ಗೋಕಾಕ: ತಾಲ್ಲೂಕಿನ ಹಿರೇನಂದಿ ಕ್ರಾಸ್ ಬಳಿ ರಸ್ತೆ ಮೇಲೆ ನಿಂತಿದ್ದ ಕಬ್ಬು ಹೇರಿದ ಟ್ರ್ಯಾಕ್ಟರ್‌ಗೆ ಟೆಂಪೊ ಟ್ರಾವಲರ್ ಡಿಕ್ಕಿ ಹೊಡೆದ ಪರಿಣಾಮ ಟೆಂಪೊದಲ್ಲಿದ್ದ 13 ಪೊಲೀಸ್ ಸಿಬ್ಬಂದಿ ಹಾಗೂ ಚಾಲಕ ಗಾಯಗೊಂಡ ಘಟನೆ ಸೋಮವಾರ ನಸುಕಿನಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡ ದಾವಣೆಗೆರೆ ಜಿಲ್ಲೆಯ ಹೊನ್ನಾಳಿಯ ಕಡಬಕಟ್ಟಿ ಗ್ರಾಮದ ಅಣ್ಣಪ್ಪ, ಕೊಪ್ಪಳ ಜಿಲ್ಲೆ ಕನಕಗಿರಿಯ ಸೋಮನಾಥ ನಿಂಗಪ್ಪ ಕುಂಬಾರ, ಶಿವಮೊಗ್ಗ ಜಿಲ್ಲೆಯ ಸೊರಬದ ಸುಮಗಿ ಗ್ರಾಮದ ರಘು ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. …
Read More »ಪಂಚಮಸಾಲಿ 2ಎ ಮೀಸಲಾತಿ ಹೋರಾಟ ನಿಲ್ಲಿಸುವಂತೆ ಮಂತ್ರಿಯೊಬ್ಬ 10 ಕೋಟಿ ರೂ. ಆಮಿಶವೊಡ್ಡಿದ್ದ: ಬಸನಗೌಡ ಪಾಟೀಲ್ ಯತ್ನಾಳ್
ಶಿವಮೊಗ್ಗ:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ (Panchamasali 2A reservation protest) ಪುನಃ ಶುರುವಾಗಿದೆ. ಸಮುದಾಯದವರು ಶಿವಮೊಗ್ಗದಲ್ಲಿ ಕೂಡಲಸಂಗಮ ಮಠಾಧೀಶ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ (Basava Jaya Mruthyunjaya Swamy) ನೇತೃತ್ವದಲ್ಲಿ ನಗರದ ಶಿವಪ್ದ ನಾಯಕ್ ವೃತ್ತದಿಂದ ಗೋಪಿವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಚೌಕಿಮಠದಲ್ಲಿ ಜಯಮೃತ್ಯುಂಜಯ ಸ್ವಾಮೀಜಿಯವರು ಲಿಂಗ ಪೂಜೆ ನೆರವೇರಿಸಿದ ಬಳಿಕ ಪ್ರತಿಭಟನೆ ಯಲ್ಲಿ ಭಾಗಿಯಾಗಿರುವ ಶಾಸಕ ಬಸನನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮಾತಾಡಿ, ಪಂಚಮಸಾಲಿ ಸಮಾಜದ ಹೋರಾಟವನ್ನು ಮೊಟಕುಗೊಳಿಸಲು …
Read More »ರಾಯಚೂರು: ವ್ಯಕ್ತಿ ನಾಪತ್ತೆ, 45 ದಿನದ ಬಳಿಕ ಬೆಟ್ಟದಲ್ಲಿ ಬಿದ್ದಿತ್ತು ಆತನ ಮುಂಡ,
ಮಂಗಳವಾರ : ಆತನ ಅಸ್ಥಿಪಂಜರ (Skeleton) ಪತ್ತೆಯಾಗಿದೆ. ಕೊರ್ತಕುಂದ ಗ್ರಾಮದ ರಸೂಲ್ ಸಾಬ್ (45) ಅನುಮಾನಾಸ್ಪದವಾಗಿ ಮೃತಪಟ್ಟಿರುವ ವ್ಯಕ್ತಿ. 45 ದಿನಗಳ ಹಿಂದೆ ಹೊಲಕ್ಕೆ ಹೋದ ರಸೂಲ್ ಸಾಬ್ ಇದ್ದಕ್ಕಿದಂತೆ ನಾಪತ್ತೆಯಾಗಿದ್ದನು. ರಸೂಲ್ಗಾಗಿ ಕುಟುಂಬಸ್ಥರು 20 ಕ್ಕೂ ಹೆಚ್ಚು ಹಳ್ಳಿಗಳಲ್ಲಿ, ದೇವಸ್ಥಾನ, ದರ್ಗಾಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹುಡುಕಾಡಿದರೂ ರಸೂಲ್ ಸಿಗಲ್ಲಿ. ಕೊನೆಗೆ ಕುಟುಂಬಸ್ಥರು ಕೈಚೆಲ್ಲಿ, ಪೊಲೀಸರಿಗೆ (Police) ದೂರು ನೀಡದೆ ಸುಮ್ಮನಾದರು. ಇದೆ ಫೆಬ್ರವರಿ 11 ರಂದು ಕೊರ್ತಕುಂದ ಹೊರಭಾಗದ …
Read More »ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 1 ಕೋಟಿ ರೂ ಅಪಘಾತ ವಿಮಾ ಪರಿಹಾರ
ಬೆಂಗಳೂರು, ಫೆಬ್ರವರಿ 14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation)ವು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟ ಅಥವಾ ಅಂಗನ್ಯೂನತೆಗೆ ಒಳಗಾದಲ್ಲಿ 1 ಕೋಟಿ ರೂ. ಅಪಘಾತ ವಿಮಾ ಪರಿಹಾರ ಒದಗಿಸುವ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ …
Read More »ಶಾಸಕ ಗೋಪಾಲಯ್ಯಗೆ ಬೆದರಿಕೆ ಕೇಸ್: ಪದ್ಮರಾಜ್ಗೆ ಜಾಮೀನು, ಅಶೋಕ್ ವಿರುದ್ಧ ಕೇಳಿಬಂತು ಗಂಭೀರ ಆರೋಪ
ಬೆಂಗಳೂರು, ಮಾಜಿ ಕಾರ್ಪೊರೇಟರ್ ಪದ್ಮರಾಜ್ರಿಂದ ಶಾಸಕ ಕೆ.ಗೋಪಾಲಯ್ಯ(K Gopalaiah)ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 39ನೇ ಎಸಿಎಂಎಂ ಕೋರ್ಟ್ನಿಂದ ಪದ್ಮರಾಜ್ಗೆ ಜಾಮೀನು ಮಂಜೂರು ಮಾಡಲಾಗಿದೆ. ಈ ಕುರಿತಾಗಿ ಮಾತನಾಡಿರುವ ಪದ್ಮರಾಜ್, 2010 ರಲ್ಲಿ ಬಿಜೆಪಿ ನಾಯಕರ ಆರ್. ಅಶೋಕ್, ನನ್ನ ಮೇಯರ್ ಮಾಡುತ್ತೇನೆ ಅಂತ ಒಂದು ಕೋಟಿ ರೂ. ಹಣ ತೆಗೆದುಕೊಂಡರು. ಇವತ್ತಿಗೂ ಮೇಯರ್ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆ ಹಣ …
Read More »ರಾಷ್ಟ್ರ ಧ್ವಜಕ್ಕೆ ಅವಮಾನ ಆಗಿದ್ದರೆ ಒದ್ದು ಒಳಗೆ ಹಾಕಿ: ಸ್ಪೀಕರ್
ಬೆಂಗಳೂರು: ಇಂದು ವಿಧಾನಸಭೆಯ ಅಧಿವೇಶನದಲ್ಲಿ ಕೆರೆಗೋಡು ಧ್ವಜ ದಂಗಲ್ ವಿಚಾರ ಪ್ರಸ್ತಾಪವಾಗಿದ್ದು, ಈ ವೇಳೆ ಸ್ಪೀಕರ್ ಯು. ಟಿ ಖಾದರ್ ಅವರು ಸರ್ಕಾರಕ್ಕೆ ನೀಡಿದ ಸಲಹೆ ಚರ್ಚಾ ವಸ್ತುವಾಗಿದೆ. ರಾಷ್ಟ್ರ ಧ್ವಜಕ್ಕೆ ಅವಮಾನ ಆಗಿದ್ದರೆ, ಅವಮಾನ ಮಾಡಿದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಪ್ಪು ಮಾಡಿದವರನ್ನು ಒದ್ದು ಒಳಗೆ ಹಾಕಿ ಎಂದು ಸರ್ಕಾರಕ್ಕೆ ಸ್ಪೀಕರ್ ಖಾದರ್ ಸಲಹೆ ನೀಡಿದರು. ಕೆರಗೋಡು ಧ್ವಜ ದಂಗಲ್ ಪ್ರಕರಣ ರಾಜಕೀಯಗೊಂಡು ಬಿಜೆಪಿ …
Read More »ಮುಂದಿನ ದಿನದಲ್ಲಿ ಓರ್ವ ಐಪಿಎಸ್ ಅಧಿಕಾರಿ ಅರೆಸ್ಟ್;ಯತ್ನಾಳ್
ಶಿವಮೊಗ್ಗ, : ನಮ್ಮ ಬಿಜೆಪಿ(BJP) ಪಕ್ಷದಲ್ಲಿ ಕೆಲವರು ಸಮಾಜದ ಹೆಸರಲ್ಲಿ ದೊಡ್ಡ ಸ್ಥಾನದಲ್ಲಿದ್ದಾರೆ. ಅಶೋಕನ ಕೆಳಗಡೆ ನಾನು ಉಪ ನಾಯಕ ಆಗಬೇಕಾ? ಕೆಲವು ವ್ಯಕ್ತಿಗಳ ಕೈಯಲ್ಲಿ ಈಗ ಪಕ್ಷ ಸೇರಿಕೊಂಡಿದೆ. ಬಲಿಪಶು ಮಾಡುವ ಕೆಲಸವನ್ನು ಕೆಲವರು ಮಾಡಿದರು. ಮ್ಯಾಲಿನವರು ಆಶೀರ್ವಾದ ಮಾಡಿದರೇ ರಾಜ್ಯದ ಇತಿಹಾಸವನ್ನು ಚೇಂಜ್ ಮಾಡುತ್ತೇನೆ ಎಂದು ಬಸಬಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಮುಂದಿನ ದಿನದಲ್ಲಿ ಐಪಿಎಸ್ ಅಧಿಕಾರಿಯೊಬ್ಬ ಅರೆಸ್ಟ್ ಆಗುತ್ತಾರೆ …
Read More »ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸಿಎಂ vs ಡಿಸಿಎಂ ಕೋಲ್ಡ್ ವಾರ್..!
ಬೆಂಗಳೂರು: ರಾಜ್ಯಸಭೆಗೆ ಕೈ ಅಭ್ಯರ್ಥಿಗಳ ಘೋಷಣೆ ಬೆನ್ನಲ್ಲೇ ಲೋಕಸಭೆ ಟಿಕೆಟ್ ಹಂಚಿಕೆ ಕುರಿತು ಕಾಂಗ್ರೆಸ್ ನಲ್ಲಿ ಬಣ ಬಡಿದಾಟ ಜೋರಾಗಿದೆ. ಕೈ ನಲ್ಲಿ ಟಿಕೆಟ್ ವಾರ್ ನಡೆಯುತ್ತಿರುವುದು ಸಿಎಂ ಸಿದ್ದ ರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ. ಇರಿಬ್ಬರ ಶೀತಲ ಸಮರ ಮತ್ತೆ ಮುಂದುವರಿದಿದೆ. ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಇಬ್ಬರು ಪೈಪೋಟಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಇದರಿಂದ ಹೈಕಮಾಂಡ್ ಇಕ್ಕಟ್ಟಿಗೆ ಸಿಲಿಕಿದೆ. ಆದ್ದರಿಂದ ಅಭ್ಯರ್ಥಿಗಳ ಆಯ್ಕೆ …
Read More »ಒಂದೇ ತಿಂಗಳಲ್ಲಿ 1 ಕೋಟಿ ರೂ. ಕಳೆದುಕೊಂಡ ಬೆಳಗಾವಿಯ ಮೂವರು
ಬೆಳಗಾವಿ, ಫೆಬ್ರವರಿ 14: ಒಂದೇ ತಿಂಗಳಲ್ಲಿ ನಡೆದ ಮೂರು ಪ್ರತ್ಯೇಕ ಸೈಬರ್ ಕ್ರೈಂ (Cyber Crime) ಪ್ರಕರಣಗಳಲ್ಲಿ ಬೆಳಗಾವಿಯ (Belagavi) ಮೂವರು ವ್ಯಕ್ತಿಗಳು ಒಟ್ಟು 1.53 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಗೋಕಾಕ್ (Gokak) ಮೂಲದ ಉದ್ಯಮಿ ಬಾಬುರಾವ್ ಅವರಿಗೆ ಯಾರೋ ಟ್ರೇಡಿಂಗ್‌ನಲ್ಲಿ ಒಳ್ಳೆಯ ಲಾಭ ಬರುತ್ತದೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಬಾಬುರಾವ್ ಅವರು ಟ್ರೇಡಿಂಗ್ ಮಾಡುವವರ ಪರಿಚಯ ಮಾಡಿಕೊಳ್ಳಲು ಟೆಲಿಗ್ರಾಂ (Telegram) ಆಯಪ್‌ನಲ್ಲಿ ಸರ್ಚ್ ಮಾಡಲು ಆರಂಭಿಸಿದ್ದಾರೆ. ಆಗ ಟೆಲಿಗ್ರಾಂಂನಲ್ಲಿ …
Read More »ಸದನದಲ್ಲಿ ಧ್ವನಿಸಿದ ರೈತರ ಬಂಧನ ಪ್ರಕರಣ – ತುರ್ತು ಕ್ರಮಕ್ಕೆ ಸ್ಪೀಕರ್ ಸೂಚನೆ!
ಸದನದಲ್ಲಿ ಧ್ವನಿಸಿದ ರೈತರ ಬಂಧನ ಪ್ರಕರಣ – ತುರ್ತು ಕ್ರಮಕ್ಕೆ ಸ್ಪೀಕರ್ ಸೂಚನೆ! ಬೆಂಗಳೂರು : ಪ್ರತಿಭಟನೆಗಾಗಿ (Protest) ದೆಹಲಿಗೆ (Newdelhi) ತೆರಳುತ್ತಿದ್ದ ರೈತರನ್ನು (Farmers) ದೇಶಾದ್ಯಂತ ಬಂಧಿಸಲಾಗಿದೆ. ಈ ಪೈಕಿ ಕರ್ನಾಟಕದ ರೈತರೂ ಸಹ ಸೆರೆಯಾಗಿದ್ದು ಅವರ ಬಿಡುಗಡೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ (Karnataka Raita sangha) ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಬುಧವಾರ ಸದನದಲ್ಲಿ ದನಿಯತ್ತಿದರು. ರೈತರ ಬಂಧನ ಖಂಡನೀಯ. …
Read More »