ಹಗರಿಬೊಮ್ಮನಹಳ್ಳಿ : ಯುವಕನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಸೊನ್ನ ಗ್ರಾಮದ ನಿವಾಸಿ ಬಡಿಗೇರ್ ಸಿದ್ದೇಶ (22) ಎಂಬುವನೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಮೃತ ಬಡಿಗೇರ್ ಸಿದ್ದೇಶ ಬಹುದಿನಗಳಿಂದ ಮೂರ್ಛೆ ರ್‍ರೋಗ ಮತ್ತು ಮೂಲವ್ಯಾಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಇದರಿಂದ ಜಿಗುಪ್ಸೆ ಹೊಂದಿದ್ದನೆಂದು ಎಂದು ಹೇಳಲಾಗುತ್ತಿದೆ. ಹೀಗಾಗಿ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ವಿಷ …
Read More »ರಫೆಲ್ ಜೆಟ್ ಭಾರತಕ್ಕೆ ಪ್ರಸ್ತುತ ಪರಿಸ್ಥಿತಿಯಲ್ಲಿ ಸಹಾಯ ಮಾಡುತ್ತದೆ : ರಾಜನಾಥ್ ಸಿಂಗ್
ನವದೆಹಲಿ : ‘ರಫೇಲ್ ಜೆಟ್ ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧಗಳ ಬಲವನ್ನು ತೋರಿಸುತ್ತದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.ಇದನ್ನು ಭಾರತದ ರಕ್ಷಣಾ ಇತಿಹಾಸದಲ್ಲಿ ಒಂದು ಐತಿಹಾಸಿಕ ಕ್ಷಣ ಎಂದು ಕರೆಯುತ್ತಾರೆ ರಫಲೆ ಜೆಟ್‌ಗಳು ಭಾರತಕ್ಕೆ ತನ್ನ ಪ್ರಸ್ತುತ ಭದ್ರತಾ ಪರಿಸ್ಥಿತಿಯಲ್ಲಿ ಸಹಾಯ ಮಾಡುತ್ತವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ‘ನಮ್ಮ ಪ್ರಸ್ತುತ ಪರಿಸ್ಥಿತಿಗೆ ಈ ಪ್ರಚೋದನೆಯು ನಿರ್ಣಾಯಕವಾಗಿದೆ. ಇದು ನಮ್ಮ ಪ್ರಸ್ತುತ ಪ್ರಾದೇಶಿಕ ಪರಿಸ್ಥಿತಿಗೆ ಮುಖ್ಯವಾಗಿದೆ. …
Read More »ಇದು ರಾಜ್ಯ ಸರ್ಕಾರದ ದುಷ್ಟತನದ ಪರಮಾವಧಿ: ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದ ಜನತೆ ಸಾಲು-ಸಾಲು ಸಂಕಷ್ಟಗಳಿಂದ ಹೆಣಗುತ್ತಿದ್ದರೂ ರಾಜ್ಯ ಸರ್ಕಾರವು ಎಂಟು ದಿನಗಳ ಕಾಲ ನಾಮ್‌ಕೆವಾಸ್ತೆ ವಿಧಾನಮಂಡಲ ಅಧಿವೇಶನ ನಡೆಸುತ್ತಿರುವುದು ಜನದ್ರೋಹಿ ಹಾಗೂ ದುಷ್ಟತನದ ಪರಮಾವಧಿ. ಸರ್ಕಾರ ಕೂಡಲೇ ಅಸಾಂವಿಧಾನಿಕವಾಗಿ ನಡೆದುಕೊಳ್ಳುವುದನ್ನು ಬಿಟ್ಟು ಅಧಿವೇಶನವನ್ನು ಹದಿನೈದು ದಿನಗಳ ಕಾಲ ವಿಸ್ತರಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ …
Read More »ಕಳಪೆ ಕಾಮಗಾರಿಯಿಂದ ಕಾಲುವೆ ಸೋರಿ ರೈತರ ಜಮೀನು ಸವಳಾಗಿ ಪರಿವರ್ತನೆ ಆಂಕರ್:
ಚಿಕ್ಕೋಡಿ ಕೊಚ್ಚಿಹೊದ ಕಾಲುವೆಯ ಸಿಮೆಂಟ ಕಾಂಕ್ರೆಟ್, ಮೊಳಕಾಲು ತನಕ ನೀರು ನಿಂತು ಕೆಸರು ಗದ್ದೆಯಂತಾಗಿರುವ ಜಮೀನು, ನೀರಾವರಿ ಇಲಾಖೆಯ ವಿರುದ್ಧ ಘೋಷಣೆ ಹಾಕುತ್ತಿರುವ ರೈತರು ಇವೇಲ್ಲ ದೃಶ್ಯಗಳು ಕಂಡು ಬಂದಿರುವುದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಐನಾಪೂರ ಗ್ರಾಮದಲ್ಲಿ…. ಜವಳಿ ಸಚಿವ ಶ್ರೀಮಂತ ಪಾಟೀಲ ತವರು ಕ್ಷೇತ್ರದ ಐನಾಪೂರ ಗ್ರಾಮದ ರೈತರು ಗೋಳು ಯಾರು ಕೇಳದಂತಾಗಿದೆ. ಐನಾಪೂರ ಗ್ರಾಮದಿಂದ ಮಂಗಸೂಳಿ ಗ್ರಾಮದವರಗೆ ಐನಾಪೂರ ಏತ ನೀರಾವರಿ ಯೋಜನೆಯ ಕಾಲುವೆ ಮೂಲಕ …
Read More »ಬೆಳಗಾವಿಯಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ
ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಮೆಡಿಕಲ್ ಆಕ್ಸಿಜನ್ ಸಿಲಿಂಡರ್‌ಗಳಿಗೆ ಪರದಾಟ ಎದುರಾಗಿದೆ. ‘ಬೇರೆ ಕಡೆಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಕೊಡುವಂತಿಲ್ಲ’ ಎಂದು ಅಲ್ಲಿನ ಜಿಲ್ಲಾಧಿಕಾರಿ ಆದೇಶಿಸಿರುವುದು ಇಲ್ಲಿ ಸಮಸ್ಯೆ ಸೃಷ್ಟಿಸಿದೆ. ಗಡಿ ತಾಲ್ಲೂಕುಗಳಾದ ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ಅಥಣಿ ಹಾಗೂ ರಾಯಬಾಗ ಭಾಗದ 30ಕ್ಕೂ ಹೆಚ್ಚಿನ ಆಸ್ಪತ್ರೆಗಳಿಗೆ ಹಲವು ದಿನಗಳಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ ಎದುರಾಗಿದೆ. ಈ ಆಸ್ಪತ್ರೆಗಳು, ಆಕ್ಸಿಜನ್‌ಗಾಗಿ ಹಲವು ವರ್ಷಗಳಿಂದಲೂ ಕೊಲ್ಹಾಪುರದ …
Read More »ಬಿಡುವು ಕೊಟ್ಟು ಬಿದ್ದ ಮಳೆಗೆ ರಾಜ್ಯ ತತ್ತರ: ಹಾಳಾಯ್ತು ಬೆಳೆ, ಮನೆಗಳಿಗೆ ನುಗ್ಗಿದ ಚರಂಡಿ ನೀರು
ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ.. ಚಿಕ್ಕ ನದಿಯೇ ಭೋರ್ಗರೆಯುತ್ತಿದೆ.. ರಸ್ತೆಗಳಿಗೂ ನೀರು ನುಗ್ಗಿದೆ, ಮನೆ ಮುಂದೆಯೇ ನೀರು ಬಂದು ನಿಂತಿದೆ.. ವರುಣನ ಅಬ್ಬರಕ್ಕೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿದೆ. ಬೆಳಗಾವಿಗೆ ಮತ್ತೆ ಎದುರಾಯ್ತು ಜಲಕಂಟಕ! ಭಯ.. ಮತ್ತದೇ ಭಯ.. ನೆರೆ ನರಕದಿಂದ ಪಾರಾಗಿ ತಿಂಗಳ ತುಂಬೋ ಮೊದಲೇ, ಬೆಳಗಾವಿ ಜನರಲ್ಲಿ ಮತ್ತೆ ಪ್ರವಾಹ ಆತಂಕ ಕಾಡ್ತಿದೆ. ಯಾಕಂದ್ರೆ, ಕಳೆದೆರಡು ದಿನದಿಂದ ಸುರೀತಿರೋ ಮಳೆಯಿಂದಾಗಿ, ಮಲಪ್ರಭಾ ನದಿ ಅಪಾಯದ ಮಟ್ಟಕ್ಕೇರಿದೆ. ಕಿತ್ತೂರಿನ …
Read More »ನಟಿ ಸಂಜನಾ ಆಪ್ತ ಶೇಖ್ ಫೈಜಲ್ ಮನೆ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿಸಲಾಗಿರುವ ನಟಿ ಸಂಜನಾ ಗಲ್ರಾನಿ ಆಪ್ತ ಎನ್ನಲಾದ ಶೇಖ್ ಫೈಜಲ್ ಎಂಬಾತನ ಮನೆ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ಮಾಡಿದರು. ಜಯನಗರದಲ್ಲಿರುವ ಮನೆಗೆ ಹೋಗಿದ್ದ ಪೊಲೀಸರು, ಗಂಟೆಗಟ್ಟಲೇ ಪರಿಶೀಲನೆ ನಡೆಸಿದರು. ಫೈಜಲ್ ಮನೆಯಲ್ಲಿ ಇರಲಿಲ್ಲ. ಸಹೋದರ ಹಾಗೂ ಪತ್ನಿ-ಮಕ್ಕಳು ಮಾತ್ರ ಇದ್ದರು. ಶೋಧ ಮುಗಿಸಿದ ಪೊಲೀಸರು, ಫೈಜಲ್ ಸಹೋದರನನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆತಂದಿದ್ದರು. ಫೈಜಲ್ ಬಗ್ಗೆ ಮಾಹಿತಿ ಸಂಗ್ರಹಿಸಿ …
Read More »ಪ್ಲಾಸ್ಮಾ ಥೆರಪಿಯಿಂದ ಪ್ರಯೋಜನವಿಲ್ಲ: ಅಧ್ಯಯನದಲ್ಲಿ ಬಯಲು!
ನವದೆಹಲಿ : ಕೊರೋನಾ ಸೋಂಕಿನಿಂದ ಉಂಟಾಗುವ ಸಾವು ತಡೆಯುವಲ್ಲಿ ಅಥವಾ ಸಾಮಾನ್ಯ ಸೋಂಕು ತೀವ್ರ ಪ್ರಮಾಣಕ್ಕೆ ಹೋಗುವುದನ್ನು ನಿಲ್ಲಿಸುವಲ್ಲಿ ಪ್ಲಾಸ್ಮಾ ಥೆರಪಿಯಿಂದ ವಿಶೇಷ ಪ್ರಯೋಜನವೇನೂ ಆಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ದೇಶದ 39 ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಪ್ರಯೋಜನದ ಬಗ್ಗೆ ಏ.22ರಿಂದ ಜು.12ರವರೆಗೆ ಐಸಿಎಂಆರ್ ತಂಡ ಅಧ್ಯಯನ ನಡೆಸಿತ್ತು. ಆಸ್ಪತ್ರೆಗೆ ದಾಖಲಾದ 464 ಮಂದಿ ಸಾಮಾನ್ಯ ಪ್ರಮಾಣದ …
Read More »ನಿಯಮ ಮೀರಿ ಹೆಚ್ಚು ನೆರವಿಗೆ ಕೇಂದ್ರಕ್ಕೆ ರಾಜ್ಯ ಮನವಿ
ಬೆಂಗಳೂರು : ರಾಜ್ಯದಲ್ಲಿ ನೆರೆಯಿಂದ 8,071 ಕೋಟಿ ರು. ಅಂದಾಜು ಹಾನಿಯಾಗಿದ್ದು, ಎಸ್‌ಡಿಆರ್‌ಎಫ್ ನಿಯಮಗಳ ಅನ್ವಯ 628.7 ಕೋಟಿ ರು. ಅನುದಾನ ಮಾತ್ರ ಬರುತ್ತದೆ. ಇದು ಸಾಕಾಗುವುದಿಲ್ಲ. ಈ ಬಾರಿ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಕೇಂದ್ರದ ನೆರೆ ಅಧ್ಯಯನ ತಂಡಕ್ಕೆ ಮನವಿ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಅಲ್ಲದೆ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ನೆರೆ ಹಾನಿ ನಿಯಂತ್ರಿಸಲು ಪ್ರವಾಹ ಮುನ್ಸೂಚನೆ ಹಾಗೂ ಪ್ರತಿಕ್ರಿಯೆಗಾಗಿ …
Read More »ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಹಿರೇಬಾಗೇವಾಡಗೆ ಸ್ಥಳಾಂತರ
ಭೂತರಾಮನಹಟ್ಟಿ, ಹಿರೇಬಾಗೇವಾಡಿ ಎರಡು ಕಡೆ ವಿವಿ ಕಾರ್ಯಚಟುವಟಿಕೆ ಹೆಚ್ಚುವರಿ ಕಟ್ಟಡಕ್ಕಾಗಿ ಹಿರೇಬಾಗೇವಾಡಿಗೆ ಸ್ಥಳಾಂತರ ಅಭಿವೃದ್ದಿ ದೃಷ್ಠಿಯಿಂದ ಈ ನಿರ್ಧಾರ ಬೆಳಗಾವಿ: ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಹಿರೇಬಾಗೇವಾಡಗೆ ಸ್ಥಳಾಂತರ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಸದ್ಯ ಭೂತರಾಮನಹಟ್ಟಿಯಲ್ಲಿರುವ ವಿಶ್ವ ವಿದ್ಯಾಲಯ ಅರಣ್ಯ ಪ್ರದೇಶದ ಜಾಗದ ಅಧೀನದಲ್ಲಿರುವುದಿಂದ ಹೆಚ್ಚುವರಿ ಕಟ್ಟಡ, ಮತ್ತೀತರ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. …
Read More »