Breaking News

ರಾಜಕೀಯ

ಉಳ್ಳಾಗಡ್ಡಿ ದರ ಕುಸಿತ ಉಳ್ಳಾಗಡ್ಡಿ ಸುರಿದು ರೈತರ ಆಕ್ರೋಶ

ಬೆಲೆ ಕುಸಿದು ರೈತರಲ್ಲಿ ಕಣ್ಣೀರು ತರಿಸಿದ ಉಳ್ಳಾಗಡ್ಡಿ: ಹೆದ್ದಾರಿಯಲ್ಲಿ ಉಳ್ಳಾಗಡ್ಡಿ ಸುರಿದು ರೈತರ ಆಕ್ರೋಶ ಉಳ್ಳಾಗಡ್ಡಿ ದರ ಕುಸಿತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈರುಳ್ಳಿ ರಾಶಿ ಸುರಿದು “ಈರುಳ್ಳಿ ದರ ಪಾತಳ, ಕೇಳೋರಿಲ್ಲ ರೈತರ ಗೋಳ” ಎಂದು ಈರುಳ್ಳಿ ಮೇಲೆ ಬಿದ್ದು ಹೊರಳಾಡಿ ರೈತ ಆಕ್ರೋಶ ಹೊರಹಾಕಿದ ಘಟನೆ ಸೋಮವಾರ ನಡೆದಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕುಪಕಡ್ಡಿ ಕ್ರಾಸ್ ಬಳಿಯ ಎನ್.ಹೆಚ್. 218 ರ ಪಕ್ಕದಲ್ಲಿರುವ ಬಸವನಬಾಗೇವಾಡಿ ತೋಟಗಾರಿಕೆ …

Read More »

ಆರ್ ಸಿಬಿ- ಪಂಜಾಬ್ ಪೈನಲ್ ಪಂದ್ಯ ಹಿನ್ನಲೆ… ಆರ್ ಸಿ ಬಿ ಪ್ಯಾನ್ಸ್ ನಿಂದ ಗೆಲುವಿಗಾಗಿ ವಿಶೇಷ ಪೂಜೆ…

ಬಾಗಲಕೋಟೆ : ಆರ್ ಸಿಬಿ- ಪಂಜಾಬ್ ಪೈನಲ್ ಪಂದ್ಯ ಹಿನ್ನಲೆ… ಆರ್ ಸಿ ಬಿ ಪ್ಯಾನ್ಸ್ ನಿಂದ ಗೆಲುವಿಗಾಗಿ ವಿಶೇಷ ಪೂಜೆ… ಆರ್‌ಸಿಬಿ ಪಂಜಾಬ್ ಫೈನಲ್ ಗೆ ಬಂದಿದ್ದು ಗೆಲ್ಲಬೇಕೆಂದು ಬಾಗಲಕೋಟೆ ನಗರದ ವಿದ್ಯಾಗಿರಿಯ ಹನುಮಾನ ದೇಗುಲದಲ್ಲಿ ಅಭಿಮಾನಿಗಳಿಂದ ಪೂಜೆ ಸಲ್ಲಿಸಲಾಯಿತು ಕರವೇ ಪ್ರವೀಣ್ ಶಟ್ಟಿ ಬಣದ ಹಾಗೂ ಆರ್ ಸಿಬಿ ಅಭಿಮಾನಿಗಳಿಂದ ಪೂಜೆ ಸಲ್ಲಿಸಲಾಯಿತು ಗೆದ್ದು ಬಾ ಆರ್ ಸಿಬಿ,ಈ ಸಲ ಕಪ್ ನಮ್ದೆ ಎಂದು ಎಂದು ಘೋಷಣೆ …

Read More »

ಬಿಜೆಪಿಯವರು ಹಿಂದೂ- ಮುಸ್ಲಿಂರೆಂಬ ಭೂತ ಕನ್ನಡಿಯಿಂದ ನೋಡುವುದು ಬಿಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬಿಜೆಪಿಯವರು ಹಿಂದೂ- ಮುಸ್ಲಿಂರೆಂಬ ಭೂತ ಕನ್ನಡಿಯಿಂದ ನೋಡುವುದು ಬಿಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶಾಸಕ ಸುನೀಲ್ ಕುಮಾರ್ ಜವಾಬ್ದಾರಿಯುತ ಹೇಳಿಕೆ ನೀಡಲಿ ಬೆಂಗಳೂರು: ಬಿಜೆಪಿಯವರು ಹಿಂದೂ, ಮುಸ್ಲಿಂರೆಂದು ಭೂತ ಕನ್ನಡಿಯಿಂದ ನೋಡುವುದನ್ನು ಬಿಡಬೇಕು. ಸಾಮಾಜಿಕ ಬದ್ಧತೆಯಿಂದ ಎಲ್ಲವನ್ನೂ ನೋಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ‌. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಿಂದೂ ಸಂಘಟನೆಗಳನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿಯ …

Read More »

2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರವು ಸೇವೆ ಸಲ್ಲಿಸಲಿದೆ ಸಬ್ ರೆಜಿಸ್ಟರ್ ಕಾರ್ಯಾಲಯ…

ನೋ ಸೂಟಿ… ಫೂಲ್ ಡ್ಯೂಟಿ…2ನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರವು ಸೇವೆ ಸಲ್ಲಿಸಲಿದೆ ಸಬ್ ರೆಜಿಸ್ಟರ್ ಕಾರ್ಯಾಲಯ… ಬೆಳಗಾವಿಯ ಉಪ ನೋಂದಣಿ ಕಾರ್ಯಾಲಯವು ಇನ್ಮುಂದೆ 2ನೇ ಶನಿವಾರ ಮತ್ತು 4ನೇ ಶನಿವಾರ ಹಾಗೂ ಭಾನುವಾರದ ರಜೆ ದಿನಗಳಂದು ಕೂಡ ಕಾರ್ಯನಿರ್ವಹಿಸಲಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಈಗಾಗಲೇ ಎನಿವೇರ್ ರಜಿಸ್ಟ್ರೇಶನ್ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಜಿಲ್ಲೆಯ ವ್ಯಾಪ್ತಿಯ ಉಪ ನೋಂದಣಿ ಕಾರ್ಯಾಲಯಗಳು 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರದ …

Read More »

ಸಿನಿಮಾ‌ ಸ್ಟೈಲ್​ನಲ್ಲಿ ಸುತ್ತುವರೆದು ವ್ಯಕ್ತಿಯ ಭೀಕರ ಕೊಲೆ

ಕೊಪ್ಪಳ: ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಹೃದಯ ಭಾಗವಾದ ಸಿಂಧನೂರು ಸರ್ಕಲ್​ನಲ್ಲಿ ಭಾನುವಾರ ರಾತ್ರಿ ಸಿನಿಮಾ‌ ಸ್ಟೈಲ್​ನಲ್ಲಿ ನಡೆದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಕೊಲೆ ದೃಶ್ಯ ಸೆರೆ: ಸಿಂಧನೂರು ಸರ್ಕಲ್​ನಲ್ಲಿರುವ ಬೇಕರಿಯೊಂದರ ಮುಂಭಾಗದಲ್ಲಿ ಚೆನ್ನಪ್ಪ ನಾರಿನಾಳ ಎಂಬ ವ್ಯಕ್ತಿಯ ಕೊಲೆಯಾಗಿದ್ದು, ಕೊಲೆಯ ಸಂಪೂರ್ಣ ಚಿತ್ರಣ ಬೇಕರಿಯಲ್ಲಿ ಹಾಕಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ಮೇಲೆ ಬರುತ್ತಿದ್ದ ಚೆನ್ನಪ್ಪನನ್ನು ಅಟ್ಟಾಡಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು, ಎರಡೇ …

Read More »

16 ವರ್ಷಗಳ ಹಿಂದೆ ಮುಚ್ಚಿದ್ದ ಸರ್ಕಾರಿ ಶಾಲೆ ಪುನರಾರಂಭ

ದಾವಣಗೆರೆ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳ ದಾಖಲಾತಿ ಕಡಿಮೆ ಇರುವ ನೆಪ ನೀಡಿ ಶಿಕ್ಷಣ ಇಲಾಖೆ ಶಾಲೆಗಳಿಗೆ ಬೀಗ ಹಾಕುತ್ತಿದೆ. ಆದರೆ, ಇಲ್ಲೊಂದು ಮುಚ್ಚಿದ್ದ ಸರ್ಕಾರಿ ಶಾಲೆ 16 ವರ್ಷಗಳ ಬಳಿಕ ಮತ್ತೆ ತೆರೆದಿದೆ. ಊರಿನಲ್ಲಿಯೇ ಶಾಲೆ ಇದ್ದರೂ ಮಕ್ಕಳು ದೂರದೂರಿಗೆ ನಡೆದುಕೊಂಡೇ ತೆರಳಿ ಶಾಲೆ ಸೇರುವ ಪರಿಸ್ಥಿತಿ ಇಲ್ಲಿತ್ತು. ಮಕ್ಕಳ ಕಷ್ಟ ನೋಡಲಾಗದೆ ಗ್ರಾಮಸ್ಥರು ಈ ಶಾಲೆಯನ್ನು ಮತ್ತೆ ತೆರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆ ಸ್ವಚ್ಛಗೊಳಿಸಿ, ಸಿಂಗರಿಸಿ …

Read More »

ಮಹದಾಯಿಗೆ ಒಳ್ಳೆಯದಾಗಿದ್ದು ನಮ್ಮಿಂದ,:ಜೋಶಿ

ಮಹದಾಯಿಗೆ ಒಳ್ಳೆಯದಾಗಿದ್ದು ನಮ್ಮಿಂದ,   ಧಾರವಾಡ: ಮಹದಾಯಿ ವಿಚಾರವಾಗಿ ಎಲ್ಲ ಕ್ಲಿಯರೆನ್ಸ್​ ನಾವು ಮಾಡಿಸಿದ್ದೇವೆ. ಬೇರೆ ಯಾರ ಕಾಲದಲ್ಲೂ ಯೋಜನೆಗಾಗಿ ಒಂದು ಪೈಸೆ ಕೆಲಸ ಆಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಭಾಷಣ ಮಾಡೋರು ಮಾಡಲಿ, ಅದಕ್ಕೆ ನನ್ನ ತಕರಾರಿಲ್ಲ. ಹಿಂದೆ ಮನಮೋಹನ್ ಸಿಂಗ್, ಸೋನಿಯಾ ಅವರ ಸರ್ಕಾರ ಇದ್ದಾಗ ಅದನ್ನು ಟ್ರಿಬ್ಯುನಲ್​ಗೆ ಕೊಡಲಾಗಿತ್ತು. ಆಗ ನಾವು ಅದನ್ನು ಬೇಡ ಎಂದಿದ್ವಿ. ಟ್ರಿಬ್ಯುನಲ್​ಗೆ ಕೊಡುವುದಾದರೆ …

Read More »

I PL ಫೈನಲ್ ಮೇನಿಯಾ: ದುಬಾರಿಕಾರಿಗೆ ವಿಶೇಷ ಅಲಂಕಾರ ಮಾಡಿದ ಆರ್‌ಸಿಬಿ ಫ್ಯಾನ್ಸ್‌

ಮೈಸೂರು: ಐಪಿಎಲ್ ಫೈನಲ್ ಗೆಲ್ಲಲು ಪಂಜಾಬ್​ ಕಿಂಗ್ಸ್ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಸೆಣಸಲಿವೆ. ಅಂತಿಮ ಘಟ್ಟದಲ್ಲಿ ಬೆಂಗಳೂರು ತಂಡ ಗೆಲುವು ಸಾಧಿಸಲೆಂದು ಮೈಸೂರಿನ ಉದ್ಯಮಿಯೊಬ್ಬರು ತಮ್ಮ ದುಬಾರಿ ಬೆಲೆಯ ಕಾರಿಗೆ RCB ತಂಡದ ಆಟಗಾರರ ಪೋಸ್ಟರ್‌ಗಳನ್ನು ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ RCB ತಂಡ ಪಂಜಾಬ್​ ಕಿಂಗ್ಸ್ ವಿರುದ್ಧ ಗೆಲ್ಲಲೆಂದು ಚಾಮುಂಡಿ ಬೆಟ್ಟಕ್ಕೆ ಹೋಗಿ ನಾಡಿನ …

Read More »

ಕಮಲ್ ಹಾಸನ್ ವಿವಾದಿತ ಹೇಳಿಕೆ: ಬೂಕರ್ ಪುರಸ್ಕೃತೆ ಬಾನು ಮುಷ್ತಾಕ್, ದೀಪಾ ಭಾಸ್ತಿ ಹೇಳುವುದೇನು?

ಬೆಂಗಳೂರು: ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ, ಒಂದು ಬೂಕರ್ ಪ್ರಶಸ್ತಿ ಸಿಕ್ಕಿದೆ. ಅದೇ ಅದಕ್ಕೆ ಉತ್ತರ ಎಂದು ಕಮಲ್ ಹಾಸನ್ ಹೇಳಿಕೆಗೆ ಬಾನು ಮುಷ್ತಾಕ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೂಕರ್ ಪ್ರಶಸ್ತಿ ನನ್ನೊಬ್ಬಳಿಗೆ ಸಿಕ್ಕಿದ್ದು ಅಲ್ಲ, ಕನ್ನಡಕ್ಕೆ ಮತ್ತು ಕನ್ನಡದ ಜನತೆಗೆ ಸಿಕ್ಕಿದೆ. ಸರ್ಕಾರ ಅದಕ್ಕೆ ಅಭಿನಂದನೆ ಸಲ್ಲಿಸಿದೆ.‌ ಕಮಲ್ ಹಾಸನ್ ಹೇಳಿಕೆ ಸಂಬಂಧ ನಾನು ಉತ್ತರ ಹೇಳಿದ್ದೇನೆ. ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ, ಒಂದು …

Read More »

ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲು ಟಾಸ್ಕ್ ಫೋರ್ಸ್ ರಚನೆ: ಆರ್‌.ಅಶೋಕ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಾಸ್ಕ್‌ ಫೋರ್ಸ್‌ ಮಾಡಿ, ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಕೋಮುವಾದದ ವಿರುದ್ಧ ಅಲ್ಲ, ಹಿಂದೂಗಳ ವಿರುದ್ಧ ಇರುವ ಫೋರ್ಸ್‌ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಅವರಿಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಘಟನೆ ನಡೆದು ಎಷ್ಟೋ ದಿನಗಳಾದ ನಂತರ ಪ್ರಕರಣ ದಾಖಲಿಸಲಾಗುತ್ತಿದೆ. ಸುಳ್ಳು ಆಪಾದನೆ ಮಾಡಿ ಹಿಂದೂ ಕಾರ್ಯಕರ್ತರ …

Read More »