Breaking News

ರಾಷ್ಟ್ರೀಯ

ಸಿಎಂ ತವರು ಶಿವಮೊಗ್ಗದಲ್ಲಿ ಮತ್ತೊಬ್ಬ ಶಾಸಕರಿಗೆ ಕೋವಿಡ್-19 ಪಾಸಿಟಿವ್

ಶಿವಮೊಗ್ಗ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮತ್ತೋರ್ವ ಶಾಸಕರಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ರ್ಯಾಪಿಡ್ ಆಯಂಟಿಜೆನ್ ಟೆಸ್ಟ್ ನಲ್ಲಿ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಇಂದು ಆರ್.ಪ್ರಸನ್ನ ಕುಮಾರ್ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡರು. ಈ ವೇಳೆ ಸೋಂಕು ಪತ್ತೆಯಾಗಿದೆ. ಆದರೆ ರೋಗ …

Read More »

ಸೋಂಕಿನಿಂದ ಗುಣಮುಖ: ಬೆಳಗಾವಿಯಲ್ಲಿ ಯುವಕನಿಗೆ ಮಾಲೆ ಹಾಕಿ ಪಟಾಕಿ ಸಿಡಿಸಿ ಸ್ವಾಗತ

ಬೆಳಗಾವಿ: ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ ಯುವಕನಿಗೆ ಮಾಲೆ ಹಾಕಿ, ಪಟಾಕಿ ಸಿಡಿಸಿ ಇಲ್ಲಿಯ ಖಡಕ್‌ ಗಲ್ಲಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಆಸ್ಪತ್ರೆಯಿಂದ ಬಿಡುಗಡೆ ಆಗಿ ಬರುತ್ತಿದ್ದಂತೆ ಖಡಕ್ ಗಲ್ಲಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಬರುತ್ತಿದ್ದಂತೆ ಪಟಾಕಿ ಸಿಡಿಸಿದ ಸ್ಥಳೀಯ ಯುವಕರು ಸಂಭ್ರಮಿಸಿದರು. ಹತ್ತು ದಿನಗಳ ಹಿಂದೆ ಖಡಕ್ ಗಲ್ಲಿಯ 35 ವರ್ಷ ವಯಸ್ಸಿನ ಈ ವ್ಯಕ್ತಿಗೆ ಕೋವಿಡ್-19 ‌ಸೋಂಕು ವಕ್ಕರಿಸಿತ್ತು. ಇಲ್ಲಿನ ಕೋವಿಡ್ ವಾರ್ಡ್​​​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ …

Read More »

ಜಿಲ್ಲಾಡಳಿತ ಮತ್ತು ಬಿಮ್ಸ್ ಎಡವಟ್ಟು: ಎರಡನೇ ಬೆಂಗಳೂರು ಆಗ್ತಿದೆಯಾ ಕುಂದಾನಗರಿ?

ಬೆಳಗಾವಿ: ಜಿಲ್ಲಾಡಳಿತ ಮತ್ತು ಬಿಮ್ಸ್ ಆಸ್ಪತ್ರೆ ಎಡವಟ್ಟಿನಿಂದ ಕೊವಿಡ್ ವಿಚಾರದಲ್ಲಿ ಎರಡನೇ ಬೆಂಗಳೂರು ಆಗ್ತಿದೆಯಾ ಕುಂದಾನಗರಿ ಎಂಬ ಆತಂಕ ಉಂಟಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಿತ್ಯವೂ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಇನ್ನೂರು, ಮುನ್ನೂರರ ಗಡಿ ದಾಟುತ್ತಿದೆ. ಜಿಲ್ಲಾಡಳಿತ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾದ್ರೂ ಮುಚ್ಚಿಡುವ ಪ್ರಯತ್ನ? ಮಾಡುತ್ತಿದೆ. ಮೃತದೇಹ ಸಾಗಿಸುವ ವಾಹನದ ಡ್ರೈವರ್ ಹೇಳುವಂತೆ ನಿತ್ಯವೂ ಹದಿನೈದರಿಂದ ಹದಿನೆಂಟು ಸೋಂಕಿತರು ಮೃತಪಡುತ್ತಿದ್ದಾರಂತೆ. ವಯಸ್ಸಾದವರು ಆಸ್ಪತ್ರೆಗೆ ದಾಖಲಾದ್ರೂ ಚಿಕಿತ್ಸೆ …

Read More »

ಜನ್ಮಜನ್ಮಕೂ ಇವನೇ ನನ್ನ ಅಣ್ಣನಾಗಲಿ, ಇವಳೇ ನನ್ನ ತಂಗಿಯಾಗಲಿ……

ಅಣ್ಣ ತಂಗಿಯರ ಬಾಂಧವ್ಯವದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಾಖಿ ಹಬ್ಬ. ರಾಖಿ ಹಬ್ಬದಂದು ಸಹೋದರಿ ಸಹೋದರನ ಕೈಗೆ ಕೇಸರಿ ದಾರ ಬರಿ ದಾರವಲ್ಲ, ಅದು ರಕ್ಷೆಯ ಪ್ರತೀಕ. ಅದರಲ್ಲಿ ಅಣ್ಣ ಸದಾಕಾಲ ನನ್ನನ್ನು ರಕ್ಷಿಸಬೇಕೆಂಬ ಆಶಯ ಅಡಗಿದೆ ರಕ್ಷಾ ಬಂಧನವನ್ನು ಏಕೆ ಆಚರಿಸುತ್ತೇವೆ? ಅಣ್ಣ ತಂಗಿಯರ ಅನುಬಂಧದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಅರ್ಥಗರ್ಭಿತ ಹಬ್ಬವೇ ರಕ್ಷಾಬಂಧನ. ಭಾರತೀಯ ಸಂಸ್ಕೃತಿಯಲ್ಲಿ ಕಂಡಬರುವ ವೈವಿಧ್ಯಮಯ ಆಚರಣೆಗಳಲ್ಲಿ ಈ ಹಬ್ಬವು ಕೂಡ ಒಂದು. ರಕ್ಷಾಬಂಧನ ಎಂದರೆ …

Read More »

ಗಡಿ ಕಾಯೋ ಯೋಧರಿಗಾಗಿ ಕುಂದಾನಗರಿಯಲ್ಲಿ ಸಜ್ಜಾಯ್ತು Eco-friendly ರಾಖಿ!

ಬೆಳಗಾವಿ: ದೇಶದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ನಮ್ಮ ವೀರ ಯೋಧರಿಗೆ ಸೋದರತ್ವ ಸಾರುವ ರಕ್ಷಾಬಂಧನದ ಪ್ರಯುಕ್ತವಾಗಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ರಾಖಿ ರವಾನಿಸಿದ್ದಾರೆ. ಅದೂ ಕೂಡ ಪರಿಸರ ಸ್ನೇಹಿ ರಾಖಿ. ಹೌದು, ಆಗಸ್ಟ್ 3 ರಂದು ರಕ್ಷಾಬಂಧನ ಹಬ್ಬವಿದ್ದು, ಇದೀಗ ದೇಶದ ಗಡಿಗೆ ಸ್ಪೀಡ್ ಫೋಸ್ಟ್ ಮೂಲಕ ರಾಖಿ ಹಾಗೂ ಗ್ರೀಟಿಂಗ್ ರವಾನಿಸಿದ್ದಾರೆ.   ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಲೀಡರ್ಸ್ ಸೆಲ್​ನಲ್ಲಿರುವ ನಗರದ ಹಲವು ಕಾಲೇಜು ವಿದ್ಯಾರ್ಥಿನಿಯರು ರಾಖಿ ಹಬ್ಬ …

Read More »

ಸೋಂಕಿತರಿಗೆ ಹೆಚ್ಚುವರಿ 1939 ಹಾಸಿಗೆ

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೆಚ್ಚುವರಿಯಾಗಿ ಜಿಲ್ಲಾದಾದ್ಯಂತ ವಸತಿ ನಿಲಯಗಳ 1939 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯನ್ನೇ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿರುವುದರಿಂದ 400 ಹಾಸಿಗೆಗಳ ಸೌಲಭ್ಯವಿದೆ. ಅದರಲ್ಲಿ 50 ಹಾಸಿಗೆಗಳನ್ನು ಐಸಿಯುಗೆ ಬಳಸಿಕೊಳ್ಳಲಾಗುತ್ತಿದೆ. ಜತೆಗೆ ಏಳು ಖಾಸಗಿ ಆಸ್ಪತ್ರೆಗಳಿಂದ 280 ಹಾಸಿಗೆ ಲಭ್ಯ ಇದೆ. ಈಗಾಗಲೇ ಹಲವು ಆಸ್ಪತ್ರೆಗಳು ಸೋಂಕಿತರಿಗೆ ಚಿಕಿತ್ಸೆ ನೀಡಲು ಆರಂಭಿಸಿವೆ. ಕಳೆದ ಇಪ್ಪತ್ತು ದಿನಗಳಿಂದ ಪಾಸಿಟಿವ್‌ ಪ್ರಕರಣ ಹೆಚ್ಚುತ್ತಿರುವ ಕಾರಣ ಪರಿಸ್ಥಿತಿ ನಿಭಾಯಿಸಲು …

Read More »

IPL‌ ಆಡಳಿತ ಮಂಡಳಿ ಸಭೆ: ವೇಳಾಪಟ್ಟಿ, ಸರಕಾರದ ಒಪ್ಪಿಗೆ ಸಾಧ್ಯತೆ

ಮುಂಬಯಿ: ಐಪಿಎಲ್‌ ಆಡಳಿತ ಮಂಡಳಿಯ ಸಭೆ ರವಿವಾರ ನಡೆಯಲಿದೆ. ಸೆ. 19ರಿಂದ ನ. 8ರವರೆಗೆ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿರುವ 13ನೇ ಆವೃತ್ತಿ ಐಪಿಎಲ್‌ ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವದ ಪೂರ್ವಭಾವಿ ಸಭೆ. ಇಲ್ಲಿ 8 ಫ್ರಾಂಚೈಸಿಗಳು ಕಾತರದಿಂದ ಕಾಯುತ್ತಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ. ಮುಖ್ಯವಾಗಿ ಚೀನದ ಸ್ಪಾನ್ಸರ್‌ಶಿಪ್‌ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕಿದೆ. ಹಾಗೆಯೇ ಸರಕಾರದ ಒಪ್ಪಿಗೆ ಪಡೆಯಲು ಮುಂದಡಿ ಇಡಬೇಕಿದೆ. ವೇಳಾಪಟ್ಟಿ ಕೂಟದ ದಿನಾಂಕ ಈಗಾಗಲೇ …

Read More »

ಸಚಿವೆ ಕಮಲ ರಾಣಿ ವರುಣ್ ನಿಧನ: ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆ ಭೇಟಿ ರದ್ದು

ಲಖನೌ: ಸಚಿವೆ ಕಮಲ ರಾಣಿ ವರುಣ್ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಭಾನುವಾರ ಅಯೋಧ್ಯೆಗೆ ಭೇಟಿ ನೀಡಬೇಕಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲನೆ ನಡೆಸುವ ಸಲುವಾಗಿ ಇಂದು ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಗೆ ನೀಡಿಲಿದ್ದರು. ಆದರೆ, ಕೊರೋನಾದಿಂದಾಗಿ ಕಮಲ ರಾಣಿ ವರಣ್ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಭೇಟಿ ರದ್ದುಪಡಿಸಿದ್ದಾರೆಂದು ವರದಿಗಳು ತಿಳಿಸಿವೆ. ಈ ನಡುವೆ ಕಮಲ ರಾಣಿಯವರು ನಿಧನ …

Read More »

ಖಿನ್ನತೆಗೆ ಒಳಗಾಗಿದ್ದ ಸುಶಾಂತ್​ ಅರೆಹುಚ್ಚರಂತಾಗಿದ್ದರು, ತಾಯಿಯಂತೆ ರಿಯಾ ಆರೈಕೆ ಮಾಡುತ್ತಿದ್ದರು

ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ದ್ವಿವ್ಯಕ್ತಿತ್ವ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರ ತರದ ಖಿನ್ನತೆಯಿಂದಾಗಿ ಅರೆಹುಚ್ಚನಂತಾಗಿದ್ದರು. ಅವರಿಗೆ ಇಂಥ ಅಟ್ಯಾಕ್​ ಆದಾಗಲೆಲ್ಲ ತಾಯಿಯಂತೆ ಅಕ್ಕರೆ ತೋರಿ, ಅವರನ್ನು ಆರೈಕೆ ಮಾಡಿದ್ದು ನಟಿ ರಿಯಾ ಚಕ್ರವರ್ತಿ ಎಂದು ಸುಶಾಂತ್​ಗೆ ಮಾನಸಿಕ ಚಿಕಿತ್ಸೆ ಕೊಡುತ್ತಿದ್ದ ಡಾ. ಸುಸಾನ್​ ವಾಕರ್​​ ಹೇಳಿದ್ದಾರೆ. ರಿಯಾ ಚಕ್ರವರ್ತಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದ್ದ. ಅವರನ್ನು ಮೂಲೆಗುಂಪು ಮಾಡಲು ಸಂಚು ರೂಪಿಸಿದಂತೆ ಕಾಣುತ್ತಿದ್ದೆ. ಆದರೆ, ರಿಯಾ ಅವರಿಗೆ ಸುಶಾಂತ್​ …

Read More »

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ : ಮಕ್ಕಳಿಗೆ ಬಿಸಿಯೂಟದ ಜೊತೆಗೆ ಉಚಿತ ಬೆಳಗಿನ ಉಪಾಹಾರ

ನವದೆಹಲಿ, -ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಬೆಳಗಿನ ಉಪಾಹಾರವನ್ನೂ ಉಚಿತವಾಗಿ ನೀಡಲು ಕೇಂದ್ರ ಸರ್ಕಾರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ)ಯಲ್ಲಿ ಪ್ರಸ್ತಾಪಿಸಲಾಗಿದೆ. ಶಾಲಾ ಮಕ್ಕಳಿಗೆ ಬೆಳಗ್ಗೆ ಪೌಷ್ಟಿಕಾಂಶವುಳ್ಳ ಉಪಾಹಾರ ನೀಡಬೇಕು. ಇದರಿಂದ ಮಕ್ಕಳ ಭೌತಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗಿ ಇದು ಕಲಿಕೆಗೆ ಸಹಕಾರಿಯಾಗುತ್ತದೆ ಎಂದು ಹೊಸ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ದೇಶದ ವಿವಿಧ ರಾಜ್ಯಗಳ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ …

Read More »