Breaking News

ರಾಜಕೀಯ

1 ಸಾವಿರ ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 1 ಸಾವಿರ ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ. ಈ ಯೋಜನೆಯಿಂದಾಗಿ 50 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ನೇರವಾಗಿ ರೈತರ ಖಾತೆಗೇ ಜಮೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ರಾಜ್ಯದ ರೈತ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಸಚಿವರು, ರೈತ ಬಾಂಧವರು ತಮ್ಮ ಖಾತೆಯನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ. 2019-20ನೇ ಸಾಲಿನ ಬೆಳೆವಿಮೆ ಬರುವ ಮಂಗಳವಾರದಿಂದ ರೈತರ ಖಾತೆಗೆ …

Read More »

74 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಶುಭ ಕೋರಿದ್ದಾರೆ.: ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ:  ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು 74 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಶುಭ ಕೋರಿದ್ದಾರೆ. ನಾಳೆ ದೇಶದಾದ್ಯಂತ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸುತ್ತಿದ್ದು, ಬ್ರಿಟಿಷ್ ರ ದಾಸ್ಯದ ಸಂಕೋಲೆಯಿಂದ ಭಾರತ ಮುಕ್ತಗೊಂಡ ಈ ದಿನದಂದು ಸ್ವಾತಂತ್ರ್ಯ ಪಡೆಯಲು ಹೋರಾಡಿದ ಎಲ್ಲ ಮಹಾನುಭಾವರ ತ್ಯಾಗ, ಬಲಿದಾನವನ್ನು ಸ್ಮರಿಸೋಣ; ಕೋವಿಡ್ ಯೋಧರನ್ನು ಗೌರವಿಸೋಣ. ನಾಡಿನ ಜನತೆಗೆ 74ನೇ ಸ್ವಾತಂತ್ರ್ಯ ದಿನೋತ್ಸವ ದ ಶುಭಾಶಯಗಳು-ರಮೇಶ್ ಜಾರಕಿಹೊಳಿ‌, ಜಲಸಂಪನ್ಮೂಲ ಸಚಿವರು.

Read More »

ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ,

ಬೆಂಗಳೂರು,ಆ.14- ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿಗಳು ನೀಡುವ ಶೌರ್ಯ ಪ್ರಶಸ್ತಿ ಈ ಬಾರಿ ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಇಗೆ ಲಭಿಸಿದೆ. ಅತ್ಯುತ್ತಮ ಸೇವೆ ಸಲ್ಲಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದೆಪ್ರಶಸ್ತಿ ಪುರಸ್ಕೃತರು : 1. ಹೇಮಂತ್ಕುಮಾರ್- ಉಪಪೊಲೀಸ್ ವರಿಷ್ಠಾಧಿಕಾರಿ, ಲೋಕಾಯುಕ್ತ, ಬೆಂಗಳೂರು 2. ಪರಮೇಶ್ವರ್ ಹೆಗ್ಡೆ -ಉಪಪೊಲೀಸ್ ವರಿಷ್ಠಾಧಿಕಾರಿ, ಆರ್ಥಿಕ ಅಪರಾಧ ವಿಭಾಗ, ಸಿಐಡಿ, ಬೆಂಗಳೂರು 3. …

Read More »

ಮತ್ತೊಂದು ದಾಖಲೆ ಬರೆದ ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಕೀರ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮೂರು ಸಲ ಪ್ರಧಾನಿಯಾಗಿ ಆರು ವರ್ಷ 78 ದಿನ ಪ್ರಧಾನಿಯಾಗಿ ಆಡಳಿತ ನಡೆಸಿದ್ದಾರೆ. ಮೋದಿ ಆರು ವರ್ಷ 79 ದಿನ ಆಡಳಿತ ನಡೆಸಿದ್ದು ವಾಜಪೇಯಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. 2014ರ ಮೇ 26 ರಂದು ಭಾರತದ 14 ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು 2019ರ ಮೇ …

Read More »

ಡಿ.ಜೆ. ಹಳ್ಳಿ ಗಲಭೆ ಖಂಡನೀಯ, ಸರ್ಕಾರ ಕಾನೂನಿನ ಕ್ರಮ ಕೈಗೊಳ್ಳಲಿ: ಡಿ.ಕೆ. ಶಿವಕುಮಾರ್

ಬೆಂಗಳೂರು: ಡಿ.ಜೆ. ಹಳ್ಳಿ ಘಟನೆಯನ್ನು ನಾನು ಖಂಡಿಸುತ್ತೇನೆ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ಬುಧವಾರ ಬೆಳಗ್ಗೆ ಸದಾಶಿವನಗರದ ನಿವಾಸದ ಬಳಿ ಬೆಂಗಳೂರಿನ ಡಿ.ಜೆ. ಹಳ್ಳಿ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಇದು ಸಮಾಜಘಾತುಕ ಕೃತ್ಯ. ಶಾಸಕರ ಆಸ್ತಿಯಾಗಲಿ, ಸಾಮಾನ್ಯ ಜನರ ಆಸ್ತಿಯೇ ಆಗಿರಲಿ, ಪೊಲೀಸ್ ಠಾಣೆಯಾಗಿರಲಿ ಯಾವುದನ್ನು ಹಾನಿ ಮಾಡುವುದು ಸರಿಯಲ್ಲ. ಇದನ್ನು ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು. …

Read More »

ಪ್ರಧಾನಿ ನರೇಂದ್ರ ಮೋದಿ ಸರ್ಕಾರವೂ ಅಡಳಿತದಲ್ಲಿ ವಿಫಲ: ಅನಂತ್ ಕುಮಾರ್ ಹೆಗಡೆ

ಕುಮಟಾ: ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ವಿಫಲವಾಗಿದೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ನೀಡಿರುವ ಹೇಳಿಕೆ ದೇಶದಾದ್ಯಂತ ಕೋಲಾಹಲ ಸೃಷ್ಟಿಸಿದೆ. ಪ್ರಧಾನಿ ಮೋದಿ ವಿರುದ್ಧವೇ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ದೇಶದ ಬೃಹತ್ ಟೆಲಿಕಾಂ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಸಂಸ್ಥೆಯ ಉದ್ಯೋಗಿಗಳು ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿಲ್ಲ. ಬಿಎಸ್‌ಎನ್‌ಎಲ್ ಉದ್ಯೋಗಿಗಳು ದೇಶದ್ರೋಹಿಗಳು. ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಬಿಎಸ್‌ಎನ್‌ಎಲ್ …

Read More »

ಸಿದ್ದರಾಮಯ್ಯನವರೇ, ನೀವು ಮಾಡಿದ್ದು ತಪ್ಪು ಅಂತ ಈಗ ಗೊತ್ತಾಯ್ತಾ..?

ಬೆಂಗಳೂರು,ಆ.12- ಎಸ್‍ಡಿಪಿಐ ಮತ್ತು ಕೆಐಎಫ್‍ಡಿ 1600 ಪುಂಡರ ವಿರುದ್ಧ ಇದ್ದ 175 ಕ್ರಿಮಿನಲ್ ಕೇಸುಗಳನ್ನು ನೀವು 2015ರಲ್ಲಿ ವಾಪಸ್ಸು ತೆಗೆದುಕೊಂಡಿದ್ದು ತಪ್ಪು ಅಂತ ನಿಮಗೆ ಈಗಲಾದರೂ ಅನ್ನಿಸುತ್ತಿದೆಯೇ ಸಿದ್ದರಾಮಯ್ಯನವರೇ? ಇಷ್ಟಾಗಿಯೂ ಪುಂಡ ಮುಸಲ್ಮಾನರನ್ನು ಖಂಡಿಸಲು ಏಕೆ ನಿಮಗೆ ಮನಸ್ಸು ಬರುತ್ತಿಲ್ಲ ಸಾರ್? ಎಂದು ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮತ್ತೊಂದು ಟ್ವೀಟ್‍ನಲ್ಲಿ ಕಂದಾಯ ಸಚಿವ ಆರ್. ಅಶೋಕ್, ಶಾಂತಿಯಿಂದ ಬದುಕೋಣ ಎಂಬುದು ನಮ್ಮ ಆಶಯ. ಅಶಾಂತಿಯೇ ಕೆಲವರ ರಾಜಮಾರ್ಗ …

Read More »

ಹುಟ್ಟಿ ಬೆಳೆದ ಮನೆ ಸುಟ್ಟು ಹಾಕಿದ್ದಕ್ಕೆ ಕಣ್ಣೀರಿಟ್ಟ ಅಖಂಡ ಶ್ರೀನಿವಾಸಮೂರ್ತಿ: ಸೂಕ್ತ ತನಿಖೆಗೆ ಆಗ್ರಹ

ಬೆಂಗಳೂರು: ತಾವು ಹುಟ್ಟಿಬೆಳೆದ ಮನೆಯನ್ನು ದುಷ್ಕರ್ಮಿಗಳು ಸುಟ್ಟುಹಾಕಿದ್ದಕ್ಕೆ ಕಣ್ಣೀರಿಟ್ಟಿರುವ ಪುಲಕೇಶಿನಗರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಸರ್ಕಾರ ಸಿಬಿಐ, ಸಿಐಡಿ ಯಾವುದಾದರೊಂದು ತನಿಖೆಯನ್ನು ಸೂಕ್ತವಾಗಿ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆಯಲು ಕಂದಾಯ ಸಚಿವ ಆರ್.ಅಶೋಕ್ ಅಖಂಡ ಶ್ರೀನಿವಾಸಮೂರ್ತಿ ನಿವಾಸಕ್ಕೆ ಭೇಟಿ ನೀಡಿದರು. ಭೇಟಿ ವೇಳೆ ತಮಗೂ ಕುಟುಂಬದ ಸದಸ್ಯರಿಗೆ ಸೂಕ್ತ ಕಾನೂನು ಭದ್ರತೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. …

Read More »

ಬೆಳಗಾವಿ | ನಿಂಬಾಳ್ಕರ್ ಟ್ವೀಟ್‌ಗೆ ಕರವೇ ಖಂಡನೆ

ಬೆಳಗಾವಿ: ‘ಖಾನಾಪುರ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಮಣಗುತ್ತಿ ಘಟನೆಯ ವಾಸ್ತವ ತಿಳಿಯದೆ ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಕನ್ನಡಿಗರಿಗೆ ಅಪಮಾನ ಎಸಗಿದ್ದಾರೆ’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಟೀಕಿಸಿದ್ದಾರೆ. ‘ಸಮಗ್ರ ಮಾಹಿತಿ ಪಡೆದು ಟ್ವೀಟ್ ಮಾಡಬೇಕಿತ್ತು. ಆ ಗ್ರಾಮದಲ್ಲಿ ಸರ್ಕಾರ, ಜಿಲ್ಲಾಡಳಿತ ಅಥವಾ ಕನ್ನಡಿಗರಿಂದ ಶಿವಾಜಿ ಪ್ರತಿಮೆಗೆ ಅವಮಾನವಾಗಿಲ್ಲ. ಪ್ರತಿಷ್ಠಾಪಿಸಿದರೆ ತೆರವುಗೊಳಿಸಿದ್ದಾರೆ. ಆದಾಗ್ಯೂ ಕರ್ನಾಟಕ ಸರ್ಕಾರ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಮಹಾರಾಷ್ಟ್ರ …

Read More »

ಪ್ರಣಬ್ ಮುಖರ್ಜಿ ಅವರಿಗೆ ಮಾರಕ ಕೊರೊನಾ ವೈರಸ್ ಸೋಂಕು

ಹೊಸದಿಲ್ಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಭಾರತ ರತ್ನ ಪುರಸ್ಕೃತ ಪ್ರಣಬ್ ಮುಖರ್ಜಿ ಅವರಿಗೆ ಮಾರಕ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಕುರಿತು ಖುದ್ದು ಮಾಹಿತಿ ನೀಡಿರುವ ಪ್ರಣಬ್ ಮುಖರ್ಜಿ, ನಿಯಮಿತ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಭೇಟಿ ನೀಡಿದಾಗ ತಮಗೆ ಕೊರೊನಾ ಸೋಂಕು ತಗುಲಿದೆ ಎಂಬುದು ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ. ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ವೈದ್ಯರು ದೃಢಪಡಿಸಿದ್ದು, ನನ್ನ ಸಂಪರ್ಕಕ್ಕೆ ಬಂದ …

Read More »