ಬೆಂಗಳೂರು : ಬರದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಅಂತರ್ಜಲ ಹೆಚ್ಚಳಕ್ಕೆ ಮಹತ್ವದ ಕ್ರಮ ಕೈಗೊಂಡಿದೆ. ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ತುರ್ತು ಹಾಗೂ ದೀರ್ಘಕಾಲದ ಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಬೆಳ್ಳಂದೂರು, ವರ್ತೂರು ಕೆರೆಗಳು ಬರಿದಾಗಿರುವುದರಿಂದ ಆ ಪ್ರದೇಶಗಳಲ್ಲಿ ಅಂತರ್ಜಲ ಕಡಿಮೆಯಾಗಿದೆ. 1,300 ಎಂಎಲ್ಡಿ ಸಂಸ್ಕರಿಸಿದ ಗುಣಮಟ್ಟದ ನೀರನ್ನು ಕೆರೆಗಳಿಗೆ ತುಂಬಿಸಲು ಉದ್ದೇಶಿಸಲಾಗಿದೆ ಜಲಮಂಡಳಿ ಅಧ್ಯಕ್ಷ ಡಾ. ರಾಮ್ಪ್ರಸಾತ್ ಮನೋಹರ್ ತಿಳಿಸಿದ್ದಾರೆ. …
Read More »ಕೇಂದ್ರ ಸರ್ಕಾರಿ ನೌಕರರಿಗೆ D.A 4 % ಹೆಚ್ಚಳ : ಕೇಂದ್ರದಿಂದ ಅಧಿಕೃತ ಆದೇಶ..!
ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಶೇ. 4 ತುಟ್ಟಿಭತ್ಯೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಜನವರಿ 1, 2024 ರಿಂದ ಜಾರಿಗೆ ಬರುವಂತೆ ಮೂಲ ವೇತನದ 46% ರಿಂದ 50% ಕ್ಕೆ ಹೆಚ್ಚಿಸಲಾಗುವುದು. ತುಟ್ಟಿಭತ್ಯೆಯು ಸಂಭಾವನೆಯ ಒಂದು ವಿಶಿಷ್ಟ ಅಂಶವಾಗಿ ಮುಂದುವರಿಯುತ್ತದೆ ಮತ್ತು ಎಫ್‌ಆರ್ 9 (21) ರ ವ್ಯಾಪ್ತಿಯಲ್ಲಿ ವೇತನವೆಂದು ಪರಿಗಣಿಸಲಾಗುವುದಿಲ್ಲ.50 ಪೈಸೆಗಿಂತ ಕಡಿಮೆ ಭಾಗಗಳನ್ನು ನಿರ್ಲಕ್ಷಿಸಬಹುದು ಎಂದು ಹೇಳಲಾಗಿದೆ. ಪ್ರಧಾನಿ …
Read More »ಚುನಾವಣೆ ಬಿಸಿ ಏರತೊಡಗಿದ್ದು ದಿನ ಕಳೆದಂತೆ ವಿಭಿನ್ನ ಲೆಕ್ಕಾಚಾರ
ಬೆಳಗಾವಿ : ಲೋಕಸಭಾ ಚುನಾವಣೆ ಬಿಸಿ ಏರತೊಡಗಿದ್ದು ದಿನ ಕಳೆದಂತೆ ವಿಭಿನ್ನ ಲೆಕ್ಕಾಚಾರ ಹೊರಬರುತ್ತಿವೆ. ಈ ನಡುವೆ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಯಾರಿಗೆ ಎಂಬ ಚರ್ಚೆ ಜೋರಾಗಿದೆ. ಸಧ್ಯ ಮೂಲಗಳ ಪ್ರಕಾರ ಬೆಳಗಾವಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅದವರನ್ನೇ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾಂಗ್ರೆಸ್ ಸೇರಿ ಬಿಜೆಪಿಗೆ ಹೊಡೆತ ನೀಡಿದ್ದ ಶೆಟ್ಟರ್ ಅವರಿಗೆ …
Read More »ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಎಷ್ಟಿರಬಹುದು?
ನವದೆಹಲಿ, ಮಾರ್ಚ್ 11: ಜನವರಿಯಲ್ಲಿ ಶೇ. 5.1ರಷ್ಟಿರುವ ಹಣದುಬ್ಬರ ಫೆಬ್ರುವರಿಯಲ್ಲೂ ಮುಂದುವರಿದಿರುವ ಸಾಧ್ಯತೆ ಇದೆ ಎಂದು ವಿವಿಧ ಆರ್ಥಿಕ ತಜ್ಞರು (economists poll) ಅಭಿಪ್ರಾಯಪಟ್ಟಿದ್ದಾರೆ. ರಾಯ್ಟರ್ಸ್ ನಡೆಸಿದ 15 ಆರ್ಥಿಕ ತಜ್ಞರ ಸಮೀಕ್ಷೆ ಪ್ರಕಾರ ಫೆಬ್ರುವರಿ ತಿಂಗಳಲ್ಲಿ ಹಣದುಬ್ಬರ (India inflation) ಶೇ. 5.1ರಷ್ಟಿರಬಹುದು ಎನ್ನಲಾಗಿದೆ. ಇದು ನಿಜವೇ ಆದಲ್ಲಿ ಆರ್ಬಿಐ ನಿಗದಿ ಮಾಡಿರುವ ಹಣದುಬ್ಬರ ತಾಳಿಕೆ ಮಿತಿಯಾದ ( ಶೇ. 6ರ ಒಳಗೆ ಹಣದುಬ್ಬರ ಇರಲಿದೆ. ಮಾರ್ಚ್ 12, ಮಂಗಳವಾರ …
Read More »ರಾಜ್ಯದಲ್ಲಿ ಬ್ಯಾನ್ ಆಗುತ್ತಾ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ?
ಬೆಂಗಳೂರು, ಮಾರ್ಚ್.11: ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಾಟನ್ ಕ್ಯಾಂಡಿ (Cotton Candy) ಹಾಗೂ ಗೋಬಿ ಮಂಚೂರಿಯನ್ (Gobi Manchurian) ಮಾದರಿ ಗಳಲ್ಲಿ ಆರೋಗ್ಯಕ್ಕೆ ಮಾರಕವಾದ ಅಂಶ ಹಾಗೂ ಬಳಕೆಯ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು, ಈ ಅಸುರಕ್ಷಿತ ವಸ್ತುಗಳನ್ನು ಬಳಕೆ ಮಾಡದಂತೆ ಆರೋಗ್ಯ ಇಲಾಖೆಯು ನಿರ್ಬಂಧ ಹೇರಲು ಮುಂದಾಗಿದೆ. ಈ ಬಗ್ಗೆ ಇಂದು (ಮಾ.11) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಹತ್ವದ ಸುದ್ದಿಗೋಷ್ಠಿಗೂ ಮುಂದಾಗಿದ್ದಾರೆ.ಕರ್ನಾಟಕ …
Read More »ಅನಂತಕುಮಾರ ಹೆಗಡೆಯನ್ನು ಬಿಜೆಪಿಯಿಂದ ಉಚ್ಚಾಟಿಸಲಿ: ಮಂಕಾಳ ವೈದ್ಯ
ಕಾರವಾರ: ಸಂವಿಧಾನ ತಿದ್ದುಪಡಿ ಮಾಡುವ ಮಾತುಗಳನ್ನಾಡಿರುವ ಸಂಸದ ಅನಂತಕುಮಾರ ಹೆಗಡೆ ಅವರನ್ನು ಬಿಜೆಪಿ ತಕ್ಷಣ ಉಚ್ಚಾಟಿಸಲಿ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು. ‘ಅನಂತಕುಮಾರ ಅವರನ್ನು ಪಕ್ಷದಿಂದ ಉಚ್ಛಾಟಿಸದಿದ್ದರೆ ಬಿಜೆಪಿಯು ಸಂವಿಧಾನ ಬದಲಿಸುವ ರಹಸ್ಯ ಕಾರ್ಯಸೂಚಿ ಹೊಂದಿದೆ ಎಂಬುದು ಸ್ಪಷ್ಟವಾದಂತೆ’ ಎಂದು ಇಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡುತ್ತ ಹೇಳಿದರು. ದೇಶದಲ್ಲಿ ಸಂವಿಧಾನ ಬದಲಿಸಿ, ಬ್ರಿಟಿಷ್ ಮಾದರಿಯ ಆಡಳಿತ ವ್ಯವಸ್ಥೆ ತರುವ ಉದ್ದೇಶ …
Read More »ಅಕ್ಕಮಹಾದೇವಿ ವಿವಿ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ
ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಮ್ಯಾನೇಜ್ಮೆಂಟ್ ವಿಭಾಗದ ಹೆಚ್ ಒಡಿ ಪ್ರೊ.ಮಲ್ಲಿಕಾರ್ಜುನ ಎನ್.ಎಲ್ ವಿರುದ್ಧ ಪಿಹೆಚ್ ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಪ್ರೊ.ಮಲ್ಲಿಕಾರ್ಜುನ ಎನ್.ಎಲ್ ರನ್ನು ಅಮಾನತು ಮಾಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಿವಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ.ಪ್ರೊಫೇಸರ್ ವಿರುದ್ಧ ಧಿಕ್ಕಾರ ಕುಗಿದ್ದಾರೆ. ಪ್ರೊ.ಮಲ್ಲಿಕಾರ್ಜುನ ರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಪಿ ಹೆಚ್ ಡಿ ವಿದ್ಯಾರ್ಥಿನಿ ಕುಲಪತಿ …
Read More »ನಿಮ್ಮ ರಾಮ ಮಂದಿರ ಸ್ಫೋಟಿಸುತ್ತೇವೆ,: ಬೆದರಿಕೆ ಪತ್ರ
ಚಿಕ್ಕೋಡಿ: ‘ನಿಮ್ಮ ರಾಮ ಮಂದಿರ ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ’ ಎಂಬ ಬರಹ ಇರುವ ಬೆದರಿಕೆ ಪತ್ರವೊಂದು ಪತ್ತೆಯಾಗಿದೆ. ನಮ್ಮ ಮಂದಿರಕ್ಕೆ ರಕ್ಷಣೆ ನೀಡುವುದರ ಜೊತೆಗೆ ಬೆದರಿಕೆ ಪತ್ರ ಬರೆದಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಿಪ್ಪಾಣಿ ಪಟ್ಟಣದ ಶ್ರೀ ರಾಮ ಮಂದಿರದ ಆಡಳಿತ ಮಂಡಳಿ ನಿಪ್ಪಾಣಿ ಶಹರ ಠಾಣೆಯಲ್ಲಿ ದೂರು ನೀಡಿದೆ. ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಆನಂದ ಸೊಲಾಪೂರೆ ನೀಡಿರುವ ಮಾಹಿತಿ ಪ್ರಕಾರ, ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ಬೆದರಿಕೆ ಪತ್ರ …
Read More »ಚುನಾವಣಾ ಆಯುಕ್ತ ಅರುಣ್ ಗೋಯಲ ರಾಜೀನಾಮೆ
ನವದೆಹಲಿ(ಮಾ.10): 2024 ರ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ತಮ್ಮ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ್ದಾರೆ. ಅರುಣ್ ಗೋಯಲ್ ಅವರ ರಾಜೀನಾಮೆಯನ್ನು ಅಧ್ಯಕ್ಷ ದ್ರೌಪದಿ ಮುರ್ಮು ಅವರು ಮಾರ್ಚ್ 9 ರ ಶನಿವಾರದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ ಎಂದು ಕಾನೂನು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಅನೂಪ್ ಪಾಂಡೆ ನಿವೃತ್ತಿ ಮತ್ತು ಈಗ ಅರುಣ್ ಗೋಯಲ್ …
Read More »ಬಸ್ನಿಂದ ಆಯತಪ್ಪಿ ಬಿದ್ದು ಮೃತಪಟ್ಟ ನಿರ್ವಾಹಕ
ಮೈಸೂರು, ಮಾರ್ಚ್ 09: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಿಂದ ಆಯತಪ್ಪಿ ಬಿದ್ದು ನಿರ್ವಾಹಕ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲನಮೂಲೆ ಮಠದ ಬಳಿ ನಡೆದಿದೆ. ಚಾಮರಾಜನಗರ (Chamarajanagar) ತಾಲೂಕಿನ ಹಳೇಪುರ ನಿವಾಸಿ ಮಹದೇವಸ್ವಾಮಿ (35) ಮೃತ ನಿರ್ವಾಹಕ. ನಿರ್ವಾಹಕ ಮಹದೇವಸ್ವಾಮಿ ಕೆಎಸ್ಆರ್ಟಿಸಿ ಬಸ್ನ ಫುಟ್ ಬೋರ್ಡ್ನಲ್ಲಿ ನಿಂತಿದ್ದರು. ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಂಜನಗೂಡು ಡಿವೈಎಸ್ಪಿ ರಘು, ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ. ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ …
Read More »