Breaking News

ರಾಷ್ಟ್ರೀಯ

ಧಾರವಾಡದಲ್ಲಿ ಕೂಡಾ ಓರ್ವ ವ್ಯಕ್ತಿಗೆ ಕೋರೋನಾ ಪಾಸಿಟಿವ್.

… ಧಾರವಾಡದಲ್ಲಿ ಕೂಡಾ ಓರ್ವ ವ್ಯಕ್ತಿಗೆ ಕೋರೋನಾ ಪಾಸಿಟಿವ್… ಆಸ್ಟ್ರೇಲಿಯಾ, ದುಬೈ,ಮಸ್ಕತ್,ಹಾಗೂ ಗೋವಾ ಮೂಲಕ ಧಾರವಾಡ ನಗರಕ್ಕೆ ಆಗಮಿಸಿದ ವ್ಯಕ್ತಿಯಲ್ಲಿ ಕೋವಿಡ್ 19 ಪಾಸಿಟಿವ್ ಇರುವುದು ಪ್ರಯೋಗಾಲಯದಿಂದ ಖಚಿತ… ಧಾರವಾಡದಲ್ಲಿ ಓರ್ವ ವ್ಯಕ್ತಿಗೆ ಕೋರೋನಾ ಇದೆ ಎಂದು ದ್ರಡಪಡಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಧಾರವಾಡದ ಹೊಸ ಯೆಲ್ಲಾಪುರದಲ್ಲಿ ಹೈ ಅಲರ್ಟ್ ಘೋಷಣೆ..

Read More »

ಮಹಾಮಾರಿ ಕರೋನಾ ವಿರುದ್ಧ ದೇಶಾದ್ಯಂತ ಜನತಾ ಕಫ್ರ್ಯೂ ಜಾರಿ, ಮನೆಸೇರಿದ ಜನ

ಬೆಂಗಳೂರು,ಮಾ.22- ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೋನ ಸೋಂಕು ಹಬ್ಬದಂತೆ ನಾಳೆ ಜನತಾ ಕಫ್ರ್ಯೂ(ಸ್ವಯಂ ನಿರ್ಬಂಧ) ಹಾಕಿಕೊಳ್ಳಲು ಪ್ರಧಾನಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಈಡಿ ಭಾರತವೇ ಸ್ತಬ್ಧವಾಗಿದೆ. ದಿನದ ವಹಿವಾಟು ಸ್ಥಗಿತಗೊಂಡರೂ 8 ಗಂಟೆಗೂ ಅಧಿಕ ಕಾಲ ನಿರ್ಬಂಧ ವಿಧಿಸುವುದರಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನತಾಕಫ್ರ್ಯೂ ಘೋಷಿಸಿ ರಾಷ್ಟ್ರದ ಜನತೆ ಸಹಕರಿಸುವಂತೆ ಮನವಿ ಮಾಡಿದ್ದರು. ಪ್ರಧಾನಿ ಮನವಿಗೆ …

Read More »

ಇಂದು ವಿಶ್ವಜಲ ದಿನ: ನೀರು ಜೀವ ಸಂಕುಲಕ್ಕೆ ಸಂಜೀವಿನಿ, ಜೀವಜಲ ರಕ್ಷಿಸಿ-ಮನುಕುಲ ಉಳಿಸಿ

ಸೃಷ್ಟಿಯ ಮೂಲವೇ ಪಂಚಭೂತಗಳು. ಪಂಚಭೂತಗಳಿಲ್ಲದೆ ಯಾವುದೇ ಜೀವಿಯೂ ಜೀವಿಸಲು ಸಾಧ್ಯವಿಲ್ಲ. ಆಕಾಶ, ಜಲ, ಭೂಮಿ, ಅಗ್ನಿ ಮತ್ತು ವಾಯು ಈ ಪಂಚಭೂತಗಳಿಂದಲೇ ಪ್ರಕೃತಿಯ ಸೃಷ್ಟಿಯಾಗಿದೆ. ನೀರು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಪ್ರತಿ ಜೀವ ಸಂಕುಲಕ್ಕೂ ಸಂಜೀವಿನಿ. ಕ್ರಿಮಿಕೀಟಾದಿ, ಗಿಡ-ಮರಗಳಿಗೂ ನೀರು ಅತ್ಯಗತ್ಯ. ಇತಿಹಾಸ ಕೆದಕಿದಾಗ ಈಜಿಫ್ಟ್ ಸಿಂಧೂ, ಹರಪ್ಪ, ಮಹೆಂಜೊದಾರೊನಂತಹ ನಾಗರೀಕತೆಗಳು ಹುಟ್ಟಿದ್ದು ನದಿಯ ಪಾತ್ರಗಳಲ್ಲೇ. ನೀರಿನ ಮೂಲಗಳಿಲ್ಲದಿದ್ದರೆ ನಾಗರಿಕತೆಗಳೇ ಇಲ್ಲ. ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಅವರಿಸಿದ್ದರೂ ಇಡೀ …

Read More »

ಕೊರೊನಾ ವೈರಸ್‌ನಿಂದ ಕೆಎಸ್‌ಆರ್‌ಟಿಸಿಗೆ 13 ಕೋಟಿ ನಷ್ಟ..!

ಬೆಂಗಳೂರು, ಮಾ.21- ಮಾರಕ ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 13 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಮಾ.1ರಿಂದ ನಿನ್ನೆಯವರೆಗೆ ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ 13,35,33,520 ರೂಪಾಯಿ ನಷ್ಟವಾಗಿದೆ. ನಿನ್ನೆ ಒಂದೇ ದಿನ ಎರಡುವರೆ ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ ಅಧಿಕೃತ ಪ್ರಕಟಣೆ ತಿಳಿಸಿದೆ. ಕಾಯ್ದಿರಿಸಿದ ಟಿಕೇಟ್ ರದ್ಧತಿ, ಬಸ್ ಸಂಚಾರ ಸ್ಥಗಿತ ಮತ್ತಿತರ ಕಾರಣಗಳಿಂದ …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಮೂಡಲಗಿಯಲ್ಲಿ ಜನತಾ ಕಫ್ರ್ಯೂ ಜಾಗೃತಿ ಆಂದೋಲನಕ್ಕೆ ಚಾಲನೆ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಮೂಡಲಗಿಯಲ್ಲಿ ಜನತಾ ಕಫ್ರ್ಯೂ ಜಾಗೃತಿ ಆಂದೋಲನಕ್ಕೆ ಚಾಲನೆ ಮೂಡಲಗಿ: ಪ್ರಪಂಚಾದ್ಯಂತ ವ್ಯಾಪಿಸಿರುವ ಕೊರೋನಾ ವೈರಸ್ ಹರಡುವದನ್ನು ತಡೆಯಲು, ನಾಗರಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ನಾಳಿನ ರವಿವಾರದ “ಜನತಾ ಕಫ್ರ್ಯೂ” ಜಾಗೃತಿ ಆಂದೋಲನಕ್ಕೆ ಶಾಸಕ ಹಾಗೂ ಕ.ಹಾ.ಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮೂಡಲಗಿಯಲ್ಲಿಂದು ಚಾಲನೆ ನೀಡಲಾಯಿತು. …

Read More »

ಕೇರಳದಂತೆ ರಾಜ್ಯದಲ್ಲೂ ವಿಶೇಷ ಪ್ಯಾಕೆಜ್ ಘೋಷಿಸಿ: ಹೆಚ್ ಡಿ ಕುಮಾರಸ್ವಾಮಿ

ಕೊರೊನಾ ವೈರಸ್ ನಿಂದ ಎದುರಾದ ನಿರ್ಬಂಧಗಳಿಂದಾಗಿ ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು ಹೆಚ್ಚು ಬಾಧಿತರಾಗಿದ್ದಾರೆ. 2 ತಿಂಗಳ ಅವರ ಬದುಕಿಗೆ ನೆರವಾಗುವಂತೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಆಟೋ, ಕ್ಯಾಬ್ ಚಾಲಕರ ಬ್ಯಾಂಕ್ ಲೋನ್ ಕಂತು ಪಾವತಿಗೆ 2 ತಿಂಗಳ ವಿನಾಯಿತಿ ಕಲ್ಪಿಸಬೇಕು. ಈ ಮೂಲಕ ಸರ್ಕಾರ ಬಡವರ ಪರ ನಿಲುವು ತಾಳಬೇಕು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕೊರೊನಾ ವೈರಸ್​ನಿಂದ ಹದಗೆಟ್ಟಿರುವ ಆರ್ಥಿಕತೆಗೆ ಚೈತನ್ಯ …

Read More »

ಮಧ್ಯಪ್ರದೇಶದಲ್ಲಿ 104 ಮ್ಯಾಜಿಕ್ ನಂಬರ್: ರಾಜ್ಯಪಾಲರಿಗೆ ರಾಜೀನಾಮೆ ನೀಡಲು ಕಮಲ್‍ನಾಥ್ ನಿರ್ಧಾರ

ಭೋಪಾಲ್: ಮಧ್ಯಪ್ರದೇಶದಲ್ಲಿ ಕಳೆದ 17 ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಗೆ ಮತ್ತಷ್ಟು ತಿರುವು ಸಿಕ್ಕಂತಾಗಿದೆ. ಮುಖ್ಯಮಂತ್ರಿ ಕಮಲ್ ನಾಥ್ ರಾಜ್ಯಪಾಲರಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಭೋಪಾಲ್‍ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಧ್ಯಪ್ರದೇಶದ ವಿಧಾನಸಭೆಯ ಫಲಿತಾಂಶವು 11 ಡಿಸೆಂಬರ್ 2018 ರಂದು ಬಂದಿತ್ತು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವಾಗಲೂ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟಿದ್ದೇನೆ. ರಾಜ್ಯದಲ್ಲಿ ಬಿಜೆಪಿಗೆ 15 ವರ್ಷಗಳ ಕಾಲ ಅಧಿಕಾರ ಸಿಕ್ಕಿತ್ತು. ಈಗ ನಾನು …

Read More »

ಅತ್ಯಾಚಾರಿಗಳ ಕೊರಳಿಗೆ ಸಾವಿನ ಕುಣಿಕೆ ಬೀಳುತ್ತಿದ್ದಂತೆ ದೇಶಾದ್ಯಂತ ಸಂಭ್ರಮ..!!

ನವದೆಹಲಿ:ಏಳು ವರ್ಷಗಳ ಸತತ ಹೋರಾಟದ ಬಳಿಕ ನಿರ್ಭಯಾ ಮೇಲಿನ ಪೈಶಾಚಿಕ ಅತ್ಯಾಚಾರ ಮತ್ತು ಬೀಕರ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ನಾಲ್ವರು ನರ ರಾಕ್ಷಸರಿಗೆ ಇಂದು ಮುಂಜಾನೆ ದೆಹಲಿಯ ತಿಹಾರ್ ಜೈಲಿನಲ್ಲಿ ಮರಣದಂಡನೆ ವಿಧಿಸಿರುವುದಕ್ಕೆ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ.ಪರಮಪಾಪಿಗಳಾದ ಮುಕೇಶ್ ಸಿಂಗ್, ಪವನ್ ಕುಮಾರ್, ವಿನಯ್ ಶರ್ಮ ಮತ್ತು ಅಕ್ಷಯ್ ಕುಮಾರ್‍ಗೆ ಇಂದು ಬೆಳಗ್ಗೆ ಸರಿಯಾಗಿ 5.30ರಲ್ಲಿ ನೇಣಿಗೇರಿಸಲಾಯಿತು. ಕಾನೂನು ಪ್ರಕಾರವಾಗಿಯೇ ಕೀಚಕರ ಸಂಹಾರವಾಗುತ್ತಿದ್ದಂತೆಯೇ ಇಂದು ಬೆಳಗ್ಗೆಯಿಂದಲೇ ದೇಶದ ವಿವಿಧ ನಗರಗಳಲ್ಲಿ …

Read More »

ನಿರ್ಭಯಾ ಅತ್ಯಾಚಾರ ಮಾಡಿದ ಪಾಪಿಗಳನ್ನು ನೇಣು ಹಾಕಿದ ವಧಾದಾರ(ಹ್ಯಾಂಗ್‍ಮನ್)ನಿಗೆ ಚಿತ್ರನಟ ಜಗ್ಗೇಶ್ ಒಂದು ಲಕ್ಷ ರೂ. ದೇಣಿಗೆ

ಬೆಂಗಳೂರು,ಮಾ.20- ನಿರ್ಭಯಾ ಅತ್ಯಾಚಾರ ಮಾಡಿದ ಪಾಪಿಗಳನ್ನು ನೇಣು ಹಾಕಿದ ವಧಾದಾರ(ಹ್ಯಾಂಗ್‍ಮನ್)ನಿಗೆ ಚಿತ್ರನಟ ಜಗ್ಗೇಶ್ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಿರ್ಭಯ ಅತ್ಯಾಚಾರಿಗಳಾದ ಮುಕೇಶ್‍ಸಿಂಗ್, ಪವನ್ ಗುಪ್ತಾ, ವಿನಯ್‍ಕುಮಾರ್ ಶರ್ಮಾ, ಅಕ್ಷಯ್ ಕುಮಾರ್‍ನನ್ನು ಗಲ್ಲಿಗೇರಿಸಿದ ಹ್ಯಾಂಗ್‍ಮನ್‍ಗೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇಂದು ದೇಣಿಗೆ ನೀಡಿರುವ ಬಗ್ಗೆ ಟ್ವಿಟರ್‍ನಲ್ಲಿ ಜಗ್ಗೇಶ್ ಪ್ರಕಟಿಸಿದ್ದಾರೆ. ನಿರ್ಭಯಾ ಹಂತಕರ ಹ್ಯಾಂಗ್‍ಮನ್‍ಗೆ ನನ್ನ ದೇಣಿಗೆ ದೇವನೊಬ್ಬನಿರುವ, ಅವ ಎಲ್ಲ ನೋಡುತ್ತಿರುವ ಸತ್ಯದ …

Read More »

ನಿರ್ಭಯಾ ಅಪರಾಧಿಗಳು ಏನಾಗಿದ್ದರು? ಇಲ್ಲಿದೆ ಪೂರ್ಣ ವಿವರ!

ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನೂ ಗಲ್ಲಿಗೇರಿಸಲಾಗಿದ್ದು, ಭಾರತದಲ್ಲಿ ಅತ್ಯಾಚಾರ ಅಪರಾಧಿಗಳಿಗೆ ಅತ್ಯುನ್ನತ ಶಿಕ್ಷೆ ಪೂರ್ಣಗೊಂಡಿದೆ ಸುಮಾರು 8 ವರ್ಷಗಳ ಹಿಂದೆ 23 ವರ್ಷದ ಅರೆ ವೈದ್ಯಕೀಯ ಪದವಿ ವಿದ್ಯಾರ್ಥಿನಿ ‘ನಿರ್ಭಯಾ’ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ ಬೆಳಿಗ್ಗೆ 5.30ಕ್ಕೆ ಗಲ್ಲಿಗೇರಿಸಲಾಗಿದೆ. ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳ ವಯಸ್ಸು ಹಾಗೂ ಅವರು ಮಾಡುತ್ತಿದ್ದ ವೃತ್ತಿ ಸೇರಿದಂತೆ ವೈಯಕ್ತಿಕ ವಿವರಗಳು ಇಲ್ಲಿವೆ. ಮುಖೇಶ್ ಸಿಂಗ್‌: ವಯಸ್ಸು: 30 …

Read More »