ಕಲಬುರಗಿ: ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಗೆ ಶಿಥಿಲಗೊಂಡಿದ್ದ ಮನೆ ಕುಸಿದು ಓರ್ವ ವೃದ್ಧೆ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡ ಘಟನೆ ಚಿತ್ತಾಪೂರ ಪಟ್ಟಣದಲ್ಲಿ ನಡೆದಿದೆ. ಆರೀಫಾ ಬೇಗಂ (60) ಮೃತ ವೃದ್ಧೆ. ಘಟನೆಯಲ್ಲಿ ಆರೀಫಾ ಬೇಗಂ ಪತಿ ಸರ್ಧಾರ್ ಅಲಿ ಹಾಗೂ ಮಗಳು ಯಾಸ್ಮಿನ್ ಬೇಗಂ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ದಿನಗಳಿಂದ ಸುರಿಯುತ್ತಿರುವ …
Read More »2-3 ದಿನ ಭಾರಿ ಮಳೆ; ಮುನ್ಸೂಚನೆ ನೀಡಿದ ಸಿಎಂ
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮಳೆ ಹಾನಿ ಕುರಿತಾಗಿ ನಿನ್ನೆ ಅಧಿಕಾರಿಗಳ ಜತೆ ಸಭೆ ನಡೆಸಿ ಮುಂಜಾಗೃತಾ ಕ್ರಮ ಹಾಗೂ ಪರಿಹಾರದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಇಂದು ಸ್ವಲ್ಪ ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಇನ್ನೂ 2-3 ದಿನಗಳ ಕಾಲ ಹಲವೆಡೆ ಮಳೆಯಾಗಲಿದೆ. ಅದಕ್ಕೆ ಅನುಗುಣವಾಗಿ …
Read More »ಕರ್ನಾಟಕ ಸರ್ಕಾರದಿಂದ ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗೆ ಸಹಾಯವಾಣಿ
ಬೆಂಗಳೂರು: ಶುಕ್ರವಾರ ಸಂಜೆ ಅಮರನಾಥ ಗುಹೆಯ ಬಳಿ ಮೇಘ ಸ್ಫೋಟ ಉಂಟಾಗಿದ್ದು, ತೀರ್ಥಯಾತ್ರೆಗೆ ತೆರಳಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಅಮರನಾಥ ಯಾತ್ರೆಗೆ ತೆರಳಿರುವ ಕರ್ನಾಟಕದ ಯಾತ್ರಾರ್ಥಿಗಳು ಸಿಲುಕಿದ್ದು, ಅವರ ಸಹಾಯಕ್ಕೆ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ ದಯವಿಟ್ಟು ಕೆಳಗಿನ ಸಂಖ್ಯೆಗೆ ಕರೆ ಮಾಡಿ ಸಂಪರ್ಕ ಮಾಡಿ. 080-1070, 22340676, ಇಮೇಲ್: incomedmkar@gmail.com ಮೇಘಸ್ಫೋಟದಿಂದ ಉಂಟಾದ ಭಾರೀ ಪ್ರಮಾಣದ ಪ್ರವಾಹ …
Read More »ಮಹಾರಾಷ್ಟ್ರ ರಾಜ್ಯಪಾಲರ ನಡೆ ಪ್ರಶ್ನಿಸಿ ಅರ್ಜಿ; ಸುಪ್ರೀಂ ಮೆಟ್ಟಿಲೇರಿದ ಉದ್ಧವ್ ಠಾಕ್ರೆ
ಮುಂಬಯಿ: ಶಿವಸೇನೆಯಿಂದ ಬಂಡಾ ಯ ವೆದ್ದು ತನ್ನ ಬೆಂಬಲಿತ ಶಾಸಕ ರೊಂದಿಗೆ ಪಕ್ಷದಿಂದ ಹೊರನಡೆದಿದ್ದ ಏಕ ನಾಥ ಶಿಂಧೆಯವರಿಗೆ ಸರಕಾರ ರಚಿಸು ವಂತೆ ಆಹ್ವಾನ ನೀಡಿದ್ದ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿಯವರ ನಡೆಯನ್ನು ಪ್ರಶ್ನಿಸಿ, ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್‌ನ ರಜಾಕಾಲದ ನ್ಯಾಯ ಪೀಠವು ಉದ್ಧವ್ ಅವರ ಅರ್ಜಿಯನ್ನು ಸ್ವೀಕರಿಸಿದ್ದು ಅರ್ಜಿಯ ವಿಚಾರಣೆಯನ್ನು ಜು. 11ಕ್ಕೆ ನಿಗದಿಗೊಳಿಸಿದೆ. ಅರ್ಜಿಯಲ್ಲಿ ಠಾಕ್ರೆಯವರು, ಜು. 3 ಮತ್ತು …
Read More »ಆಂಧ್ರ ಪ್ರದೇಶ: 400 ಅಡಿ ಕೊಳವೆ ಬಾವಿಯಿಂದ ಬಾಲಕನನ್ನು ರಕ್ಷಿಸಿದ ಧೈರ್ಯಶಾಲಿ ಯುವಕ!
ವಿಜಯವಾಡ: ಆಂಧ್ರ ಪ್ರದೇಶದ ದ್ವಾರಕ ತಿರುಮಲದ ಗುಂಡುಗೊಲುಗುಂಟ ಗ್ರಾಮದಲ್ಲಿ 30 ಅಡಿ ಆಳದ ತೆರೆದ ಕೊಳಬೆ ಬಾವಿಗೆ ಬಿದಿದ್ದ 9 ವರ್ಷದ ಬಾಲಕನೊಬ್ಬನನ್ನು ಧೈರ್ಯಶಾಲಿ ಯುವಕನೊಬ್ಬ ಐದು ಗಂಟೆಗಳ ಸಾಹಸ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬಾಲಕ ಎಸ್. ಜಸ್ವಂತ್ ತನ್ನ ಮನೆ ಬಳಿ ಆಡುತ್ತಿದ್ದಾಗ ಬುಧವಾರ ರಾತ್ರಿ 7 ಗಂಟೆಯ ನಂತರ ನಾಪತ್ತೆಯಾಗಿದ್ದಾನೆ. ಆತನ ಪೋಷಕರು ಹುಡುಕಾಡಿದರೂ ಆತ ಸಿಕ್ಕಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಹಾಯಕಕ್ಕಾಗಿ ಕೂಗುತ್ತಿದ್ದ ಬಾಲಕನ ಧ್ವನಿಯನ್ನು …
Read More »ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ₹ 132 ಕೋಟಿ ಮೊತ್ತದ ಅನುಮೋದನೆ: C.M.ಬೊಮ್ಮಾಯಿ
ಬೆಂಗಳೂರು: ‘ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ₹ 132 ಕೋಟಿ ಮೊತ್ತದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ‘ಸರ್ಕಾರ ಈಗಾಗಲೇ ಸಮವಸ್ತ್ರ ವಿತರಿಸಲು ಅನುಮೋದನೆ ನೀಡಿದೆ. ಸಮವಸ್ತ್ರ ತಯಾರಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ನಂತರ ವಿತರಣೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಭಿಕ್ಷೆ ಬೇಡಿರುವ ಹಣ ಎಲ್ಲಿ? ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೀಡಿರುವ …
Read More »ಮನೆ ಹಾನಿಗೆ ₹ 5 ಲಕ್ಷ ಪರಿಹಾರ: ಅಶೋಕ
ಮಂಗಳೂರು: ‘ಮಳೆಯಿಂದ ಪೂರ್ತಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹ 5 ಲಕ್ಷ ಪರಿಹಾರ ನೀಡಲಾಗುವುದು. ಈ ಸಂಬಂಧ ಗುರುವಾರ ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು. ಉಳ್ಳಾಲ ತಾಲ್ಲೂಕಿನ ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿಗೆ ಹೋದ ಕೂಡಲೇ ಶೇ 50ರಷ್ಟು ಪರಿಹಾರ ಮೊತ್ತ ಬಿಡುಗಡೆಗೆ ಆದೇಶ ನೀಡುತ್ತೇನೆ. ಕಡಿಮೆ ಪ್ರಮಾಣದ ಹಾನಿ ಆಗಿರುವವರಿಗೆ ಹಾನಿಯ ಪ್ರಮಾಣದ ಆಧಾರದಲ್ಲಿ …
Read More »ಎಸಿಬಿಗೆ ಮತ್ತೆ ಬೆಂಡೆತ್ತಿದ ನ್ಯಾ.ಸಂದೇಶ್: ಪೂರ್ಣ ಮಾಹಿತಿ ಒದಗಿಸದ್ದಕ್ಕೆ ಅತೃಪ್ತಿ
ಬೆಂಗಳೂರು, ಜು.7. ಬೆಂಗಳೂರು ನಗರ ಜಿಲ್ಲಾಧಿಕಾರಿಯಿಂದ ಲಂಚಕ್ಕೆ ಬೇಡಿಕೆ ಪ್ರಕರಣದಲ್ಲಿ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ ಮತ್ತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಾರ್ಯನಿರ್ವಹಣೆ ಬಗ್ಗೆ ಮತ್ತೆ ಕಿಡಿಕಾರಿದೆ. ಅಲ್ಲದೆ, ನ್ಯಾಯಾಲಯದ ಹಿಂದಿನ ಆದೇಶದಂತೆ ಸರ್ಚ್ ವಾರೆಂಟ್ ಜಾರಿ ಮತ್ತು ಸಲ್ಲಿಕೆಯಾಗಿರುವ ಬಿ ರಿಪೋರ್ಟ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದೆ. ಎಸಿಬಿ ಪ್ರಕರಣದ ಮಾಹಿತಿಯನ್ನು ಮುಚ್ಚಿಡುತ್ತಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಎಷ್ಟು …
Read More »ನಾನು ಯಾವತ್ತು ಯಾವುದರ ಹಿಂದೆಯೂ ಹೋದವನಲ್ಲ: ಡಾ.ಡಿ. ವೀರೇಂದ್ರ ಹೆಗ್ಗಡೆ
ಮಂಗಳೂರು: ಕೇಂದ್ರ ಸರ್ಕಾರವು ರಾಜ್ಯಸಭೆಗೆ ನಾಮನಿದೇರ್ಶನ ಮಾಡಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದ್ದಾರೆ. ದೇವರು ಒಂದು ಅವಕಾಶ ಕೊಟ್ಟಿದ್ದಾನೆ. ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ನಮ್ಮ ಅನೇಕ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೇವೆ. ಬಹುಶಃ ಇದು ವಿಸ್ತಾರವಾಗಿ ಇಡೀ ದೇಶಕ್ಕೆ ತಲುಪುವ ಸಾಧ್ಯತೆ ಇದೆ ಎಂದರು. ಕಸ್ಟಮರ್ಸ್ ಸರ್ವಿಸ್ ಸೆಂಟರ್ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಏಜೆನ್ಸಿ ಇದೆ. ಈಗಾಗಲೇ ನಾವು 6 ಸಾವಿರ …
Read More »ಇಂದು ಪಂಜಾಬ್ ಸಿಎಂ ಮದುವೆ: ವಧು ಗುರುಪ್ರೀತ್ ಕೌರ್ ವಯಸ್ಸೆಷ್ಟು? ಇಲ್ಲಿದೆ ಅವರ ಸಂಪೂರ್ಣ ಪರಿಚಯ
ಚಂಡೀಗಢ: ಇಂದು ಪಂಜಾಬ್ ಜನರ ಪಾಲಿಗೆ ವಿಶೇಷ ದಿನ. ಏಕೆಂದರೆ, ಇಡೀ ರಾಜ್ಯವನ್ನು ಪ್ರತಿನಿಧಿಸುವ ಹಾಗೂ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿವಾಹದ ದಿನ. ಅಂದಹಾಗೆ ಪಂಜಾಬ್ ಸಿಎಂಗೆ ಇದು ಎರಡನೇ ಮದುವೆ. ಇಷ್ಟು ಕೇಳಿದ ಮೇಲೆ ನಿಮ್ಮ ಮನಸ್ಸಿನಲ್ಲಿ ವಧು ಯಾರು? ಮತ್ತು ವಧುವಿನ ವಯಸ್ಸೆಷ್ಟು? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ನಿಮ್ಮ ಪ್ರಶ್ನೆಗಳಿಗೆ ಸಂಪೂರ್ಣ ಉತ್ತರವನ್ನು ನಾವು ಕೊಡುತ್ತೇವೆ. ಹೀಗಾಗಿ ಓದುವುದನ್ನು ಮುಂದುವರಿಸಿ… 48 …
Read More »
Laxmi News 24×7