ಚಿಕ್ಕೋಡಿ(ಬೆಳಗಾವಿ): ಸೇವಾ ಖಾಯಮಾತಿಗಾಗಿ ಒತ್ತಾಯಿಸಿ ಕಳೆದ 28 ದಿನಗಳಿಂದ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿದಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಸೆಳೆಯಲು ರಕ್ತದಾನ ಮಾಡಿ ವಿನೂತನವಾಗಿ ಚಿಕ್ಕೋಡಿಯಲ್ಲಿ ಪ್ರತಿಭಟನೆ ನಡೆಸಿದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿನಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಆಯಾ ತಾಲೂಕು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ರಾಜ್ಯಾದ್ಯಂತ 14 ಸಾವಿರ ಅತಿಥಿ …
Read More »ಸೂರಜ್ ರೇವಣ್ಣಗೆ ಬಿಗ್ ರಿಲೀಫ್: ಎಂಎಲ್ಸಿ ಸ್ಥಾನ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು: ಸೂರಜ್ ರೇವಣ್ಣ ಅವರ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಅನೂರ್ಜಿತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿ ಆದೇಶಿಸಿದೆ. ಡಾ.ಸೂರಜ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಹೊಳೆನರಸೀಪುರದ ಕಾಮಸಮುದ್ರ ಗ್ರಾಮದ ಎಲ್.ಹನುಮೇಗೌಡ ಅವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಹಾಸನ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ …
Read More »ವ್ಯಕ್ತಿಯ ಹೊಟ್ಟೆಯಲ್ಲಿತ್ತು 99 ಕೊಕೇನ್ ಕ್ಯಾಪ್ಸುಲ್!
Cocaine smuggling: ಬೆಂಗಳೂರು ಡಿಆರ್‌ಐ ಅಧಿಕಾರಿಗಳು ಅತಿದೊಡ್ಡ ಕೊಕೇನ್ ಕಳ್ಳಸಾಗಣೆ ಭೇದಿಸಿದ್ದು, ಕಳ್ಳಸಾಗಾಣಿಕೆದಾರನ ಹೊಟ್ಟೆಯಲ್ಲಿದ್ದ 99 ಕೊಕೇನ್ ಕ್ಯಾಪ್ಸುಲ್ ವಶಕ್ಕೆ ಪಡೆದಿದ್ದಾರೆ. ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣ ಮೂಲಕ ಸುಮಾರು 20 ಕೋಟಿ ರೂಪಾಯಿ ಮೌಲ್ಯದ 2 ಕೆ.ಜಿ ಕೋಕೆನ್ ಕ್ಯಾಪ್ಸುಲ್ ಸಾಗಿಸುತ್ತಿದ್ದ ನೈಜಿರಿಯಾ ಮೂಲದ ಪ್ರಯಾಣಿಕನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಬೆಂಗಳೂರು ಘಟಕದ (Directorate of Revenue Intelligence) ಅಧಿಕಾರಿಗಳು ಬಂಧಿಸಿದ್ದಾರೆ. ಫ್ಲೈ ಇಥಿಯೋಪಿಯಾ ವಿಮಾನದಲ್ಲಿ …
Read More »ಸೈಕಲ್ ಮೂಲಕ ದೇಶ ಪರ್ಯಟನೆ: ಹಾವೇರಿಗೆ ಆಗಮಿಸಿದ ಯುಪಿ ಯುವಕ
ಹಾವೇರಿ: ಪರಿಸರ ಸಂರಕ್ಷಣೆಗಾಗಿ ಉತ್ತರ ಪ್ರದೇಶ ಇಟಾವಾ ನಗರದ ರಾಬಿನಸಿಂಗ್ ಸೈಕಲ್ ಮೇಲೆ ದೇಶ ಪರ್ಯಟನೆ ಕೈಗೊಂಡಿದ್ದಾರೆ. 2022 ಆಕ್ಟೋಬರ್ 6 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿರುವ ಇವರ ಸೈಕಲ್ ಯಾತ್ರೆ ಈಗಾಗಲೇ 26 ಸಾವಿರ ಕಿಲೋ ಮೀಟರ್ ಪ್ರವಾಸ ಪೂರ್ಣಗೊಂಡಿದೆ. ಸೈಕಲ್ ಜಾಥಾ ಆರಂಭಿಸಿ ಇಂದಿಗೆ 440 ದಿನವಾಗಿದ್ದು, ಈ ದಿನ ಹಾವೇರಿಗೆ ಆಗಮಿಸಿದ್ದಕ್ಕೆ ರಾಬಿನಸಿಂಗ್ ಸಂತಸ ವ್ಯಕ್ತಪಡಿಸಿದರು. ತಮಿಳನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, …
Read More »ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಮಂಗಳೂರು: ಹಿರಿಯ ಚಿಂತಕ, ಲೇಖಕ, ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಇವರ ‘ಮಹಾಭಾರತ ಅನುಸಂಧಾನದ ಭಾರತಯಾತ್ರೆ’ ಎಂಬ ಪ್ರಬಂಧ ಕೃತಿಗೆ ಪ್ರಶಸ್ತಿ ಸಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದವರಾದ ಲಕ್ಷ್ಮೀಶ ತೋಳ್ಪಾಡಿಯವರದ್ದು ಸಂತನಂತಹ ಬದುಕು. ಸದಾ ಆಧ್ಯಾತ್ಮಿಕ ಚಿಂತನೆ ಹೊಂದಿರುವವರು. ಜೊತೆಗೊಂದಿಷ್ಟು ಬರಹ, ಮಾತು, ಮೌನ ಎಲ್ಲವನ್ನೂ ಒಳಗಿಟ್ಟುಕೊಂಡವರು. ಇವರು ಬರೆದಿರುವ ಅನೇಕ ಲೇಖನಗಳು ನಾಡಿನ …
Read More »ರಾಜ್ಯ ಗಿಗ್ ಕಾರ್ಮಿಕರು ಮತ್ತು ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಜೀವ ವಿಮೆ ಹಾಗೂ ಅಪಘಾತ ಪರಿಹಾರ ಯೋಜನೆ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ಜೀವ ವಿಮೆ ಹಾಗೂ ಅಪಘಾತ ಪರಿಹಾರ ಯೋಜನೆ ಮತ್ತು ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಯ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ಗಿಗ್ ಕಾರ್ಮಿಕರುಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ, ಎರಡು ಲಕ್ಷ ರೂ.ಗಳ ಜೀವ ವಿಮಾ ಸೌಲಭ್ಯ ಹಾಗೂ ಎರಡು ಲಕ್ಷ ರೂ.ಗಳ ಅಪಘಾತ ವಿಮಾ ಸೌಲಭ್ಯ ಸೇರಿದಂತೆ …
Read More »ಪರೀಕ್ಷಾ ಅಕ್ರಮ: ಆರ್.ಡಿ.ಪಾಟೀಲ್ ಸೇರಿ 12 ಆರೋಪಿಗಳ ಮೇಲೆ ಕೋಕಾ ಆಯಕ್ಟ್‌ನಡಿ ಪ್ರಕರಣ
ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಸೇರಿ 12 ಜನ ಆರೋಪಿಗಳ ಮೇಲೆ ಕೋಕಾ ಆಯಕ್ಟ್ ಜಾರಿಗೊಳಿಸಲಾಗಿದೆ. ಪದೇ ಪದೇ ಒಂದೇ ರೀತಿಯ ಅಪರಾಧ ಕೃತ್ಯ ಮುಂದುವರೆಸುವವರ ವಿರುದ್ದ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಕೋಕಾ ಅಸ್ತ್ರ ಪ್ರಯೋಗಿಸಲಾಗುತ್ತದೆ. ಅಶೋಕ ನಗರ ಠಾಣೆ ವ್ಯಾಪ್ತಿಯ ಖಾಸಗಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿದ …
Read More »ಬೆಳಗಾವಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಿಎಂ ಘೋಷಣೆ
ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುತ್ತದೆ. ದಿನ ದಿನಕ್ಕೆ ಕುಂದಾನಗರಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಅದಕ್ಕೆ ತಕ್ಕುದಾಗಿ ಬೃಹತ್ ಕೈಗಾರಿಕೆಗಳು ಇಲ್ಲಿಲ್ಲ. ಪರಿಣಾಮ ಜಿಲ್ಲೆಯ ಯುವಕರು ಉದ್ಯೋಗ ಅರಸಿ ಬೆಂಗಳೂರು, ಮುಂಬೈ, ಪುಣೆ ಸೇರಿ ಇನ್ನಿತರ ಕಡೆ ವಲಸೆ ಹೋಗುವ ದುಸ್ಥಿತಿಯಿದೆ. ಹಾಗಾಗಿ, ಬೆಳಗಾವಿಯಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಫೌಂಡ್ರಿ ಪಾರ್ಕ್ ನಿರ್ಮಿಸುವಂತೆ ಆಗ್ರಹಿಸಿದ್ದ ಈ ಭಾಗದ ಉದ್ಯಮಿಗಳಿಗೆ ಸಾಥ್ ಕೊಟ್ಟಿತ್ತು. ಫೈವ್ ಸ್ಟಾರ್ ಇಂಡಸ್ಟ್ರೀಸ್ …
Read More »ಭೂತಾಯಿಯ ರಕ್ಷಣೆಗೆ 12, 13ರಂದು ಕೊಲ್ಹಾಪುರ ಜಿಲ್ಲೆಯ ಕನ್ಹೇರಿ ಮಠದ ಆವರಣದಲ್ಲಿ ಸಂತರ-ರೈತರ ಸಮಾವೇಶ
ಚಿಕ್ಕೋಡಿ: ಮನುಷ್ಯನ ಜೀವನ ಶೈಲಿಯ ಬದಲಾವಣೆಯಿಂದ ನಿಸರ್ಗ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಮಣ್ಣು, ಗಾಳಿ ಹಾಗು ನೀರಿನಲ್ಲಿ ರಾಸಾಯನಿಕ ಸೇರಿಕೊಂಡು ಹೊಸ ಸಮಸ್ಯೆಗಳಿಗೆ ನಿಸರ್ಗ ಜನ್ಮ ನೀಡುತ್ತಿದೆ. ಹೀಗಾಗಿ ಮಣ್ಣು, ನೀರು, ಗಾಳಿ, ಇಂಧನ ರಕ್ಷಣೆಗೆ ಜನವರಿ 12, 13ರಂದು ಭೂತಾಯಿಯ ರಕ್ಷಣೆಗೆ ಸಂತರ-ರೈತರ ಮಹಾಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ …
Read More »ಕನ್ನಡ ಧ್ವಜ ಹಾಕಿದ್ದಕ್ಕೆ ದುಷ್ಕರ್ಮಿಗಳು ಯುವಕರಿಗೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಚಿಕ್ಕೋಡಿ(ಬೆಳಗಾವಿ): ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಇಬ್ಬರು ಯುವಕರಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದೆ. ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಕಲಿ ಗ್ರಾಮದ ಬಸವರಾಜ ಪಾಟೀಲ, ಹಾಗೂ ಶುಭಂ ಕಿವುಂಡಾ ಎಂಬವರ ಮೇಲೆ ಹಲ್ಲೆಯಾಗಿದೆ. ಅಂಗತ ಕರಮೆ, ಅನಿಕೇತ್ ಕರಮೆ, ಶಾಹು ಮಗದುಮ್ ಸೇರಿದಂತೆ ಹಲವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಂಕಲಿ ಗ್ರಾಮದಲ್ಲಿ ಕೆಲವು ಯುವಕರು ಶಿವಾಜಿ …
Read More »