Breaking News
Home / ರಾಷ್ಟ್ರೀಯ (page 56)

ರಾಷ್ಟ್ರೀಯ

ರೈಲು ಪ್ರಯಾಣಿಕರಿಗೆ ಆಹಾರ ತಲುಪಿಸಲು ಸ್ವಿಗ್ಗಿ ಸಜ್ಜು

ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾರ್ಚ್‌ 12ರಿಂದ ಪ್ರಯಾಣಿಕರಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಸ್ವಿಗ್ಗಿ ಕಂಪನಿ ಸಜ್ಜಾಗಿದೆ. ಸ್ವಿಗ್ಗಿ ಮತ್ತು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ) ಮಂಗಳವಾರ ಈ ಕುರಿತ ಒಡಂಬಡಿಕೆಗೆ ಸಹಿ ಹಾಕಿವೆ. ಮೊದಲ ಹಂತದಲ್ಲಿ ಬೆಂಗಳೂರು, ಭುವನೇಶ್ವರ, ವಿಶಾಖಪಟ್ಟಣ ಹಾಗೂ ವಿಜಯವಾಡ ನಿಲ್ದಾಣಗಳಲ್ಲಿ ಸೇವೆ ಆರಂಭವಾಗಲಿದೆ. ಹಂತ ಹಂತವಾಗಿ ಈ ಸೇವೆಯನ್ನು 59ಕ್ಕೂ ಹೆಚ್ಚು ನಿಲ್ದಾಣಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ …

Read More »

ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಜರುಗಿದ ಬೆಳಗಾವಿ ವಲಯದ ಬಿಜೆಪಿ ಕೋರ್ ಕಮೀಟಿ ಸಭೆ

ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಜರುಗಿದ ಬೆಳಗಾವಿ ವಲಯದ ಬಿಜೆಪಿ ಕೋರ್ ಕಮೀಟಿ ಸಭೆಯನ್ನುದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರತಾಪ್ ನಡ್ಡಾ ಅವರು ಮಾತನಾಡುತ್ತಿರುವುದು. *ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಡಾ. ಪ್ರಭಾಕರ ಕೋರೆ, ಸಂಸದರಾದ ಮಂಗಲ ಅಂಗಡಿ, ಈರಪ್ಪ ಕಡಾಡಿ, ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಬೆಳಗಾವಿ …

Read More »

ಹೋರಿ ತಿವಿದು ಯುವಕ ಸಾವು, ಹತ್ತಾರು ಮಂದಿಗೆ ಗಾಯ

ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೂ ಆಗಾಗ ಹಾವೇರಿ ಜಿಲ್ಲೆಯಲ್ಲಿ ಅಲ್ಲಲ್ಲಿ ಹೋರಿ ಬೆದರಿಸು ಸ್ಪರ್ಧೆಯನ್ನು ಆಯೋಜನೆ ಮಾಡುತ್ತಲೇ ಇದ್ದಾರೆ. ಇದರ ಪರಿಣಾಮ ಇಂದು ಹೋರಿ ತಿವಿದು ಓರ್ವ ಸಾವನಪ್ಪಿ ಹಲವರಿಗೆ ತೀವ್ರ ಗಾಯಗಳಾಗಿವೆ. ಒಂದೆಡೆ ಬಾ..ಬಾ.. ಅಖಾಡಕ್ಕೆ ಬಾ… ಬಾರೋ…. ನನ್ನ ರಾಜಾ ಎನ್ನುತ್ತಿರುವ ಹೋರಿ ಹಬ್ಬದ ಆಯೋಜಕರು. ಇನ್ನೊಂದಡೆ ಪೈಲ್ವಾನರಿಗೆ ಸೆಡ್ಡು ಹೊಡೆದು ಹಿಡಿದು ತೋರಿಸಿ ನನ್ನ ಹೋರಿ… ಎನ್ನುತ್ತಿರುವ ರೈತ ಬಾಂಧವರು. ಮೊತ್ತೊಂದಡೆ ತಲೆಗೆ ಟವಲ್ …

Read More »

ಮತ್ತೆ ಅನಾವರಣ ಆಯಿತು ಇಮ್ರಾನ್ ಹಷ್ಮಿ ಕಿಸ್ಸಿಂಗ್ ಅವತಾರ

ನಟ ಇಮ್ರಾನ್ ಹಷ್ಮಿ ಮತ್ತು ನಟಿ ಮೌನಿ ರಾಯ್ (Mouni Roy) ಶೀಘ್ರದಲ್ಲೇ ‘ಶೋಟೈಮ್’ ಸೀರಿಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಶೋಟೈಮ್’ ವೆಬ್ ಸರಣಿಯ ಮೂಲಕ ಅಭಿಮಾನಿಗಳು ಮತ್ತೆ ಇಮ್ರಾನ್ ಹಷ್ಮಿ ಅವರ ಸೀರಿಯಲ್ ಕಿಸ್ಸರ್ ಅವತಾರ ನೋಡಲಿದ್ದಾರೆ. ಇದರ ಒಂದು ದೃಶ್ಯ ವೈರಲ್ ಆಗಿದೆ. ಈ ಸರಣಿಯಲ್ಲಿ ನಟಿ ಮೌನಿ ರಾಯ್ ಅವರನ್ನು ಇಮ್ರಾನ್ ಚುಂಬಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.ಕೆಲ ದಿನಗಳ ಹಿಂದೆ ‘ಶೋಟೈಮ್’ ಸೀರಿಸ್​ನ …

Read More »

ಪಾಕ್ ಪರ ಘೋಷಣೆ: ಬಂಧಿತ ಆರೋಪಿಗಳನ್ನು ಕರೆತಂದು ಪೊಲೀಸರಿಂದ ವಿಧಾನಸೌಧದಲ್ಲಿ ಇಂದು ಸ್ಥಳ ಮಹಜರು

ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಬಂಧಿತ ಮೂವರು ಆರೋಪಿಗಳನ್ನು ಎರಡು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸರು ಆರೋಪಿಗಳಾದ ಇಲ್ತಾಜ್, ಮುನಾವರ್, ಮೊಹಮ್ಮದ್ ನಾಶಿಪುಡಿ ಅವರನ್ನು ಕೋರಮಂಗಲದಲ್ಲಿರುವ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದ ಜಡ್ಜ್ ಮುಂದೆ ಹಾಜರುಪಡಿಸಿದ್ದರು. ವಿಧಾನಸೌಧದ ಆವರಣದಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು, ದೆಹಲಿ ಮೂಲದ …

Read More »

ಟ್ರ್ಯಾಕ್ಟರ್ ಸಾಲ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಲಕ್ಷ್ಮೇಶ್ವರ: ಸಾಲ ತೀರಿಸಲು ಸಾಧ್ಯವಾಗದೆ ತಾಲ್ಲೂಕಿನ ಗೋವನಾಳ ಗ್ರಾಮದ ಒಂದೇ ಕುಟುಂಬದ ಮೂವರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಣುಕಾ ತೇಲಿ (50), ಸಹೋದರಿ ಸಾವಕ್ಕ ತೇಲಿ (45) ಮತ್ತು ರೇಣುಕಾ ಅವರ ಪುತ್ರ ಮಂಜುನಾಥ (22) ಮೃತರು. ‘ಟ್ರ್ಯಾಕ್ಟರ್ ಸಾಲ ತೀರಿಸುವ ವಿಷಯದಲ್ಲಿ ಮನೆಯಲ್ಲಿ ಜಗಳವಾಗಿದೆ.

Read More »

ಹೆಂಡತಿ ಜೊತೆಗೆ ‘ವಿಡಿಯೋ ಕಾಲ್’ ನಲ್ಲಿ ಮಾತನಾಡುವಾಗ ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಮೈಸೂರು : ರೈಲಿನಲ್ಲಿ ಸಂಚರಿಸುವಾಗ ಅಥವಾ ರೈಲು ಹಳಿಯ ಬಳಿ ನಿಂತಿರುವಾಗ ಯಾವಾಗಲೂ ಜಾಗರೂಕರಾಗಿರಬೇಕು ಏಕೆಂದರೆ ಯಾವುದೇ ಸಂದರ್ಭದಲ್ಲಿಯೂ ಕೂಡ ಮೈ ಮರೆತು ಕುಳಿತಿದ್ದರೆ, ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಕೂಡ ಎದುರಾಗುತ್ತದೆ. ಅದೇ ರೀತಿ ಇದೀಗ ಮೈಸೂರಿನಲ್ಲಿ ಹೆಂಡತಿ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭ ವೇಳೆ ವ್ಯಕ್ತಿ ಸಾವನಪ್ಪಿದ್ದಾನೆ. ವಿಡಿಯೋ ಕಾಲ್ ವೇಳೆ ರೈಲಿಗೆ ಸಿಲುಕಿ ವ್ಯಕ್ತಿ ಸಾವನನಪ್ಪಿರುವ ಘಟನೆ ನಡೆದಿದೆ. ಹೆಂಡತಿಗೆ ವಿಡಿಯೋ ಕಾಲ್ ಮಾಡುತ್ತಿದ್ದಾಗ …

Read More »

11 ಹಾಸ್ಟೆಲ್‌ಗಳಿಗೆ ನಾಲ್ವರು ವಾರ್ಡನ್‌

ಹೊಸಕೋಟೆ: ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ 11 ವಿದ್ಯಾರ್ಥಿ ನಿಲಯಗಳಲ್ಲಿ ಏಳರಲ್ಲಿ ನಿಲಯ ಪಾಲಕರು ಇಲ್ಲ. 11 ಹಾಸ್ಟೆಲ್‌ಗಳ 590 ವಿದ್ಯಾರ್ಥಿಗಳನ್ನು ನಾಲ್ಕೇ ನಿಲಯಪಾಲಕರು ನೋಡಿಕೊಳ್ಳಬೇಕಿದೆ. 11 ವಿದ್ಯಾರ್ಥಿ ನಿಯಲಗಳಲ್ಲಿ ಮೂರು ನಿಲಯಪಾಲಕರು ಇದ್ದಾರೆ. ಒಂದರಲ್ಲಿ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಿದ್ದಾರೆ. ಈ ನಾಲ್ವರು 11 ವಿದ್ಯಾರ್ಥಿ ನಿಲಯ‌ಗಳನ್ನು‌ ನಿರ್ವಹಣೆ ಮಾಡಬೇಕಿದೆ.   10 ಹಾಸ್ಟೆಲ್‌ಗಳನ್ನು ಕೇವಲ ಮೂವರು ಮಾತ್ರ ನೋಡಿಕೊಳ್ಳಬೇಕಿರುವುದರಿಂದ ಅವುಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಮೂವರಲ್ಲಿ ಒಬ್ಬರಿಗೆ ಐದು …

Read More »

ತೇರದಾಳ: ಗ್ರಂಥಾಲಯಗಳಿಗೆ ದಿನಪತ್ರಿಕೆ ಸ್ಥಗಿತ

ತೇರದಾಳ: ತಾಲ್ಲೂಕಿನ ಮೂರು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಗ್ರಂಥಾಲಯಗಳಿಗೆ ಸರಬರಾಜಾಗುತ್ತಿದ್ದ ಪತ್ರಿಕೆಗಳನ್ನು ನಿಲ್ಲಿಸಿದ್ದರಿಂದ ಸ್ಪರ್ಧಾ ಪರೀಕ್ಷೆಗೆ ಸಿದ್ಧತೆ ನಡೆಸಿದ ಅಭ್ಯರ್ಥಿಗಳು, ಸಾಮಾನ್ಯ ಓದುಗರು ತೊಂದರೆ ಎದುರಿಸುತ್ತಿದ್ದಾರೆ. ತಾಲ್ಲೂಕಿನ ಸಸಾಲಟ್ಟಿ, ಗೋಲಬಾವಿ ಹಾಗೂ ಹನಗಂಡಿ ಗಂಥಾಲಯಗಳಿಗೆ ಅಗತ್ಯ ಇರುವ ದಿನಪತ್ರಿಕೆಗಳ ಬಿಲ್‌ ಅನ್ನು ಗ್ರಾಮ ಪಂಚಾಯಿತಿಗಳು ಪಾವತಿಸದ್ದರಿಂದ ಪತ್ರಿಕೆಗಳ ಸರಬರಾಜು ಸ್ಥಗಿತಗೊಂಡಿದೆ. ಓದುಗರಿಗಾಗಿ ಹನಗಂಡಿ ಗಂಥಾಲಯದ ಗ್ರಂಥಪಾಲಕ, ತಾವೇ ಪತ್ರಿಕೆಗಳನ್ನು ಖರೀದಿಸಿ ಕೊಡುತ್ತಿದ್ದರೆ, ಸಸಾಲಟ್ಟಿಯವರು ಒಂದು ಪತ್ರಿಕೆ ತರಿಸುತ್ತಿದ್ದಾರೆ. ಇದರಿಂದ ಜನರು ಮಾಹಿತಿ …

Read More »

ಮಹಿಳೆಯನ್ನು ವಿವಸ್ತ್ರಗೊಳಿಸಿ  ಹಲ್ಲೆ‌ 14 ಜನರ ಮೇಲೆ ಪ್ರಕರಣ ದಾಖಲ

ಕಾಗವಾಡ : ತಾಲೂಕಿನ ಐನಾಪುರ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ  ಹಲ್ಲೆ‌ ಮಾಡಿರುವ ಘಟನೆಗೆ ಸಂಬಂಧಿಸಿದಂತೆ 14 ಜನರ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಮಹಿಳೆಯ ಕುಟುಂಬಕ್ಕೆ ರಾಜ್ಯ ಸರ್ಕಾರ 1991ರಲ್ಲಿ ಮೂರು ಎಕರೆ ಜಮೀನು ಮಂಜೂರು ಮಾಡಿತ್ತು. ಸರ್ಕಾರ ನೀಡಿದ್ದ ಜಮೀನಿನಲ್ಲೇ ಬಡ ಕುಟುಂಬ ಬದುಕು ಸಾಗಿಸುತ್ತಿತ್ತು. ಆದರೆ ಗ್ರಾಮದ ಕೆಲವರು 20 ಗುಂಟೆ ಜಾಗ ಅತಿಕ್ರಮಣ ಮಾಡಿಕೊಂಡು ಮಹಿಳೆ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ …

Read More »