Home / ರಾಷ್ಟ್ರೀಯ (page 837)

ರಾಷ್ಟ್ರೀಯ

ಮನ್ನಿಕೇರಿ ಸಿದ್ಧ ಸಮಾಧಿ ಯೋಗದ ನೂತನ ಕಟ್ಟಡಕ್ಕೆ 6 ಲಕ್ಷ ರೂ. ದೇಣಿಗೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಯೋಗ ಹಾಗೂ ಪ್ರಾಣಾಯಾಮದಿಂದ ಮಾತ್ರ ಎಲ್ಲ ದೀರ್ಘ ವ್ಯಾದಿಗಳನ್ನು ಬೇರು ಸಮೇತ ತೆಗೆದು ಹಾಕಲು ಸಾಧ್ಯವಿದೆ. ಮನ್ನಿಕೇರಿಯಲ್ಲಿ ನಿರ್ಮಾಣ ಮಾಡಲು ಉದ್ಧೇಶಿಸಿರುವ ಸಿದ್ಧ ಸಮಾಧಿ ಯೋಗ ತರಬೇತಿ ಕೇಂದ್ರಕ್ಕೆ 6 ಲಕ್ಷ ರೂ.ಗಳನ್ನು ನೀಡುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಮನ್ನಿಕೇರಿ ಗ್ರಾಮದ ಹೊರವಲಯದಲ್ಲಿರುವ ಗುರುದೇವ ದತ್ತ ಯೋಗಾ ಫೌಂಡೇಷನ್ ಆಶ್ರಯದಲ್ಲಿ ಸಿದ್ಧ ಸಮಾಧಿ ಯೋಗ(ಎಸ್‍ಎಸ್‍ವಾಯ್) …

Read More »

ಬೆಳಗಾವಿಗೆ ನಾಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ

ಬೆಳಗಾವಿ : ರಾಜ್ಯ ಗೃಹ ಸಚಿವ ಹಾಗೂ ಹಾವೇರಿ ಜಿಲ್ಲೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ನ.30ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ಧಾರವಾಡ, ಗದಗ, ಹಾವೇರಿ, ಬೆಳಗಾವಿ ಪ್ರವಾಸ ಕೈಗೊಂಡಿರುವ ಸಚಿವರು ನಾಳೆ ಬೆಳಗಾವಿಗೆ ರಾತ್ರಿ 10 ಗಂಟೆಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಡಿಸೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಕೆಎಸ್ ಆರ್ ಪಿ 6ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ, …

Read More »

ರೈತರ ಹೋರಾಟದಲ್ಲಿ ಕಾರಿಗೆ ಬೆಂಕಿ : ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನ

ಹೊಸದಿಲ್ಲಿ: ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ರೈತರಿಗೆ ಸಹಾಯ ಮಾಡಲೆಂದು ತೆರಳಿದ ವ್ಯಕ್ತಿ ದಾರುಣ ಸಾವಿಗೀಡಾಗಿದ್ದಾನೆ. ಕಾರಿನಲ್ಲಿ ಮಲಗಿದ್ದ ಸಮಯದಲ್ಲಿ ಕಾರಿಗೆ ಬೆಂಕಿ ತಗುಲಿದ್ದು, ಆತನ ಸಜೀವ ದಹನವಾಗಿದೆ. ಪಂಜಾಬ್ ನ ಬರ್ನಾಲಾ ಜಿಲ್ಲೆಯ ಧನೋಲುವಾ ಗ್ರಾಮದ ಜನಕರಾಜ್ (55) ಮೃತ ವ್ಯಕ್ತಿ. ರೈತ ಹೋರಾಟಕ್ಕೆಂದು ಅಲ್ಲಿಂದ ದೆಹಲಿಗೆ ಬಂದಿದ್ದ. ಟ್ರ್ಯಾಕ್ಟರ್​ ಮೆಕಾನಿಕ್​ ಆಗಿದ್ದ ಆತನನ್ನು ಹೋರಾಟ ನಿರತ ರೈತರ ಟ್ರ್ಯಾಕ್ಟರ್​ಗಳನ್ನು ಸರಿ ಮಾಡಲೆಂದೇ ಕರೆಸಿಕೊಳ್ಳಲಾಗಿತ್ತು. ಶನಿವಾರ ರಾತ್ರಿ …

Read More »

ಬೆಳಗಾವಿ ವಿಭಜನೆಗೆ ತಾಂತ್ರಿಕ ತೊಂದರೆ : ಡಿಸಿಎಂ ಲಕ್ಷ್ಮಣ ಸವದಿ

ಬಳ್ಳಾರಿ : ಕಾಂಗ್ರೆಸ್, ಜೆಡಿಎಸ್ ಪಕ್ಷದ 17 ಜನರು ಬಿಜೆಪಿ ಪಕ್ಷಕ್ಕೆ ಬಂದ ಕಾರಣದಿಂದ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಿದೆ. ಅವರ ಬಗ್ಗೆ ಗೌರವವಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಲು 17 ಜನರು ಕಾರಣ. ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುವುದು ಪಕ್ಷ ತೀರ್ಮಾನ ಮಾಡುತ್ತದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಫೈನಲ್ …

Read More »

ಬೆಳಗಾವಿಯಲ್ಲಿ ನ.30ರಂದು ಮಹತ್ವದ ಸಭೆ ನಡೆಸಲಿರುವ ರಮೇಶ್ ಜಾರಕಿಹೊಳಿ

ಬೆಳಗಾವಿ : ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಸೋಮವಾರ ಜಲಸಂಪನ್ಮೂಲ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವರ ಸಭೆ ನಡೆಸಲಿದ್ದಾರೆ. ಕಳಸಾ ಬಂಡೂರ, ಗಟ್ಟಿ ಬಸವಣ್ಣ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಸೇರಿ ಇತರೆ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಉನ್ನತ ಮಟ್ಟದ ಸಭೆ ಹಮ್ಮಿಕೊಂಡಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ಜಿಲ್ಲಾಧಿಕಾರಿ, ಜಲಸಂಪನ್ಮೂಲ ಮತ್ತು ಅರಣ್ಯ ಇಲಾಖೆಯ …

Read More »

ಮೋದಿ ಮನ್ ಕಿ ಬಾತ್‍ ಹೈಲೈಟ್ಸ್ …………..

ನವದೆಹಲಿ, ನ.29- ಕೃಷಿ ಕ್ಷೇತ್ರದ ಸುಧಾರಣಾ ಕ್ರಮಗಳು ಮುಂದಿನ ದಿನಗಳಲ್ಲಿ ರೈತ ಸಮುದಾಯದ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸಲಿವೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿರುವ ಮನ್ ಕಿ ಬಾತ್‍ನ 71ನೇ ಸರಣಿಯಲ್ಲಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವ ಹಲವಾರು ಕಾಯ್ದೆಗಳು ಕೃಷಿ ವಲಯವನ್ನು ಉನ್ನತ ಮಟ್ಟಕ್ಕೇರಿಸುವ ಜತೆಗೆ ರೈತರ ಅವಕಾಶಗಳನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಹೇಳಿದರು. …

Read More »

ಸಚಿವರ ಭೋಜನಕೂಟ ತಿರಸ್ಕರಿಸಿದ ವಿದ್ಯಾ- ಮರುದಿನ ಅಧಿಕಾರಿಗಳಿಂದ ಶೂಟಿಂಗ್ ಸ್ಥಗಿತ

ಮುಂಬೈ/ಭೋಪಾಲ್: ಅರಣ್ಯ ಸಚಿವರ ಔತನಕೂಟ ತಿರಸ್ಕರಿಸಿದ್ದಕ್ಕೆ ವಿದ್ಯಾ ಬಾಲನ್ ಸಿನಿಮಾದ ಚಿತ್ರೀಕರಣ ತಡೆಯಲಾಗಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸುತ್ತಿವೆ. ಮಧ್ಯಪ್ರದೇಶದ ಅರಣ್ಯ ಸಚಿವ ವಿಜಯ್ ಶಾ ತಮ್ಮ ರಾಜ್ಯದಲ್ಲಿ ಶೂಟಿಂಗ್ ನಡೆಸುತ್ತಿರುವ ನಟಿ ವಿದ್ಯಾ ಬಾಲನ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು. ಆದ್ರೆ ವಿದ್ಯಾ ಬಾಲನ್ ತಮ್ಮ ಶೆಡ್ಯೂಲ್ ಮೊದಲ ನಿಗದಿಯಾಗಿದ್ದರಿಂದ ಭೋಜನಕೂಟಕ್ಕೆ ತೆರಳಿರಲಿಲ್ಲ. ಇದರಿಂದ ಸಚಿವರು ಮರುದಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣಕ್ಕೆ ತಡೆ ನೀಡಿದ್ದರು ಎನ್ನಲಾಗಿದೆ. …

Read More »

ಆನ್‍ಲೈನ್ ಗೇಮ್ ಹುಚ್ಚಿನಿಂದ ವ್ಯಕ್ತಿಯೊಬ್ಬ 16 ಲಕ್ಷ ರೂ. ಕಳೆದುಕೊಂಡು ಇದೀಗ ಆತ್ಮಹತ್ಯೆಗೆ ಶರಣಾದ

ಹೈದರಾಬಾದ್: ಆನ್‍ಲೈನ್ ಗೇಮ್ ಹುಚ್ಚಿನಿಂದ ವ್ಯಕ್ತಿಯೊಬ್ಬ 16 ಲಕ್ಷ ರೂ. ಕಳೆದುಕೊಂಡು ಇದೀಗ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಈತ ಎಲ್‍ಬಿ ನಗರ ನಿವಾಸಿ. ಆನ್‍ಲೈನ್ ಗೇಮ್ ಚಟದಿಂದಾಗಿ ಜಗದೀಶ್ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡನು. ಅಲ್ಲದೆ ಸಾಲ ತೀರಿಸಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ತನ್ನ ಪ್ರಾಣವನ್ನೇ ಕಳೆದುಕೊಳ್ಳಲು ನಿರ್ಧರಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆಲವು ದಿನಗಳ ಹಿಂದೆ ಜಗದೀಶ್ ತಂದೆ …

Read More »

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 41,322 ಮಂದಿಗೆ ಕೊರೊನಾ ಪಾಸಿಟಿವ್…!

ನವದೆಹಲಿ,ನ.28-ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೋಟಿಯತ್ತ ದಾಪುಗಾಲಿಡುತ್ತಿದೆ. ಈಗಾಗಲೇ ಸೋಂಕಿತರ ಸಂಖ್ಯೆ 93.51 ಲಕ್ಷಕ್ಕೆ ಏರಿಕೆಯಾಗಿದ್ದು, ಪ್ರತಿ ನಿತ್ಯ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 41,322 ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳೆದ ಹಲವಾರು ದಿನಗಳಿಂದ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಯಾವುದೇ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೋಟಿ ದಾಟುವ ಸಾಧ್ಯತೆಗಳಿವೆ. ಅದಾಗ್ಯೂ ಚೇತರಿಕೆ ಪ್ರಮಾಣ ಶೇ.93.68ಕ್ಕೆ ಏರಿಕೆಯಾಗಿದೆ. ಇದುವರೆಗೂ 87,59,969 ಸೋಂಕಿತರು …

Read More »

ಬೆಳಗಾವಿ: ಕುರುಬ ಸಮುದಾಯದವರಿಗೆ ಟಿಕೆಟ್ ನೀಡಲು ಒತ್ತಾಯ

ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 2ನೇ ಅತೀ ದೊಡ್ಡ ಮತದಾರರಾಗಿ ಕುರುಬ ಸಮುದಾಯದವರಿದ್ದಾರೆ. ಹೀಗಾಗಿ ಈ ಬಾರಿಯ ಬೆಳಗಾವಿ ಲೋಕಸಭೆಯ ಟಿಕೆಟ್ ಕುರುಬ ಸಮುದಾಯದವರಿಗೆ ನೀಡಬೇಕು ಎಂದು ಕುರುಬ ಸಮುದಾಯದ ಮುಖಂಡ ರಾಜೇಂದ್ರ ಸಣ್ಣಕ್ಕಿ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಸಂಬಂಧ ನಡೆದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಸಣ್ಣಕ್ಕಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ನಮ್ಮ ಸಮಾಜದ ಎರಡೂವರೆ ಲಕ್ಷ ಮತದಾರರಿದ್ದಾರೆ. …

Read More »