Breaking News

ರಾಷ್ಟ್ರೀಯ

ಎಲ್ಲಾ ಕುಡುಕರು ಸೇರಿ ನನಗೆ ಕುಡುಕನ ಪಟ್ಟ ಕಟ್ಟಿದ್ರು; ಸಿ.ಟಿ ರವಿ

ಮೈಸೂರು: ಎರಡು ವರ್ಷಗಳ ಹಿಂದೆ ಅಪಘಾತ ಪ್ರಕರಣವೊಂದರಲ್ಲಿ ಎಲ್ಲಾ ಕುಡುಕರು ಸೇರಿ ನನಗೆ ಕುಡುಕನ ಪಟ್ಟ ಕಟ್ಟಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 8000 ಕೋಟಿ GST ಬಂದಿದೆ. ಕರ್ನಾಟಕದ ಪಾಲು ಕೇಂದ್ರ ಬಿಡುಗಡೆ ಮಾಡಿದೆ. ಕೆಲವರಿಗೆ ಸುಳ್ಳೇ ಮನೆ ದೇವರು, ಸುಳ್ಳನ್ನೇ ಸತ್ಯ ಎಂದು ಹೇಳುತ್ತಾರೆ. ನನಗೆ ಕುಡುಕನ ಪಟ್ಟ ಕಟ್ಟಿದ ಹಾಗೆಯೇ GST …

Read More »

ರೈತರ ಆದಾಯ ದ್ವಿಗುಣಕ್ಕೆ ಎರಡನೇ ಕೃಷಿ ನಿರ್ದೇಶನಾಲಯ ಆರಂಭ : ಸಿಎಂ

ಬೆಂಗಳೂರು ;ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸಲು ರಾಜ್ಯಸರ್ಕಾರ ಹಲವಾರು ಕ್ರಮಗಳನ್ನು ಜಾರಿಗೊಳಿಸಲಿದ್ದು, ರೈತರ ಉತ್ಪನ್ನಗಳ ಮೌಲ್ಯ ಹೆಚ್ಚಿಸಲು 2ನೇ ಕೃಷಿ ನಿರ್ದೇಶನಾಲಯವನ್ನು ಅಸ್ಥಿತ್ವಕ್ಕೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ, ಪಶುಸಂಗೋಪನೆ, ಡೈರಿ, ಮೀನುಗಾರಿಕೆ ಒಳಗೊಂಡಂತೆ ಆಗ್ರೋ ಉತ್ಪನ್ನಗಳ ಸಂಸ್ಕರಣೆಗೆ ಒತ್ತು ನೀಡಿ ಉತ್ಪನ್ನಗಳ ಮೌಲ್ಯ ಹೆಚ್ಚಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗುವುದು. ಇದಕ್ಕೆ ಸೆಕೆಂಡರಿ ಅಗ್ರಿಕಲ್ಚರ್ ಡೈರೆಕ್ಟರೇಟ್ ಎಂದು ಹೆಸರಿಟ್ಟು ಕೃಷಿಯಲ್ಲಿ ದೊಡ್ಡ ಬದಲಾವಣೆ ಮಾಡುವ ಮೂಲಕ …

Read More »

ಹಾಸ್ಟೆಲ್​ ಕೋಣೆಯಲ್ಲೇ ನೇಣಿಗೆ ಶರಣಾದ ಎಂಟೆಕ್​ ವಿದ್ಯಾರ್ಥಿನಿ: ಡೆತ್​ನೋಟ್​ನಲ್ಲಿತ್ತು ನೋವಿನ ಮಾತು

ಹೈದರಾಬಾದ್​: ಇಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದ ಎಂಟೆಕ್ ವಿದ್ಯಾರ್ಥಿನಿ ಆರ್​. ಮೌನಿಕಾ ಆತ್ಮಹತ್ಯೆ​ಯು ಇಡೀ ಕಾಲೇಜನ್ನು ಆಘಾತಕ್ಕೆ ದೂಡಿದೆ. ಮೌನಿಕಾ ನ್ಯಾನೊತಂತ್ರಜ್ಞಾನದ ವಿದ್ಯಾರ್ಥಿನಿಯಾಗಿದ್ದಳು. ಈಕೆ ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಪರುಪಲ್ಲಿ ಗ್ರಾಮದ ನಿವಾಸಿ. ಸೋಮವಾರ ಸಂಜೆ ಹಾಸ್ಟೆಲ್​ನ ಆಕೆಯ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಇದಕ್ಕೂ ಮುನ್ನ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು. ವಿಶ್ವವಿದ್ಯಾಲಯವು ಗಾಚಿಬೌಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಪ್ರಕರಣ ದಾಖಲಿಸಿಕೊಂಡಿರುವ …

Read More »

ವಿಷಾಹಾರ ಸೇವಿಸಿ 100ಕ್ಕೂ ಹೆಚ್ಚು ಜನ ಅಸ್ವಸ್ಥ

ದಾವಣಗೆರೆ, ಆ.25- ವಿಷಾಹಾರ ಸೇವಿಸಿ 100ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ಜಿಲ್ಲಾಯ ಜಗಳೂರು ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ಜರುಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಬೆಣ್ಣೆಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಮನೆಯಲ್ಲಿ ಸೀಮಂತ ಕಾರ್ಯಕ್ರಮ ಜರುಗಿದ್ದು, ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಹೋಳಿಗೆ-ಸೀಕರಣೆ ಸಿಹಿ ಅಡುಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಜನರು ಸಿಹಿಯೂಟ ಸೇವಿಸಿದ್ದರು. ಆಹಾರ ಸೇವಿಸಿದ ಬೆನ್ನಲ್ಲೇ 100ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ …

Read More »

ಸಿಲಿಕಾನ್ ಸಿಟಿಯಲ್ಲಿ ಸುರಿದ ಧಾರಾಕಾರ ಮಳೆಗೆ ಹೆಗಡೆ ನಗರದ ಬ್ರಿಡ್ಜ್ ಬಳಿ ರಸ್ತೆ ಕುಸಿತ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಜೆ ಸುರಿದ ಧಾರಾಕಾರ ಮಳೆಗೆ ಹೆಗಡೆ ನಗರದ ಬ್ರಿಡ್ಜ್ ಬಳಿ ರಸ್ತೆ ಕುಸಿತಗೊಂಡಿದೆ. ಹೆಗಡೆನಗರದ ಬ್ರಿಡ್ಜ್ ಬಳಿಯ ಎರಡ್ಮೂರು ಕಡೆ ಸುಮಾರು ಎಂಟು ಅಡಿ ಆಳಕ್ಕೆ ರಸ್ತೆ ಕುಸಿದಿದೆ. ಪರಿಣಾಮ ಸ್ಟೀಲ್ ಕಂಬಿ ಸಾಗಿಸುತ್ತಿದ್ದ ಟ್ರಕ್ವೊಂದು ರಸ್ತೆ ಮಧ್ಯದಲ್ಲೇ ಪಲ್ಟಿಯಾಗಿದೆ. ರಸ್ತೆಯಲ್ಲಿ ಒಳಚರಂಡಿ ಹಾಗೂ ಕಾವೇರಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದಿರುವ ಶಂಕೆ ವ್ಯಕ್ತವಾಗಿದೆ.

Read More »

ಗುರುವಾರ (ಆಗಸ್ಟ್ 26) ಮಲೆಮಹದೇಶ್ವರ ಬೆಟ್ಟದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದೆ. ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದೆ.

ಮೈಸೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಮತ್ತೆ ಸಮುದಾಯದ ಸ್ವಾಮೀಜಿಗಳ ಕೂಗು ಕೇಳಿಬಂದಿದೆ. ಬಸವ ಜಯಮೃತ್ಯುಂಜಯಶ್ರೀ ನೇತೃತ್ವದಲ್ಲಿ ಮತ್ತೆ ಹೋರಾಟ ನಡೆಯಲಿದೆ. ಗುರುವಾರ (ಆಗಸ್ಟ್ 26) ಮಲೆಮಹದೇಶ್ವರ ಬೆಟ್ಟದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದೆ. ಶ್ರೀಗಳ ನೇತೃತ್ವದಲ್ಲಿ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಯಲಿದೆ. ನಾಳೆಯಿಂದ ಅಕ್ಟೋಬರ್ 1 ರವರೆಗೆ ಹೋರಾಟ ನಡೆಯಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಬೇಡಿಕೆ ವಿಚಾರವಾಗಿ ಮೈಸೂರಿನಲ್ಲಿ ಬಸವ …

Read More »

ಕೋವಿಡ್‌ನಿಂದ ಕಣ್ಣಿಗೆ ತೊಂದರೆಯೇ ?

ಇತ್ತೀಚೆಗೆ ನನ್ನ ಕಣ್ಣಿನ ಕ್ಲಿನಿಕ್‌ಗೆ ಬರುವ ಹದಿಹರೆಯದವರು, ಮಕ್ಕಳು ಮತ್ತು 20-35 ವರ್ಷದವರ ಸಂಖ್ಯೆ ವಿಪರೀತವಾಗಿ ಜಾಸ್ತಿಯಾಗಿದೆ. ಮೊನ್ನೆ 15 ವರ್ಷದ ಹುಡುಗನನ್ನು ಕಣ್ಣಿನ ಪರೀಕ್ಷೆಗೆ ಅವನ ಪಾಲಕರು ಕರೆದುಕೊಂಡು ಬಂದಿದ್ದರು. ಡಾಕ್ಟ್ರೇ ನಮ್ಮ ಹುಡುಗ ಒಂದು ವಾರದಿಂದ ಬಹಳ ಕಣ್ಣಿನ ನೋವು, ತಲೆನೋವು ಎಂದು ಹೇಳುತ್ತಾ ಇದ್ದಾನೆ.   ನಾನು ಅವರ ಮಗನ ಬಗ್ಗೆ ಗಮನಿಸುತ್ತಿರುವಾಗಲೇ ಆನ್ ಲೈನ್ ಕ್ಲಾಸ್ ನಡೀತಾ ಇದೆಯಲ್ಲ ಅದರ ಪ್ರಭಾವ ಬಿಡಿ ಎಂದು …

Read More »

‘ಸಿಎಂ ಸಚಿವಾಲಯ’ದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ..ಯಾರಿಗೆ ಯಾವ ಜವಾಬ್ದಾರಿ.?

ಬೆಂಗಳೂರು : ಸಿಎಂ ಸಚಿವಾಲಯದ ಅಧಿಕಾರಿಗಳಿಗೆ ಕರ್ತವ್ಯ ಹಂಚಿಕೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶ ಹೊರಡಿಸಿದ್ದಾರೆ.   ಮಂಜುನಾಥ್ ಪ್ರಸಾದ್, ಅನಿಲ್ ಕುಮಾರ್, ರಂಗರಾಕ್, ಪೊನ್ನುರಾಜ್, ಹೆಚ್ ಎಸ್ ಸತೀಶ್ ಸೇರಿದಂತೆ ಹಲವರಿಗೆ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ.       ಯಾರಿಗೆ ಯಾವ ಜವಾಬ್ದಾರಿ.?   1) ಮಂಜುನಾಥ್ ಪ್ರಸಾದ್ : ಸಿಎಂ ಪ್ರಧಾನ ಕಾರ್ಯದರ್ಶಿ, ( ಸಚಿವ ಸಂಪುಟದ ಎಲ್ಲಾ ಕಡತಗಳ ನಿರ್ವಹಣೆ, ಎಲ್ಲಾ …

Read More »

ರಾಹುಲ್ ಗಾಂಧಿ ಆರೋಪಕ್ಕೆ ಸ್ಮೃತಿ ಇರಾನಿ ಸೇಡು ತೀರಿಸಿಕೊಂಡರು, ಈ ದೊಡ್ಡ ವಿಷಯವನ್ನು ಹೇಳಿದರು

ಕೇಂದ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಹಣಕಾಸು ಸಚಿವರು ಮಂಗಳವಾರ ರಾಷ್ಟ್ರೀಯ ನೋಟು ರದ್ದುಗೊಳಿಸುವಿಕೆಯ ಪೈಪ್‌ಲೈನ್ ಘೋಷಣೆಯು ಸರ್ಕಾರವು ತನ್ನ ಮಾಲೀಕತ್ವವನ್ನು ನಗದೀಕರಣ ಪ್ರಕ್ರಿಯೆಯಲ್ಲಿ ಉಳಿಸಿಕೊಳ್ಳಲಿದೆ ಎಂದು ಸ್ಪಷ್ಟವಾಗಿ ಹೇಳಿದೆ. ರಾಜ್ಯದ ಮಾಲೀಕತ್ವವನ್ನು ಬದಲಿಸದೆ, ಎಲ್ಲಾ ರಾಜ್ಯಗಳು ಈ ಪ್ರಕ್ರಿಯೆಗೆ ತಮ್ಮ ನೋಡಲ್ ಅಧಿಕಾರಿಗಳನ್ನು ಘೋಷಿಸುತ್ತವೆ ಎಂದು ಗುರುತಿಸಲಾಗಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಈ ರೀತಿಯ ಹಣಗಳಿಕೆಯನ್ನು ಮಾಡುತ್ತಿರುವ ರಾಜ್ಯ ಸರ್ಕಾರಗಳು ಕೂಡ …

Read More »

ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಪಥಸಂಚಲನ

ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸುವ ಮೂಲಕ ಚುನಾವಣೆ ವೇಳೆ ಶಾಂತತೆ ಕಾಪಾಡುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.     ಹೌದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಂಬಂಧ ಮಂಗಳವಾರ ಸಂಜೆ ಆರು ಗಂಟೆ …

Read More »