Breaking News

ರಾಷ್ಟ್ರೀಯ

ಘಟಪ್ರಭಾ : ಬೈಕ್ ಕಳುವು ಆರೋಪಿ ಅರೆಸ್ಟ್

ಘಟಪ್ರಭಾ: ಬೈಕ್ ಗಳನ್ನು ಕಳುವು ಮಾಡುತ್ತಿದ್ದ ಆರೋಪಿಯೊಬ್ಬನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ.   ಇಷ್ಟಕ್ಕೂ ಈತನ ಬಳಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದು ಬರಿ ಒಂದೆರಡು ಬೈಕ್ ಗಳಲ್ಲ. ಬರೊಬ್ಬರಿ 11 ಬೈಕ್ ಗಳು !   ಪೊಲೀಸರು ಈತನನ್ನು ವಿಚಾರಣೆಗೆ ಗುರಿಪಡಿಸಿದ್ದು ಘಟಪ್ರಭಾ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Read More »

ವಿಕ್ರಾಂತ್ ರೋಣ ಶೋ ವೇಳೆ ಝಳುಪಿಸಿದ ಲಾಂಗು, ಮಚ್ಚು

ಜುಲೈ, 28 : ಚಿಕ್ಕಮಗಳೂರಿನಲ್ಲಿ ಇಂದು ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನದ ವೇಳೆ ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಅಲ್ಲದೆ ಮಿಲನ್‌ ಥಿಯೇಟರ್‌ನಲ್ಲಿ ಲಾಂಗ್-ಮಚ್ಚುಗಳು ಜಳಪಿಸಿದ್ದು, ಭರತ್‌ ಎಂಬಾತನಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾನೆ.   ಇಂದು ನಟ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಸಿನಿಮಾ ರಿಲೀಸ್‌ ಆಗಿದ್ದು, ಕೆಲವರು ಚಿಕ್ಕಮಗಳೂರು ನಗರದ ಮಿಲನ್ ಥಿಯೇಟರ್‌ನಲ್ಲಿ ಗೂಂಡಾಗಳಂತೆ ವರ್ತನೆಯನ್ನು ಮೆರೆದಿದ್ದಾರೆ. ಥಿಯೇಟರ್‌ನಲ್ಲಿ …

Read More »

ಎಸಿಬಿಗೆ ಭ್ರಷ್ಟಾಚಾರ ಪ್ರಕರಣದ ತನಿಖಾ ವಿಧಾನವೇ ಗೊತ್ತಿಲ್ಲ: ಹೈಕೋರ್ಟ್ ಚಾಟಿ

ಬೆಂಗಳೂರು: ಎಸಿಬಿಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಹೇಗೆ ಸರಿಯಾಗಿ ತನಿಖೆ ನಡೆಸಬೇಕೆನ್ನುವ ವಿಧಾನವೇ ಸರಿಯಾಗಿ ತಿಳಿದಿಲ್ಲ. ತನಿಖಾ ಪದ್ಧತಿಯಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮತ್ತೊಮ್ಮೆ ಚಾಟಿ ಬೀಸಿದೆ. ಹೈಕೋರ್ಟ್​​ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಎಸಿಬಿಯು ತನಿಖೆಯಲ್ಲಿ ಕಾನೂನುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇಂತಹ ತಪ್ಪುಗಳನ್ನು ನೋಡಿಕೊಂಡು ನ್ಯಾಯಾಲಯ ಸುಮ್ಮನೆ ಕೂರಲಾಗದು ಎಂದು ಎಸಿಬಿಯನ್ನು ತರಾಟೆಗೆ ತಗೆದುಕೊಂಡರು. ತಮ್ಮ ಮೇಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಎಸಿಬಿ ಸರಿಯಾಗಿ ತನಿಖೆ …

Read More »

ಬಿಜೆಪಿ ಸಾಧನಾ ಸಮಾವೇಶ ರದ್ದು, ರಾತ್ರಿ 12.25ಕ್ಕೆ ತುರ್ತು ಸುದ್ದಿಗೋಷ್ಠಿ ನಡೆಸಿದ: C.M.

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು​ ಹತ್ಯೆಯಾಗಿರುವ ಈ ಸಂದರ್ಭದಲ್ಲಿ ಸಾಧನಾ ಸಮಾವೇಶ ಮಾಡಲು ನನ್ನ ಮನಸಾಕ್ಷಿ ಒಪ್ಪಲಿಲ್ಲ. ಹಾಗಾಗಿ, ‘ಜನೋತ್ಸವ ಕಾರ್ಯಕ್ರಮ’ವನ್ನು ರದ್ದು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಆರ್.ಟಿ.ನಗರ ನಿವಾಸದಲ್ಲಿ ಸರಿರಾತ್ರಿ 12.25ಕ್ಕೆ ತುರ್ತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಒಂದೆಡೆ ನಮ್ಮ ಯುವ ಕಾರ್ಯಕರ್ತನ ಕೊಲೆಯಾಗಿದೆ. ಇದೇ ವೇಳೆ ನಮ್ಮ ಸರ್ಕಾರಕ್ಕೆ …

Read More »

ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಲೇಪಿತ ಮಾಳಿಗೆ ಸೋರಿಕೆ

ತಿರುವನಂತಪುರ: ಶಬರಿಮಲೆಯ ಅಯ್ಯಪ್ಪನ ದೇಗುಲದ ಗರ್ಭಗುಡಿಯ ಚಿನ್ನ ಲೇಪಿತ ಮಾಳಿಗೆಯಲ್ಲಿ ನೀರು ಸೋರಿಕೆಯಾಗುತ್ತಿರುವುದು ದೃಢಪಟ್ಟಿದೆ. ಜು.16ರಂದು ಮಾಸಿಕ ಪೂಜೆಗೆಂದು ದೇಗುಲದ ಗರ್ಭಗುಡಿ ತೆರೆದಾಗ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಗರ್ಭಗುಡಿಯ ಎಡಭಾಗದ ಮಾಳಿಗೆಯಲ್ಲಿ ಸೋರಿಕೆ ಉಂಟಾಗಿದ್ದು, ಶೀಘ್ರವೇ ಅದನ್ನು ದುರಸ್ಥಿಗೊಳಿಸಲಾಗುವುದು. ಆ.3ರಂದು ದೇಗುಲ ವಾಸ್ತುಶಿಲ್ಪಿಗಳ ತಂಡವು ಪರಿಶೀಲನೆ ನಡೆಸಲಿದೆ. ನಂತರ ದುರಸ್ತಿ ನಡೆಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಅಧ್ಯಕ್ಷ ಕೆ.ಅನಂತಗೋಪನ್‌ ತಿಳಿಸಿದ್ದಾರೆ. ಅಯ್ಯಪ್ಪ ದೇಗುಲದ ಗರ್ಭಗುಡಿಯ ಮಾಳಿಗೆಗೆ ಚಿನ್ನದ ಹೊದಿಕೆಯನ್ನು …

Read More »

ಚಂದ್ರು, ಹರ್ಷ, ಪ್ರವೀಣ, ನಾಳೆ ಇನ್ಯಾರೋ ? ಸಿ.ಟಿ.ರವಿ, ರೇಣುಕಾಚಾರ್ಯ ಬೇಸರ

ಬೆಂಗಳೂರು :ಚಂದ್ರ, ಹರ್ಷ, ಪ್ರವೀಣ ನಾಳೆ ಇನ್ಯಾರೋ ? ಎಂದು ಬಿಜೆಪಿ ಸರಕಾರದ ಕಾರ್ಯ ನಿರ್ವಹಣೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ವಿರುದ್ಧವೇ ಸಿ.ಟಿ. ರವಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನೂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇಂಥ ಘಟನೆಗಳಿಂದ ಕಾರ್ಯಕರ್ತರು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ. ಚಂದ್ರು, ಹರ್ಷ, ಪ್ರವೀಣ್ ನಾಳೆ …

Read More »

ಹಿರೇಬಾಗೇವಾಡಿ ಆರೋಗ್ಯ ಇಲಾಖೆ ವಸತಿ ಗೃಹಗಳು, ಆತಂಕದ ನಡುವೆ ವಾಸ

ಹಿರೇಬಾಗೇವಾಡಿ: ಜನರ ಆರೋಗ್ಯ ರಕ್ಷಣೆಗೆ ದಿನರಾತ್ರಿ ಶ್ರಮಿಸುವ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹಗಳು ಸಂಪೂರ್ಣ ಶಿಥಿಲಗೊಂಡಿದ್ದು, ಅವುಗಳನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.   ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಗೆ 45 ಗ್ರಾಮಗಳು ಇದ್ದು, ಈ ಭಾಗದ ಜನರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸುಮಾರು 12 ವರ್ಷಗಳ ಹಿಂದೆ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. …

Read More »

20 ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ, ಪಟ್ಟಿ

ಬೆಂಗಳೂರು, ಜುಲೈ 25;ಬಸವರಾಜ ಬೊಮ್ಮಾಯಿನೇತೃತ್ವದ ಕರ್ನಾಟಕ ಸರ್ಕಾರ 20 ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಕೆಲವು ದಿನಗಳ ಹಿಂದೆ ಎಲ್ಲಾ 22 ನಿಮಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರದ್ದು ಮಾಡಲಾಗಿತ್ತು. ಸೋಮವಾರ ಕರ್ನಾಟಕ ಸರ್ಕಾರ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಈ ಮೂಲಕ ಬಸವರಾಜ ಬೊಮ್ಮಾಯಿ ಒಂದು ವರ್ಷ ಪೂರ್ಣಗೊಳಿಸುವಾಗ ಹಲವಾರು ನೇಮಕಾತಿಗಳನ್ನು ಮಾಡಲಾಗಿದೆ.   ಪ್ರಕಟವಾದ ಆದೇಶದ ಪ್ರಕಾರ ಯಾರಿಗೆ ಯಾವ ನಿಗಮದ …

Read More »

ರಾಷ್ಟ್ರಪತಿ ಪದಗ್ರಹಣ ಸಮಾರಂಭದಲ್ಲಿ ಖರ್ಗೆಗೆ ಅಪಮಾನವಾಗಿಲ್ಲ: ಜೋಶಿ

ನವದೆಹಲಿ, ಜುಲೈ 25: ”ರಾಷ್ಟ್ರಪತಿ ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅಪಮಾನ ಮಾಡಿ, ಅಗೌರವ ತೋರಲಾಗಿದೆ” ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂದು ತಿರುಗೇಟು ನೀಡಿದ್ದಾರೆ.   Respecting the position and seniority of @kharge ji, he was offered to be seated in the first row …

Read More »

ಜುಲೈ 28ಕ್ಕೆ ವಿಶ್ವದಾದ್ಯಂತ 3,200 ಚಿತ್ರಮಂದಿರಗಳಲ್ಲಿ ‘ವಿಕ್ರಾಂತ್‌ ರೋಣ’:

ಕಿಚ್ಚ ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ಬಿಡುಗಡೆ ಹೊಸ್ತಿಲಲ್ಲಿದೆ. ಜುಲೈ 28ಕ್ಕೆ ವಿಶ್ವದಾದ್ಯಂತದ 3,200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಜಾಕ್‌ ಮಂಜು ಮಾಹಿತಿ ನೀಡಿದ್ದಾರೆ.   ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಸದ್ಯ 390 ಚಿತ್ರಮಂದಿರಗಳು ಬುಕ್‌ ಆಗಿವೆ. ಜುಲೈ 28ರ ವೇಳೆಗೆ 400-425 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ವಿಶ್ವದಾದ್ಯಂತ 3,200 ಚಿತ್ರಮಂದಿರಗಳಲ್ಲಿ ವಿಕ್ರಾಂತ್‌ ರೋಣ ತೆರೆಕಾಣಲಿದ್ದು, ಹಿಂದಿಯಲ್ಲೇ …

Read More »