ರಾಷ್ಟ್ರೀಯ

ಆಟೋರಾಜ ಬನ್ ಗಯಾ ‘ಮಹಾ’ ರಾಜ

ಮಹಾರಾಷ್ಟ್ರದಲ್ಲಿ ರಾಜಕೀಯ ಸಂಚಲನ ಮೂಡಿಸಿದ ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಈಗ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಶಿವಸೇನಾ ಮುಖಂಡ ಏಕನಾಥ್ ಶಿಂಧೆ ಇಟ್ಟಿರುವ ನಡೆ ಒಂದು ಕ್ಷಣ ಶಿವಸೇನಾ ಕಾರ್ಯಕರ್ತರನ್ನು ದಂಗು ಬಡಿಸಿತ್ತು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸಿಎಂ ಸ್ಥಾನ ಕಿತ್ತುಕೊಂಡಿದ್ದಲ್ಲದೆ, ರಾಜಕೀಯ ಭವಿಷ್ಯಕ್ಕೆ ಮಾರಕವಾಗುವಂಥ ಪೆಟ್ಟನ್ನು ಏಕನಾಥ್ ಕೊಟ್ಟಿದ್ದಾರೆ.   ಜೂನ್ 30ರಂದು ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಪರ್ವ ಆರಂಭವಾಗಿದ್ದು, ಏಕನಾಥ್ ಶಿಂಧೆ ಹೊಸ …

Read More »

ಇದು ಪ್ರಧಾನಿಗೆ ವಿದಾಯ ಹೇಳುವ ಸಮಯ;K.T.R.

ಹೈದರಾಬಾದ್‌, ಜೂ.30: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆ. ಟಿ. ರಾಮರಾವ್ ಗುರುವಾರ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಗಳು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಿನ್ನೆಲೆ ಇದು ಬಿಜೆಪಿ ಸಾಧನೆಗಳೆಂದು ಹೇಳುತ್ತಾ “ಬೈ ಬೈ ಮೋದಿ” ಎಂದು ಹೇಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.   ಹೈದರಾಬಾದ್‌ನಲ್ಲಿ ತಮ್ಮ ಪಕ್ಷದ ಸಭೆಯಲ್ಲಿ ಮಾತನಾಡಿದ ರಾಮರಾವ್, ಜುಲೈ 2 ಮತ್ತು 3 …

Read More »

ಏಕ ಬಳಕೆಯ ಪ್ಲಾಸ್ಟಿಕ್‌ಗೆ ಮತ್ತೆ ನಿಷೇಧ: ಉಲ್ಲಂಘಿಸಿದರೆ ವ್ಯಾಪಾರಿಗಳಿಗೆ ಬೀಳಲಿದೆ ಭಾರಿ ದಂಡ

ಬೆಂಗಳೂರು, ಜುಲೈ 1: ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಆದೇಶಕ್ಕೆ ಬದ್ಧವಾಗಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದಲ್ಲಿ ಜುಲೈ1ರಿಂದ ನಿಷೇಧ ಜಾರಿಗೊಳಿಸಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.   ಕೆಎಸ್‌ಪಿಸಿಬಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಾಗರಿಕ ಸಂಸ್ಥೆಗಳು ನಿಷೇಧವನ್ನು ಜಾರಿಗೊಳಿಸುತ್ತವೆ. ನಾವು ಮೇಲ್ವಿಚಾರಣೆ ಮಾಡುತ್ತೇವೆ. ಜುಲೈ1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಜಾರಿಯಾಗಲಿದೆ.

Read More »

ಮಹಾರಾಷ್ಟ್ರ ಸರ್ಕಾರ ರಚಿಸಲು ಕೂಡ ಕಾರಣ ವಾದ್ರಾ ರಮೇಶ್ ಜಾರಕಿಹೊಳಿ ?

ಮುಂಬೈ: ಗೋಕಾಕ ಸಾಹುಕಾರ ರಮೇಶ್ ಜಾರಕಿಹೊಳಿ ಮಹಾರಾಷ್ಟ್ರ ದ ನಾಯಕರ ಜೊತೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರ್ ಲ ಆಗಿವೆ , ಗೋಕಾಕ ಸಾಹುಕಾರ ಕರ್ನಾಟಕ ದಂತೆ ಮಹಾರಾಷ್ಟ್ರ ಸರ್ಕಾರ ರಚಿಸಲು ಕೂಡ ಕಾರಣವಾದರಾ ಎಂಬ ಮಾತುಗಳು ಶುರು ವಾಗಿವೆ. ಶಿವಸೇನೆಯ ಕೆಲವು ಶಾಸಕರು ಹಾಗೂ ಏಕನಾಥ ಶಿಂದೆ ಜೊತೆ ಸುಮಾರು ದಿನಗಳಿಂದ ರಮೇಶ್ ಜಾರಕಿಹೊಳಿ ಮುಂಬೈ ನಲ್ಲೇ ಠಿಕಾಣಿ ಹೂಡಿದ್ದರು.   ಫಡ್ನವಿಸ ಅವರ್ ಜೊತೆ ಮುಂಚೆ ಯಿಂದಲೂ …

Read More »

ಹು-ಧಾ ಮಹಾನಗರ ಪಾಲಿಕೆಯ ಆರಂಭದಲ್ಲಿಯೇ ಸದಸ್ಯರ ನಡುವೆ ಗಲಾಟೆ

ಹು-ಧಾ ಮಹಾನಗರ ಪಾಲಿಕೆಯ ಆರಂಭದಲ್ಲಿಯೇ ಸದಸ್ಯರ ನಡುವೆ ಗಲಾಟೆ ನಡೆದಿದೆ. ಮೇಯರ್ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾಯಿತ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಸಭಾಭವನದಲ್ಲಿ ಮೇಯರ್ ಭಾಷಣ ಮುಕ್ತಾಯಗೊಂಡಿದ್ದು, ಸರ್ವ ಸದಸ್ಯರು ಮೇಯರ್ ಭಾಷಣದ ಬಗ್ಗೆ ಅಭಿಪ್ರಾಯ ವ್ಯಕ್ಯಪಡಿಸಬೇಕಿತ್ತು. ಈ ಸಂದರ್ಭದಲ್ಲಿ ಧ್ವನಿ ಎತ್ತಿದ ಸುವರ್ಣ ಕಲಕುಂಟ್ಲ ಅವರು, ಭಾಷಣ ಬೇಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಧ್ವನಿ ಎತ್ತೊಣ್ಣ ಎಂದು ಸಮಸ್ಯೆ ಪ್ರಸ್ತುತ ಪಡಿಸಲು ಮುಂದಾದ …

Read More »

ಎದುರಿಗೆ ಬಂದ ಬೈಕ್ ತಪ್ಪಿಸಲು ಹೋಗಿ ಬೊಲೆರೋ ಪಿಕಪ್ ವಾಹನ ರಸ್ತೆಯಲ್ಲಿ ಪಲ್ಟಿ

ಮುದ್ದೇಬಿಹಾಳ: ಎದುರಿಗೆ ಬಂದ ಬೈಕ್ ತಪ್ಪಿಸಲು ಹೋಗಿ ಬೊಲೆರೋ ಪಿಕಪ್ ವಾಹನ ರಸ್ತೆಯಲ್ಲಿ ಪಲ್ಟಿಯಾದ ಘಟನೆ ಮುದ್ದೇಬಿಹಾಳ ಪಟ್ಟಣದ ಹೊರವಲಯದ ನಾಲತವಾಡ ಮುಖ್ಯ ರಸ್ತೆಯ ನಾಡಗೌಡರ ತೋಟದ ಬಳಿ ನಡೆದಿದೆ. ಘಟನೆ ಪರಿಣಾಮ ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.   ಮುರಾಳ ಗ್ರಾಮದ ಅಶೋಕ ಚಲವಾದಿ, ದಾವಲಸಾಬ ಹಾದಿಮನಿ, ಭೀಮನಗೌಡ ಬಿರಾದಾರ ಗಾಯಗೊಂಡವರಾಗಿದ್ದು ಇವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ …

Read More »

ಹತ್ಯೆಗೀಡಾದ ಕನ್ನಯ್ಯ ಲಾಲ್ ಕುಟುಂಬಕ್ಕೆ ಒಂದೇ ದಿನದಲ್ಲಿ ಹರಿದುಬಂತು ಕೋಟಿ ರೂಪಾಯಿಗಳಿಗೂ ಅಧಿಕ ದೇಣಿಗೆ

ರಾಜಸ್ಥಾನದ ಉದಯ್ ಪುರದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಕನ್ನಯ್ಯ ಲಾಲ್ ಎಂಬ ಟೈಲರ್ ಬರ್ಬರವಾಗಿ ಹತ್ಯೆಯಾಗಿದ್ದು, ದುಡಿಯುವ ಕೈಗಳನ್ನು ಕಳೆದುಕೊಂಡು ಆ ಕುಟುಂಬ ಅನಾಥವಾಗಿದೆ. ಹೀಗಾಗಿಯೇ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಕನ್ನಯ್ಯ ಲಾಲ್ ಕುಟುಂಬಕ್ಕೆ ನೆರವಾಗಲು ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದು, ಇದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.   ಕೇವಲ ಒಂದು ದಿನದಲ್ಲಿ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಹಣ ಹರಿದು ಬಂದಿದ್ದು, ಸಾರ್ವಜನಿಕರು ಇನ್ನೂ ಕೂಡ ತಮ್ಮ ಕೈಲಾದಷ್ಟು ನೆರವನ್ನು …

Read More »

ಪಣಜಿಯಲ್ಲಿ ‘ಶಿಂದೆ ಸೇನಾ’ ಶಾಸಕರ ಸಭೆ: ಮುಂಬೈನತ್ತ ಏಕನಾಥ್

ಪಣಜಿ: ಶಿವಸೇನೆ ಬಂಡಾಯ ಶಾಸಕರು ಅಂದರೆ ಏಕನಾಥ್ ಶಿಂದೆ ಗುಂಪಿನ ಶಾಸಕರು ಕಳೆದ ರಾತ್ರಿಯೇ ಗೋವಾಗೆ ಆಗಮಿಸಿದ್ದಾರೆ. ಪಣಜಿಯ ತಾಜ್ ಕನ್ವೆನ್ಷನ್ ಸೆಂಟರ್ ಹೊಟೇಲಿನಲ್ಲಿ ಎಲ್ಲರಿಗೂ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ಬಂಡಾಯ ಶಾಸಕರು ಮಹತ್ವದ ಸಭೆ ನಡೆಸಲಿದ್ದು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ನಂತರ ಬಂಡಾಯ ಶಾಸಕರು ನಡೆಸುತ್ತಿರುವ ಮೊದಲ ಸಭೆ ಇದಾಗಿದೆ. ಈ ಮಧ್ಯೆ …

Read More »

PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ: ವೇತನ 81 ಸಾವಿರ ರೂ.

India Post Recruitment 2022: ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಸೇವಿಂಗ್ ಬ್ಯಾಂಕ್ ಕಂಟ್ರೋಲ್ ಆರ್ಗನೈಸೇಶನ್ ಐಪಿಎ, ಪೋಸ್ಟ್‌ಮ್ಯಾನ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಮೂಲಕ ರೈಲ್ವೇ ಮೇಲ್ ಸೇವೆ, ಪೋಸ್ಟಲ್ ಸ್ಟೋರ್ಸ್ ಡಿಪೋ ಮತ್ತು ಅಸ್ಸಾಂ ಪೋಸ್ಟಲ್ ಸರ್ಕಲ್‌ನ ಅಂಚೆ ಕಛೇರಿಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ dopsortsrecritment.in ಗೆ …

Read More »

ಗದಗ: ಜಿಲ್ಲೆಯ ಮುಂಡರಗಿ ಪುರಸಭೆಯಲ್ಲಿ ಶಾಸಕರ ನಕಲಿ ಸಹಿ ವಿವಾದ ಜಟಾಪಟಿ ಜೋರಾಗಿದೆ

ಗದಗ: ಆ ಕ್ಷೇತ್ರದ ಶಾಸಕರ ಲೆಟರ್ ಹೆಡ್ ಯಾರು ಬೇಕಾದ್ರೂ, ಹೇಗೆ ಬೇಕಾದ್ರೂ ಉಪಯೋಗಿಸಿಕೊಳ್ಳಬಹುದಂತೆ. ಸರ್ಕಾರದ ಇಲಾಖೆಗಳಿಗೆ ಶಾಸಕರ ನಕಲಿ ಸಹಿ ಮಾಡಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಅನ್ನೋ ಗಂಭೀರ ಆರೋಪ ಕಾಂಗ್ರೆಸ್ ಸದಸ್ಯರು ಮಾಡಿದ್ದಾರೆ. ಎಸ್.ಎಫ್.ಸಿ ಅನುದಾನದ ಕ್ರಿಯಾ ಯೋಜನೆ ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಬರೆದ ಶಾಸಕರ ಪತ್ರಕ್ಕೆ ನಕಲಿ ಸಹಿ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಆದ್ರೆ, ಲೆಟರ್ ಹೆಡ್ಗಳಲ್ಲಿ ಶಾಸಕರ ಡಿಫರೆಂಟ್ ಡಿಫರೆಂಟ್ ಸಹಿಗಳು ಆರೋಪಕ್ಕೆ ಪುಷ್ಠಿ ನೀಡ್ತಾಯಿದೆ. ಈ …

Read More »