Breaking News

ರಾಷ್ಟ್ರೀಯ

ಗಂಡನನ್ನೇ ಕೊಂದು ಹೂತು ಹಾಕಿದ ಪತ್ನಿ

ಚಿಕ್ಕೋಡಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಗಂಡನನ್ನೇ ಹೆಂಡತಿ ಕೊಲೆ ಮಾಡಿ ಹೂತು ಹಾಕಿದ ಘಟನೆ ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ ತಡವಾಗಿ ಪತ್ತೆಯಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್‌ ತಾಲೂಕಿನ ನೇರ್ಲೆ ಗ್ರಾಮದ ಸಚಿನ ಸದಾಶಿವ ಭೋಪಳೆ(35) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದ ಪತ್ನಿ ಅನಿತಾ ಭೋಪಳೆ(33) ಸಹಚರ ಸಹೋದರ ಹಂಚಿನಾಳ ಗ್ರಾಮದ ಕೃಷ್ಣಾತ್‌ ರಾಜಾರಾಮ ಘಾಟಗೆ(26) ಹಾಗೂ ಪತ್ನಿಯ ಸಹೋದರಿ ಕಾಗಲ್‌ ತಾಲೂಕಿನ ಸಿದ್ಧನೇರ್ಲಿ ಗ್ರಾಮದ ವನಿತಾ …

Read More »

473 ಮಂದಿಗೆ ಕೋವಿಡ್ ಸೋಂಕು

ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಶನಿವಾರ 473 ಮಂದಿಗೆ ಸೋಂಕು ತಗುಲಿದ್ದು, 331 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.473 ಹೊಸ ಪ್ರಕರಣಗಳಿಂದ 14235 ಸೋಂಕಿತರು ಆಗಿದ್ದು, ಒಂದೇ ದಿನ 331 ಮಂದಿ ಗುಣಮುಖರಾಗಿ ಇಲ್ಲಿಯವರೆಗೆ 10145 ಜನ ಗುಣಮುಖರಾಗಿ ಬಿಡುಗಡೆ ಆದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌-19 ವಾರ್ಡ್‌ನಲ್ಲಿ ಸದ್ಯ 3887 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿನವರೆಗೆ 1,08,624 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 26,960 …

Read More »

ಪತಿ ಕೊಂದು ಎಮ್ಮೆ ಸತ್ತಿದೆ ಅಂತ ಹೂತು ಹಾಕಿದ್ದ ಕೇಸ್; ನಾಲ್ವರು ಆರೋಪಿಗಳ ಬಂಧನ

ಚಿಕ್ಕೋಡಿ: ಪತಿಯನ್ನು ಕೊಂದು ಎಮ್ಮೆ ಸತ್ತಿದೆ ಅಂತಾ ಹೊಲದಲ್ಲಿ ಹೂತು ಹಾಕಿದ್ದ ಆರೋಪದ ಮೇಲೆ ಪತ್ನಿ ಸೇರಿದಂತೆ ಆಕೆಯ ಸಂಬಂಧಿಕರನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ. ಮೃತ ಸಚಿನ್ ಪತ್ನಿ ಅನಿತಾ, ಕೃಷ್ಣಾ ಅಲಿಯಾಸ್ ಪಿಂಟು ರಾಜಾರಾಮ್ ಘಾಟಗೆ (26), ವನಿತಾ ಚವ್ಹಾಣ್​(29), ಗಣೇಶ ರೇಡೇಕರ(21),ಬಂಧಿತ ಆರೋಪಿಗಳು. ಅನಿತಾ ತಮ್ಮ ಪತಿಯನ್ನು ಹತ್ಯೆ ಮಾಡಿ ಸಹೋದರ, ಸಹೋದರಿಯ ಸಹಾಯದಿಂದ ಹೊಲದಲ್ಲಿ ಜೆಸಿಬಿಯಲ್ಲಿ ಗುಂಡಿತೋಡಿಸಿದ್ದ ಜಾಗದಲ್ಲಿ ಹೂತು ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. …

Read More »

ಅಭಿವೃದ್ಧಿಯೇ ನಮ್ಮ ಗುರಿ: ರಮೇಶ ಜಾರಕಿಹೊಳಿ

ಗೋಕಾಕ: ‘ಜನರಿಗೆ ಮೂಲ ಸೌಕರ್ಯ ಒದಗಿಸಲು ಸಂಕಲ್ಪ ತೊಟ್ಟಿದ್ದೇವೆ. ಅಭಿವೃದ್ಧಿಯೊಂದೇ ನಮ್ಮ ಮುಂದಿರುವ ಗುರಿ’ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ದುರದುಂಡಿ ಗ್ರಾಮದಲ್ಲಿ ಆರ್‌ಡಿಪಿಆರ್‌, ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3ರಡಿ ದುರದುಂಡಿ- ಬಡಿಗವಾಡ-ಮಲ್ಲಾಪೂರ ಪಿಜಿ ರಸ್ತೆ ಸುಧಾರಣೆ ಕಾಮಗಾರಿಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಬಿಜೆಪಿಯು ಸಮಗ್ರ ಪ್ರಗತಿ ಬಯಸಿದ್ದು, ಇದರ …

Read More »

ಉದ್ಯಮ ಸ್ನೇಹಿ ರಾಜ್ಯಗಳಲ್ಲಿ ಆಂಧ್ರ ಮತ್ತೆ ನಂ.1: 17ನೇ ಸ್ಥಾನಕ್ಕೆ ಕರ್ನಾಟಕ ಕುಸಿತ!

ನವದೆಹಲಿ : ಉದ್ಯಮಸ್ನೇಹಿ ವಾತಾವರಣ ಹೊಂದಿರುವ ರಾಜ್ಯಗಳ ವಾರ್ಷಿಕ ರಾರ‍ಯಂಕಿಂಗ್‌ ಶನಿವಾರ ಪ್ರಕಟಗೊಂಡಿದ್ದು, ಆಂಧ್ರಪ್ರದೇಶ ಸತತ 3ನೇ ಬಾರಿಗೆ ಮೊದಲ ಸ್ಥಾನ ಗಳಿಸಿದೆ. ಆದರೆ ಕಳೆದ ಸಲ 8ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಸಲ 17ನೇ ಸ್ಥಾನಕ್ಕೆ ಇಳಿದಿದೆ. 2019ರ ಔದ್ಯಮಿಕ ಸುಧಾರಣೆ ಕ್ರಿಯಾಯೋಜನೆಗಳನ್ನು ರಾಜ್ಯಗಳು ಜಾರಿಗೊಳಿಸಿದ್ದನ್ನು ಆಧರಿಸಿ ಉದ್ದಿಮೆ ಹಾಗೂ ಆಂತರಿಕ ವ್ಯಾಪಾರ ಇಲಾಖೆ ಈ ಶ್ರೇಯಾಂಕ ಸಿದ್ಧಪಡಿಸಿದೆ. ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಿಸುವ ಉದ್ದೇಶದಿಂದ ಕಳೆದ 5 …

Read More »

ನಂದಿನಿ ಸಿಹಿ ಮಾರಾಟ : ಭಾರೀ ಬಂಪರ್

ಬೆಂಗಳೂರು  : ಗೌರಿ ಗಣೇಶ ಹಬ್ಬ ಮತ್ತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ನಂದಿನಿ ಸಿಹಿ ಉತ್ಸವಕ್ಕೆ ರಾಜ್ಯಾದ್ಯಂತ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದು ತಿಂಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ಶೇ.68ರಷ್ಟುಹೆಚ್ಚಳವಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಮಾಹಿತಿ ನೀಡಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ನಂದಿನಿ ಹಾಲು ಸೇರಿದಂತೆ ಚೀಸ್‌, ಪನ್ನೀರ್‌ ಮತ್ತು ಸಿಹಿ ಉತ್ಪನ್ನಗಳ ಮಾರಾಟದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು. ಆದರೆ, ಗೌರಿ ಗಣೇಶ ಮತ್ತು …

Read More »

ರಾಜ್ಯದಲ್ಲಿ ಗರಿಷ್ಠ ಸೋಂಕಿತರು : ದಾಖಲೆ ಸಂಖ್ಯೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಶನಿವಾರ 9,746 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಎರಡನೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3.61 ಲಕ್ಷಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್‌ 2ರಂದು ದಾಖಲಾಗಿದ್ದ 9,860 ಪ್ರಕರಣದ ಬಳಿಕ ಶನಿವಾರ ಎರಡನೇ ಅತಿ ಹೆಚ್ಚು ಸೋಂಕು ವರದಿಯಾಗಿದೆ. ಅಲ್ಲದೆ, ದಾಖಲೆಯ 9,102 ಮಂದಿ ಗುಣಮುಖರಾಗಿದ್ದಾರೆ. ಇನ್ನು ಶನಿವಾರ 128 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 6,298ಕ್ಕೆ …

Read More »

ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ಇಲ್ಲಿದೆ ನೋಡಿ ಸಂಪೂರ್ಣ ವೇಳಾಪಟ್ಟಿ

ಬೆಂಗಳೂರು : ಪದವಿ ಪೂರ್ವಶಿಕ್ಷಣ ಇಲಾಖೆಯು 2019-20 ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಸೆ. 7 ರಿಂದ 19 ರವರೆಗೆ ನಡೆಯಲಿದೆ. ಪರೀಕ್ಷೆಗಳು ಬೆಳಗ್ಗೆ 10.15 ರಿಂದ 1.30 ಹಾಗೂ 2.15 ರಿಂದ 5.30 ರ ಅವಧಿಯಲ್ಲಿ ನಡೆಯಲಿವೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ವೇಳಾ ಪಟ್ಟಿ ಸಮಯ ಬೆಳಗ್ಗೆ 10.15 ರಿಂದ 1.30ರವರೆಗೆ, ಮಧ್ಯಾಹ್ನ 2.15 ರಿಂದ ಸಾಯಂಕಾಲ 5.30ರವರೆಗೆ ಸೆ.7ರ ಬೆಳಗ್ಗೆ ಉರ್ದು, ಸಂಸ್ಕೃತ, …

Read More »

ವಿವಿಧ ರಾಜ್ಯಗಳ 47 ಶಿಕ್ಷಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು.

ನವದೆಹಲಿ,ಸೆ.5- ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 47 ಶಿಕ್ಷಕರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು. ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ವಿಡಿಯೋ ಲಿಂಕ್ ಮೂಲಕ ಪ್ರಶಸ್ತಿಗಳನ್ನು ನೀಡಿ ಮಾತನಾಡಿದ ರಾಷ್ಟ್ರಪತಿಯವರು, ಉತ್ತಮ ಕಟ್ಟಡ, ದುಬಾರಿ ಸೌಲಭ್ಯಗಳು ಇರುವ ಶಿಕ್ಷಣ ಸಂಸ್ಥೆಗಳಿಂದ ಉತ್ತಮ ವಿದ್ಯಾರ್ಥಿಗಳು ಸೃಷ್ಟಿಯಾಗುವುದಿಲ್ಲ. ಬದಲಿಗೆ ಒಳ್ಳೆಯ ಶಿಕ್ಷಕರಿಂದ ಮಾತ್ರ ಉತ್ತಮ ವಿದ್ಯಾರ್ಥಿಗಳು ಸೃಷ್ಟಿಯಗುತ್ತಾರೆ. ಆ ಮೂಲಕ ಉತ್ತಮ …

Read More »

ಉಪ ಚುನಾವಣೆಗೆದಿನಾಂಕವನ್ನೇ ನಿಗದಿಪಡಿಸಿಲ್ಲ,ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಕೆಲಸ ಗಳನ್ನು ಆರಂಭಿಸಿವೆ,

ಬೆಂಗಳೂರು, ಸೆ.5- ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ಇನ್ನೂ ದಿನಾಂಕವನ್ನೇ ನಿಗದಿಪಡಿಸಿಲ್ಲ, ಆದರೂ ಕ್ಷೇತ್ರದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಕೆಲಸ ಗಳನ್ನು ಆರಂಭಿಸಿವೆ, ಬಿಜೆಪಿಗೆ ಇಲ್ಲಿ ಯಾವುದೇ ನೆಲೆ ಇಲ್ಲ, ಆದರೆ ಶಿರಾ ಕ್ಷೇತ್ರ, ಬಿಜೆಪಿ ಸಂಸದ ಆನೇಕಲ್ ನಾರಾಯಣ ಸ್ವಾಮಿ ಪ್ರತಿನಿಧಿಸುವ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಬಿ ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ಪ್ರಧಾನ …

Read More »