Breaking News
Home / ರಾಷ್ಟ್ರೀಯ (page 55)

ರಾಷ್ಟ್ರೀಯ

ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಬ್ರೇಕ್

ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಬ್ರೇಕ್ ಬಿದ್ದಿದೆ (Karnataka Electric Bike Taxi Scheme). ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಹಿಂದಿನ ಬಿಜೆಪಿ (BJP) ಸರ್ಕಾರ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಗೆ 2021ರ ಜುಲೈ 14ರಂದು ಅನುಮತಿ ನೀಡಿತ್ತು. ಆದರೆ ಇಂದಿನ ಕಾಂಗ್ರೆಸ್ (Congress) ಸರ್ಕಾರ ಹಿಂದಿನ ಸರ್ಕಾರ ನೀಡಿದ್ದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಅನುಮತಿಯನ್ನು ವಾಪಸ್ಸು ಪಡೆದುಕೊಂಡಿದೆ. ಬಿಎಂಆರ್​ಸಿಎಲ್ (BMRCL) ಎಂಡಿ …

Read More »

ಮೊಬೈಲ್ ನಂಬರ್ ಕೊಡಲು ನಿರಾಕರಿಸಿದಕ್ಕೆ ಯುವಕರಿಂದ ಯುವತಿ ಮೇಲೆ ಹಲ್ಲೆ;

ಬಾಗಲಕೋಟೆ, ಮಾರ್ಚ್​.08: ಯುವಕರ ಗುಂಪೊಂದು ವಿದ್ಯಾರ್ಥಿನಿಯರನ್ನು (Student) ಚುಡಾಯಿಸಿ, ಹಲ್ಲೆ ಮಾಡಿದ್ದು ಹಲ್ಲೆಗೊಳಗಾದ (Assault) ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯ ರಬಕವಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ (ಸ್ವಾತಿ ನಡಕಟ್ಟಿ) ಆಸ್ಪತ್ರೆಗೆ ದಾಖಲಾಗಿದ್ದಾಳೆ. ಬುಧವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಅನ್ವರ್ ಮಕಾಂದಾರ್, ಆಯನ್ ಪಟೇಲ್, ಜಾವೀದ್ ಅಲಿಹ್ಮದ್ ಎಂಬ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಯುವತಿ ಸ್ವಾತಿ ತನ್ನ ಸ್ನೇಹಿತೆಯರಾದ …

Read More »

ನೀರಾವರಿ ಭರವಸೆ ನೀಡಿದರೆ ಕರ್ನಾಟಕಕ್ಕೆ ಸೇರಲು ಸಿದ್ಧ ಎಂದ ಮಹಾರಾಷ್ಟ್ರದ ಜತ್ತ ತಾಲೂಕಿನ ರೈತ ಮುಖಂಡರ ನಿಯೋಗ

ಬೆಳಗಾವಿ, : ಮಹಾರಾಷ್ಟ್ರದ ಜತ್ತ ತಾಲೂಕಿನ ರೈತ ಮುಖಂಡರ ನಿಯೋಗವು ಬೆಳಗಾವಿಯ (Belagavi) ಅಥಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಭೇಟಿಯಾಗಿ ನೀರಿನ ಸಮಸ್ಯೆ ಸರಿಪಡಿಸುವಂತೆ ಮನವಿ ಪತ್ರವನ್ನು ಸಲ್ಲಿಸದೆ. ನೀರಾವರಿ ಭರವಸೆ ನೀಡಿದರೆ ಕರ್ನಾಟಕಕ್ಕೆ ಸೇರಲು ಸಿದ್ಧ ಎಂದು ಅವರು ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮಹಾರಾಷ್ಟ್ರದ ಗಡಿ ಗ್ರಾಮಗಳ ಹೊಲಗಳಿಗೆ ರಾಜ್ಯದ ನೀರಾವರಿ ಯೋಜನೆಗಳಿಂದ ಸ್ವಲ್ಪ ನೀರು ಬಿಡುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ದಯವಿಟ್ಟು ನಮಗೆ ನೀರು ಕೊಡಿ …

Read More »

ರಾಹುಲ್ ಗಾಂಧಿ​ ನಾಯಿ ತಿನ್ನದ ಬಿಸ್ಕತ್ತು​ ಕಾರ್ಯಕರ್ತರಿಗೆ‌ ನೀಡುತ್ತಾರೆ: ಗೋವಾ ಸಿಎಂ

ಚಿತ್ರದುರ್ಗ, ಮಾರ್ಚ್​ 7: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ರಾಹುಲ್ ಗಾಂಧಿ (Rahul Gandhi) ನಾಯಿಯನ್ನು ಜತೆಗೆ ಕರೆದೊಯ್ಯುತ್ತಾರೆ. ನಾಯಿ ತಿನ್ನದ ಬಿಸ್ಕತ್ತು ಕಾರ್ಯಕರ್ತರಿಗೆ‌ ನೀಡುತ್ತಾರೆ ಎಂದು ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್​ ವಾಗ್ದಾಳಿ ಮಾಡಿದ್ದಾರೆ. ಲೋಕಸಭಾ ಕ್ಷೇತ್ರದ ಬಿಜೆಪಿ ಭೂತ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 10 ತಿಂಗಳಲ್ಲಿ 500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯ ಸಂಗತಿ. ರೈತರಿಗೆ ನೀಡುವ ಸಬ್ಸಿಡಿ ಮತ್ತಿತರೆ ಯೋಜನೆಗಳು …

Read More »

ಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ಬಸವಕಲ್ಯಾಣದಲ್ಲಿ ಸನ್ಮಾನ

ಬೀದರ್: ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪಟ್ಟಣದ ಥೇರ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದಿಸಲಾಯಿತು. ಬಸವಕಲ್ಯಾಣ ಅನುಭವ ಮಂಟಪ ವಿಶ್ವಬಸವ ಧರ್ಮ ಟ್ರಸ್ಟ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಮಾಡಲಾಯಿತು.

Read More »

ಆರೆಸ್ಸೆಸ್‌ ಕಾರ್ಯಕರ್ತನಿಗೆ ಚಾಕು ಇರಿದವನು 5 ವರ್ಷ ಬಳಿಕ ಸೆರೆ

ಆರೆಸ್ಸೆಸ್‌ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ತಲೆಮರೆಸಿ ಕೊಂಡಿದ್ದ ಪ್ರಮುಖ ಆರೋಪಿಯನ್ನು 5 ವರ್ಷಗಳ ಬಳಿಕ ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅಜರ್‌ (41) ಬಂಧಿತ. ಆರೋಪಿ ತನ್ನ ಸಹಚರರ ಜತೆ ಸೇರಿ 2019ರ ಡಿ.22ರಂದು ಜೆ.ಪಿ.ನಗರ ನಿವಾಸಿ, ಆರ್‌ಎಸ್‌ಎಸ್‌ ಕಾರ್ಯಕರ್ತ ವರುಣ್‌ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. 2019ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಸಿಎಎ ಹಾಗೂ ಎನ್‌ಆರ್‌ಸಿ ವಿಧೇಯಕದ ಪರ …

Read More »

ಸರ್ವರ್‌ ಡೌನ್‌, ಸೇವೆಯಲ್ಲಿ ವ್ಯತ್ಯಾಸ; 829 ಕೋಟಿ ರೂಪಾಯಿ ನಷ್ಟ

ವಾಷಿಂಗ್ಟನ್:‌ ವಿಶ್ವಾದ್ಯಂತ ಜನಪ್ರಿಯ ಜಾಲತಾಣವಾದ ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌ ಸರ್ವರ್‌ ಡೌನ್ ಸಮಸ್ಯೆಯಿಂದ ಬಳಕೆದಾರರು ಪರದಾಡುವಂತಾಗಿತ್ತು. ಅಷ್ಟೇ ಅಲ್ಲ ಷೇರುಗಳ ಬೆಲೆಯೂ ಗಣನೀಯ ಕುಸಿತ ಕಂಡಿದ್ದು, ಇದರಿಂದ 829 ಕೋಟಿ ರೂಪಾಯಿ ನಷ್ಟವಾಗುವ ಮೂಲಕ ಮಾರ್ಕ್‌ ಜುಗರ್‌ ಬರ್ಗ್‌ ಒಡೆತನದ ಮೆಟಾ ಮತ್ತೊಮ್ಮೆ ದೊಡ್ಡ ಸುದ್ದಿಯಲ್ಲಿದ್ದಂತಾಗಿದೆ. ಮೆಟಾದ ಜನಪ್ರಿಯ ಜಾಲತಾಣಗಳಾದ ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌ ಮತ್ತು ಥ್ರೆಡ್ಸ್‌ ಭಾರತ ಸೇರಿದಂತೆ ಜಾಗತಿಕವಾಗಿ ಸರ್ವರ್‌ ಡೌನ್‌ ಆಗಿ ಎಲ್ಲರ ಖಾತೆಗಳು (ಮಂಗಳವಾರ ರಾತ್ರಿ …

Read More »

ನಾಲ್ವರು ಶಾಸಕರ ಆಪರೇಷನ್ ಕಮಲ ಮಾಡಲು ಬಿಜೆಪಿ ಪ್ರಭಾವಿ ವ್ಯಕ್ತಿ ಯತ್ನ: ಬಿ.ಆರ್. ಪಾಟೀಲ್ ಸ್ಫೋಟಕ ಹೇಳಿಕೆ

ಕಲಬುರಗಿ: ನನಗೂ ಆಪರೇಷನ್ ಕಮಲ ಮಾಡಲು ಬಿಜೆಪಿ ಪ್ರಭಾವಿ ವ್ಯಕ್ತಿಯೊಬ್ಬರು ಯತ್ನಿಸಿದ್ದಾರೆ ಎಂದು ಮುಖ್ಯಮಂತ್ರಿ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ನನ್ನನ್ನು ಸಂಪರ್ಕಿಸಿ ಆಫರ್ ನೀಡಲಾಗಿತ್ತು.ಚುನಾವಣೆಯ ಖರ್ಚು ಮತ್ತು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದ್ದರು ಎಂದು ತಿಳಿಸಿದ್ದಾರೆ.   ನನ್ನಂತೆ ಮೂವರು ಶಾಸಕರಿಗೆ ಕೂಡ ಆಪರೇಷನ್ ಕಮಲ ಮಾಡಲು ಯತ್ನಿಸಲಾಗಿದೆ. ಬಿಜೆಪಿಯ ಪ್ರಭಾವಿ ವ್ಯಕ್ತಿಯೊಬ್ಬರು …

Read More »

ಸಿದ್ದರಾಮಯ್ಯರಿಗೆ ಸ್ಫೋಟ ಬೆದರಿಕೆ! ಸ್ಫೋಟಕ್ಕೆ ದಿನಾಂಕ ಫಿಕ್ಸ್‌!

ಬೆಂಗಳೂರಿನ ʻರಾಮೇಶ್ವರಂ ಕೆಫೆʼಯ ಸ್ಫೋಟದ ನಂತ್ರ ಇದೀಗ ಸಿಎಂ ಸಿದ್ಧರಾಮಯ್ಯರಿಗೆ ಸ್ಪೋಟದ ಬೆದರಿಕೆ ಬಂದಿದೆ. ಮಾರ್ಚ್‌ 04 ರಂದು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್‌ ಅವ್ರಿಗೆ ಇಮೇಲ್‌ ಒಂದನ್ನ ಕಳುಹಿಸಿ ಸ್ಫೋಟದ ಬೆದರಿಕೆ ನೀಡಲಾಗಿದೆ. ಶಾಹಿದ್‌ ಖಾನ್‌ ಅನ್ನೋ ಹೆಸರಿನ ವ್ಯಕ್ತಿ ಈ ರೀತಿ ಇಮೇಲ್‌ ಕಳುಹಿಸಿದ್ದ ಎನ್ನಲಾಗಿದೆ. ಅಲ್ದೇ ಬರುವ ಶನಿವಾರ ಅಂದ್ರೆ ಮಾರ್ಚ್‌ 9ರ ಮಧ್ಯಾಹ್ನ 02:48ಕ್ಕೆ ಕರ್ನಾಟಕದಾದ್ಯಂತ …

Read More »

ನನಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ನನಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಸಿಎಂ, ಡಿಸಿಎಂ ಕಚೇರಿಗೆ ಬೆದರಿಕೆ ಇಮೇಲ್ ಬಂದ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಈ ಹಿಂದೆ ಕೂಡ ಹಲವು ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ. ಇಂತಹ ಕೇಸ್ ಗಳನ್ನು ಭೇದಿಸೋದು ಕಷ್ಟ.ಫೇಸ್ ಬುಕ್, ಗೂಗಲ್ ನಂತಹ ಕಂಪನಿಗಳು ಸಹಕರಿಸಬೇಕು, ಅವರು ಸಹಕಾರ ನೀಡದಿದ್ರೆ ಇಂತಹ ಕೇಸ್ ಗಳನ್ನು ಭೇದಿಸೋದು ಕಷ್ಟ ಎಂದು ಗೃಹ …

Read More »