Breaking News

ರಾಷ್ಟ್ರೀಯ

ವೃತ್ತಿ ರಂಗಭೂಮಿ ಕಲಾವಿದರಿಗೆ ನೆರವು.

  ಮಂಡ್ಯ ನಾಗಮಂಗಲ: ತಾಲ್ಲೂಕಿನ ವೃತ್ತಿ ರಂಗಭೂಮಿ ಕಲಾವಿದರಿಗೆ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ರಿಂದ ಫುಡ್ ಕಿಟ್ ವಿತರಣೆ. ಕೋವಿಡ್-19 ಸೋಂಕು ಹೆಚ್ಚಾಗುವ ಹಿನ್ನೆಲೆಯಲ್ಲಿ. ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ವೃತ್ತಿ ಭೂಮಿ ಕಲಾವಿದರಿಗೆ ಆಹಾರದ ಸಮಸ್ಯೆಯಾಗಬಾರದು ಎಂದು ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ರವರು ತಾಲೂಕಿನ ಪ್ರವಾಸಿ ಮಂದಿರದಲ್ಲಿ ದಿನಸಿ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ನಮ್ಮ ತಾಲೂಕಿನಲ್ಲಿರುವ ಜನ ನಾಟಕದ ಗೀಳಿಗೆ ಬಿದ್ದು ಅವರು …

Read More »

ಇಂದು ಸಂಜೆ ದಿಢೀರ್ ಭೇಟಿ ನೀಡಿ, ಕೊರೊನಾ ಸೋಂಕಿತರಿಗೆ ಕ್ವಾರಂಟೈನ್ ಮಾಡಿರುವ ವ್ಯವಸ್ಥೆಯನ್ನ ಪರಿಶೀಲಿಸಿದ್ರು.

ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಜನರನ್ನು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸಚಿವರು ಸೂಚಿಸಿದ್ದರು. ಅಧಿಕಾರಿಗಳು ಆದೇಶವನ್ನ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಖುದ್ದು ಸಚಿವರೆ ಭೇಟಿ ನೀಡಿ ಪರಿಶೀಲಿಸಿದ್ರು. ಕೆ ಆರ್ ಪೇಟೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ರು.  ಇನ್ನೂ ಉತ್ತಮ ರೀತಿಯಲ್ಲಿ ಕ್ವಾರಂಟೈನ್ ನಲ್ಲಿ ಇರುವವರನ್ನ ನೋಡಿಕೊಳ್ಳಬೇಕು. ಚಿಕ್ಕಮಕ್ಕಳಿದ್ದಾರೆ ಅವರಿಗೆ ಹಾಲು, ಹಣ್ಣಿನ …

Read More »

ಪೋಲಿಸ್ ಸ್ಟೇಷನ್ ಕ್ರೈಂ ವಿಭಾಗದ ಮುಖ್ಯಪೇದೆ ನಾಗರಾಜು ಅವರಿಗೆ ಕೊರೋನಾ ಸೋಂಕು ಪತ್ತೆ.ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಪೋಲಿಸ್ ಠಾಣೆ ಸೀಲ್ ಡೌನ್.

ಮಂಡ್ಯ ಕೃಷ್ಣರಾಜಪೇಟೆ ಪಟ್ಟಣ ಪೋಲಿಸ್ ಠಾಣೆಯ ಕ್ರೈಂ ವಿಭಾಗದ ಮುಖ್ಯಪೇದೆ ನಾಗರಾಜು ಅವರಿಗೆ ಕೊರೋನಾ ಪಾಸಿಟಿವ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣ ಪೋಲಿಸ್ ಠಾಣೆ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಕೆ.ಆರ್.ಪೇಟೆ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಠಾಣೆಯ ಕೆಲಸಗಳು ಪರ್ಯಾಯವಾಗಿ ಕಿಕ್ಕೇರಿ ಠಾಣೆಯಲ್ಲಿ ನಡೆಯಲಿವೆ ಎಂದು ವಿವರಿಸಿದ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು …

Read More »

ಇನ್ನು ಕೆಲವು ರಾಜ್ಯಗಳ ಗಡಿ ಬಂದ್ ಮಾಡಲು ಮುಂದಾದ ರಾಜ್ಯ ಸರ್ಕಾರ ……….

ಬೆಂಗಳೂರು, ಮೇ 20- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆಸ್ಪೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇನ್ನು ಕೆಲವು ರಾಜ್ಯಗಳ ಪ್ರವೇಶಕ್ಕೆ ನಿರ್ಬಂಧ ಹಾಕಲು ಮುಂದಾಗಿದೆ. ಈಗಾಗಲೇ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಮತ್ತು ಕೇರಳ ರಾಜ್ಯಗಳ ಪ್ರವೇಶಕ್ಕೆ ಕರ್ನಾಟಕದಲ್ಲಿ ನಿರ್ಬಂಧವಿಧಿಸಲಾಗಿದೆ. ಈ ರಾಜ್ಯಗಳಿಂದ ಯಾರೇ ಬಂದರೂ ಕಡ್ಡಾಯವಾಗಿ ಕ್ವಾರಂಟೈನ್ ಒಳಗಾಗಬೇಕೆಂದು ಸೂಚನೆ ಕೊಡಲಾಗಿದೆ. ಇದರ ನಡುವೆ ಸೋಂಕು ಹೆಚ್ಚಿರುವ ಕೆಲ ರಾಜ್ಯಗಳಿಗೆ ಕರ್ನಾಟಕದಲ್ಲಿ ಕೆಲ ದಿನಗಳ ಮಟ್ಟಿಗೆ ಪ್ರವೇಶ …

Read More »

ಪತ್ನಿ, ಪುತ್ರ ಆಸ್ಪತ್ರೆಯಿಂದ ಮನೆಗೆ ಬರೋಷ್ಟರಲ್ಲಿ ಶವವಾಗಿ ಡಿಎಸ್‍ಪಿ ಪತ್ತೆ……

ಹೈದರಾಬಾದ್: ಅನುಮಾನಾಸ್ಪದ ರೀತಿಯಲ್ಲಿ ಶ್ರೀಕಾಕುಲಂ ಉಪ ಪೊಲೀಸ್ ವರಿಷ್ಠಾಧಿಕಾರಿ (ವಿಶೇಷ ವಿಭಾಗ) ಕೃಷ್ಣ ವರ್ಮಾ ಅವರು ವಿಶಾಖಪಟ್ಟಣಂನ ತಮ್ಮ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಡಿಎಸ್‍ಪಿ ಅವರ ಮಗನಿಗೆ ಆರೋಗ್ಯ ಸಮಸ್ಯೆಗಳಿದ್ದವು. ಹೀಗಾಗಿ ಡಿಎಸ್‍ಪಿ ಅವರ ಪತ್ನಿ ಮತ್ತು ಮಗ ಆಸ್ಪತ್ರೆಗೆ ಹೋಗಿದ್ದರು. ಡಿಎಸ್‍ಪಿ ವರ್ಮಾ ಮನೆಯಲ್ಲಿಯೇ ಇದ್ದರು. ಆದರೆ ಪತ್ನಿ ಮತ್ತು ಮಗ ಮನೆಗೆ ಹಿಂದಿರುಗಿ ಬಂದು ನೋಡಿದಾಗ ನೆಲದ ಮೇಲೆ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ …

Read More »

ಎಣ್ಣೆಗಾಗಿ 1 ಕಿ.ಮೀ.ಗಟ್ಟಲೇ ಕ್ಯೂ – ಮದ್ಯದಂಗಡಿಗೆ ದಿನಕ್ಕೆ 500 ಟೋಕನ್ ಮಾತ್ರ””’

ಚೆನ್ನೈ: ಸುಪ್ರೀಂಕೋರ್ಟ್ ಮದ್ರಾಸ್ ಹೈಕೋರ್ಟ್ ಆದೇಶವನ್ನು ತಡೆಹಿಡಿದ ಬೆನ್ನಲ್ಲೇ ತಮಿಳುನಾಡು ಸರ್ಕಾರವು ಮದ್ಯದಂಗಡಿಯನ್ನು ಮತ್ತೆ ಓವನ್ ಮಾಡಲು ಆದೇಶ ಹೊರಡಿಸಿದೆ. ಇದರಿಂದಾಗಿ ಫುಲ್ ಖುಷಿಯಾದ ಮದ್ಯ ಪ್ರಿಯರು ಕಿ.ಮೀ.ಗಟ್ಟಲೇ ಕ್ಯೂ ನಿಂತು ಎಣ್ಣೆ ಖರೀದಿಸಿದ್ದಾರೆ. ಕೆಲವಡೆ ಸರದಿಯಲ್ಲಿ ನಿಲ್ಲುವ ಬದಲು ಸಾಲಿನಲ್ಲಿ ಚಪ್ಪಲಿ ಇಟ್ಟು ಗುಂಪುಗೂಡಿ ನಿಂತ ದೃಶ್ಯಗಳು ಕಂಡು ಬಂದವು. ತಮಿಳುನಾಡಿನಲ್ಲಿ ಸರ್ಕಾರಿ ಮದ್ಯದಂಗಡಿಗಳನ್ನು ಮುಚ್ಚುವಂತೆ ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು. ಹೀಗಾಗಿ ರಾಜ್ಯ …

Read More »

ಹಣವಿಲ್ಲದೆ ಪರದಾಡ್ತಿದ್ದ ನಟಿಗೆ ಮೇಕಪ್ ಮ್ಯಾನ್ ಸಹಾಯ……..

ಮುಂಬೈ: ಕೊರೊನಾ ಲಾಕ್‍ಡೌನ್‍ನಿಂದ ಇಡೀ ದೇಶವೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಅದೇ ರೀತಿ ಕಿರುತೆರೆ ನಟಿಯೊಬ್ಬರು ಆರ್ಥಿಕ ಕಷ್ಟಕ್ಕೆ ಸಿಲುಕಿದ್ದಾಗ ಮೇಕಪ್ ಮ್ಯಾನ್ ಸಹಾಯ ಮಾಡುವುದಾಗಿ ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸೀರಿಯಲ್, ರಿಯಾಲಿಟಿ ಶೋಗಳಿಂದ ಖ್ಯಾತಿ ಪಡೆದಿರುವ ಸೋನಾಲ್ ವೆಂಗುರ್ಲೇಕರ್ ಕೊರೊನಾ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸ್ವಂತ ಸೋನಾಲ್ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. “ಲಾಕ್‍ಡೌನ್‍ನಿಂದಾಗಿ ಮುಂದಿನ ತಿಂಗಳು ಜೀವನ ನಡೆಸಲು ನನ್ನ ಬಳಿ ಹೆಚ್ಚು …

Read More »

ಟ್ರಸ್ಟ್ ಹೆಸರಲ್ಲಿ ಭಾರೀ ಮೋಸ- ಎಚ್ಚರಿಕೆ ನೀಡಿದ ಸಲ್ಮಾನ್ ಖಾನ್………..

ನವದೆಹಲಿ: ಸ್ಟಾರ್ ನಟರ ಹೆಸರಲ್ಲಿ ಮೋಸ ನಡೆಯುತ್ತಿರುವ ಪ್ರಕರಣಗಳು ಸಾಮಾನ್ಯ ಎಂಬಂತಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಕೆಲ ಜನ ಯಾಮಾರಿಸುತ್ತಿದ್ದರು. ಇದೀಗ ಬಡವರಿಗೆ ಹಾಗೂ ಯುವ ಕಲಾವಿದರಿಗೆ ಮೋಸ ಮಾಡಲು ಮುಂದಾಗಿದ್ದಾರೆ. ಅದೂ ಸಹ ಟ್ರಸ್ಟ್ ಗಳ ಹೆಸರಿನಲ್ಲಿ ಯಾಮಾರಿಸುತ್ತಿದ್ದು, ಭಾಯಿಜಾನ್ ಸಲ್ಮಾನ್ ಖಾನ್ ಅವರ ಸಲ್ಮಾನ್ ಖಾನ್ ಫಿಲಮ್ಸ್ ಹೆಸರಿನಲ್ಲಿ ಯುವ ಕಲಾವಿದರಿಗೆ ಮೋಸ ಮಾಡುತ್ತಿದ್ದಾರೆ. ಹೌದು ನಕಲಿ ಖಾತೆಗಳ ಮೂಲಕ ತಪ್ಪು ಮಾಹಿತಿ ನೀಡುತ್ತಿದ್ದ …

Read More »

ಅಂದು ವೇಶ್ಯೆ ಆಗಿದ್ದಾಕೆ ಇಂದು ಬಾಲಿವುಡ್‍ನ ಸ್ಟಾರ್ ಬರಹಗಾರ್ತಿ

ಮುಂಬೈ: ಬಾಲಿವುಡ್‍ನ ಖ್ಯಾತ ಬರಹಗಾರ್ತಿ ಒಬ್ಬರ ಕತೆ ಕೇಳಿದರೆ ಯಾವ ಸಿನಿಮಾ ಕತೆಗಳಿಗಿಂತಲೂ ಕಡಿಮೆಯಿಲ್ಲ ಎನಿಸುತ್ತೆ. ಆದರೆ ಇದು ಸಿನಿಮಾ ಕತೆಯಲ್ಲ ಖ್ಯಾತ ಬರಹಗಾರ್ತಿಯ ನಿಜ ಜೀವನದ ವ್ಯತೆ. ಹಿಂದೆ ಜೀವನ ನಡೆಸಲು ಮುಂಬೈನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಇಂದು ಬಾಲಿವುಡ್‍ನಲ್ಲಿ ತಮ್ಮ ಪ್ರತಿಭೆ ಮೂಲಕ ಖ್ಯಾತಿ ಗಳಿಸಿದ್ದಾರೆ. ಇವರು ಬರೆದ ಕತೆಗಳು ಇಂದು ಬಿಟೌನ್‍ನಲ್ಲಿ ಹಿಟ್ ಸಿನಿಮಾಗಳಾಗಿವೆ. ಅಂದು ಜೀವನ ನಿರ್ವಹಣೆಗಾಗಿ ವೇಶ್ಯೆ ಆಗಿದ್ದವರು ಇಂದು ಬಾಲಿವುಡ್‍ನಲ್ಲಿ ಖ್ಯಾತಿ …

Read More »

ಐಪಿಎಲ್ ರದ್ದಾದ್ರೆ ಬಿಸಿಸಿಐಗೆ ಅಂದಾಜು 4,000 ಕೋಟಿ ರೂ. ನಷ್ಟ!

ಮುಂಬೈ: ಕೊರೊನಾ ವೈರಸ್ ಕಾರಣದಿಂದ ವಿಶ್ವ ಕ್ರೀಡಾಲೋಕ ತತ್ತರಿಸಿದೆ. ಹಲವು ಪ್ರತಿಷ್ಠಿತ ಟೂರ್ನಿಗಳು ಕೊರೊನಾದಿಂದ ರದ್ದಾಗಿದ್ದು, ಮತ್ತಷ್ಟು ಟೂರ್ನಿಗಳನ್ನು ಮುಂದೂಡಲಾಗಿದೆ. ಇತ್ತ 2020ರ ಐಪಿಎಲ್ ಟೂರ್ನಿ ಕೂಡ ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಆದರೆ ಮತ್ತೆ ಲಾಕ್‍ಡೌನ್ ಮುಂದುವರಿಸಿದ ಕಾರಣ ಬಿಸಿಸಿಐ ಮುಂದಿನ ಆದೇಶದವರೆಗೂ ಐಪಿಎಲ್ ಮುಂದೂಡಿತ್ತು. ಆದರೆ ಇದುವರೆಗೂ ಐಪಿಎಲ್ ಆರಂಭವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಮತ್ತೆ 2020ರ ಐಪಿಎಲ್ ಶೆಡ್ಯೂಲ್ ಮುಂದೂಡಲು ಬಿಸಿಸಿಐ ಚಿಂತನೆ ನಡೆಸಲು …

Read More »