ಪಕ್ಷವು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗೆ ಮನವಿ ಮಾಡಿದೆ. ಕಾಂಗ್ರೇಸ್ ಪ್ರದೇಶ ಸಮೀತಿಯ ಉಪಾಧ್ಯಕ್ಷ ಹಾಗೂ …

Read More »

ನೆಗೆಟಿವ್‌ ವರದಿಯೊಂದಿಗೆ ಬಂದಿದ್ದ 228 ವಿದ್ಯಾರ್ಥಿಗಳಿಗೆ ಪಾಸಿಟಿವ್‌ !

ಮಂಗಳೂರು, : ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಇದೀಗ ದ.ಕ.ಜಿಲ್ಲೆಗೆ ಕೋವಿಡ್ ನೆಗೆಟಿವ್ ವರದಿಯೊಂದಿಗೆ ಬಂದಿದ್ದ ಕೇರಳದ 228 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿರುವುದು ಭೀತಿಗೆ ಕಾರಣವಾಗಿದೆ. ದ.ಕ.ಜಿಲ್ಲೆಯಲ್ಲಿನ ವಿವಿಧ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 228 ಮಂದಿ ಕೇರಳದ ವಿದ್ಯಾರ್ಥಿಗಳಿಗೆ ಕಳೆದ 10 ದಿನಗಳ ಒಳಗೆ ಸೋಂಕು ಕಾಣಿಸಿಕೊಂಡಿದೆ. ಪರೀಕ್ಷೆ ನಿಮಿತ್ತ ನೆಗೆಟಿವ್ ವರದಿಯೊಂದಿಗೆ ಜಿಲ್ಲೆಗೆ ವಿದ್ಯಾರ್ಥಿಗಳು ಆಗಮಿಸಿದ್ದರು. …

Read More »

ಜೋಗ ವೀಕ್ಷಣೆಗೆ ಷರತ್ತು; ಪ್ರವಾಸಿಗರ ಸಂಖ್ಯೆ ಭಾರಿ ಕುಸಿತ!

ಶಿವಮೊಗ್ಗ, ಆಗಸ್ಟ್ 18; ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಹರಿಯುತ್ತಿದ್ದರೂ, ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ವಾರಾಂತ್ಯದಲ್ಲೂ ಸೀಮಿತ ಪ್ರವಾಸಿಗರಿಗೆ ಮಾತ್ರ ಜಲಧಾರೆ ಕಣ್ತುಂಬಿಕೊಳ್ಳುವ, ಅದರ ಮುಂದೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಅವಕಾಶ ಸಿಗುತ್ತಿದೆ. ಈ ಬಾರಿಯೂ ಶಿವಮೊಗ್ಗದ ಪ್ರವಾಸೋದ್ಯಮಕ್ಕೆ ಕೋವಿಡ್ ಭಾರೀ ಪೆಟ್ಟು ಕೊಟ್ಟಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಜೋಗ ಜಲಾಪಾತ ಮೈದುಂಬಿಕೊಂಡಿದೆ. ರಾಜ, ರಾಣಿ, ರೋರರ್, ರಾಕೆಟ್ ಜಲಪಾತಗಳು ಭೋರ್ಗರೆಯುತ್ತ ಧುಮ್ಮಿಕ್ಕುತ್ತಿವೆ. ಪ್ರತಿ ವರ್ಷ ಜೋಗವನ್ನು ಕಣ್ತುಂಬಿಕೊಳ್ಳಲು ದೂರದ ಊರುಗಳು, ಹೊರ …

Read More »