ಮೂಡಲಗಿ: ಕೋವಿಡ್ ಎರಡನೇ ಅಲೆ ಕಾರಣ ಸಂಕಷ್ಠದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಿಂದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‌ಗಳನ್ನು ಭಾರತ ಸರ್ಕಾರ ಕಾರ್ಮಿಕ ಮತ್ತು ಉದ್ಯೋಗ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿತರಿಸಿದರು. ಮಂಗಳವಾರದಂದು ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಲೋಳಸೂರ, ನಲ್ಲಾನಟ್ಟಿ, ಬಳೋಬಾಳ, ಹುಣಶ್ಯಾಳ ಪಿ.ಜಿ, ಮಸಗುಪ್ಪಿ …
Read More »ಉಗ್ರರ ಉಪಟಳಕ್ಕೆ ಲಗಾಮು ಹಾಕುವುದು ಅನಿವಾರ್ಯ
ಅಫ್ಘಾನಿಸ್ತಾನವನ್ನು ತಾಲಿಬಾನಿ ಗುಂಪು ವಶಕ್ಕೆ ಪಡೆದ ಬಳಿಕ, ಕೆಲ ಗಂಟೆಗಳ ಕಾಲ ಶಾಂತಿ ಪ್ರಿಯವಾಗಿದ್ದೇವೆ ಎನ್ನುವ ಮಾತನ್ನು ಹೇಳಿಕೊಂಡಿತ್ತು. ಈ ಮಾತು ತಾಲಿಬಾನ್ ಉಗ್ರರು ಹೇಳಿದಾಗ ಬಹುತೇಕ ರಾಷ್ಟ್ರಗಳು ಒಪ್ಪದಿದ್ದರೂ, ಬಹುತೇಕ ರಾಷ್ಟ್ರಗಳು ತಟಸ್ಥ ನೀತಿಯನ್ನು ಅನುಸರಿಸಿದ್ದವು. ಆದರೆ ಅಧಿಕಾರ ಹಿಡಿದ ಮರುದಿನವೇ ತಮ್ಮ ಉಪಟಳವನ್ನು ತೋರಿಸಲು ಶುರುಮಾಡಿರುವ ತಾಲಿಬಾನ್ ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕಗೆ ಗುಡುವು ನೀಡಿದೆ. ಇದಿಷ್ಟೇ ಅಲ್ಲದ್ದೇ, ಅಫ್ಘಾನಿಸ್ತಾನ ದಲ್ಲಿ ಅರಾಜಕತೆ ಸೃಷ್ಟಿಸಿ, ನೂರಾರು …
Read More »58 ವಾರ್ಡಗಳಿಗೆ ಚುನಾವಣೆ ,ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ 2021 ರ ಕುರಿತು 58 ವಾರ್ಡಗಳಿಗೆ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಲಾಗಿದ್ದು, ಅದರಂತೆ ಸೆಪ್ಟೆಂಬರ್ 3 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರನ್ನು ನಿಯೋಜಿಸಿಲಾಗಿದೆ. ಭೂ ಸ್ವಾಧೀನ (ಪು.ವ.ಮತ್ತು ಪುನಿ) ಬೃಹತ್ ನೀರಾವರಿ ಯೋಜನೆಗಳ ವಿಶೇಷ ಜಿಲ್ಲಾಧಿಕಾರಿಗಳಾದ ಗೀತಾ ಕೌಲಗಿ (ಮೊ. ಸಂಖ್ಯೆ-9448933533) ಅವರನ್ನು ವಾರ್ಡ ಸಂಖ್ಯೆ 1 ರಿಂದ 29 ರವರೆಗೆ ಚುನಾವಣಾ ವೀಕ್ಷಕರನ್ನಾಗಿ ನಿಯೋಜಿಸಿಲಾಗಿದೆ. ಅದೇ ರೀತಿ, ಕೃಷಿ ಇಲಾಖೆಯ …
Read More »ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು : ಓರ್ವನ ಶವಪತ್ತೆ, ಮತ್ತೋರ್ವನ ಮೃತದೇಹಕ್ಕೆ ಹುಡುಕಾಟ
ಗೋಕಾಕ : ಘಟಪ್ರಭಾ ಎಡದಂಡೆ ಕಾಲುವೆಗೆ ಕಾಲು ಜಾರಿ ಬಿದ್ದ ಇಬ್ಬರು ವ್ಯಕ್ತಿಗಳು ಸಾವಿಗೀಡಾದ ಘಟನೆ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದ ವಾಹನ ಚಾಲಕ ಅಶೋಕ ಶ್ರೀಶೈಲ ಡಬ್ಬನ್ನವರ (26), ಪಾಮಲದಿನ್ನಿ ಗ್ರಾಮದ ಕ್ಲೀನರ್ ನಾಗಪ್ಪ ಕಾಡಪ್ಪ ಅಂಗಡಿ (38) ಮೃತರು. ಕಾಲುವೆಯ ಪಕ್ಕದಲ್ಲಿ ಖಾಸಗಿ ಹಾಲಿನ ಡೈರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು. ಹಾಲಿನ ವಾಹನ ಚಾಲಕ ನೀರು ತರಲು …
Read More »ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೋಮವಾರದಂದು ನಡೆಸಿದ ಸಿನಿಮೀಯ ಶೈಲಿ ಕಾರ್ಯಾಚರಣೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೋಮವಾರದಂದು ನಡೆಸಿದ ಸಿನಿಮೀಯ ಶೈಲಿ ಕಾರ್ಯಾಚರಣೆಯೊಂದರಲ್ಲಿ ಕಾಶ್ಮೀರದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಅಬ್ಬಾಸ್ ಶೇಖ್ ಹಾಗೂ ಅವನ ಸಹರನೊಬ್ಬನನ್ನು ಕೊಂದಿದ್ದಾರೆ. ಲಷ್ಕರ್-ಎ-ತೊಯ್ಬಾದ ಟಾಪ್ ಕಮಾಂಡರ್ ಅಗಿದ್ದ ಶೇಖ್ ಮತ್ತು ಅವನೊಂದಿಗಿದ್ದ ಮತ್ತೊಬ್ಬನನ್ನು ಮಫ್ತಿಯಲ್ಲಿದ್ದ ಪೊಲೀಸರು ಗುಂಡಿಟ್ಟು ಕೊಂದರು. ಕೇಂದ್ರಾಡಳಿತ ಪ್ರದೇಶ ರಾಜಧಾನಿಯ ಅಲೂಚಿ ಬಾಗ್ ಪ್ರದೇಶದಲ್ಲಿ ಸಾದಾ ಉಡುಪಿನಲ್ಲಿದ್ದ 10 ಜನ ಪೊಲೀಸರು ಉಗ್ರರನ್ನು ಸುತ್ತುವರಿದು ಕೊಂದು ಹಾಕಿದರು. ಕಾಶ್ಮೀರ ಪೊಲೀಸ್ …
Read More »ಹೊಸ ಡಿಜಿಟಲೀಕರಣ ನೀತಿ ಹಾಗೂ ಆರ್ ಆಯಂಡ್ ಡಿ ಪಾಲಿಸಿ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಹೊಸ ಡಿಜಿಟಲೀಕರಣ ನೀತಿಯ ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಪಾಲಿಸಿಯನ್ನು ಜಾರಿಗೆ ತರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸ ಡಿಜಿಟಲೈಸೇಷನ್ ಪಾಲಿಸಿ (ಹೊಸ ಡಿಜಿಟಲೀಕರಣ ನೀತಿ)ಯನ್ನು ಜಾರಿಗೆ ತರಲಿದ್ದೇವೆ. ಬ್ರಾಡ್ಬ್ಯಾಂಡ್ ಹಾಗೂ ಇಂಟರ್ ನೆಟ್ ವ್ಯವಸ್ಥೆಯನ್ನು ಗ್ರಾಹಕರ …
Read More »ಗೋವಾದಲ್ಲಿ ಆಲ್ಕೋಹಾಲ್ ಮ್ಯೂಸಿಯಂ!
ಪಣಜಿ: ಪ್ರವಾಸಿ ರಾಜ್ಯ ಗೋವಾದಲ್ಲಿ ಮೊದಲ ಆಲ್ಕೋಹಾಲ್ ಮ್ಯೂಸಿಯಂ ತೆರೆಯಲಾಗಿದೆ. ಸ್ಥಳೀಯ ವಿಶೇಷ ಮದ್ಯವೆನಿಸಿಕೊಂಡಿರುವ ಫೆನ್ನಿಯ ಪ್ರಸಿದ್ಧತೆಯನ್ನು ದೇಶ ವಿದೇಶಕ್ಕೆ ಹರಡಿಸುವ ಉದ್ದೇಶದೊಂದಿಗೆ ಈ ಮ್ಯೂಸಿಯಂ ತೆರೆಯಲಾಗಿದೆ. ಉದ್ಯಮಿ ನಂದನ್ ಕುಡcಡ್ಕರ್ “ಆಲ್ ಎಬೌಟ್ ಆಲ್ಕೋಹಾಲ್’ ಹೆಸರಿನ ಮ್ಯೂಸಿಯಂ ತೆರೆದಿದ್ದಾರೆ. ಕಾಂಡೋಲಿಮ್ ಬೀಚ್ ಗ್ರಾಮದ ಬಳಿ ಈ ಮ್ಯೂಸಿಯಂ ಇದೆ. ಇದರಲ್ಲಿ ವಿಶೇಷವಾಗಿ ಪೆನ್ನಿಗೆ ಸಂಬಂಧಪಟ್ಟ ಸಾಮಗ್ರಿಗಳನ್ನು ಪ್ರದರ್ಶಿಸಲಾಗುವುದು. ಹಿಂದಿನ ಕಾಲದಲ್ಲಿ ಪೆನ್ನಿಯನ್ನು ಸಂಗ್ರಹಿಸುಡುತ್ತಿದ್ದ ಬೃಹದಾಕಾರದ ಹೂಜಿಗಳು, ಪೆನ್ನಿಗೆ ಸಂಬಂಧಿಸಿದ …
Read More »ಇನ್ಮುಂದೆ ಡೆಬಿಟ್, ಕ್ರೆಡಿಟ್ ಕಾರ್ಡ್ಗಳ 16 ನಂಬರ್ಗಳನ್ನೂ ನೀವು ನೆನಪಿಡಬೇಕು.. ಯಾಕೆ ಗೊತ್ತಾ..?
ನವದೆಹಲಿ: ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ 16 ಡಿಜಿಟ್ ನಂಬರ್ಗಳನ್ನು ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ನೆಟ್ಫ್ಲಿಕ್ಸ್ನಂಥ ಮರ್ಚಂಟ್ಗಳು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಆದ್ರೆ ಇನ್ನುಮುಂದೆ ಹೀಗಾಗದಿರಲೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸದೊಂದು ಮಾರ್ಗಸೂಚಿ ಜಾರಿಗೆ ತರಲು ಮುಂದಾಗಿದೆ. ಈ ಮಾರ್ಗಸೂಚಿಯ ಪ್ರಕಾರ ಗ್ರಾಹಕರು ಡೆಬಿಟ್, ಕ್ರೆಡಿಟ್ ಕಾರ್ಡ್ಗಳ ಮೂಲಕ ಆನ್ಲೈನ್ ಶಾಪಿಂಗ್ ಮಾಡುವುದಿದ್ರೆ ಅವರು ಕಾರ್ಡ್ನ 16 ಡಿಜಿಟ್ ನಂಬರ್, ಎಕ್ಸ್ಪೈರಿ ಡೇಟ್ ಹಾಗೂ ಸಿವಿವಿ ನಂಬರ್ಗಳನ್ನೂ ನೆನಪಿನಲ್ಲಿಟ್ಟುಕೊಂಡೇ ವ್ಯವಹರಿಸಬೇಕಾಗುತ್ತದೆ. ಜನವರಿ …
Read More »ಅಕ್ಷಯ್ ಕುಮಾರ್ ಸಿನಿಮಾ ಬ್ಯಾನ್ ಮಾಡಿದ ಮೂರು ಪ್ರಮುಖ ರಾಷ್ಟ್ರಗಳು; ಬಾಕ್ಸ್ ಆಫೀಸ್ ಕಲೆಕ್ಷನ್ಗೆ ಹೊಡೆತ
ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಿದ್ದರೂ ಬೆಲ್ ಬಾಟಮ್ ನಿರ್ಮಾಪಕರು ದೊಡ್ಡ ರಿಸ್ಕ್ ತೆಗೆದುಕೊಂಡು ಸಿನಿಮಾ ರಿಲೀಸ್ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್ ಕುಮಾರ್ ಸಾಕಷ್ಟು ಬದಲಾಗಿದ್ದಾರೆ. ದೇಶಭಕ್ತಿ ಪ್ರಧಾನ ಸಿನಿಮಾಗಳಿಗೆ ಅಕ್ಷಯ್ ಹೆಚ್ಚು ಒತ್ತು ನೀಡುತ್ತಿದ್ದಾರೆ. ಈ ಕಾರಣಕ್ಕೆ ಅವರ ಅಭಿಮಾನಿ ಬಳಗ ಮತ್ತೂ ಹಿರಿದಾಗಿದೆ. ಈಗ ಅಕ್ಷಯ್ ಕುಮಾರ್ ನಟನೆಯ ಸ್ಪೈ ಥ್ರಿಲ್ಲರ್ ‘ಬೆಲ್ ಬಾಟಮ್’ ರಿಲೀಸ್ …
Read More »ನಾಳೆಯಿಂದ ಶಾಲೆ ಆರಂಭ: ಮಕ್ಕಳೇ ಆತಂಕಕ್ಕೆ ಒಳಗಾಗದೇ ಬನ್ನಿ, ಸಿಎಂ ಬೊಮ್ಮಾಯಿ ಕರೆ
ಪ್ರೀತಿಯ ವಿದ್ಯಾರ್ಥಿಗಳೇ… ಶಾಲಾ ಕಾಲೇಜುಗಳಲ್ಲಿ ಗಂಟೆ ಸದ್ದು ಮತ್ತೆ ಕೇಳಿಸಲಿದೆ. ತರಗತಿ ಕೋಣೆಯ ಕಲರವ ಸೋಮವಾರದಿಂದ ಆರಂಭವಾಗಲಿದೆ. ಪಾಠ, ಸಹಪಾಠಿಗಳ ಭೇಟಿ, ಪಠ್ಯ, ಪಠ್ಯೇತರ ಚಟುವಟಿಕೆಗಳ ಕುರಿತು ಚರ್ಚೆ, ವಿಷಯ ವಿನಿಮಯ, ಶಾಲೆಯಲ್ಲೇ ಗುರುಗಳಿಗೆ ಪ್ರಶ್ನೆ ಕೇಳಿ ಸಂಶಯ ನಿವಾರಿಸಿಕೊಳ್ಳುವ ಮೂಲಕ ಪೂರ್ಣ ಪ್ರಮಾಣದಲ್ಲಿ ಜ್ಞಾನಾರ್ಜನೆಗೆ ಅನುಕೂಲ ವಾಗುವ ಭೌತಿಕ ತರತಿಗಳು ಆರಂಭವಾಗುತ್ತಿವೆ. ನಿಮ್ಮೆಲ್ಲರ ಆರೋಗ್ಯದ ಸುರಕ್ಷೆಯೇ ನಮ್ಮ ಆದ್ಯತೆ. ಹೀಗಾಗಿ ಕ್ಯಾಂಪಸ್ ದಿನಗಳು ಮರಳಿ ದರೂ ಹಿಂದಿನಂತಿರುವುದಿಲ್ಲ. ಏಕೆಂದರೆ …
Read More »
Laxmi News 24×7