ಜೇವರ್ಗಿ(ಕಲಬುರಗಿ ಜಿಲ್ಲೆ): ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಆಟಗಾರ್ತಿ ಶ್ರೇಯಾಂಕ ಪಾಟೀಲ ಅವರನ್ನು ಸ್ವಗ್ರಾಮ ಕೋಳಕೂರಿನಲ್ಲಿ ಬುಧವಾರ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಶ್ರೇಯಾಂಕ ಮೂಲತಃ ಕಲಬುರಗಿ ಜಿಲ್ಲೆಯ ಕೋಳಕೂರ ಗ್ರಾಮದವರು. ತವರಿಗೆ ಬಂದ ಅವರನ್ನು ಗ್ರಾಮದ ಹೊರವಲಯದಿಂದ ಸಿದ್ಧಬಸವೇಶ್ವರ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆ ಬಳಿಕ ಶ್ರೇಯಾಂಕ ಪಾಟೀಲ ಸಿದ್ಧಬಸವೇಶ್ವರರ ದರ್ಶನ ಪಡೆದರು. ಮೆರವಣಿಗೆಯಲ್ಲಿ …
Read More »ತೆರೆದ ಕೊಳವೆ ಬಾವಿಗೆ ಬಿದ್ದ ಮಗು! 12 ಗಂಟೆಗಳಿಂದ ನಿರಂತರ ಕಾರ್ಯಾಚರಣೆ, ಬದುಕಿಗಾಗಿ ಪ್ರಾರ್ಥನೆ
ವಿಜಯಪುರ: ಆಟವಾಡುವ ಗುಂಗಿನಲ್ಲಿ ತೆರೆದಿದ್ದ ಕೊಳವೆ ಬಾವಿಗೆ ಎರಡು ವರ್ಷದ ಮಗುವೊಂದು ಆಯಾತಪ್ಪಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಸಂಭವಿಸಿದೆ. ಸತತ 12 ಗಂಟೆಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ತಂಡಕ್ಕೆ ಮಗುವನ್ನು ಹೊರತೆಗೆಯುವುದು ದೊಡ್ಡ ಸವಾಲಾಗಿದ್ದು, ಸದ್ಯ ಕಾರ್ಯಾಚರಣೆ ಕೆಲಸ ಮುಂದುವರೆದಿದೆ. ಭೀಮಾತೀರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಸಂಭವಿಸಿದ್ದು, 2 ವರ್ಷದ ಬಾಲಕ ಸಾತ್ವಿಕ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಮಗುವಿನ ಕಾಲುಗಳ ಅಲುಗಾಟ ದೃಶ್ಯದಲ್ಲಿ ಸೆರೆಯಾಗಿದ್ದು, …
Read More »ರಾಹುಲ್ ಗಾಂಧಿ ‘ಭಾರತ್ ಜೋಡೋ ಯಾತ್ರೆ’ ಯಲ್ಲಿ ಭಾಗಿಯಾದ ಟ್ರಕ್ ಗಳ ಬಾಡಿಗೆ ಪಾವತಿಸಿಲ್ಲ : ಟ್ರಕ್ ಮಾಲೀಕರ ಆರೋಪ
ನವದೆಹಲಿ : ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಕಂಟೈನರ್ ಟ್ರಕ್ಗಳನ್ನು ಒದಗಿಸಿದ ಟ್ರಕ್ ಮಾಲೀಕರು, ಸಾರಿಗೆ ಕಂಪನಿಯು ಲಕ್ಷಾಂತರ ರೂಪಾಯಿಗಳ ಬಾಕಿಯನ್ನು ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ. ಬುಲಂದ್ಶಹರ್ನಲ್ಲಿ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯಲ್ಲಿ ಭಾಗವಹಿಸಿದ ಕಂಟೈನರ್ ಟ್ರಕ್ ವಾಹನ ನಿರ್ವಾಹಕರು ತಮಗೆ ಇದುವರೆಗೆ ಬಾಡಿಗೆ ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ. ನೊಂದ ಟ್ರಕ್ ಮಾಲೀಕರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ, ಬಾಕಿ ಪಾವತಿಸದ ಕಾರಣ …
Read More »BY ರಾಘವೇಂದ್ರ ಚುನಾವಣೆಯಲ್ಲಿ ಸೋಲಲಿ ಎಂಬ ಅಪೇಕ್ಷೆ ಅಮಿತ್ ಶಾಗೆ ಇರಬಹುದು : ಕೆ.ಎಸ್ ಈಶ್ವರಪ್ಪ
ನವದೆಹಲಿ : ಲೋಕಸಭೆ ಚುನಾವಣೆಗೆ ತಮ್ಮ ಮಗನಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದರು.ಆದರೆ ಅಮಿತ್ ಶಾ ಅವರು ಈಶ್ವರಪ್ಪ ಅವರ ಭೇಟಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಇದೀಗ ಅವರು ವಾಪಸ್ ಆಗಿದ್ದಾರೆ. ಅಮಿತ್ ಶಾ ಬೇಟಿಗೆ ಸಮಯ ಸಿಗದ ಕಾರಣ ಇದೀಗ …
Read More »ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಪ್ತನ ಭೀಕರ ಹತ್ಯೆ : ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಬೆಳಗಾವಿ : ಇತಿಗೆ ಕಲಬುರ್ಗಿಯ ಸಂಸದ ಉಮೇಶ್ ಜಾಧವ್ ಅವರ ಪರಮಾಪ್ತ ಗಿರೀಶ್ ಚಕ್ರ ಹತ್ಯೆ ಮಾಸುವ ಮುನ್ನವೇ ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪರಮಾಪ್ತ ಅಣ್ಣಪ್ಪ ಬಸಪ್ಪ ನಿಂಬಾಳ ಎಂಬವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೌದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಪ್ತ ಅಣ್ಣಪ್ಪ ಬಸಪ್ಪ ನಿಂಬಾಳ (58) ಎಂಬವರನ್ನು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. …
Read More »BSY ವಿರುದ್ಧದ ಪೋಕ್ಸೊ ಪ್ರಕರಣ ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ ಸಿಜೆಗೆ ಮನವಿ
ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದ ತನಿಖೆಯನ್ನು ಸಿಐಡಿ ಪಾರದರ್ಶಕವಾಗಿ ನಡೆಸುತ್ತಿಲ್ಲ ಎಂದು ಸಂತ್ರಸ್ತೆಯ ತಾಯಿ ಗಂಭೀರ ಆರೋಪ ಮಾಡಿದ್ದು, ಸಿಬಿಐ ತನಿಖೆಗೆ ವಹಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಮಂಗಳವಾರ ಹೈಕೋರ್ಟ್ ಸ್ವೀಕರಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತನಿಖಾಧಿಕಾರಿಗಳು ಪ್ರಕ್ರಿಯೆ ಅನುಸರಿಸದೇ ವಿಳಂಬ ಮಾಡುತ್ತಿದ್ದಾರೆ. ಕೇಸ್ ಗೆ ಸಂಬಂಧಪಡದ ವ್ಯಕ್ತಿಗಳನ್ನು ಅನಗತ್ಯವಾಗಿ ಕರೆಸಿ ವಿಚಾರಣೆ ನಡೆಸಿ ಕಾಲಹರಣ ಮಾಡುತ್ತಿದ್ದಾರೆ. ಪ್ರಭಾವಿ …
Read More »ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದ ಸುಪ್ರೀಂ ಕೋರ್ಟ್
ನವದೆಹಲಿ: ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಜಯ್ ರಸ್ತೋಗಿ ಹೇಳಿದ್ದಾರೆ.ಬಂಧನದಲ್ಲಿರುವ ವ್ಯಕ್ತಿಯು ಅಧಿಕಾರದಲ್ಲಿ ಮುಂದುವರಿಯುವುದು ಒಳ್ಳೆಯದಲ್ಲ” ಎಂದು ಅವರು ಹೇಳಿದರು. ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮಾಜಿ ನ್ಯಾಯಾಧೀಶರು, “ನೀವು ಮುಖ್ಯಮಂತ್ರಿಯ ಉನ್ನತ ಹುದ್ದೆಯನ್ನು ಹೊಂದಿದ್ದೀರಿ, ಮತ್ತು ಅದು ಸಾರ್ವಜನಿಕ ಕಚೇರಿಯಾಗಿದೆ. ನೀವು …
Read More »ಬಸ್ ನಿಲ್ದಾಣದಲ್ಲಿ ನೇಣಿಗೆ ಶರಣಾದ ರೈತ
ವಿಜಯಪುರ : ಸಾಲಬಾಧೆಯಿಂದ ಮನನೊಂದು ರೈತರೊಬ್ಬರು ಬಸ್ ನಿಲ್ದಾಣದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ನೇಣಿಗೆ ಶರಣಾದ ರೈತರನ್ನು ಭೀಮಪ್ಪ ಡೋಣೂರ (76) ಎಂದು ಗುರುತಿಸಲಾಗಿದೆ.ಬಸವನಬಾಗೇಬಾಡಿ ತಾಲೂಕಿನ ಹುಣಸ್ಯಾಳ ಗ್ರಾಮದ ರೈತ ಭೀಮಪ್ಪ ಹೂವಿನಹಿಪ್ಪರಗಿ ಬಸ್ ನಿಲ್ದಾಣದ ಆವರಣದಲ್ಲಿ ಕಬ್ಜಿಣದ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿಯಾಗಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಭೀಮಪ್ಪ ಸಾಲ ಮರುಪಾವತಿ ಮಾಡಲಾಗದೇ ನೊಂದಿದ್ದ. …
Read More »ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಎದುರಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಬೆಂಗಳೂರು : ನ್ಯಾಯಾಲಯದ ವಿಚಾರಣೆ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೈಕೋರ್ಟ್‌ನ ಹಾಲ್ ಸಂಖ್ಯೆ 1ರಲ್ಲಿ ನಡೆದಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಎಚ್.ಬಿ.ಪ್ರಭಾಕರ್ ಶಾಸ್ತ್ರಿ ಅವರ ಪೀಠದ ಮುಂದೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು.ಈ ವೇಳೆ ಅಲ್ಲಿಗೆ ಆಗಮಿಸಿದ ವ್ಯಕ್ತಿ ಕೈ ಕೊಯ್ದುಕೊಂಡಿದ್ದಾರೆ. ಕೂಡಲೇ ವ್ಯಕ್ತಿಯನ್ನು ವೈದ್ಯರ ಬಳಿಗೆ ಕರೆದೊಯ್ಯಲು ಪೊಲೀಸರಿಗೆ ಪೀಠ ಸೂಚಿಸಿತು. ಪೊಲೀಸರು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಇದೇ …
Read More »ಬಾದಾಮಿ: ₹5.55 ಲಕ್ಷ ನಗದು ಜಪ್ತಿ
ಬಾದಾಮಿ: ಸಮೀಪದ ಜಾಲಿಹಾಳ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹5.55 ಲಕ್ಷ ನಗದನ್ನು ಬುಧವಾರ ಜಪ್ತಿ ಮಾಡಲಾಗಿದೆ ಎಂದು ಪಿ.ಎಸ್.ಐ. ವಿಠ್ಠಲ ನಾಯಕ ತಿಳಿಸಿದ್ದಾರೆ. ಗದಗದಿಂದ ಬೇಲೂರು ಗ್ರಾಮದ ಕಡೆಗೆ ಖಾಸಗಿ ವಾಹನದಲ್ಲಿ ಸಾಗಿಸುತ್ತಿದ್ದಾಗ ಚೆಕ್‌ಪೋಸ್ಟ್ ಅಧಿಕಾರಿಗಳು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದಿದೆ. ಮಹಾಂತೇಶ ಹರದೊಳ್ಳಿ ,ಮುದಕಪ್ಪ ಖಾನಾಪೂರ, ಮುದಕಪ್ಪ ಕಬಾಡದ, ಅರ್ಜುನ ಪವಾರ, ಮತ್ತು ಮಂಜು ಉಪ್ಪಾರ ಪೋಲಿಸ್ ಸಿಬ್ಬಂದಿ ಇದ್ದರು.
Read More »