Breaking News

ರಾಜಕೀಯ

3 ದಿನ ಹಿಂದೆ ಮೃತಪಟ್ಟ ಮರಿ ಆನೆ ಜೊತೆ ಅಲೆದಾಡುತ್ತಿರುವ ತಾಯಿ ಆನೆ

3 ದಿನ ಹಿಂದೆ ಮೃತಪಟ್ಟ ಮರಿ ಆನೆ ಜೊತೆ ಅಲೆದಾಡುತ್ತಿರುವ ತಾಯಿ ಆನೆ ಹಾಸನ: ಆನೆಗಳು ತಮ್ಮ ಮರಿಗಳ ಬಗ್ಗೆ ಅದೆಷ್ಟು ಪ್ರೀತಿ ಹೊಂದಿರುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮರಿ ಆನೆ ಮೃತಪಟ್ಟು ಮೂರು ದಿನ ಕಳೆದಿದೆ. ಆದರೆ, ಇದನ್ನು ತಿಳಿಯದ ತಾಯಿ ಆನೆ ತನ್ನ ಮರಿಯ ಕಳೆಬರಹವನ್ನು ತಾನು ಹೋದ ಕಡೆಗೆಲ್ಲಾ ಎಳೆದುಕೊಂಡು ಹೋಗುತ್ತಿದೆ. ಈ ಘಟನೆ ನಡೆದಿದ್ದು, ಹಾಸನದ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಶಿರಗುರ ಗ್ರಾಮದ …

Read More »

ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪ: ಐಶ್ವರ್ಯಾ ಗೌಡಗೆ ಷರತ್ತು ಬದ್ಧ ಜಾಮೀನು

ಬೆಂಗಳೂರು: ಚಿನ್ನದ ವ್ಯಾಪಾರಿಗೆ 9.82 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ)ದಿಂದ ಬಂಧನಕ್ಕೊಳಗಾಗಿದ್ದ ಐಶ್ವರ್ಯಾ ಗೌಡ ಅವರಿಗೆ ಬೆಂಗಳೂರಿನ 1ನೇ ಸಿಸಿಹೆಚ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಐಶ್ವರ್ಯಾ ಗೌಡ ಪರ ವಾದ ಮಂಡಿಸಿದ್ದ ವಕೀಲ ಎಸ್. ಸುನೀಲ್ ಅವರು, “ಅನುಸೂಚಿತ ಪ್ರಕರಣವಲ್ಲದಿದ್ದರೂ ಇ.ಡಿ ಅಧಿಕಾರಿಗಳು ಐಶ್ವರ್ಯಾ ಗೌಡ ಅವರನ್ನು ಬಂಧಿಸಿದ್ದಾರೆ ಹಾಗೂ ಮಹಿಳೆಗೆ ಬಂಧನದಿಂದ ವಿಶೇಷ ವಿನಾಯಿತಿ ಇದೆ” …

Read More »

ಮಳೆಗೆ ಜೋಗ ಜಲಪಾತ ಬಿಳಿನೊರೆಯಿಂದ ಉಕ್ಕಿ ಹರಿಯುತ್ತಿದೆ.

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕಳೆದ ಶನಿವಾರದಿಂದ ಮಳೆಯ ಆಗಮನವಾಗಿದೆ. ನದಿ ಹಳ್ಳಗಳು ಮತ್ತೆ ತುಂಬಿ ಹರಿಯಲು ಪ್ರಾರಂಭಿಸಿವೆ. ಜಗತ್​ ಪ್ರಸಿದ್ಧ ಜೋಗ ಜಲಪಾತದಲ್ಲಿ ಮತ್ತೆ ಶರಾವತಿ ವೈಭವ ಕಣ್ತುಂಬಿಕೊಳ್ಳಲು ಅವಕಾಶ ಮಾಡಿ ಕೊಟ್ಟಿದೆ. ಸಾಗರ ತಾಲೂಕಿನ ಶರಾವತಿ ನದಿ ಪಾತ್ರದಲ್ಲಿ ಮಳೆಯಾಗುತ್ತಿದ್ದು ಜೋಗ ಜಲಪಾತದಲ್ಲಿ ರಾಜ, ರಾಣಿ, ರೋರರ್​, ರಾಕೆಟ್​​ ಮೂಲಕ ಶರಾವತಿ ಧುಮ್ಮುಕ್ಕುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಜಲಪಾತ ಸಿರಿಯನ್ನು ನೋಡಲು ಪ್ರವಾಸಿಗರು …

Read More »

ಟವೆಲ್ ವಿಚಾರಕ್ಕೆ ಕಾರ್ಮಿಕರ ನಡುವೆ ಜಗಳ

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಕೂಲಿಯಾಳುಗಳಾಗಿ ಬಂದಿದ್ದವರು, ಟವೆಲ್ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಇದೇ ಜಗಳ ಓರ್ವ ಕೂಲಿ ಕಾರ್ಮಿಕನ ಕೊಲೆಗೆ ಕಾರಣವಾಗಿದೆ. ದೊಡ್ಡಬಳ್ಳಾಪುರ ತಾಲೂಕು ಹೆಗ್ಗಡಿಹಳ್ಳಿಯಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ವಿಜಯಕುಮಾರ್ (34) ಕೊಲೆ ಮಾಡಲಾಗಿದೆ ಎಂದು ಮೃತನ ಹೆಂಡತಿ ಗೌರಮ್ಮ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಪೂಜಪ್ಪನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ …

Read More »

ಮೂರು ದಿನದಲ್ಲಿ ಉತ್ತರಿಸುವಂತೆ ಕಾಂತಾರ ಚಿತ್ರ ತಂಡಕ್ಕೆ ನೋಟಿಸ್: ಶಿವಮೊಗ್ಗ ಡಿಸಿ

ಶಿವಮೊಗ್ಗ: ಕಾಂತಾರಾ -1 ಚಿತ್ರೀಕರಣದ ವೇಳೆ ದೋಣಿ ಮಗುಚಿ 30 ಜನ ಈಜಿ ದಡ ಸೇರಿದದ್ದು, ಒಂದು ಆಂಬ್ಯುಲೆನ್ಸ್ ಚಿತ್ರೀಕರಣ ಸ್ಥಳದಿಂದ ತೀರ್ಥಹಳ್ಳಿ ಕಡೆ ಹೋಗಿದೆ ಎಂದು ವರದಿಯಾದ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂತಾರಾ -1 ಚಿತ್ರ ತಂಡಕ್ಕೆ ಹೊಸನಗರ ತಹಶೀಲ್ದಾರ್ ರೇಷ್ಮಾ ಅವರು ಇಂದು ನೋಟಿಸ್ ನೀಡಿದ್ದಾರೆ. ‘ನೀವು ಚಿತ್ರಿಕರಣ ನಡೆಸುತ್ತಿರುವ ಬಗ್ಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿರುವ ಬಗ್ಗೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಆದರೆ …

Read More »

ದೇಶದಲ್ಲೇ ಇವರು ಹಿರಿಯ ಶಾಸಕ!

ದಾವಣಗೆರೆ: ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ದೇಶದಲ್ಲೇ ಏಕೈಕ ಹಿರಿಯ ಶಾಸಕ, ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಅನುಭವಿ ಹಾಗೂ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು ಅನ್ನೋದು ಹೆಮ್ಮೆಯ ಸಂಗತಿ. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಪ್ಪನವರು ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಹಿರಿಯ ಮುತ್ಸದ್ದಿ. ಇಂದು 95ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಇಂದಿಗೂ ಹುಮ್ಮಸ್ಸಿನಲ್ಲೇ ಕ್ಷೇತ್ರದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ರಾಜಕೀಯಕ್ಕೆ …

Read More »

ಕಲಬುರಗಿ ನ್ಯಾಯಾಲಯದ ಆವರಣದಲ್ಲೇ ತೀವ್ರ ಹೃದಯಾಘಾತ: ನ್ಯಾಯಾಧೀಶ ವಿಶ್ವನಾಥ ಮುಗುಟಿ ವಿಧಿವಶ

ಕಲಬುರಗಿ: ಜಿಲ್ಲಾ ನ್ಯಾಯಾಲಯ ಆವರಣದಲ್ಲೇ ತೀವ್ರ ಹೃದಯಾಘಾತ ಸಂಭವಿಸಿ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಶ್ವನಾಥ್ ಮುಗುಟಿ (44) ಅವರು ಸೋಮವಾರ ವಿಧಿವಶರಾಗಿರುವ ಘಟನೆ ನಡೆದಿದೆ. ದೈನಂದಿನಂತೆ ಮನೆಯಿಂದ ಬೆಳಗ್ಗೆ ತಿಂಡಿ‌ ಮುಗಿಸಿ ನ್ಯಾಯಾಲಯಕ್ಕೆ ಬಂದು ತಮ್ಮ ಕಚೇರಿಯಲ್ಲಿ ಕುಳಿತಿರುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು …

Read More »

ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯವಾಗಿದ್ದು ಶತಾಯುಷಿ ಆಗಲಿದ್ದಾರೆ: ಸಿ.ಎಂ ಸಿದ್ದರಾಮಯ್ಯ*

ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯವಾಗಿದ್ದು ಶತಾಯುಷಿ ಆಗಲಿದ್ದಾರೆ: ಸಿ.ಎಂ ಸಿದ್ದರಾಮಯ್ಯ* *ಇವರ ಉತ್ಸಾಹ, ಕ್ರಿಯಾಶೀಲತೆ ನೋಡಿದರೆ ಮತ್ತೆ ಚುನಾವಣೆಗೆ ನಿಲ್ಲಬಹುದು: ಸಿ.ಎಂ* *ಅಂತರ್ಜಾತಿ ಸಾಮೂಹಿಕ‌ ವಿವಾಹಗಳು ಹೆಚ್ಚೆಚ್ಚು ಆದರೆ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯ: ಸಿ.ಎಂ ಸಿದ್ದರಾಮಯ್ಯ* ದಾವಣಗೆರೆ ಜೂ 16: ಅಂತರ್ಜಾತಿ ಸಾಮೂಹಿಕ‌ ವಿವಾಹಗಳು ಹೆಚ್ಚೆಚ್ಚು ಆದರೆ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯ ಎಂದು ಸಿ.ಎಂ ಸಿದ್ದರಾಮಯ್ಯ ಅವರು ನುಡಿದರು ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಶಾಮನೂರು …

Read More »

ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರಅಭಿಪ್ರಾಯ ಕನ್ನಡ ಸಾಹಿತ್ಯಕ್ಕೆ ಜೆಪಿ ಕೊಡುಗೆ ಅಪಾರ

ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ಅಭಿಪ್ರಾಯ ಕನ್ನಡ ಸಾಹಿತ್ಯಕ್ಕೆ ಜೆಪಿ ಕೊಡುಗೆ ಅಪಾರ ಬೆಳಗಾವಿ: ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೃತಿಗಳನ್ನು ನೀಡಿದ ಡಾ. ಜೆ.ಪಿ.ದೊಡ್ಡಮನಿ ಕಾರ್ಯ ಶ್ರೇಷ್ಠವಾದುದು. ಅವರ ಅನುವಾದ ಜ್ಯೋತಿ, ಈ ಅಭಿನಂದನಾ ಗ್ರಂಥವು ಕೇವಲ ಒಂದು ಪುಸ್ತಕವಲ್ಲ. ಅವರ ಸಮಗ್ರ ವ್ಯಕ್ತಿತ್ವ ಅರ್ಥಮಾಡಿಕೊಳ್ಳುವ ಹೊತ್ತಿಗೆಯಾಗಿದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ವೀರಣ್ಣ …

Read More »

ಆಷಾಢ ಶುಕ್ರವಾರ: ಚಾಮುಂಡಿ ವಿಶೇಷ ದರ್ಶನಕ್ಕೆ 2 ಸಾವಿರ ರೂ. ನಿಗದಿ ಖಂಡಿಸಿ ಪ್ರತಿಭಟನೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ದರ್ಶನ ಪ್ಯಾಕೇಜ್​ಗಾಗಿ 2000 ರೂಪಾಯಿ ಟಿಕೆಟ್ ದರ ನಿಗದಿ ಮಾಡಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿ, ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಕರ್ನಾಟಕ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದೇವರ ದರ್ಶನಕ್ಕೆ ಸರ್ಕಾರ ಇಷ್ಟೊಂದು ದುಬಾರಿ ಟಿಕೆಟ್ ಮಾಡಲು ಹೊರಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಜನರಿಗೆ ಒಂದು ಕೈಯಲ್ಲಿ ಕೊಟ್ಟು ದೇವರ ಹೆಸರಿನಿಂದ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ …

Read More »