Breaking News

ರಾಷ್ಟ್ರೀಯ

ಕೊನೆಗೂ ಕೋಲಾರ ಕಾಂಗ್ರೆಸ್ ಟಿಕೆಟ್ ಅಂತಿಮ; ಕೆ.ವಿ ಗೌತಮ್ ಹೆಸರು ಘೋಷಣೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಶನಿವಾರ ಅಂತಿಮವಾಗಿದೆ. ಮುನಿಯಪ್ಪ- ರಮೇಶ್ ಕುಮಾರ್ ಬಣವನ್ನು ಹೊರತುಪಡಿಸಿ ಕೆ.ವಿ ಗೌತಮ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ಇದರೊಂದಿಗೆ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವುದು ಕೋಲಾರ ವಿಚಾರದಲ್ಲಿ ನಿಜವಾಗಿದೆ. ಕರ್ನಾಟಕದಿಂದ ಲೋಕಸಭೆಗೆ ಬಾಕಿಯಿದ್ದ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಶುಕ್ರವಾರವೇ ಕಾಂಗ್ರೆಸ್ ಪ್ರಕಟಿಸಿತ್ತು. ಆದರೆ …

Read More »

ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

ಬೆಂಗಳೂರು: ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ವಂಚಿತೆ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ್‌ ತಮ್ಮ ಬೆಂಬಲಿಗರೊಂದಿಗೆ ಗುರುವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಟಿಕೆಟ್‌ಗಾಗಿ ಮತ್ತೂಂದು ಸುತ್ತು ಕಸರತ್ತು ನಡೆಸಿದರು. ಶಾಸಕ ಹಾಗೂ ಪಂಚಮಸಾಲಿ ಸಮುದಾಯದ ನಾಯಕ ವಿನಯ ಕುಲಕರ್ಣಿ, ಬಾಗಲಕೋಟೆ ನಗರಸಭೆ ಸದಸ್ಯರು, ಸ್ಥಳೀಯ ಮಹಿಳಾ ಘಟಕದ ಸದಸ್ಯರು ಸಹಿತ ನೂರಕ್ಕೂ ಅಧಿಕ ಬೆಂಬಲಿಗರು, ಕಾರ್ಯಕರ್ತರೊಂದಿಗೆ ವಿಜಯಾನಂದ ಕಾಶಪ್ಪನವರ್‌ ದಂಪತಿ, ರಾಜ್ಯ ನಾಯಕರನ್ನು …

Read More »

ಡೀಸೆಲ್ ಇಲ್ಲದೆ ನಿಂತ ವಾಹನ. ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಗುಡಿಬಂಡೆ: ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ವಾಹನಕ್ಕೆ ಡೀಸೆಲ್ ಇಲ್ಲದ ಕಾರಣ ಪೌರ ಕಾರ್ಮಿಕರು ಹೆಗಲ ಮೇಲೆ ಹೊತ್ತು ಕಸ ವನ್ನು ವಿಲೇವಾರಿ ಮಾಡಿದ ಘಟನೆ ನಡೆದಿದೆ. ಪ್ರತಿ ದಿನ ಬೆಳ್ಳಂಬೆಳಗ್ಗೆ ಪೌರ ಕಾರ್ಮಿಕರು ಪಟ್ಟಣ ಎಲ್ಲಾ ವಾರ್ಡ್ ಗಳಲ್ಲಿನ ಘನ ತ್ಯಾಜ್ಯ ಕಸವನ್ನು ವಿಲೇ ವಾರಿ ಮಾಡಿ, ಕಸವನ್ನು ಟ್ರಾಕ್ಟರ್ ಮತ್ತು ವಾಹನಗಳ ಮೂಲಕ ವಿಲೇವಾರಿ ಮಾಡಬೇಕಾಗಿದ್ದು, ಆದರೆ ಕಳೆದ ಎರಡು ದಿನಗಳಿಂದ ವಾಹನಗಳಿಗೆ ಡೀಸೆಲ್ ಇಲ್ಲದೆ ವಾಹನಗಳು ನಿಂತಲ್ಲೇ …

Read More »

ನಾನು ಅಸಮರ್ಥಳಾ.? ಕಾಂಗ್ರೆಸ್ ಟಿಕೆಟ್‌ ವಂಚಿತೆ ವೀಣಾ ಕಾಶಪ್ಪನವರ್‌ ಪ್ರಶ್ನೆ

ಬೆಂಗಳೂರು: ಪಂಚಮಸಾಲಿ ಸಮುದಾಯದ ಹೆಸರು ಹೇಳಿಕೊಂಡು ಹೊರಗಿನಿಂದ ಬಂದು ಟಿಕೆಟ್‌ ಪಡೆದಿದ್ದಾರೆ. ಹಾಗಿದ್ದರೆ ಅದೇ ಜಿಲ್ಲೆಯ ಮತ್ತು ಅದೇ ಸಮುದಾಯದವಳಾದ ನಾನು ಅಸಮರ್ಥಳಾ ಎಂದು ಕಾಂಗ್ರೆಸ್‌ ಟಿಕೆಟ್‌ ವಂಚಿತೆ ವೀಣಾ ಕಾಶಪ್ಪನವರ್‌ ಪ್ರಶ್ನಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಬದಲಾವಣೆ ಮಾಡಿ ಎಂದಿದ್ದೆ. ಅದು ಸಾಧ್ಯವಿಲ್ಲ ಎಂದು ನಮ್ಮ ನಾಯಕರು ಹೇಳಿದ್ದಾರೆ. ನನ್ನ ಪರವಾಗಿ ನ್ಯಾಯ ಕೇಳಿ ಬೇರೆ ಸಮುದಾಯದ ಮುಖಂಡರೆಲ್ಲ ಬಂದಿದ್ದರು. ಸಾಕಷ್ಟು ನಿರೀಕ್ಷೆಯೊಂದಿಗೆ ಮುಖ್ಯಮಂತ್ರಿ ಭೇಟಿ …

Read More »

ಕಾಂಗ್ರೆಸ್ ಹೊಣೆಗಾರಿಕೆಗಳಿಗೆ ವೀಣಾ ಕಾಶಪ್ಪನವರ್ ರಾಜೀನಾಮೆ

ಬೆಂಗಳೂರು,-ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ. ಆದರೆ ಸಂಘಟನಾತ್ಮಕ ಎಲ್ಲಾ ಜವಾಬ್ದಾರಿಗಳಿಗೂ ರಾಜೀನಾಮೆ ನೀಡುತ್ತೇನೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದರ ಬಗ್ಗೆ ಎರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಕ್ರೀನಿಂಗ್ ಕಮಿಟಿವರೆಗೂ ನನ್ನ ಹೆಸರಿತ್ತು. ಅಜಯ್ಕುಮಾರ್ ಸರ್ನಾಯಕ್ ಮತ್ತು ನನ್ನ ಹೆಸರಿಗೆ ಮಾತ್ರ ಬೆಂಬಲ ನೀಡಿದ್ದಾಗಿ ಜಿಲ್ಲೆಯ ಶಾಸಕರು ತಿಳಿಸಿದ್ದರು. ಆದರೆ ಹೈಕಮಾಂಡ್ನ ಸಭೆಗೆ ನನ್ನ ಹೆಸರು ಹೋಗಿಲ್ಲ. ಇದರ ಹಿಂದೆ …

Read More »

118 ಮದ್ಯಂಗಡಿಗಳ ಲೈಸೆನ್ಸ್ ರದ್ದು

10.66 ಕೋಟಿ ರೂ. ದಂಡ ವಸೂಲಿ | ಹೆಚ್ಚಿನ ಬೆಲೆಗೆ ಮದ್ಯ ಮಾರಾಟ   ನಿಗದಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಕಾರಣಕ್ಕಾಗಿ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ 118 ಮದ್ಯದಂಗಡಿಗಳ ಪರವಾನಗಿ (ಲೈಸೆನ್ಸ್) ಅಮಾನತುಗೊಳಿಸಲಾಗಿದೆ. ಜತೆಗೆ, 6,207 ಕೇಸ್ ದಾಖಲಿಸಿ 10.66 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಬೆಂಗಳೂರು, ಬೆಳಗಾವಿ, ಕೋಲಾರ, ಕಲಬುರಗಿ, ವಿಜಯಪುರ, ತುಮಕೂರು, ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಅತಿಹೆಚ್ಚು ಕೇಸ್​ಗಳು ದಾಖಲಾಗಿವೆ. ಎಂಆರ್​ಪಿ ಉಲ್ಲಂಘನೆ …

Read More »

ಸೂರ್ಯಕುಮಾರ್‌ ಯಾದವ್‌ ಆಗಮನ ವಿಳಂಬ

ಮುಂಬಯಿ: ಮುಂಬೈ ಇಂಡಿಯನ್ಸ್‌ ಸತತ ಸೋಲಿನ ಸುಳಿಗೆ ಸಿಲುಕಿರುವಂತೆಯೇ ತಂಡಕ್ಕೆ ಇನ್ನೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಸ್ಟಾರ್‌ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಆಗಮನ ಇನ್ನೂ ವಿಳಂಬವಾಗಲಿದೆ ಎಂದು ತಿಳಿದು ಬಂದಿದೆ. ವಿಶ್ವದ ನಂ.1 ಟಿ20 ಬ್ಯಾಟರ್‌ ಆಗಿರುವ ಸೂರ್ಯಕುಮಾರ್‌ ಯಾದವ್‌ ನ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇನ್ನೂ ಸಂಪೂರ್ಣ ಚೇತರಿಕೆ ಕಂಡಿಲ್ಲ. ಹೀಗಾಗಿ ಇವರು ಮುಂಬೈ ತಂಡ ಸೇರಿಕೊಳ್ಳುವುದು ಇನ್ನಷ್ಟು ದಿನ ವಿಳಂಬವಾಗಲಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಸಂಪೂರ್ಣ ಫಿಟ್‌ನೆಸ್‌ಗೆ …

Read More »

ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಬಂದವು 79,000 ದೂರುಗಳು!

ಹೊಸದಿಲ್ಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾಗಿರುವ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ಪತ್ತೆಹಚ್ಚಿ ವರದಿ ಮಾಡುವುದಕ್ಕೆ ದೇಶದ ಪ್ರಜೆಗಳೇ ಮುಂದಾಗಿದ್ದಾರೆ. ಚುನಾವಣೆ ಆಯೋಗದ (ಇ.ಸಿ) ಸಿ-ವಿಜಿಲ್‌ ಆಯಪ್‌ ಈ ಅಪರಾಧ ಪತ್ತೆಗೆ ಜನರ ಕೈಯಲ್ಲಿರುವ ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿದೆ. ಇದರ ಮೂಲಕ ಈಗಾಗಲೇ ಬರೋಬ್ಬರಿ 79,000 ದೂರುಗಳು ದಾಖಲಾಗಿವೆ. ಹೌದು, ಚುನಾವಣೆ ಆಯೋಗವು ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳನ್ನು ನಾಗರಿಕರೇ ದಾಖಲಿಸಲು ಅನುವಾಗುವಂತೆ ಸಿ-ವಿಜಿಲ್‌ ಎನ್ನುವ ಮೊಬೈಲ್‌ ಆಯಪ್‌ ಅನ್ನು …

Read More »

ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

ಶಿರಸಿ: ಉತ್ತರ ಕನ್ನಡ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಟಿಕೆಟ್‌ ಪ್ರಕಟವಾದ ಬೆನ್ನಲ್ಲೇ ಆರು ಬಾರಿ ಸಂಸದರಾಗಿದ್ದ ಅನಂತ ಕುಮಾರ ಹೆಗಡೆ “ತಟಸ್ಥ’ರಾಗಿ ಉಳಿಯಲಿದ್ದಾರೆ ಎನ್ನಲಾಗಿದೆ. ಸಂವಿಧಾನ ತಿದ್ದುಪಡಿ  ಹೇಳಿಕೆ ಹಾಗೂ ಮುಸ್ಲಿಂ ವಿರೋಧಿ ನಿಲುವು ಅವರಿಗೆ ಈ ಬಾರಿ ಟಿಕೆಟ್‌ ತಪ್ಪಲು ಮೇಲ್ನೋಟಕ್ಕೆ ಕಾರಣ ಎಂದು ಪಕ್ಷದ ಕೆಲವು ಹಿರಿಯರು ಅವರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಹೀಗಾಗಿ ಪಕ್ಷಕ್ಕೆ ಮುಜುಗರ ಆಗದಂತೆ ನೋಡಿಕೊಳ್ಳಲು ಪ್ರಚಾರದಿಂದಲೂ …

Read More »

ಬೆಳಗಾವಿ: ಪುತ್ರನ ಪರ ಪ್ರಚಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ಒತ್ತಡ – ಸಚಿವೆ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಕೇಸ್

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಸಮನ್ಸ್‌ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯ ಕುವೆಂಪುನಗರದ ತಮ್ಮ ಗೃಹಕಚೇರಿ ಪಕ್ಕದ ಸಭಾಂಗಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರ ಸಭೆಯನ್ನು ಮಾರ್ಚ್ 20ರಂದು ನಡೆಸಿದ್ದರು. ಅದಕ್ಕೆ ಅನುಮತಿ ಪಡೆದಿರಲಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿತ್ತು. …

Read More »