ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಅವರು ವಿನ್ನರ್ ಎಂದು ಘೋಷಣೆ ಆಗಿದೆ. ಅವರು ದೊಡ್ಮನೆಯಲ್ಲಿ ಕೆಲ ವಾರಗಳ ಬಳಿಕ ಎಂಟ್ರಿ ಕೊಟ್ಟರೂ ಮೆಚ್ಚುಗೆ ಪಡೆದರು. ಈಗ ದೊಡ್ಮನೆಯಲ್ಲಿ ಅವರು ಕಪ್ ಎತ್ತುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಗೆಲುವಿನ ಬಗ್ಗೆ ಫ್ಯಾನ್ಸ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಅವರು ದೊಡ್ಡ ಅಂತರದಿಂದ ಗೆದ್ದಿದ್ದಾರೆ ಅನ್ನೋ ವಿಚಾರ ರಿವೀಲ್ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿಜೇತನಾಗಿ ಹನುಮಂತ …
Read More »ಒನ್ ನೇಶನ್-ಒನ್ ಎಲೆಕ್ಷನ್ ಜಾರಿಯಾದರೆ, 1 ವರ್ಷ ಹೆಚ್ಚುವರಿ ಸಿಗುತ್ತದೆ : ಸತೀಶ್ ಜಾರಕಿಹೊಳಿ
ಬೆಳಗಾವಿ : ಈ ಅವಧಿಯಲ್ಲಿ ನಮಗೆಲ್ಲ ಒಂದು ವರ್ಷ ಜಾಸ್ತಿ ಅವಕಾಶ ಸಿಗುತ್ತದೆ. ಒನ್ ನೇಶನ್-ಒನ್ ಎಲೆಕ್ಷನ್ ಜಾರಿಗೆ ಬಂದರೆ ಆರು ವರ್ಷ ನಾವು ಶಾಸಕರಾಗಿ ಇರಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಅವಧಿ ಪೂರ್ವ ಚುನಾವಣೆ ಬರುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ಕೇಂದ್ರ ಸರ್ಕಾರ ಒನ್ ನೇಶನ್-ಒನ್ ಎಲೆಕ್ಷನ್ ಜಾರಿಗೆ …
Read More »ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯೊಂದು ಮನೆ ಜಪ್ತಿ ಮಾಡಿ, ಏಳು ತಿಂಗಳ ಗರ್ಭಿಣಿ ಸೇರಿದಂತೆ ಕುಟುಂಬಸ್ಥರನ್ನು ಮನೆಯಿಂದ ಹೊರಹಾಕಿರುವ ಆರೋಪ ಕೇಳಿಬಂದಿದೆ.
ಧಾರವಾಡ: ಮೈಕ್ರೋ ಫೈನಾನ್ಸ್ಗಳ ವಿರುದ್ಧ ಕಿರುಕುಳ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೆ, ಕಾನೂನು ಮೀರಿ ಸಾಲ ವಸೂಲಾತಿಗೆ ಇಳಿದ ಸಂಸ್ಥೆಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ನಡುವೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಅರವಟಿಗಿ ಗ್ರಾಮದಲ್ಲಿ 7 ತಿಂಗಳ ಗರ್ಭಿಣಿ ಡೀನಾ ಫೀಲಿಪ್ ಅವ ರನ್ನು ಮನೆಯಿಂದ ಹೊರಹಾಕಿರುವ ಆರೋಪ ಆರೋಪ ಕೇಳಿಬಂದಿದೆ. ”ಫೈನಾನ್ಸ್ ಕಂಪನಿಯೊಂದರಲ್ಲಿ ಸಾಲ ಪಡೆದುಕೊಂಡಿದ್ದೆವು. ಪ್ರತಿ ತಿಂಗಳಿಗೊಮ್ಮೆ ಹಣ …
Read More »ಪಂಚ ಗ್ಯಾರಂಟಿ ಯೋಜನೆಗಳ ಮಧ್ಯೆ ಆರ್ಥಿಕ ಪ್ರಗತಿಯಲ್ಲಿ ರಾಜ್ಯ ಮುಂದು: ರಾಜ್ಯಪಾಲ ಗೆಹ್ಲೋಟ್
ಬೆಂಗಳೂರು: ಕರ್ನಾಟಕ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಸಮನಾಗಿ ನಿಭಾಯಿಸುತ್ತಾ ದೇಶದಲ್ಲೇ ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವ ಪ್ರಯುಕ್ತ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿ ಬಳಿಕ ವಿವಿಧ ತುಕಡಿಗಳಿಂದ ಗೌರವ ರಕ್ಷೆ ಸ್ವೀಕರಿಸಿ, ತೆರೆದ ವಾಹನದಲ್ಲಿ ಕವಾಯತು ವೀಕ್ಷಿಸಿದರು. ನಂತರ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು. …
Read More »ಇನ್ಸ್ಟಾಗ್ರಾಮ್ನಲ್ಲಿ ಯುವತಿಯ ಫೋಟೋಗೆ ಲೈಕ್, ಪ್ರೇಯಸಿಯಿಂದ ತರಾಟೆ: ಪ್ರಿಯಕರ ಆತ್ಮಹತ್ಯೆಗೆ ಶರಣು
ಮಂಗಳೂರು, ಜನವರಿ 25: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಸಾಮಾಜಿಕ ಜಾಲತಾಣದ ಗೀಳು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದ ಫೋಸ್ಟ್ ಮಾಡುವ ಫೋಟೋಗಳಿಗೆ ಹೆಚ್ಚಿನ ಲೈಕ್ ಮತ್ತು ಕಾಮೆಂಟ್ ಬರಲಿ ಎಂಬ ಉದ್ವಿಗ್ನತೆಯಲ್ಲಿರುತ್ತಾರೆ. ಆದರೆ, ಇದೇ ಉದ್ವಿಗ್ನತೆ ಎಷ್ಟೋ ಜನರ ಪ್ರಾಣ ಕಸಿದುಕೊಂಡಿದೆ. ಹೌದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಪೂಂಜಾಲಕಟ್ಟೆ ಕುಕ್ಕಿಪ್ಪಾಡಿಯ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚೇತನ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ.ಮೃತ ಚೇತನ್ಗೆ ಕುಂದಾಪುರದ ಚೈತನ್ಯ …
Read More »ಇದು ಈ ಬಾರಿಯ ಗೂಗಲ್-ಡೂಡಲ್
ಇಡೀ ದೇಶ ಇಂದು 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಗೂಗಲ್ ಕೂಡ ಈ ವಿಶೇಷ ದಿನವನ್ನು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಆಚರಿಸುತ್ತಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್ ಮಾಡಿದೆ. ಈ ಡೂಡಲ್ ಭಾರತೀಯ ವನ್ಯಜೀವಿ ಥೀಮ್ ಅನ್ನು ಆಧರಿಸಿದೆ. ಭಾರತದ ಶ್ರೀಮಂತ ಜೀವವೈವಿಧ್ಯವನ್ನು ಡೂಡಲ್‌ನಲ್ಲಿ ತೋರಿಸಲಾಗಿದೆ. ಭಾರತದ ವೈವಿಧ್ಯಮಯ ವನ್ಯಜೀವಿಗಳಿಂದ ಸ್ಫೂರ್ತಿ ಪಡೆದ ಇಂದಿನ ಗೂಗಲ್ ಡೂಡಲ್ ದೇಶದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಪ್ರಾಣಿಗಳನ್ನು ಪ್ರದರ್ಶಿಸುತ್ತದೆ. ಇದು ಉತ್ತರದಲ್ಲಿ …
Read More »ವೃದ್ಧರು ಮತ್ತು ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿದ್ರೇ… ಮೈಕ್ರೋ ಫೈನಾನ್ಸಗಳ ವಿರುದ್ಧ ಕ್ರಮ; ಸಿಎಂ ಸಿದ್ಧರಾಮಯ್ಯ
ಮೈಕ್ರೋ ಫೈನಾನ್ಸ ಮತ್ತು ಆರ್.ಬಿ.ಐ ಅಧಿಕಾರಿಗಳೊಂದಿಗೆ ಸಭೆ ವೃದ್ಧರು ಮತ್ತು ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿದ್ರೇ… ಮೈಕ್ರೋ ಫೈನಾನ್ಸಗಳ ವಿರುದ್ಧ ಕ್ರಮ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ನಿಯಮ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲ ಕೊಡುತ್ತಿದ್ದೀರಿ. ಪರವಾನಿಗೆ ಪಡೆದ ಮೈಕ್ರೋ ಫೈನಾನ್ಸಗಳಿಂದಲೇ, ಸಾಲಗಾರ ವೃದ್ಧರು ಮತ್ತು ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿದರೇ, ಜನರ ರಕ್ಷಣೆಗಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿ.ಎಂ. ಸಿದ್ಧರಾಮಯ್ಯ …
Read More »ಮುಡಾ ನಿವೇಶನ ಹಂಚಿಕೆ ಹಗರಣದ ಮಧ್ಯಂತರ ತನಿಖಾ ವರದಿ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ಧಾರವಾಡ ಹೈಕೋರ್ಟ್ ಪೀಠಕ್ಕೆ ಸಲ್ಲಿಕೆ ಮಾಡಲಿದ್ದಾರೆ.
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಮಧ್ಯಂತರ ತನಿಖಾ ವರದಿಯನ್ನು ಧಾರವಾಡ ಹೈಕೋರ್ಟ್ ಪೀಠಕ್ಕೆ ಸೋಮವಾರ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಪ್ರಭಾವದಿಂದ ಪತ್ನಿ ಪಾರ್ವತಿ ಮುಡಾದಲ್ಲಿ 14 ಬದಲಿ ನಿವೇಶನ ಪಡೆದುಕೊಂಡಿರುವ ಆರೋಪ ಸಂಬಂಧ ತನಿಖೆ ನಡಸುತ್ತಿರುವ ಮೈಸೂರು ಲೋಕಾಯುಕ್ತ ಎಸ್ಪಿ ಹಾಗೂ ತನಿಖಾಧಿಕಾರಿ ಟಿ.ಜೆ.ಉದೇಶ್ ಅವರು ಸೋಮವಾರ ಧಾರವಾಡ ಹೈಕೋರ್ಟ್ಗೆ ವರದಿ ಸಲ್ಲಿಸಲಿದ್ದಾರೆ. …
Read More »ವಿವಿ ವಿರುದ್ಧ ಧಾರವಾಡದಲ್ಲಿ ಬೀದಿಗೆ ಇಳಿದ ಎವಿಬಿವಿಪಿ ಪ್ರೊಟೆಸ್ಟ್
ಕವಿವಿ ವಿರುದ್ಧ ಧಾರವಾಡದಲ್ಲಿ ಬೀದಿಗೆ ಇಳಿದ ಎವಿಬಿವಿಪಿ ಪ್ರೊಟೆಸ್ಟ್….ಕವಿವಿ ವ್ಯಾಪ್ತಿಯ ಪದವಿ ಪಠ್ಯದ ಮೊದಲ ಸೆಮಿಸ್ಟರ್ ವಿವಾದಿತ ಪಠ್ಯ ತೆಗೆದು ಹಾಕುವಂತೆ ಆಗ್ರಹ.. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಮೊದಲ ಸೆಮಿಸ್ಟರ್‌ನಲ್ಲಿ ವಿವಾದಿತ ಪಠ್ಯವನ್ನು ಸೇರ್ಪಡೆ ಮಾಡಿರುವ ನಡೆ ಖಂಡಿಸಿ ಹಾಗೂ ಈ ಕೂಡಲೇ ಆ ಪಠ್ಯವನ್ನು ತೆಗೆದು ಹಾಕುವಂತೆ ಆಗ್ರಹಿಸಿ, ಧಾರವಾಡದಲ್ಲಿ ಎಬಿವಿಪಿ ಕಾರ್ಯಕರ್ತರುಬೀದಿಗೆ ಇಳಿದು ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು. ಅಖಿಲ್ ಭಾರತ …
Read More »ಬೆಳಗಾವಿಯಲ್ಲಿ 30ಕ್ಕೂ ಅಧಿಕ ಹುಲ್ಲಿನ ಬಣವೆಗಳಿಗೆ ಬೆಂಕಿ;
ಬೆಳಗಾವಿಯಲ್ಲಿ 30ಕ್ಕೂ ಅಧಿಕ ಹುಲ್ಲಿನ ಬಣವೆಗಳಿಗೆ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ! ಬೆಳಗಾವಿ ತಾಲೂಕಿನ ಕೊಳ್ಳಿಕೊಪ್ಪ ಗ್ರಾಮದ ಹೊರವಲಯದಲ್ಲಿ ಘಟನೆ ಗ್ರಾಮದ ರಾಜು ಜಾಧವ್ ಎಂಬುವವರಿಗೆ ಸೇರಿದ 30ಕ್ಕೂ ಅಧಿಕ ಹುಲಿನ ಬಣವೆಗಳು ಸುಟ್ಟು ಭಸ್ಮ ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ ತಗುಲಿ,ಹುಲ್ಲಿನ ಬಣವೆಗಳು ಬೆಂಕಿಗೆ ಆಹುತಿ ಶಂಕೆ! ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
Read More »