Breaking News

ರಾಷ್ಟ್ರೀಯ

ಇದು ಬಡವರು – ಶತಕೋಟಿ ಒಡೆಯರ ನಡುವಿನ ಚುನಾವಣೆ: ರಾಹುಲ್ ಗಾಂಧಿ

ಇದು ಬಡವರು – ಶತಕೋಟಿ ಒಡೆಯರ ನಡುವಿನ ಚುನಾವಣೆ: ರಾಹುಲ್ ಗಾಂಧಿ ಜೈಪುರ: ‘ದೇಶದ ರೈತರು ತಮ್ಮ ಬೆಳಗೆ ಕನಿಷ್ಠ ಬೆಂಬಲ ಬೆಲೆ ಕೇಳುತ್ತಿದ್ದಾರೆ, ಯುವಕರು ಉದ್ಯೋಗ ಹುಡುಕುತ್ತಿದ್ದಾರೆ, ಮಹಿಳೆಯರು ಹಣದುಬ್ಬರದಿಂದ ಬೇಸತ್ತಿದ್ದಾರೆ. ಆದರೆ ಇವರ ಕೂಗನ್ನು ಯಾರು ಕೇಳಿಸಿಕೊಳ್ಳುತ್ತಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದರು.   ರಾಜಸ್ಥಾನದ ಬಿಕಾನೇರ್ ಲೋಕಸಭಾ ಕ್ಷೇತ್ರದ ಅನುಪ್‌ಗಢದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ‘ನಿರುದ್ಯೋಗ, ಹಣದುಬ್ಬರ ಈ ದೇಶದ ಅತಿದೊಡ್ಡ …

Read More »

ರಂಜಾನ್ ಹಬ್ಬದ ದಿನವೇ ಸಲ್ಮಾನ್ ಖಾನ್ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿಚಾರ್ಜ್

ರಂಜಾನ್ ಹಬ್ಬದ ದಿನವೇ ಸಲ್ಮಾನ್ ಖಾನ್ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಮುಂಬೈನಲ್ಲಿರುವ ತಮ್ಮ ನೆಚ್ಚಿನ ಸೂಪರ್ ಸ್ಟಾರ್ ಮನೆಗಳಿಗೆ ಧಾವಿಸಿದ್ದಾರೆ. ಗುರುವಾರ ಇಡೀ ದಿನ, ಬಾಂದ್ರಾದಲ್ಲಿರುವ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಮನೆಗಳ ಹೊರಗೆ ಅಭಿಮಾನಿಗಳು ಜಮಾಯಿಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಸಲ್ಮಾನ್ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ

Read More »

ಲೋಕಸಭೆ ಚುನಾವಣೆ; 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಶುಕ್ರವಾರ ಆರಂಭ

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಲಿದ್ದು, ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ರಂಗೇರಿರುವ ಬೆನ್ನಲ್ಲೇ ಉಳಿದ 14 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಶುಕ್ರವಾರ ಅಧಿಸೂಚನೆ ಹೊರಡಿಸಲಿದೆ. ರಾಜ್ಯದ ಮಧ್ಯಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಏ.19 ಕೊನೆ …

Read More »

ಬೆಳಗಾವಿಯಲ್ಲಿ ಒಟ್ಟು 10,175 ಮಕ್ಕಳು ಫೇಲ್‌!

ಬೆಳಗಾವಿ: ಅಖಂಡ ಜಿಲ್ಲೆ ಸೇರಿ ಈ ಬಾರಿ ಒಟ್ಟು 10,175 ವಿದ್ಯಾರ್ಥಿಗಳು ಫೇಲಾಗಿದ್ದಾರೆ! ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 4,742 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಅತಿ ಹೆಚ್ಚು ಮಕ್ಕಳು ಅಂದರೆ; 2,490 ಮಕ್ಕಳು ಅನುತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಿಂದ 1,352 ಹಾಗೂ ವಿಜ್ಞಾನ ವಿಭಾಗದಲ್ಲಿ 900 ಫೇಲಾಗಿದ್ದಾರೆ. ಅದೇ ರೀತಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 5,433 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 3,606, ವಾಣಿಜ್ಯ ವಿಭಾಗದಲ್ಲಿ 927 ಹಾಗೂ ವಿಜ್ಞಾನ ವಿಭಾಗದಲ್ಲಿ …

Read More »

ಸ್ವರ್ಣವಲ್ಲೀ ಸ್ವಾಮೀಜಿ ಆಶೀರ್ವಾದ ಪಡೆದ ಕಾಗೇರಿ

ಶಿರಸಿ : ಯುಗಾದಿಯ ಶುಭದಿನದಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವರ್ಣವಲ್ಲೀ ಮಠಕ್ಕೆ ಭೇಟಿ ನೀಡಿ, ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ದಂಪತಿ ಸಮೇತವಾಗಿ ಕಾಗೇರಿ ಅವರು ಮಠಕ್ಕೆ ಭೇಟಿ ನೀಡಿ, ಸ್ವರ್ಣವಲ್ಲೀ ಗಂಗಾಧರೇಂದ್ರ ಸ್ವಾಮಿಜಿ ಅವರಿಂದ ಮತ್ತು ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ ಅವರಿಂದ ಮಂತ್ರಾಕ್ಷತೆ ಹಾಗೂ ಆಶೀರ್ವಾದ ಪಡೆದರು.   ಈ ವೇಳೆ ಕಾಗೇರಿ ಅವರ ಪುತ್ರಿ ಶ್ರೀಲಕ್ಷ್ಮೀ ಹೆಗಡೆ, …

Read More »

ಅಕ್ರಮ ಆಸ್ತಿ ಗಳಿಕೆ ಕೇಸ್ ದಾಖಲೆ ಒದಗಿಸಲು ಡಿಸಿಎಂ ಡಿಕೆಶಿಗೆ ಲೋಕಾಯುಕ್ತ ನೋಟಿಸ್

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಲೋಕಾಯುಕ್ತ ಸಂಸ್ಥೆಯಿಂದ ನೋಟಿಸ್ ನೀಡಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ದಾಖಲೆ ಒದಗಿಸಲು ನೋಟಿಸ್ ನೀಡಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು ಸರ್ಕಾರ ರದ್ದು ಮಾಡಿದ್ದು, ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. ಲೋಕಾಯುಕ್ತ ಸಂಸ್ಥೆಯಲ್ಲಿ ಡಿಸಿಎಂ ಡಿಕೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸಿಬಿಐಗೆ ನೀಡಿರುವ ದಾಖಲೆ ಮತ್ತು ಮಾಹಿತಿ ಒದಗಿಸುವಂತೆ ಲೋಕಾಯುಕ್ತ ಪೊಲೀಸರು ಡಿಸಿಎಂ ಡಿಕೆಶಿಗೆ ನೋಟಿಸ್ ನೀಡಿದ್ದಾರೆ.

Read More »

ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಈ ವೆಬ್ ಗೆ ಲಾಗಿನ್ ಆಗಿ.!

ಬೆಂಗಳೂರು : ದ್ವಿತೀಯ ಪಿಯುಸಿ ಬರೆದ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಗೂ ಮರು ಅಂಕ ಎಣಿಕೆಗೆ ಅರ್ಜಿ ಸಲ್ಲಿಸಲು ಇಂದಿನಿಂದಲೇ ಅವಕಾಶ ನೀಡಲಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನ್ಡ್​​​ ಪ್ರತಿಯನ್ನು ಪಡೆಯಲು ಏಪ್ರಿಲ್​ 16ರ ತನಕ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆ ಸ್ಕ್ಯಾನ್ಡ್​​ ಪ್ರತಿಯನ್ನು ಡೌನ್​ಲೋಡ್ ಮಾಡಿಕೊಳ್ಳಲು ಏಪ್ರಿಲ್​ 19ರ ತನಕ, ಮತ್ತು ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಏಪ್ರಿಲ್​ 14 ರಿಂದ 20ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆ-2ಕ್ಕೆ ಅರ್ಜಿ ಸಲ್ಲಿಸುವವರು …

Read More »

ಅವಳಿ ಜವಳಿಗೆ ಪಿಸಿಎಂಸಿಯಲ್ಲಿ ಅವಳಿ ಅಂಕ ವ್ಯತ್ಯಾಸ!

ಸಾಗರ: ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಅವಳಿ ಜವಳಿ ಹೆಣ್ಣು ಮಕ್ಕಳಿಬ್ಬರು ಈ ಬಾರಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಪಿಸಿಎಂಸಿ ವಿಷಯದಲ್ಲಿ ಅವಳಿ ಅಂಕಗಳ ವ್ಯತ್ಯಾಸದೊಂದಿಗೆ ಉತ್ತಮ ಸಾಧನೆ ಮಾಡಿರುವ ಫಲಿತಾಂಶ ಬುಧವಾರ ಲಭ್ಯವಾಗಿದೆ.

Read More »

ಹೆಬ್ಬಾಳ್ಕರ್ ಪಂಚಮಸಾಲಿ ಹೌದೊ ಅಲ್ಲವೋ ಎನ್ನುವ ಗೊಂದಲ ವಿಚಾರ ಇಡೀ ಜಗತ್ತಿಗೆ ಗೊತ್ತಿದೆ.:ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದಲೇ ಸಮಾಜದವರು ಅವರನ್ನು ನಮ್ಮವರು ಎಂದು ಒಪ್ಪಿಕೊಂಡಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ ನೀಡಿದರು. ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಚುನಾವಣೆಯ ಸಂದರ್ಭದಲ್ಲಿ ಯಾರೂ ಸಹ ವಿಷಯಾಂತರ ಮಾಡಬಾರದು. ನಮ್ಮವರು ಎನ್ನುವ ಕಾರಣಕ್ಕೆ ಮೀಸಲಾತಿ ಹೋರಾಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡಿದ್ದರು ಎಂದು ಸಮರ್ಥಿಸಿಕೊಂಡರು. ಯಾರೊ ಒಬ್ಬರು ಏನೇನೋ ಮಾತನಾಡುತ್ತಾರೆ …

Read More »

ನಟರಾದ ಪ್ರಕಾಶ್ ರಾಜ್- ಕಮಲ್ ಹಾಸನ್ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ: ಪ್ರಲ್ಹಾದ ಜೋಶಿ

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ನಟರಾದ ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಅವರ ಅಭಿಪ್ರಾಯಗಳು ಮತ್ತು ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಮಂಗಳವಾರ ಹೇಳಿದ್ದಾರೆ. ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಇಬ್ಬರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಇತ್ತೀಚಿಗೆ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೋಶಿ, ‘ಆ ಹೇಳಿಕೆಗಳಲ್ಲಿ …

Read More »