ತುಮಕೂರು: ಇತ್ತೀಚಿಗೆ (ಜೂನ್ 4) ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟ ತುಮಕೂರು ಮೂಲದ ವಿದ್ಯಾರ್ಥಿ ಮನೋಜ್ ಕುಟುಂಬಕ್ಕೆ ಸರ್ಕಾರದ ಆದೇಶದಂತೆ 25 ಲಕ್ಷ ರೂಪಾಯಿ ಹಣದ ಚೆಕ್ಅನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭಾನುವಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೃತ ವಿದ್ಯಾರ್ಥಿ ಮನೋಜ್ ತಂದೆ ದೇವರಾಜ್, ಚೆಕ್ ಕೊಟ್ಟಿದಾರೆ ಸರ್.. ಮಗ ಬರೊಲ್ವಲ್ಲ. ಚೆಕ್ ಕೊಟ್ಟರೆ ಮಗಾ ಬರ್ತಾನಾ, ಇದ್ದೋನು ಒಬ್ಬನೇ ಮಗ ಎಂದು ನೊಂದು …
Read More »ಜೂನ್ 10 ರಂದು ನಾರಾಯಣಸ್ವಾಮಿ ವಿರುದ್ಧ ಪ್ರತಿಭಟನೆ
ಜೂನ್ 10 ರಂದು ನಾರಾಯಣಸ್ವಾಮಿ ವಿರುದ್ಧ ಪ್ರತಿಭಟನೆ ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ರಾಜಿನಾಮೆಗೆ ಆಗ್ರಹಿಸಿ ಜೂನ್ 10 ರಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ದಲಿತ ಸಂಘರ್ಷ ಸಮಿತಿ ಸಾಗರ ಬಣ ಕರೆ ಕೊಟ್ಟಿದೆ. ಕಲಬುರ್ಗಿಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ನಾಯಿಗೆ ಹೋಲಿಸಿದ್ದಾರೆ. ಜೂನ್ 10ರಂದು ರಾಜ್ಯಾದ್ಯಂತ …
Read More »ರೇವಣ್ಣ ಮತ್ತು ಪ್ರಜ್ವಲ್ ಅರ್ಜಿಗಳ ಪ್ರತ್ಯೇಕ ವಿಚಾರಣೆಗೆ ಹೈಕೋರ್ಟ್ ಅನುಮತಿ
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಎರಡನೇ ಆರೋಪಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ತನ್ನ ಜಾಮೀನು ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದರು. ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ಪೀಠಕ್ಕೆ ಅರ್ಜಿದಾರರ ಪರ ವಕೀಲರು, ಹೆಚ್.ಡಿ.ರೇವಣ್ಣ ಅರ್ಜಿಯೊಟ್ಟಿಗಿನ ವಿಚಾರಣೆ ಬದಲಾಗಿ ಪ್ರತ್ಯೇಕವಾಗಿ ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ …
Read More »ಮಗನ ಸಮಾಧಿ ಬಳಿ ತಂದೆ ಆಕ್ರಂದನ
ಹಾಸನ: ಈ ಥರ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು..!. ನನ್ನ ಮಗನಿಗೋಸ್ಕರವೇ ಈ ಜಾಗ ಮಾಡಿದ್ದು,, ಇದೇ ಜಾಗದಲ್ಲಿ ನನ್ನ ಮಗ ಮಲಗುತ್ತಿದ್ದ. ಈಗ ಇಲ್ಲೇ ಮಲಗಿಸಿದ್ದೇನೆ.. ಯಾರಿಗೂ ಈ ಪರಿಸ್ಥಿತಿ ಬೇಡ ಎಂದು ತಂದೆ ಗೋಳಾಡಿದ್ದಾರೆ. ಹೌದು, ಈ ಘಟನೆ ನಡೆದು ಮೂರು ದಿನ ಕಳೆದಿದೆ. ಆದರೆ ಹೆತ್ತವರ ಆಕ್ರಂದನ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಗನ ನೆನೆದು ಗೋಳಿಡುತ್ತಿರುವ ದೃಶ್ಯ ಮನಕಲಕುವಂತಿದೆ.
Read More »ತೇರದಾಳದಲ್ಲಿ ಸಡಗರ ಬಕ್ರೀದ್…
ತೇರದಾಳದಲ್ಲಿ ಸಡಗರ ಬಕ್ರೀದ್… ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್ ಅದಾ… ತ್ಯಾಗ ಬಲಿದಾನ ಪ್ರತೀಕವಾದ ಬಕ್ರೀದ್ ಅರ್ಥಾತ್ ಈದ್ ಉಲ್ ಅಝಹಾ ಹಬ್ಬವನ್ನು ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯುತ್ಸಾಹದಿಂದ ಆಚರಿಸಿದರು. ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಅದಾ ಮಾಡಿ, ಶಾಂತಿ ಸೌಹಾರ್ದತೆಗಾಗಿ ಪ್ರಾರ್ಥಿಸಿದರು. ಸಾವಿರಾರು ಜನ ಮುಸ್ಲಿಂ ಬಾಂಧವರು ಈ ವೇಳೆ ಭಾಗಿಯಾಗಿದ್ದರು. ಪರಸ್ಪರ ಬಕ್ರೀದ್ ಶುಭಾಷಯಗಳನ್ನು ವಿನಿಯೋಗಿಸಿಕೊಂಡರು.
Read More »ಲೇಔಟ್ಗೆ ಭೂಮಿ ಗುರುತು ಮಾಡಿದ DHUDA: ದಾವಣಗೆರೆ ಜನರಿಗೆ ನಿವೇಶನದ ಚಿಂತೆ ದೂರ: ಸಚಿವರಿಂದ ಮಾಹಿತಿ
ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ದೂಡಾ) ನೂತನ ಬಡಾವಣೆ ನಿರ್ಮಿಸಲು ಕೊನೆಗೂ ಜಮೀನು ಸಿಕ್ಕಂತೆ ಆಗಿದೆ. ಪ್ರಾಧಿಕಾರದ ಅಧಿಕಾರಿಗಳಿಗೆ ಲೇಔಟ್ ಮಾಡಲು ಜಮೀನಿನ ಚಿಂತೆ ದೂರ ಆಗಿದೆ. ಈಗಾಗಲೇ ಎರಡು ಕಡೆ ಭೂಮಿ ಆಯ್ಕೆ ಮಾಡಲಾಗಿದೆ ಎಂದು ಸ್ವತಃ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಭೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಮಧ್ಯಮ ವರ್ಗದವರಿಗೆ ಅಪಾರ್ಟ್ಮೆಂಟ್ ಮಾಡಿ ಕೊಡಲಾಗುವುದು ಎಂದು ಸುಳಿವು ನೀಡಿದ್ದಾರೆ. ಅರ್ಜಿ ಹಾಕಿ ಹಲವು ದಿನಗಳೇ ಉರುಳಿದರೂ …
Read More »ಅಂತರರಾಜ್ಯ ಕಳ್ಳನ ಬಂಧನ : 14.71 ಲಕ್ಷ ಮೌಲ್ಯದ ಮೊಬೈಲ್, ಕಾರು ವಶಕ್ಕೆ
ಅಂತರರಾಜ್ಯ ಕಳ್ಳನ ಬಂಧನ : 14.71 ಲಕ್ಷ ಮೌಲ್ಯದ ಮೊಬೈಲ್, ಕಾರು ವಶಕ್ಕೆ ಸಂಕೇಶ್ವರ : ಅಂತರರಾಜ್ಯ ಕಳ್ಳನೋರ್ವನನ್ನು ಬಂಧಿಸಿರುವ ಸಂಕೇಶ್ವರ ಪೊಲೀಸರು ಬಂಧಿತನಿಂದ 14.71 ಲಕ್ಷ ಮೌಲ್ಯದ 101 ವಿವಿಧ ಕಂಪನಿಯ ಮೊಬೈಲ್ ಹಾಗೂ ಒಂದು ಕಾರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಖದೀಮನನ್ನು ತೆಲಂಗಾಣ ರಾಜ್ಯದ ನಿಜಾಮಾಬಾದ ಜಿಲ್ಲೆಯ ಬಾಣಸವಾಡದ ನವೀನ ಸಂಪತ ಎಂಬುವ ಈ ಮೊಬೈಲ್ ಕಳ್ಳತನ ಪ್ರಕರಣ ದಲ್ಲಿ ಬಂಧಿತ ವ್ಯಕ್ತಿಯಾಗಿದ್ದಾನೆ. ಸಂಕೇಶ್ವರ ಪೋಲಿಸರು …
Read More »ಮೊರಾರ್ಜಿ ಶಾಲೆಗೆ ಎಂಟನೇ ತರಗತಿಗೆ ಅಡ್ಮಿಷನ್ ಆಗಲು ಫಿಟ್ನೆಸ್ ಸರ್ಟಿಫಿಕೇಟ್ಗಾಗಿ ಬೆಳಿಗ್ಗೆಯಿಂದ ಮಧ್ಯಾಹ್ನ 1. 45ರ ತನಕ ತಾಯಿ ಮಗ ಇಬ್ಬರೂ ಆಸ್ಪತ್ರೆಯ ಮುಂಭಾಗ ಕಾಯುತ್ತಲೇ ಇದ್ದಾರೆ.
ಮೊರಾರ್ಜಿ ಶಾಲೆಗೆ ಎಂಟನೇ ತರಗತಿಗೆ ಅಡ್ಮಿಷನ್ ಆಗಲು ಫಿಟ್ನೆಸ್ ಸರ್ಟಿಫಿಕೇಟ್ಗಾಗಿ ಬೆಳಿಗ್ಗೆಯಿಂದ ಮಧ್ಯಾಹ್ನ 1. 45ರ ತನಕ ತಾಯಿ ಮಗ ಇಬ್ಬರೂ ಆಸ್ಪತ್ರೆಯ ಮುಂಭಾಗ ಕಾಯುತ್ತಲೇ ಇದ್ದಾರೆ. ಕೇವಲ ಒಂದು ಸಹಿ ಅಷ್ಟೇ ಬಾಕಿ.ಇಂತಹ ವ್ಯವಸ್ಥೆಯನ್ನು ನೋಡಿದ ಮಕ್ಕಳು ಹೇಗೆ ಈ ಸಮಾಜದ ಬಗ್ಗೆ, ಅಧಿಕಾರಿಗಳ ಬಗ್ಗೆ ಒಳ್ಳೇ ಅಭಿಪ್ರಾಯ ಹೊಂದೋಕೆ ಸಾಧ್ಯ. ಕೊನೆ ಪಕ್ಷ ಆ ಕೇಸ್ ವರ್ಕರ್ ಇವರ ಅರ್ಜಿ ತೆಗೆದುಕೊಂಡು ಹೋಗಿ ಊಟ ಮಾಡಿಕೊಂಡು ಬನ್ನಿ …
Read More »ದಯಾನಂದ್ ಅಮಾನತು ಆದೇಶ ರದ್ದು ಪಡಿಸುವಂತೆ ಹೆಡ್ ಕಾನ್ಸ್ಟೇಬಲ್ ಏಕಾಂಗಿ ಪ್ರತಿಭಟನೆ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಏಕಾಏಕಿ ಮಾಡಿರುವ ದಯಾನಂದ್ ಅವರ ಸಸ್ಪೆಂಡ್ ರದ್ದುಪಡಿಸಬೇಕೆಂದು ರಾಜಭವನ ಮುಂದೆ ಹೆಡ್ ಕಾನ್ಸ್ಟೇಬಲ್ ಏಕಾಂಗಿ ಪ್ರತಿಭಟನೆ ನಡೆಸಿದರು. ತೋಳಿಗೆ ಕಪ್ಪುಪಟ್ಟಿ ಧರಿಸಿ ಅಂಬೇಡ್ಕರ್ ಫೋಟೊ ಇಟ್ಟುಕೊಂಡು ರಾಜಭವನ ಮುಂದೆ ಪ್ರತಿಭಟನೆ ನಡೆಸಿದರು. ದಯಾನಂದ್ ಅವರನ್ನು ಅಮಾನತುಗೊಳಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಪೊಲೀಸರಿಗೆ ರಕ್ಷಣೆ ನೀಡಬೇಕೆಂದು ನರಸಿಂಹರಾಜ್ ಅವರು ದೂರಿನಲ್ಲಿ …
Read More »ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಎತ್ತಂಗಡಿ
ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆ ವೈಫಲ್ಯದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಡಿಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನ ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಗುಪ್ತಚರ ಇಲಾಖೆಯ ಪ್ರಭಾರಿ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನ ಎತ್ತಂಗಡಿ ಮಾಡಲಾಗಿದೆ. ಈ ಸ್ಥಾನಕ್ಕೆ ಎಸ್ .ರವಿ ಅವರನ್ನು ವರ್ಗಾವಣೆ ಮಾಡಿದೆ. ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ಕೆ.ವಿ.ಶರತ್ ಚಂದ್ರ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಇವರಿಗೆ ಹೆಚ್ಚುವರಿಯಾಗಿ ಪೊಲೀಸ್ ನೇಮಕಾತಿ …
Read More »