Breaking News

ರಾಷ್ಟ್ರೀಯ

ರಾಜ್ಯದ ಅಮರನಾಥ ಯಾತ್ರಿಕರು ಸುರಕ್ಷಿತವಾಗಿದ್ದಾರೆ: H.K. ಪಾಟೀಲ್

ಗದಗ: ಹವಾಮಾನ ವೈಪರೀತ್ಯ ಕಾರಣ ಅಮರನಾಥ ಯಾತ್ರೆಗೆ ತೆರಳಿದ್ದ 300 ಜನ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ನಿನ್ನೆ ರಾತ್ರಿ ಹವಾಮಾನ ವೈಪರೀತ್ಯ ಹಾಗೂ ಅತಿಯಾದ ಚಳಿಯಿಂದಾಗಿ ಸಮಸ್ಯೆಯಾಗಿತ್ತು. ಅಮರನಾಥ ದೇವಸ್ಥಾನದ ಆಡಳಿತ ಮಂಡಳಿ, ಮಿಲಿಟರಿ ಅಧಿಕಾರಿಗಳು ಎಲ್ಲರಿಗೂ ಅಗತ್ಯ ನೆರವನ್ನು ನೀಡಿದ್ದು, ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಹೇಳಿದರು. ಈ ಬಗ್ಗೆ ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ಹಾಗೂ ಗುಡ್ಡ ಕುಸಿತದಿಂದಾಗಿ …

Read More »

ಹಾಲಿನ ದರ ಏರಿಕೆಯ ಸುಳಿವು ನೀಡಿದ ಸಚಿವ K.N ರಾಜಣ್ಣ

ಮೈಸೂರು : ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಸಹಕಾರ ಸಚಿವ K. N ರಾಜಣ್ಣ ಹಾಲಿನ ದರ ಏರಿಕೆಯ ಸುಳಿವು ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಹಾಲು ಉತ್ಪಾದಕರಿಗೆ ಸಹಾಯಧನ ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ. ಹಾಲಿನ ದರ ಎಂದ ಕೂಡಲೇ ಎಲ್ಲರೂ ಗಾಬರಿಯಾಗುತ್ತಾರೆ ಎಂದರು. ಹಾಲು ಉತ್ಪಾದಕರಿಗೆ ಸಹಾಯಧನ ಹೆಚ್ಚಿಸುವ ಅನಿವಾರ್ಯತೆ ಇದೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತವಾಗಿ ಮಾಹಿತಿ ನೀಡಲಿದ್ದೇವೆ ಎಂದರು. ಇನ್ನೂ,. ನಂದಿನಿ ಹಾಲಿನ ದರವನ್ನು …

Read More »

ಸಿಎಂ ಸಿದ್ದರಾಮಯ್ಯ ಬಜೆಟ್​ ಕೊಂಡಾಡಿದ ಲಕ್ಷ್ಮಿ ಹೆಬ್ಬಾಳಕರ್, ಈಶ್ವರ ಖಂಡ್ರೆ !

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿರುವ ಬಜೆಟ್ ಬಗ್ಗೆ ಅವರ ಸಂಪುಟ ಸಚಿವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವರಾದ ಎಂ ಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಸಚಿವರು ತಮ್ಮ ಮೆಚ್ಚುಗೆಯನ್ನು ಮಾಧ್ಯಮ ಪ್ರಕಟಣೆ ಮೂಲಕ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಜನಪರ ಬಜೆಟ್‌ – ಎಂ ಬಿ ಪಾಟೀಲ್: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 14ನೇ ಬಾರಿಗೆ ಮಂಡಿಸಿರುವ ಬಜೆಟ್‌ ಮಹಿಳೆಯರು, ದಲಿತರು, ರೈತರು ಅಲ್ಪಸಂಖ್ಯಾತರು, ಬಹುಸಂಖ್ಯಾತರು ಮತ್ತು …

Read More »

ಜುಲೈ 16 ರಿಂದ ಗೃಹ ಲಕ್ಮಿ ಕಾರ್ಯಕ್ರಮಕ್ಕೆ ಅರ್ಜಿ ನೋಂದಣಿ ಶುರು

ಬೆಂಗಳೂರು: ಜುಲೈ 16 ರಿಂದ ಗೃಹ ಲಕ್ಮಿ ಕಾರ್ಯಕ್ರಮಕ್ಕೆ ಅರ್ಜಿ ನೋಂದಣಿ ಶುರುವಾಗಲಿದ್ದು, ಆಗಸ್ಟ್‌ 15 ಇಲ್ಲವೇ 16ರಂದು ನಿಮ್ಮ ಖಾತೆಗೆ ಹಣ ಬರಲಿದೆ ಅಂತ ಸಿಎಂಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಶುಕ್ರವಾರ ಬಜೆಟ್‌ ಮಂಡನೆ ಮುಗಿಸಿದ ಬೆನ್ನಲೇ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ, ಈ ಬಜೆಟ್‌ ಐದು ಗ್ಯಾರಂಟಿಗಳು ಮತ್ತು ನಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ತಿಳಿಸಿದ್ದ ಭರವಸೆಗಳನ್ನು ಒಳಗೊಂಡಿದೆ. ಇದು ಗ್ಯಾರಂಟಿ ಬಜೆಟ್‌ …

Read More »

ಇದ್ದಕ್ಕಿದ್ದಂತೆ ಬಸದಿಯಿಂದ ಜೈನ ಮುನಿ‌ಯೊಬ್ಬರು ರಾತ್ರೋರಾತ್ರಿ ನಾಪತ್ತೆ

ಗಡಿ ಜಿಲ್ಲೆಯ ಜೈನ ಮುನಿ‌ಯೊಬ್ಬರು ರಾತ್ರೋರಾತ್ರಿ ನಾಪತ್ತೆಯಾಗಿದ್ದಾರೆ. ಇದ್ದಕ್ಕಿದ್ದಂತೆ ಬಸದಿಯಿಂದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಕಾಣೆ ಆಗಿರೋದು ಭಕ್ತರಲ್ಲಿ ಆತಂಕ ಸೃಷ್ಟಿಸಿದೆ. ಮಹಾರಾಜರನ್ನ ಹುಡುಕಿಕೊಡುವಂತೆ ಭಕ್ತರು ಈಗ ಬೆಳಗಾವಿ ಜಿಲ್ಲಾ ಪೊಲೀಸರ ಮೊರೆ ಹೋಗಿದ್ದಾರೆ.15 ವರ್ಷದಿಂದ ಬಸದಿಯಲ್ಲಿದ್ದ ಸಂತನ ಮಿಸ್ಸಿಂಗ್ ಕೇಸ್ ಬೆಳಗಾವಿ ಜಿಲ್ಲೆ ಜನರನ್ನ ಬೆಚ್ಚಿಬೀಳಿಸಿದೆ.   .ಹದಿಹರೆಯದ ಯುವಕ, ಯುವತಿಯರು ಮಿಸ್ಸಿಂಗ್ ಕೇಸ್ ಇತ್ತಿಚೆಗೆ ಸಾಮಾನ್ಯವಾಗಿದೆ. ಆದರೆ ಈಗ ಇಡೀ ಸಮಾಜವೇ ಆತಂಕ …

Read More »

ಪಿಂಚಣಿ ಉಪದಾನ ಪತ್ರಕ್ಕೆ 20 ಲಕ್ಷ ಲಂಚ ಕೇಳಿದ ಶಾಲಾ ಸಂಚಾಲಕಿ ಲೋಕಾಯುಕ್ತ ಬಲೆಗೆ

ಮಂಗಳೂರು: ವಯೋ ನಿವೃತ್ತಿ ಹೊಂದಲಿರುವ ಮುಖ್ಯ ಶಿಕ್ಷಕಿಗೆ ನಿವೃತ್ತಿ ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಲು 20 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಅನುದಾನಿತ ಶಾಲೆಯ ಸಂಚಾಲಕಿ ಐದು ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.   ಮಂಗಳೂರು ತಾಲೂಕಿನ ಬಜ್ಪೆ ಸುಂಕದಕಟ್ಟೆಯಲ್ಲಿರುವ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೋಭಾರಾಣಿ ಎಂಬುವರು ಶಿಕ್ಷಕಿ …

Read More »

ಮಾಜಿ ಸಿಎಂ ಉದ್ಧವ್​ ಠಾಕ್ರೆ ಬಣದ ಶಿವಸೇನೆಗೆ ಮತ್ತೊಂದು ಆಘಾತ

ಮುಂಬೈ: ಮಾಜಿ ಸಿಎಂ ಉದ್ಧವ್​ ಠಾಕ್ರೆ ಬಣದ ಶಿವಸೇನೆಗೆ ಮತ್ತೊಂದು ಆಘಾತ ಉಂಟಾಗಿದೆ. ಉದ್ಧವ್​ ಆಪ್ತ ಬಣದಲ್ಲಿದ್ದ ವಿಧಾನಪರಿಷತ್​ ಉಪಸಭಾಪತಿ, ಎಂಎಲ್​ಸಿ ನೀಲಂ ಗೊರ್ಹೆ ಅವರು ಸಿಎಂ ಏಕನಾಥ್​ ಶಿಂಧೆ ಅವರ ಬಣಕ್ಕೆ ಜಿಗಿಯಲಿದ್ದಾರೆ ಎಂದು ಹೇಳಲಾಗಿದೆ. ಕಳೆದ ತಿಂಗಳಷ್ಟೇ ಶಾಸಕಿ ಮನೀಶಾ ಕಾಯಂದೆ ಅವರು ಬಣ ತೊರೆದ ಬಳಿಕ ಇದು ಮತ್ತೊಬ್ಬ ನಾಯಕಿಯ ನಿರ್ಗಮನವಾಗುತ್ತಿರುವುದು ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ. ಶಿವಸೇನೆಯ ಸಿಎಂ ಏಕನಾಥ್​ ಶಿಂಧೆ ನೇತೃತ್ವದಲ್ಲಿ …

Read More »

ರಾಜ್ಯದ ಸಮಗ್ರ ಅಭಿವೃದ್ಧಿ ಕಲ್ಪನೆ ಇಲ್ಲದೇ, ತೆರಿಗೆ ಹೊರೆ ಇರುವ ಬಜೆಟ್:B.S.Y.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಪ್ರಸ್ತುತ ಸಾಲಿನ ಬಜೆಟ್, ರಾಜ್ಯದ ಸಮಗ್ರ ಅಭಿವೃದ್ಧಿ ಕಲ್ಪನೆ ಇಲ್ಲದೇ, ತೆರಿಗೆ ಹೊರೆ ಇರುವ ಬಜೆಟ್ ಆಗಿದೆ. 85000 ಕೋಟಿ ಸಾಲ ಮಾಡುತ್ತೇನೆ ಎಂದು ಹೇಳಿದ್ದು, ಈ ಸಾಲದ ಹೊರೆ ರಾಜ್ಯದ ಜನತೆಯ ಮೇಲೆ ಬೀಳುತ್ತದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.     ಬಜೆಟ್ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ತಮ್ಮ ಮೂರು …

Read More »

ರಾಜ್ಯದ ಬಜೆಟ್ ಬಿಯರ್ ದರ ಹೆಚ್ಚಳ, ಮದ್ಯವೂ ದುಬಾರಿ

ಬೆಂಗಳೂರು, ಜುಲೈ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಾರಿ ರಾಜ್ಯದ ಬಜೆಟ್ ಮಂಡಿಸುತ್ತಿದ್ದಾರೆ. 2023-2024ರಲ್ಲಿ 3,24,478 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಬೇಕಾದ ಸಂಪನ್ಮೂಲವನ್ನು ಕ್ರೂಢೀಕರಿಸಲು ಅಬಕಾರಿ ಸುಂಕವನ್ನು ಶೇಕಡಾ 20ರಷ್ಟು ಹೆಚ್ಚಿಸಿದ್ದು, ಮದ್ಯಪ್ರಿಯರಿಗೆ ಶಾಕ್ ಕೊಟ್ಟಿದ್ದಾರೆ.   ಭಾರತೀಯ ನಿರ್ಮಿತ ವಿದೇಶಿ ಮದ್ಯದ (ಐಎಂಎಫ್‌ಎಲ್) ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಶೇ 20 ರಷ್ಟು ಹೆಚ್ಚಿಸಲಾಗಿದೆ. ಬಿಯರ್‌ಗೆ, ಅಬಕಾರಿ ಸುಂಕವನ್ನು ಶೇಕಡಾ …

Read More »

ಗೃಹ ಲಕ್ಷ್ಮಿ ಯೋಜನೆ :ಮೂರು ದಿನಗಳಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾಹಿತಿ ಕೊಡುತ್ತೇನೆ ಹೆಬ್ಬಾಳ್ಕರ್

ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆ ಬಹಳ ಮುಂದೆ ಬಂದಿದೆ. ಮೂರು ದಿನಗಳಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾಹಿತಿ ಕೊಡುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಗೃಹ ಲಕ್ಷ್ಮಿ ಯೋಜನೆಗೆ ಪಡಿತರ ಕಾರ್ಡ್ ಕಡ್ಡಾಯ. ಯೋಜನೆಗೆ ಅರ್ಜಿ ಹಾಕಿದ ಬಳಿಕ ಸ್ವೀಕೃತಿ ಆದಾಗ ವಾಯ್ಸ್ ಮೆಸೇಜ್ ಬರುತ್ತದೆ. ಪ್ರತಿ ತಿಂಗಳು ಹಣ ಜಮೆ ಆದಾಗಲಾ ಮೆಸೇಜ್ ಬರುತ್ತದೆ ಎಂದರು. ಉಡುಪಿ ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ವಿಚಾರವಾಗಿ ಪ್ರತಿಕ್ರಿಯಿಸಿ, ಉಡುಪಿ …

Read More »