Breaking News

ರಾಷ್ಟ್ರೀಯ

30ಕ್ಕೂ ಹೆಚ್ಚು ನಾಯಕರು ನಾಳೆ ಕಾಂಗ್ರೆಸ್ ಸೇರ್ಪಡೆ

ಚಾಮರಾಜನಗರ- ಇಲ್ಲಿನ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಪುತ್ರ ಹಾಗೂ ಸಹೋದರರು ಸೇರಿದಂತೆ 30ಕ್ಕೂ ಹೆಚ್ಚು ಪ್ರಮುಖ ನಾಯಕರು ನಾಳೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಳ್ಳಲೇಬೇಕು ಎಂದು ಹಠಕ್ಕೆ ಬಿದ್ದಿರುವ ಪಕ್ಷದ ಮುಖಂಡರು ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಅವರ ಆಪ್ತರನ್ನು ಇತ್ತೀಚೆಗೆ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲಾಗಿತ್ತು. ಈಗ ಚಾಮರಾಜನಗರದಲ್ಲೂ ಅದೇ ರೀತಿಯ ಕಾರ್ಯಾಚರಣೆಗಳು ನಡೆದಿದ್ದು, 30ಕ್ಕೂ ಹೆಚ್ಚು …

Read More »

ಇಷ್ಟಾರ್ಥಸಿದ್ಧಿಯ ಚಾಂಗದೇವನ ಯಮನೂರು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರೋ ಪುಣ್ಯ ಭೂಮಿ! ಸ್ಥಳ ಮಹಾತ್ಮೆ ಏನು?

12 ನೇ ಶತಮಾನದಲ್ಲಿ ಜೀವಿಸಿದ್ದ ಚಾಂಗದೇವ ಮುಸ್ಲಿಂ ಆಗಿದ್ದರೂ ಆತನಿಗೆ ಇಲ್ಲಿ ದೇವಸ್ಥಾನ ನಿರ್ಮಿಸಿದ್ದು ಭಾವೈಕ್ಯತೆಯ ಸಂಕೇತವೇ. ಒಂದು ಕಡೆ ಆತನಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದರೆ, ಜಾತ್ರೆಯ ಎರಡನೇ ದಿನ ಅದೇ ಚಾಂಗದೇವನ ಹೆಸರಿನಲ್ಲಿ ಇದೇ ದೇವಸ್ಥಾನದ ಮುಂದೆ ಉರುಸು ಕೂಡ ನೆರವೇರುತ್ತೆ. ಇನ್ನು ಈ ಚಾಂಗದೇವನಿಗೆ ಇಷ್ಟಾರ್ಥಸಿದ್ಧಿ ದೇವ ಅಂತಾನೂ ಕರೆಯಲಾಗುತ್ತೆ.ಅದೊಂದು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರೋ ಪುಣ್ಯ ಸ್ಥಳ. ಭಾವೈಕ್ಯತೆಯನ್ನು ನಾಡಿಗೆ ಸಾರಿ ಹೇಳಿದ ಪುಣ್ಯ ಭೂಮಿಯದು …

Read More »

15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್​ ದರ ಇಳಿಕೆ: 100 ಯುನಿಟ್​​ಗಿಂತ ಹೆಚ್ಚು ಬಳಸುವವರಿಗೆ ಲಾಭ

ಬೆಂಗಳೂರು, ಏಪ್ರಿಲ್​ 01: ಲೋಕಸಭೆ ಚುನಾವಣೆ (Lok Sabha Election) ಸಮಯದಲ್ಲಿ ಎಲ್ಲ ವರ್ಗದ ವಿದ್ಯುತ್​ ಬಳಕೆದಾರರಿಗೆ ಕರ್ನಾಟಕ ರಾಜ್ಯ ವಿದ್ಯುತ್​ಚ್ಛಕ್ತಿ ನಿಯಂತ್ರಣ ಆಯೋಗವು (KERC) ಗುಡ್​ ನ್ಯೂಸ್​ ನೀಡಿದೆ. ಗೃಹ ಬಳಕೆಯಲ್ಲಿ 100 ಯುನಿಟ್​​ಗಿಂತ ಹೆಚ್ಚು ವಿದ್ಯುತ್​​ ಬಳಕೆ ಮಾಡುವವರಿಗೆ ಪ್ರತಿ ಯುನಿಟ್​ಗೆ 1.10 ರೂ. ಕಡಿಮೆ (Electricity bill reduce) ಮಾಡಲಾಗಿದೆ. ಈ ಮೂಲಕ 15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ …

Read More »

ರಾಹುಲ್ ಗಾಂಧಿಗೆ ಲೋಕಸಭೆ ಚುನಾವಣೆ ಸೋಲಿ‌ನ‌ ಕನಸು ಬೀಳುತ್ತಿದೆ: ಪ್ರಹ್ಲಾದ್​ ಜೋಶಿ

ಬಿಜೆಪಿ, ಆರ್​​ಎಸ್​ಎಸ್​ ವಿಷವಿದ್ದಂತೆ, ಅದರ ರುಚಿ ನೋಡಬೇಡಿ ಎಂಬ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಮಲ್ಲಿಕಾರ್ಜುನ ಖರ್ಗೆ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು. ಹುಬ್ಬಳ್ಳಿ, ಏಪ್ರಿಲ್​ 01: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಲೋಕಸಭೆ ಚುನಾವಣೆ (Lok Sabha Election) ಸೋಲಿ‌ನ‌ ಕನಸು ಬೀಳುತ್ತಿದೆ ಎಂದು ಕೇಂದ್ರ ಸಚಿವ, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ …

Read More »

ಉದ್ಯೋಗ ವಾರ್ತೆ : ʻPDOʼ ಸೇರಿ 1,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಭರ್ಜರಿ ಸಿಹಿಸುದ್ದಿ ನೀಡಿದದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹಾಗೂ ವಿವಿಧ ಇಲಾಖೆಗಳ ಗ್ರೂಪ್‌ ಸಿ ಹುದ್ದೆಗಳು ಸೇರಿದಂತೆ ಒಟ್ಟು 1,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಚಾಲನೆ ದೊರೆತಿದೆ.   ಕಲ್ಯಾಣ ಕರ್ನಾಟಕದ 97 ಹುದ್ದೆಗಳು ಸೇರಿದಂತೆ ಒಟ್ಟು 247 ಪಿಡಿಒ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಂಗೀಕೃತ ವಿಶ್ವವಿದ್ಯಾಲಯದ ಯಾವುದೇ ಪದವೀಧರರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ. …

Read More »

ವಿದ್ಯಾರ್ಥಿಗಳ 81 ಕೋಟಿ ರೂ. ಸ್ಟೈಫಂಡ್ ದುರ್ಬಳಕೆ: ಎಫ್‌ಐಆರ್ ದಾಖಲು

ಕಲಬುರಗಿ: ಕಲಬುರಗಿಯ ಹೈದರಾಬಾದ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ 81.21 ಕೋಟಿ ರೂ. ಸ್ಟೈಫಂಡ್ ದುರ್ಬಳಕೆ ಆರೋಪದಡಿ ಸಂಸ್ಥೆಯ ಮಾಜಿ ಅಧ್ಯಕ್ಷ ಸೇರಿ ನಾಲ್ವರ ವಿರುದ್ಧ ಸೈಬರ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಿಸಲಾಗಿದೆ. ಹೈದರಾಬಾದ್ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ 81.21 ಕೋಟಿ ರೂ. ಸ್ಟೈಫಂಡ್ ದುರ್ಬಳಕೆ ಆರೋಪದಡಿ ಸಂಸ್ಥೆಯ ಮಾಜಿ ಅಧ್ಯಕ್ಷ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ವಕೀಲ ವಿನೋದ …

Read More »

ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಹೊಸ `ಅಬಕಾರಿ ನೀತಿ’ ಜಾರಿ, ಇಂದಿನಿಂದ ‘ಎಣ್ಣೆ’ ಬೆಲೆಯಲ್ಲಿ ಏರಿಕೆ!

ನವದೆಹಲಿ : ಮದ್ಯ ಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇಂದಿನಿಂದ ದೇಶಾದ್ಯಂತ ಮದ್ಯ ಬೆಲೆಯಲ್ಲಿ ಏರಿಕೆಯಾಗಿದೆ.ಏಕೆಂದರೆ ಇಂದಿನಿಂದ ಹೊಸ ಅಬಕಾರಿ ನೀತಿಯನ್ನು ಸಹ ಜಾರಿಗೆ ತರಲಾಗಿದೆ. ಇದು ಎಲ್ಲಾ ಮೂರು ರೀತಿಯ ಮದ್ಯ, ಬಿಯರ್, ದೇಶೀಯ ಮತ್ತು ಇಂಗ್ಲಿಷ್ ಬೆಲೆಗಳನ್ನು ಹೆಚ್ಚಿಸಿದೆ. ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶಗಳು ಮದ್ಯದ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಮದ್ಯ ಗುತ್ತಿಗೆದಾರರಿಗೂ ಅಧಿಸೂಚನೆ ಕಳುಹಿಸಲಾಗಿದೆ. ಹೊಸ ದರಗಳು ಇಂದಿನಿಂದಲೇ ಅನ್ವಯವಾಗುತ್ತವೆ. …

Read More »

ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ

ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನದ ಬಳಿಕ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar)​ ಪಿಆರ್​ಕೆ ಪ್ರೊಡೆಕ್ಷನ್ (PRK Production) ಸಂಪೂರ್ಣ ಹೊಣೆ ಹೊತ್ತಿದ್ದಾರೆ. ​ ನಿರ್ಮಾಪಕಿಯಾಗಿ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲೆಂದೇ ಪುನೀತ್ ರಾಜ್​ಕುಮಾರ್ ಪಿಆರ್​ಕೆ ಪ್ರೊಡೆಕ್ಷನ್ ಶುರು ಮಾಡಿದ್ರು. ಇದೀಗ ಅಪ್ಪು ಕನಸನ್ನು ಅಶ್ವಿನಿ ನನಸು ಮಾಡ್ತಿದ್ದಾರೆ. ಒಳ್ಳೆ ಕಥೆ ಹಾಗೂ ಪ್ರತಿಭಾವಂತರನ್ನು (Talented) ಹುಡುಕಿ …

Read More »

ಹುಲಿ ಸೋಲಿಸಿದ್ದೇವೆ, ಇಲಿ ಸೋಲಿಸೋದು ಕಷ್ಟವಲ್ಲ: ಮಾಲೀಕಯ್ಯ ಗುತ್ತೇದಾರ್ ವ್ಯಂಗ್ಯ

ಕಲಬುರಗಿ: ‘2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಮತಕ್ಷೇತ್ರದಲ್ಲಿ ಈ ಭಾಗದ ಹುಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ ಬಿಜೆಪಿಗೆ ಈ ಬಾರಿ ಇಲಿಯಂತಿರುವ ಅಭ್ಯರ್ಥಿಯನ್ನು ಸೋಲಿಸಲು ಯಾವುದೇ ಕಷ್ಟವಿಲ್ಲ‌’ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ವಿ.ಗುತ್ತೇದಾರ್ ವ್ಯಂಗ್ಯವಾಡಿದರು.   ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ‘ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು. ಬಹಳ ದೊಡ್ಡ ಸ್ಥಾನದಲ್ಲಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿದ್ದಂಥವರು …

Read More »

ನಟ ದರ್ಶನ್ ಮಾಜಿ ಪಿಎ ಮಲ್ಲಿಕಾರ್ಜುನ ವಿರುದ್ಧ 1 ಕೋಟಿ ‘ಚೆಕ್ ಬೌನ್ಸ್’ ಕೇಸ್ ದಾಖಲಿಸಿದ ಅರ್ಜುನ್ ಸರ್ಜಾ

ಬೆಂಗಳೂರು : ನಟ ದರ್ಶನ್ ಮಾಜಿ ಪಿಎ ಆಗಿದ್ದ ಹಾಗೂ ಚಿತ್ರರಂಗದಲ್ಲಿ ಸಿನಿಮಾ ವಿತರಕರಾಗಿ ಗುರುತಿಸಿಕೊಂಡಿದ್ದ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ವಿರುದ್ಧ ಇದೀಗ ಅರ್ಜುನ್ ಸರ್ಜಾ ಒಂದು ಕೋಟಿ ರೂಪಾಯಿ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ನಟ ದರ್ಶನ್ ಮಾಜಿ ಪಿಎ ಮಲ್ಲಿಕಾರ್ಜುನ ಬಗ್ಗೆ ಪತ್ರಿಕಾ ಪ್ರಕಾಟಣೆ ಹೊರಡಿಸಿದ್ದು, ಕಳೆದ ಏಳು ವರ್ಷಗಳಿಂದ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದರು ಎನ್ನಲಾಗುತ್ತಿದೆ. ಚಿತ್ರರಂಗದಲ್ಲಿ ಮಲ್ಲಿಕಾರ್ಜುನ್ ವಿತರಕರಾಗಿ ಗುರುತಿಸಿಕೊಂಡಿದ್ದರು.ಅನೇಕ ಚಿತ್ರಗಳನ್ನು ದರ್ಶನ್ ಮಾಜಿ …

Read More »