Breaking News

ರಾಷ್ಟ್ರೀಯ

ಜುಲೈನಲ್ಲಿ ಸಚಿವ ಸಂಪುಟ ಪುನರ್ ರಚನೆ: ಮಂತ್ರಿ ಸ್ಥಾನ ಸಿಗುವ ಬಗ್ಗೆ ಸುಳಿವು ನೀಡಿದ ಬಸವರಾಜ್ ರಾಯರೆಡ್ಡಿ

ಕೊಪ್ಪಳ, ಜ.6: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಒಂದು ವರ್ಷದ ನಂತರ ಸರ್ಕಾರ ಪತನವಾಗಲಿದೆ, ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ವಿಪಕ್ಷ ಬಿಜೆಪಿ ಹೇಳುತ್ತಲೇ ಇದೆ. ಈ ನಡುವೆ ಮಂತ್ರಿಗಿರಿಗಾಗಿ ಫೈಟ್ ಮಾಡುತ್ತಿದ್ದ ಯಲಬುರ್ಗಾ ಶಾಸಕ, ಸಿಎಂ ಆರ್ಥಿಕ ಸಲಹೆಗಾರಬಸವರಾಜ ರಾಯರೆಡ್ಡಿ(Basavaraj Rayareddy) ಅವರು ಜುಲೈ ತಿಂಗಳಲ್ಲಿ ಸಚಿವ ಸಂಪುಟ ಪುನರ್​ರಚನೆಯಾಗುವ ಬಗ್ಗೆ ಸುಳಿವು ನೀಡಿದ್ದು, ಸಚಿವ ಸ್ಥಾನ ಸಿಗುವುದಾಗಿ ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆ …

Read More »

ರಾಮ ಮಂದಿರ ನಿರ್ಮಾಣಕ್ಕೆ 11 ಕೋಟಿ ದೇಣಿಗೆ ನೀಡಿದ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ

ಮುಂಬೈ: ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ರಾಮಮಂದಿರದ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಅಲ್ಲಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶನಿವಾರ ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣ ಕಾರ್ಯಕ್ಕೆ 11 ಕೋಟಿ ರೂಪಾಯಿ ದೇಣಿಗೆ ನೀಡಿದೆ.   ಪಕ್ಷದ ಸಂಸದ ಶ್ರೀಕಾಂತ್ ಶಿಂಧೆ, ಮಹಾರಾಷ್ಟ್ರ ಕೈಗಾರಿಕಾ ಸಚಿವ ಉದಯ್ ಸಮಂತ್, ಪಕ್ಷದ ವಕ್ತಾರರಾದ ನರೇಶ್ ಮಾಸ್ಕೆ, ಆಶಿಶ್ ಕುಲಕರ್ಣಿ …

Read More »

ಕರಸೇವಕ ಶ್ರೀಕಾಂತ ಪೂಜಾರಿ ಜೈಲಿನಿಂದ ಬಿಡುಗಡೆ

ಹುಬ್ಬಳ್ಳಿ: ಮೂವತ್ತು ವರ್ಷದ ಹಿಂದಿನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕರಸೇವಕ,ಆಟೋ ಚಾಲಕ ಶ್ರೀಕಾಂತ ಪೂಜಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶುಕ್ರವಾರ ನ್ಯಾಯಾಲಯವು ಷರತ್ತುಬದ್ದ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಗೊಂಡಿದ್ದಾರೆ‌. ಇಲ್ಲಿನ ಉಪಕಾರಾಗೃಹದಿಂದ ಬಿಡುಗಡೆಗೊಳ್ಳುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಶ್ರೀರಾಮ ಕೀ ಜೈ ಎಂದು ಘೋಷಣೆ ಕೂಗಿದರು. ಹಾರ ಹಾಕಿ ಸಹಿ ತಿನ್ನಿಸಿ ಬರಮಾಡಿಕೊಂಡರು‌. ಬಿಡುಗಡೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಶಕಗಳ ಹಿಂದಿನ ಪ್ರಕರವಣನ್ನು ಈ ಸಂದರ್ಭದಲ್ಲಿ ನನ್ನ ಬಂಧಿಸಿದ್ದಾರೆ‌. ನನಗೆ …

Read More »

ಕಲ್ಯಾಣ ಮಂಟಪದಲ್ಲಿ ಕಳ್ಳತನ! ಆರು ಗಂಟೆಯಲ್ಲೇ ಕಳ್ಳನನ್ನು ಹಿಡಿದ ಬೆಳಗಾವಿ ಪೊಲೀಸರು

ಅಂದಹಾಗೆ ಆ ವ್ಯಾನಿಟಿ ಬ್ಯಾಗಿನಲ್ಲಿ 3.5 ಲಕ್ಷದ ಚಿನ್ನಾಭರಣ, 3.5 ಸಾವಿರ ನಗದು ಇತ್ತು. ಇದನ್ನ ಪತ್ತೆಹಚ್ಚಲು ಟೀಮ್ ಮಾಡಿಕೊಂಡ ಮಾಳಮಾರುತಿ ಠಾಣೆ ಪೊಲೀಸರು ಘಟನೆ ನಡೆದ 6 ಗಂಟೆಯಲ್ಲಿ ಸಿಸಿಟಿವಿಯಲ್ಲಿನ ಗುರುತು ಆಧರಿಸಿ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿ ಇಮ್ತಿಯಾಜ್ ಹುಬ್ಳಿವಾಲೆ ನನ್ನು ಅರೆಸ್ಟ್ ಮಾಡಿ ಹಿಂಡಲಗಾ ಜೈಲಿಗಟ್ಟಿದ್ದಾರೆ. ಆ ಕಲ್ಯಾಣ ಮಂಟಪದಲ್ಲಿ ಅದ್ದೂರಿ ಮದುವೆ ನಡೆದಿತ್ತು. ಮದುವೆಗೆ ಬಂದ ಬಂಧುಗಳು ವಧು ವರರಿಗೆ ಶುಭ ಹಾರೈಸಿ, ಊಟದ ಹಾಲ್ …

Read More »

ಶಿರಸಿ‌- ಮೈಸೂರಿಗೆ ನೂತನ ಸ್ಲೀಪರ್ ಬಸ್

ಶಿರಸಿ: ಶಿರಸಿ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ಶಿರಸಿ ಸೊರಬ ಮೈಸೂರು ರಾಜ ಹಂಸ ಸಾರಿಗೆ ಬದಲಿಗೆ ಸ್ಲೀಪರ್ ಕೋಚ್ ಬಸ್ ಗೆ ಶನಿವಾರ ಚಾಲನೆ ನೀಡಲಾಯಿತು. ಶಾಸಕ ಭೀಮಣ್ಣ‌ ನಾಯ್ಕ ಅವರು ಶಿರಸಿ‌ ಸೊರಬ ಮೈಸೂರು ಹಾಗೂ ಶಿರಸಿ ಸೊರಬ ಬೆಂಗಳೂರು ಸ್ಲೀಪರ್ ಬಸ್ಸಿಗೆ ಚಾಲನೆ ನೀಡಿ, ಶಿರಸಿಗೆ ಇನ್ನಷ್ಟು ಹೊಸ ಬಸ್ಸುಗಳು ಬರಲಿವೆ ಎಂದರು.   ಹುಬ್ಬಳ್ಳಿ, ಮಣಿಪಾಲ,‌ ಮಡಗಾಂವ್ ಗೆ ರಾಜಹಂಸ ಸಾರಿಗೆ‌ ಕೂಡ ಬಿಡಲಿದ್ದೇವೆ. ಜಿಲ್ಲೆಗೆ …

Read More »

ಮಹಾರಾಷ್ಟ್ರ: ಪಾಲ್ಘರ್‌ನಲ್ಲಿ 4.1 ತೀವ್ರತೆಯ ಭೂಕಂಪನ

ಮಹಾರಾಷ್ಟ್ರದ ಕರಾವಳಿ ಪಾಲ್ಘರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 4.1 ತೀವ್ರತೆಯ ಪ್ರಬಲ ಭೂಕಂಪನ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಲ್ಘರ್: ಮಹಾರಾಷ್ಟ್ರದ ಕರಾವಳಿ ಪಾಲ್ಘರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 4.1 ತೀವ್ರತೆಯ ಪ್ರಬಲ ಭೂಕಂಪನ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾತ್ರಿ 9.52ಕ್ಕೆ ಕರಾವಳಿಯಿಂದ 10 ಕಿ.ಮೀ ಆಳದಲ್ಲಿ ಕಂಪನ ಕೇಂದ್ರಿಕೃತವಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿವೇಕಾನಂದ ಕದಂ ಮಾಹಿತಿ ನೀಡಿದ್ದಾರೆ. ಭೂಕಂಪನದಿಂದ ಯಾವುದೇ ಪ್ರಾಣಹಾನಿ ಅಥವಾ …

Read More »

ಸ್ಟಾರ್ ನಟ ಸೇರಿ ಚಿತ್ರತಂಡ ಅವಧಿ ಮೀರಿ ಪಬ್ ನಲ್ಲಿ ಪಾರ್ಟಿ?: ಕೊನೆಗೂ ಪೊಲೀಸರಿಂದ ಎಫ್‌ಐಆರ್ ದಾಖಲು!

ಅವಧಿ ಮೀರಿ ಬೆಳಗಿನ ಜಾವದವರೆಗೆ ಸ್ಟಾರ್ ನಟ ಮತ್ತು ಅವರ ಸ್ನೇಹಿತರ ಬಳಗ, ಚಿತ್ರತಂಡ ಬೆಂಗಳೂರಿನ ಪಬ್ ವೊಂದರಲ್ಲಿ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ಪಬ್​ (Pub) ಮಾಲೀಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಅವಧಿ ಮೀರಿ ಬೆಳಗಿನ ಜಾವದವರೆಗೆ ಸ್ಟಾರ್ ನಟ ಮತ್ತು ಅವರ ಸ್ನೇಹಿತರ ಬಳಗ, ಚಿತ್ರತಂಡ ಬೆಂಗಳೂರಿನ ಪಬ್ ವೊಂದರಲ್ಲಿ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ಪಬ್​ (Pub) ಮಾಲೀಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂದು …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಎಂ ಚಂದರಗಿ ಗ್ರಾಮದಲ್ಲಿ ಶ್ರೀ ಕೆಂಪಯ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ …

Read More »

ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ

 ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಂಭವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ 12 ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಜನವರಿ 06 ರಂದು ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ …

Read More »

ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್​ ಬೆದರಿಕೆ

ಬೆಂಗಳೂರು, ಜನವರಿ 06: ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ( Visvesvaraya Museum ) ಇ-ಮೇಲ್​ ಮೂಲಕಬಾಂಬ್ ಬೆದರಿಕೆ( Bomb threat ) ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ( Cubbon Park Police Station ) ಇ-ಮೇಲೆ ಬೆದರಿಕೆ ಸಂದೇಶ ಕಳಿಸಿದ್ದ ಕಿಡಿಗೇಡಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ.   ಶುಕ್ರವಾರ (ಜ.06) ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇ-ಮೇಲ್​ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಮ್ಯೂಸಿಯಂನಲ್ಲಿ ಹಲವು ಸ್ಪೋಟಕಗಳನ್ನ ಬಚ್ಚಿಡಲಾಗಿದೆ, ಬೆಳಗ್ಗೆ ಎಲ್ಲವೂ ಸ್ಪೋಟಗೊಳ್ಳುತ್ತವೆ ಎಂದು’Morgue999lol’ ಎಂಬ ಐಡಿ …

Read More »