ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಭಾಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಿದ್ದಾರೆ. ಲೋಕಸಭಾ ವ್ಯವಹಾರಗಳ ಪಟ್ಟಿಯ ಪ್ರಕಾರ, ಸದನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆರಂಭವಾಗಲಿದೆ. ಸೀತಾರಾಮನ್ ಅವರು 2026-27ನೇ ಸಾಲಿನ ಭಾರತ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚದ ಬಜೆಟ್ ಮಂಡನೆ ಮಾಡಲಿದ್ದಾರೆ. ಲೋಕಸಭೆಯಲ್ಲಿ ಹಣಕಾಸು ಮಸೂದೆ 2026 ಅನ್ನು ಮಂಡಿಸಲು …
Read More »NCP ಬಣಗಳ ವಿಲೀನ ನಿರ್ಧಾರವನ್ನ ಅಜಿತ್ ಪವಾರ್ ಫೆ.12ಕ್ಕೆ ಪ್ರಕಟಿಸಬೇಕಿತ್ತು: ಶರದ್ ಪವಾರ್
ಮುಂಬೈ: ಕಳೆದ ನಾಲ್ಕು ತಿಂಗಳಿಂದ ಎನ್‌ಸಿಪಿ ಎರಡು ಬಣಗಳ ವಿಲೀನ ಬಗ್ಗೆ ಮಾತುಕತೆ ನಡೆದಿತ್ತು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ. ಜಯಂತ್ ಪಾಟೀಲ್ ಮತ್ತು ಅಜಿತ್ ಪವಾರ್ ನಡುವೆ ಎರಡು ಎನ್‌ಸಿಪಿ ಬಣಗಳ ವಿಲೀನದ ಕುರಿತು ಚರ್ಚೆಗಳು ನಡೆದಿದ್ದವು. ಸಕಾರಾತ್ಮಕ ದಿಕ್ಕಿನಲ್ಲಿ ಚರ್ಚೆಗಳು ಸಾಗುತ್ತಿವೆ. ಜನವರಿ 12 ರಂದು ಅಜಿತ್ ಪವಾರ್ ಬಣಗಳ ವಿಲೀನ ನಿರ್ಧಾರವನ್ನು ಪ್ರಕಟಿಸಬೇಕಿತ್ತು. ಅಷ್ಟರಲ್ಲಿ ಈ ದುರ್ಘಟನೆ ಆಗಿದೆ ಎಂದು ಹೇಳಿದ್ದಾರೆ. ಎರಡೂ …
Read More »ಬಜೆಟ್ನಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಂಡು ಬಂಡವಾಳ ವೆಚ್ಚ ಹೆಚ್ಚಿಸಬಹುದು: ಜೆಎಂ ಫೈನಾನ್ಷಿಯಲ್ ನಿರೀಕ್ಷೆ
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ಪ್ರಸ್ತುತಪಡಿಸುತ್ತಿರುವ ಬಜೆಟ್ 2026-27 ಬಗ್ಗೆ ನಿರೀಕ್ಷೆಗಳು ಹಲವಿವೆ. ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಹೂಡಿಕೆದಾರರು ಈ ಬಜೆಟ್ನಿಂದ ಏನು ನಿರೀಕ್ಷಿಸುತ್ತಾರೆ? ಆರ್ಥಿಕ ಬೆಳವಣಿಗೆಗೆ ನೀರೆರೆದು ಪೋಷಿಸಲು ಸರ್ಕಾರ ಯಾವ ಪ್ಲಾನ್ ಮಾಡಿದೆ? ವಿತ್ತೀಯ ಶಿಸ್ತು ಕಾಯ್ದುಕೊಳ್ಳುತ್ತಲೇ ಬಂಡವಾಳ ವೆಚ್ಚ ಹೆಚ್ಚಿಸಲು ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದು ಹೂಡಿಕೆದಾರರಿಗೆ ಇರುವ ಕುತೂಹಲ ಮತ್ತು ನಿರೀಕ್ಷೆ. ಕಳೆದ ಬಜೆಟ್ನಲ್ಲಿ ಸರ್ಕಾರವು ಬಂಡವಾಳ ವೆಚ್ಚಕ್ಕಿಂತ …
Read More »65 ಎಕರೆ ಅರಣ್ಯ ಭೂಮಿಯಲ್ಲಿ ಬೆಳೆದಿದ್ದ 1.80 ಲಕ್ಷ ಗಾಂಜಾ ಗಿಡಗಳನ್ನು ನಾಶಪಡಿಸಿದ ಭದ್ರತಾ ಪಡೆ
ಅಗರ್ತಲ: ತ್ರಿಪುರದ ಸೋನಮುರಾ ಉಪವಿಭಾಗದ ಸಂರಕ್ಷಿತ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ 65 ಎಕರೆಯಲ್ಲಿ ಬೆಳೆಸಲಾಗಿದ್ದ ಸುಮಾರು 1.80 ಲಕ್ಷ ಗಾಂಜಾ ಗಿಡಗಳನ್ನು ಭದ್ರತಾ ಪಡೆಗಳು ನಾಶಪಡಿಸಿವೆ. ಕಮಲಾನಗರ, ಕೃಷ್ಣಡೋಲಾ, ದುಲುಂಗಾ ಮತ್ತು ಬಿಜೋಯ್ ನಗರಗಳ ಅರಣ್ಯ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ದಾಳಿ ನಡೆಸಿವೆ. ಈ ವೇಳೆ 1.80 ಲಕ್ಷ ಪ್ರೌಢ ವ್ಯವಸ್ಥೆ ಗಾಂಜಾ ಸಸಿಗಳು ಪತ್ತೆಯಾಗಿದ್ದು ಅವುಗಳನ್ನು ನಾಶಪಡಿಸಲಾಗಿದೆ. ನಾಶಪಡಿಸಲಾದ ಗಾಂಜಾದ ಮೌಲ್ಯ 27 ಕೋಟಿ ರೂ. ಮೌಲ್ಯದ್ದು …
Read More »ಯುರೋಪಿಯನ್ ಒಕ್ಕೂಟದ ಜೊತೆಗೆ ಒಪ್ಪಂದ ಆತ್ಮವಿಶ್ವಾಸಿ ಭಾರತಕ್ಕೆ ಮೈಲುಗಲ್ಲು: ಮೋದಿ ಬಣ್ಣನೆ
ನವದೆಹಲಿ: ಭಾರತ-ಯುರೋಪಿಯನ್ ಯೂನಿಯನ್ ನಡುವೆ ಮುಕ್ತ ವಾಣಿಜ್ಯ ಒಪ್ಪಂದ ಜಾರಿಗೆ ಬಂದಿದ್ದು, ಇದು ‘ಆತ್ಮವಿಶ್ವಾಸಿ ಭಾರತಕ್ಕೆ ಮೈಲುಗಲ್ಲು’ ಎಂದು ಪ್ರಧಾನಿ ನರೇಂದ್ರ ಮೋದಿ ವರ್ಣಿಸಿದರು. ಭಾರತೀಯ ಉದ್ಯಮಗಳು ಈ ಅವಕಾಶವನ್ನು ಬಳಸಿಕೊಂಡು ಗುಣಮಟ್ಟದ ಉತ್ಪನ್ನಗಳನ್ನು ಯುರೋಪಿಯನ್ ಒಕ್ಕೂಟದ 27 ದೇಶಗಳಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು. ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ದಿನದಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹೊಸ ಮಾರುಕಟ್ಟೆ ತೆರೆದಿದ್ದು, ಭಾರತೀಯ ಉತ್ಪನ್ನಗಳ ಗುಣಮಟ್ಟ ಮತ್ತು ‘ಬ್ರ್ಯಾಂಡ್ ಇಂಡಿಯಾ’ವನ್ನು …
Read More »ತುಂಬಾ ಅಪಾಯಕಾರಿ ಪರಿಣಾಮಗಳಿಗೆ ಕಾರಣವಾಗಬಹುದು – ಜಾತಿ ಆಧಾರಿತ ತಾರತಮ್ಯದ ಯುಜಿಸಿ ನಿಯಮಗಳಿಗೆ ಸುಪ್ರೀಂ ತಡೆ
ನವದೆಹಲಿ: ತುಂಬಾ ಅಪಾಯಕಾರಿ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟು ಜಾತಿ ಆಧಾರಿತ ತಾರತಮ್ಯ ತಡೆಯುವುದಕ್ಕಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಹೊರಡಿಸಿರುವ ನಿಯಮಾವಳಿಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಈ ನಿಯಮಾವಳಿಗಳ ದೂರು ಪರಿಹಾರ ವ್ಯವಸ್ಥೆಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಹೊರಗಿಟ್ಟಿರುವುದು ತಾರತಮ್ಯ ಉಂಟು ಮಾಡುವಂತಿದೆ. ನಿಯಮಾವಳಿಗಳು ಮುಖ್ಯವಾಗಿ ಎಸ್‌ಸಿ/ಎಸ್‌ಟಿ, ಒಬಿಸಿ, ಆರ್ಥಿಕವಾಗಿ ಹಿಂದುಳಿದವರು ಮತ್ತು ಅಂಗವೈಕಲ್ಯ ಹೊಂದಿರುವವರ ರಕ್ಷಣೆಗೆ ನಿಂತಿದ್ದು ಉಳಿದ ವರ್ಗಗಳಿಗೆ ಸಾಂಸ್ಥಿಕ ರಕ್ಷಣೆ ನೀಡುತ್ತಿಲ್ಲ ಎಂದು …
Read More »ವಿಬಿ-ಜಿ ರಾಮ್ ಜಿ ಕಾನೂನು ಮೂಲಕ ಗ್ರಾಮೀಣ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ: ರಾಷ್ಟ್ರಪತಿ ಮುರ್ಮು ಶ್ಲಾಘನೆ
ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ರು. ಆಪರೇಷನ್ ಸಿಂಧೂರ ಪ್ರಸ್ತಾಪಿಸಿ, ಸೈನಿಕರ ಸಾಧನೆ ಹೊಗಳಿದ್ರು. ದಲಿತರು, ಹಿಂದುಳಿದವರು, ಆದಿವಾಸಿಗಳು ಸೇರಿದಂತೆ ಪ್ರತಿಯೊಂದು ಸಮುದಾಯದ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನ ಸ್ಮರಿಸಿದ್ದಾರೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತಾರತಮ್ಯವಿಲ್ಲದೇ ಸಮಾನ ಹಕ್ಕುಗಳನ್ನು ನೀಡಿದೆ. ಸಾಮಾಜಿಕ ನ್ಯಾಯವು …
Read More »ದಟ್ಟ ಮಂಜಿನಿಂದಾಗಿ ವಿಮಾನ ಪತನ; ವಾಚ್, ಬಟ್ಟೆಯಿಂದ ಅಜಿತ್ ಪವಾರ್ ಗುರುತು ಪತ್ತೆ
ಮುಂಬೈ: ವಿಮಾನ ಪತನಗೊಂಡು ಮೃತಪಟ್ಟ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ (Ajit Pawar) ಅವರ ಮೃತದೇಹವನ್ನು ವಾಚ್ ಮತ್ತು ಬಟ್ಟೆಯಿಂದ ಗುರುತಿಸಲಾಗಿದೆ. ಪವಾರ್ ಇದ್ದ ವಿಮಾನ ಬುಧವಾರ ಇಳಿಯಲು ಪ್ರಯತ್ನಿಸಿದಾಗ ಬಾರಾಮತಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆ ಇತ್ತು. ಪೈಲಟ್‌ಗೆ ಸರಿಯಾದ ಗೋಚರತೆ ಇಲ್ಲದೇ ವಿಮಾನ ಪತನವಾಗಿರಬಹುದು ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. VSR ವೆಂಚರ್ಸ್ ನಿರ್ವಹಿಸುತ್ತಿದ್ದ ಬೊಂಬಾರ್ಡಿಯರ್ ಲಿಯರ್ಜೆಟ್-45, ವಿಮಾನ ನಿಲ್ದಾಣದದಲ್ಲಿ ಪತನಗೊಂಡು, ಅದರಲ್ಲಿದ್ದ …
Read More »ಅಜಿತ್ ಪವಾರ್ ಮಹಾರಾಷ್ಟ್ರದ ಜನರ ಸೇವೆಗೆ ಮುಂಚೂಣಿಯಲ್ಲಿದ್ದರು: ಮೋದಿ ಸಂತಾಪ
ನವದೆಹಲಿ: ಅಜಿತ್ ಪವಾರ್ ಮಹಾರಾಷ್ಟ್ರದ ಜನರ ಸೇವೆಗೆ ಸದಾ ಮುಂಚೂಣಿಯಲ್ಲಿದ್ದರು ಎಂದು ಮಹಾರಾಷ್ಟ್ರ ಡಿಸಿಎಂ ದುರ್ಮರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮಹಾರಾಷ್ಟ್ರದ ಬಾರಮತಿಯಲ್ಲಿ ನಡೆದ ವಿಮಾನ ಪತನದಲ್ಲಿ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಐವರು ದುರ್ಮರಣ ಹೊಂದಿದ್ದಾರೆ. ದುರಂತ ಹಿನ್ನೆಲೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮೋದಿ, ಅಜಿತ್ ಪವಾರ್ ನಿಧನಕ್ಕೆ ಬೇಸರಿಸಿದ್ದಾರೆ. ಅಜಿತ್ ಪವಾರ್ ಜನ ನಾಯಕರಾಗಿದ್ದರು. ತಳಮಟ್ಟದ ಸಂಪರ್ಕ ಹೊಂದಿದ್ದರು. ಕಠಿಣ ಪರಿಶ್ರಮ ವ್ಯಕ್ತಿತ್ವ …
Read More »ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಶುರು
ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಲಿದ್ದಾರೆ. ಮೊದಲ ಹಂತ ಜನವರಿ 28ರಿಂದ ಫೆಬ್ರವರಿ 13 ರವರೆಗೆ ಮತ್ತು ಎರಡನೇ ಹಂತ ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ಅಧಿವೇಶನ ನಡೆಯಲಿದೆ. ಜನವರಿ 31 ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು. ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. …
Read More »
Laxmi News 24×7