Breaking News

ರಾಷ್ಟ್ರೀಯ

ಭಾರತೀಯ ಸೇನೆಗೆ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ.

  ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಚಿತ್ರದುರ್ಗ ಈ ಜಿಲ್ಲೆಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಗಾಗಿ ಸೆಪ್ಟೆಂಬರ್ 19 ರಿಂದ 2021 ರ ಮಾರ್ಚ್ 31 ರವರೆಗೆ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ.   ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದ ಸರ್ಕಾರದ ಮಾರ್ಗಸೂಚಿಯಂತೆ ನೇಮಕಾತಿ ರ್ಯಾಲಿ ನಡೆಯುವ ದಿನಾಂಕ ಹಾಗೂ ಸ್ಥಳವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ …

Read More »

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ನಂಟು: ದಾಖಲೆ ಸಮೇತ 10 ರಿಂದ 15 ನಟ-ನಟಿಯರ ಬಣ್ಣ ಬಯಲು ಮಾಡಿದ ಇಂದ್ರಜೀತ್..!

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್‌ ನಂಟಿದೆ ಎನ್ನುವ ಹೇಳಿಯ ಕುರಿತು ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಇಂದ್ರಜೀತ್‌ ಲಂಕೇಶ್‌ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 10 ರಿಂದ 15 ನಟ ನಟಿಯರ ಹೆಸರುಗಳನ್ನ ದಾಖಲೆ ಸಮೇತ ಅಧಿಕಾರಿಗಳಿಗೆ ನೀಡಿದ್ದೇನೆ ಎಂದಿದ್ದಾರೆ.     ಸಿಸಿಬಿ ವಿಚಾರಣೆಯ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಇಂದ್ರಜೀತ್‌ ಲಂಕೇಶ್‌, “ಅಧಿಕಾರಿಗಳಿಗೆ ಡಿಜಿಟಲ್‌ ಯವಿಡನ್ಸ್ ನೀಡಿದ್ದೇನೆ. ಡ್ರಗ್ಸ್‌ ಪಾರ್ಟಿ ನಡೆಸಿದ ನಟ-ನಟಿಯರ ಹೆಸರಿನ ಸಮೇತ ಅವ್ರ ಕುರಿತ ಪೂರ್ಣ ದಾಖಲೆಯನ್ನ …

Read More »

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

ದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶರಾಗಿದ್ದಾರೆ. 84 ವರ್ಷದ ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳದ ಬಿರ್​ಬೂಮ್ ಜಿಲ್ಲೆಯ ಮಿರತಿಯಲ್ಲಿ ಜನಿಸಿದ್ದರು. ಕಿಂಕರ್ ಮುಖರ್ಜಿ ಹಾಗೂ ರಾಜಲಕ್ಷ್ಮೀ ದಂಪತಿಗೆ 1935ರ ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ದಾ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್​ರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ, ಪ್ರಣಬ್ ಮುಖರ್ಜಿ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು ಎಂದು ತಿಳಿದುಬಂದಿದೆ. …

Read More »

ಈ ವರ್ಷ ಜನಗಣತಿ, NPR‌ ಪರಿಷ್ಕರಣೆ ಇಲ್ಲ

ಹೊಸದಿಲ್ಲಿ: ಕೋವಿಡ್ 19 ಭೀತಿಯಿಂದಾಗಿ ಈ ವರ್ಷ ನಡೆಯಬೇಕಿದ್ದ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆಗಳನ್ನು ವರ್ಷದ ಮಟ್ಟಿಗೆ ಮುಂದೂಡಲಾಗಿದೆ. ಕೋವಿಡ್ 19 ಕಾಲದಲ್ಲಿ ಜನಗಣತಿ ಸರಿಯಲ್ಲ. ಗಣತಿ ಒಂದು ವರ್ಷ ತಡವಾಗಿ ನಡೆದರೆ ತೊಂದರೆಯೇನೂ ಇಲ್ಲ ಎಂದು ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   2021ರಲ್ಲಿ ಯಾವಾಗ ಜನಗಣತಿ ನಡೆಸಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿಲ್ಲ. ಈ ವರ್ಷ ಗಣತಿ ನಡೆಸುವುದು ಬೇಡ ಎಂದಷ್ಟೇ ನಿರ್ಧರಿಸಲಾಗಿದೆ …

Read More »

ನೀರಾವರಿ ಯೋಜನೆಗಳ ಶೀಘ್ರ ಜಾರಿಗೆ ಮನವಿ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ 11 ಏತ ನೀರಾವರಿ ಯೋಜನೆ ಜಾರಿಗೆ ಕರ್ನಾಟಕ ನೀರಾವರಿ ನಿಗಮ ಅನುಮತಿ ನೀಡಿದೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಯೋಜನೆಗಳು ಶೀಘ್ರ ಅನುಷ್ಠಾನವಾದರೆ ಇದೊಂದು ಇತಿಹಾಸ ಎಂದು ಹಿರಿಯ ಮುಖಂಡ ಬಿ.ಆರ್‌.ಸಂಗಪ್ಪಗೋಳ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ 11 ಏತ ನೀರಾವರಿ ಯೋಜನೆಯಿಂದ ಎರಡು ಲಕ್ಷ ಎಕರೆಗೂ ಅಧಿ ಕ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. …

Read More »

ಸೈನಿಕ ತರಬೇತಿಗೆ ಶೀಘ್ರ ಕೇಂದ್ರ ಸ್ಥಾಪನೆ

ಯಮಕನಮರಡಿ: ಪೊಲೀಸ್‌, ಸೇನೆ ಸೇರುವ ಇಚ್ಛೆಯುಳ್ಳ ಜಿಲ್ಲೆಯ ಹಾಗೂ ಮತಕ್ಷೇತ್ರದ ಯುವಕರಿಗೆ ಉಚಿತ ತರಬೇತಿ ನೀಡಲು ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ವ್ಯಾಪ್ತಿಯಲ್ಲಿ 10 ಎಕರೆ ಜಮೀನಿನಲ್ಲಿ ಒಂದು ತರಬೇತಿ ಕೇಂದ್ರವನ್ನು ತೆರೆದು ಮಾಜಿ ಸೈನಿಕರಿಂದ ತರಬೇತಿ ನೀಡಲಾಗುವುದು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಅವರು ರವಿವಾರ ಹುಕ್ಕೇರಿ ತಾಲೂಕಿನ ಬರಗನಾಳ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಶ್ರೀ ಅಕ್ಕಮಹಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ …

Read More »

ಯುವಕನ ರುಂಡ ಕಡಿದು ಭೀಕರ ಹತ್ಯೆ………………!

ಕಲಬುರಗಿ: ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದುದ್ದು, ಯುವಕನ ರುಂಡ ಕತ್ತರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಜಿಲ್ಲೆಯ ಅಫಜಲಪುರ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ ಯುವಕನ ಹತ್ಯೆ ಮಾಡಲಾಗಿದ್ದು, ಬಾಬು ಮಲ್ಲೇಶಪ್ಪ ಕೋಬಾಳ್(32) ಹತ್ಯೆಯಾದ ಯುವಕ. ಅದೇ ಗ್ರಾಮದ ಪ್ರಭು ಕಾಂಬಳೆ ಎಂಬಾತನಿಂದ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೈಕ್ ಮೇಲೆ ಕುಳಿತಿದ್ದಾಗ ಪ್ರಭು ಕಾಂಬಳೆ ಕೊಡಲಿಯಿಂದ ಬಾಬು ಕೋಬಾಳನ ರುಂಡ ಕಡಿದಿದ್ದಾನೆ ಎಂದು ಆರೋಪಿಸಲಾಗಿದೆ. ಸುಮಾರು 9 ವರ್ಷಗಳ …

Read More »

ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ1 ರೂಪಾಯಿ ದಂಢ, 3 ತಿಂಗಳು ಶಿಕ್ಷೆ

ಹೊಸದಿಲ್ಲಿ: ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಶಿಕ್ಷೆ ವಿಧಿಸಿದೆ. ಪ್ರಶಾಂತ್ ಭೂಷಣ ನ್ಯಾಯಾಂಗ ನಿಂದನೆ ಕೇಸ್ ಗೆ ಸುಪ್ರೀಂ ಕೋರ್ಟ್ 1 ರೂಪಾಯಿ ದಂಢ, 3 ತಿಂಗಳು ಶಿಕ್ಷೆ ವಿಧಿಸಿದೆ. ಜತೆಗೆ 3 ತಿಂಗಳು ಕೋರ್ಟ್ ನಲ್ಲಿ ವಾದ ಮಂಡಿಸಿದಂತೆ ತೀರ್ಪು  ನೀಡಿದೆ. ಈ ಹಿಂದೆ ಸುಪ್ರೀಂಕೋರ್ಟ್‌ನ ಪೀಠ ಕ್ಷಮೆ ಕೇಳಿದರೆ ಕೇಸ್‌ ಇತ್ಯರ್ಥಗೊಳ್ಳುವ ಸುಳಿವು ಬಿಟ್ಟುಕೊಟ್ಟಿತ್ತು. ಆದರೆ …

Read More »

ಸರ್ಕಾರಿ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಗ್ರಂಥಾಲಯಗಳನ್ನು ಆಧುನೀಕರಣಗೊಳಿಸುವ ಹಾಗೂ ಗಣಿಕೀಕರಣಗೊಳಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಕಾಲೇಜು ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಮತ್ತು ನ್ಯಾಕ್‌ ಮಾನ್ಯತೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಗ್ರಂಥಾಲಯ ಗಣಕೀಕರಣಗೊಳಿಸಲು ಇ-ಗ್ರಂಥಾಲಯ ಸಾಫ್ಟ್‌ವೇರ್‌ಗಳನ್ನು ಕಾಲೇಜುಗಳಿಗೆ ಇಲಾಖೆಯಿಂದ ಎನ್‌ಐಸಿ ಸಹಕಾರದೊಂದಿಗೆ ಕಳುಹಿಸಿಕೊಡಲಾಗಿದೆ. 4499 ಹುದ್ದೆಗೆ ಅರ್ಜಿ ಆಹ್ವಾನ: SSLC ಪಾಸಾದವರಿಗೆ ಇದು ಸುವರ್ಣವಕಾಶ.. ಸಂಯೋಜಿತ ಗ್ರಂಥಾಲಯ ನಿರ್ವಹಣೆ ಸಾಫ್ಟ್‌ವೇರ್‌ ಅಳವಡಿಸಲು ಅಗತ್ಯವಿರುವ ಕಂಪ್ಯೂಟರ್‌, ಬಾರ್‌ಕೋಡ್‌ ಪ್ರಿಂಟರ್‌, ಬಾರ್‌ಕೋಡ್‌ …

Read More »

ಶಾಸಕ ಆರಗ ಕಾರು ಚಾಲಕನಿಗೆ ಮಹಾಮಾರಿ ಸೋಂಕು

ತೀರ್ಥಹಳ್ಳಿ  : ಶಾಸಕ ಆರಗ ಜ್ಞಾನೇಂದ್ರ ಅವರ ಕಾರು ಚಾಲಕನಿಗೆ ಕೊರೋನಾ ಸೋಂಕು ತಗುಲಿದ್ದು, ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಚಾಲಕನಿಗೆ ಕಳೆದ ಎರಡು ದಿನಗಳಿಂದ ಜ್ವರ ಕಾಣಿಸಿ ಕೊಂಡಿದ್ದರ ಹಿನ್ನೆಲೆ ಪರೀಕ್ಷೆ ಮಾಡಲಾಯಿತು. ಆಗ ಪಾಸಿಟಿವ್‌ ಬಂದಿದೆ ಎಂದು ಶಾಸಕ ಆರಗ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಆರಗ ಜ್ಞಾನೇಂದ್ರ ಹಾಗೂ ಜೊತೆಯಲ್ಲಿದ್ದ ಆಪ್ತ ಸಹಾಯಕ ಹೊದಲ ಬಸವರಾಜ್‌, ತಾಪಂ ಸದಸ್ಯ ಕುಕ್ಕೆ ಪ್ರಶಾಂತ ಇವರು ಕೂಡಾ ಕೊರೋನಾ ಪರೀಕ್ಷೆ …

Read More »