ರಾಜಕೀಯ

ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣ; ಪಿ ಎಸ್ ಆಯ್ ನಿಖಿಲ್ ಕಾಂಬಳೆ ಅಮಾನತ್ತು

ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣ; ಪಿ ಎಸ್ ಆಯ್ ನಿಖಿಲ್ ಕಾಂಬಳೆ ಅಮಾನತ್ತು ಹುಕ್ಕೇರಿ ಪೋಲಿಸ್ ಠಾಣೆ ಸಬ್ ಇನ್ಸಪೇಕ್ಟರ ನೀಖಿಲ್ ಕಾಂಬಳೆ ಅವರನ್ನು ಅಮಾನತ್ತು ಮಾಡಿ ಬೆಳಗಾವಿ ಪೋಲಿಸ್ ವರಿಷ್ಟಾಧಿಕಾರಿ ಡಾ. ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ. ಜೂನ್ 26 ರಂದು ಅಕ್ರಮವಾಗಿ ಗೋ ಸಾಗಾಟ ಮಾಡುವವರನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಹಿಡಿದು ಹುಕ್ಕೇರಿ ಪೋಲಿಸ್ ಠಾಣೆಗೆ ತಂದಾಗ ಪಿ ಎಸ್ ಆಯ್ ನಿಖಿಲ್ ಕಾಂಬಳೆ ಗೋ ಸಾಗಾಟ …

Read More »

ಕಲ್ಯಾಣ ಕ್ರಾಂತಿಯ ಶರಣೆ ಕಲ್ಯಾಣಮ್ಮ‌ನ ಐಕ್ಯಸ್ಥಳ ದುಸ್ಥಿತಿಯಲ್ಲಿ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಕಲ್ಯಾಣ ಕ್ರಾಂತಿಯ ಶರಣೆ ಕಲ್ಯಾಣಮ್ಮ‌ನ ಐಕ್ಯಸ್ಥಳ ದುಸ್ಥಿತಿಯಲ್ಲಿ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಜಗಜ್ಯೋತಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿ ಜಗತ್ತಿನ ಇತಿಹಾಸದ ಪುಟದಲ್ಲಿ ಅಚ್ಚಳಿಯಾಗಿ ಉಳಿದಿದೆ. ಈ ಕ್ರಾಂತಿಗೆ ಶರಣೆ ಕಲ್ಯಾಣಮ್ಮ ಕೂಡ ಕಾರಣೀಕರ್ತರಾಗಿದ್ದರು ವಚನ ಸಾಹಿತ್ಯದ ಉಳಿವಿಗಾಗಿ ತನ್ನ ಜೀವವನ್ನೇ ಬಲಿದಾನಗೈದ ಈ ಮಹಾತಾಯಿಯ ಐಕ್ಯಸ್ಥಳ ಕಣ್ಮರೆ ಆಗುವ ಅಂಚಿಗೆ ತಲುಪಿದೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಇರುವಂತ ಶರಣೆ ಕಲ್ಯಾಣಮ್ಮನ ಐಕ್ಯಸ್ಥಳ ಸಾಕಷ್ಟು …

Read More »

ಜು.8 ರಿಂದ 120 ದಿನಗಳ ಕಾಲ ಮುಂಗಾರು ಹಂಗಾಮಿಗೆ ನೀರು ಹರಿಸಲು ತೀರ್ಮಾನ

ಜು.8 ರಿಂದ 120 ದಿನಗಳ ಕಾಲ ಮುಂಗಾರು ಹಂಗಾಮಿಗೆ ನೀರು ಹರಿಸಲು ತೀರ್ಮಾನ ಬೆಂಗಳೂರಿನ ವಿಕಾಸಸೌಧದಲ್ಲಿ ಮಂಗಳವಾರ ಅಬಕಾರಿ ಸಚಿವರೂ ಆದ ಐಸಿಸಿ ಅಧ್ಯಕ್ಷ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಮೇಲ್ದಂಡೆ ಯೋಜನೆ (ಯುಕೆಪಿ)ಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ) ಸಭೆ ನಡೆಯಿತು. ಈ ಸಭೆಯಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೆ ಕೃಷಿ ಚಟುವಟಿಕೆಗಾಗಿ ಜುಲೈ 8 ರಿಂದ 120 ದಿನಗಳ ಕಾಲ ಮುಂಗಾರು ಹಂಗಾಮಿಗೆ ನೀರು …

Read More »

ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು

ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು ಅಮೆರಿಕಾದ ಮಿಚಿಗನ್ ರಾಜ್ಯದ ಡೆಟ್ರಾಯಿಟ್ ನಗರದಲ್ಲಿ ಜುಲೈ 4 ರಿಂದ 6 ರವರೆಗೆ ನಡೆಯಲಿರುವ ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಗ್ರಾಮದ ಪುರವರ ಹಿರೇಮಠದ ರುದ್ರಮುನಿ ಸ್ವಾಮೀಜಿಗಳು ಮಂಗಳವಾರ ಬೆಂಗಳೂರಿನಿಂದ ಅಮೆರಿಕದತ್ತ ದೈವಿಕ ಯಾತ್ರೆ ಕೈಗೊಂಡಿದ್ದಾರೆ. ಈ ಬೃಹತ್ ಸಮ್ಮೇಳನವು …

Read More »

ಪರಿಹಾರ ನೀಡಿ ಅಥವಾ ನನ್ನನ್ನು ಸ್ಮಶಾನಕ್ಕೆ ಕಳುಹಿಸಿ…ದಾನಪ್ಪ ಹಡಪದ

ಪರಿಹಾರ ನೀಡಿ ಅಥವಾ ನನ್ನನ್ನು ಸ್ಮಶಾನಕ್ಕೆ ಕಳುಹಿಸಿ…ದಾನಪ್ಪ ಹಡಪದ ಕಳೆದಕೊಂಡ ಅಂಗಡಿಗೆ ಪರಿಹಾರವೋ ಅಥವಾ ಸ್ಮಶಾನವೋ ಎನ್ನುತ್ತಾ ಕಳೆದ 6-7 ತಿಂಗಳುಗಳಿಂದ ಗಟಾರ ನಿರ್ಮಾಣದ ಹೆಸರಿನಲ್ಲಿ ತೆರವುಗೊಂಡ ಅಂಗಡಿಯ ಮುಂದೆ ಕಣ್ಣೀರುಡುತ್ತಾ ಕಾಯುತ್ತಿರುವ ಕ್ಷೌರಿಕನ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ. ಇದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಪಟ್ಟಣದ ದಾನಪ್ಪಾ ಮಹಾಲಿಂಗಪ್ಪ ಹಡಪದ ಅವರ ಕಥೆಯಾಗಿದೆ. ದಾನಪ್ಪನ ತಂದೆ ಮಹಾಲಿಂಗಪ್ಪ ಖುಲ್ಲಾ ಜಾಗೆಯನ್ನು 1951 ರಲ್ಲಿ …

Read More »

ವಿಜಯಾ ಆಸ್ಪತ್ರೆಯಲ್ಲಿ ವೈಧ್ಯರ ದಿನಾಚರಣೆ

ವಿಜಯಾ ಆಸ್ಪತ್ರೆಯಲ್ಲಿ ವೈಧ್ಯರ ದಿನಾಚರಣೆ ಬೆಳಗಾವಿ ನಗರದಲ್ಲಿರುವ ಹೆಸರಾಂತ ವಿಜಯಾ ಅರ್ಥೋ ಹಾಗೂ ಟ್ರಾಮಾ ಸೆಂಟರನಲ್ಲಿ ಮಂಗಳವಾರ ವಿಶ್ವ ವೈಧ್ಯರ ದಿನಾಚರಣೆಯನ್ನು ಆಚರಿಸಲಾಯಿತು. ವಿಜಯಾ ಅರ್ಥೋ ಹಾಗೂ ಟ್ರಾಮಾ ಸೆಂಟರನ ಮುಖ್ಯಸ್ಥರಾದ ಡಾ. ರವಿ ಪಾಟೀಲ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ವೈಧ್ಯರಿಗೆ ದೇವರ ಸ್ಥಾನಮಾನದಲ್ಲಿ ಕಾನ್ನುವ ದಿನಮಾನಗಳಲ್ಲಿ ನಾವು ದುಡ್ಡಿಗಾಗಿ ಚಿಕಿತ್ಸೆಗಳನ್ನು ನೀಡದೆ ಬರುವ ರೋಗಿಗಳಿಗೆ ಮದ್ದು ನೀಡುವುದರ ಮೂಲಕ ಸಮಾಜ ನಮ್ಮ ಮೇಲೆ ಇಟ್ಟಿರುವ …

Read More »

ಸಮಸ್ಯೆಗಳ ಕಗ್ಗಂಟಿನಲ್ಲಿ ಸಿಲುಕಿದ ಕಂಗ್ರಾಳಿ ಬಿ.ಕೆ ಪಾರ್ವತಿ ನಗರ…

ಸಮಸ್ಯೆಗಳ ಕಗ್ಗಂಟಿನಲ್ಲಿ ಸಿಲುಕಿದ ಕಂಗ್ರಾಳಿ ಬಿ.ಕೆ ಪಾರ್ವತಿ ನಗರ… ಬೆಳಗಾವಿಯ ಕಂಗ್ರಾಳಿ ಬಿ.ಕೆ ಗ್ರಾಮ ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ. ಅಸ್ವಚ್ಛತೆ, ಕಾಮಗಾರಿ ವಿಳಂಬ, ಉರಿಯದ ಬೀದಿ ದೀಪ, ಅಪಾಯಕಾರಿ ನಾಲೆಯಿಂದಾಗಿ ಇಲ್ಲಿನ ಜನರಿಗೆ ಅನಾಥಪ್ರಜ್ಞೆ ಕಾಡುತ್ತಿದೆ. ಸಮಸ್ಯೆಯ ಕಗ್ಗಂಟಿನಲ್ಲಿ ಸಿಲುಕಿದ ಕಂಗ್ರಾಳಿ ಬಿ.ಕೆ. ಕುರಿತು ಇಲ್ಲಿದೆ ಒಂದು ವರದಿ. ಅರ್ಧಕ್ಕೆ ನಿಂತ ಕಾಮಗಾರಿಗಳು, ಹದಗೆಟ್ಟು ಹೋದ ರಸ್ತೆಗಳು, ತಡೆಗೋಡೆ ಇಲ್ಲದೇ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ನಾಲೆ, ಉರಿಯದ ಬೀದಿ ದೀಪಗಳು…ವಿಲೇವಾರಿಯಾಗದ …

Read More »

ಫಾರೆಸ್ಟ್ ಗಾರ್ಡ್ ನಿಗೂಢವಾಗಿ ನಾಪತ್ತೆ, 6 ದಿನ ಕಳೆದರೂ ಸಿಗದ ಸುಳಿವು

ಚಿಕ್ಕಮಗಳೂರು, ಜುಲೈ 02: ಜಿಲ್ಲೆಯ ಕಡೂರು (Kadur) ತಾಲೂಕಿನ ನೀಲಗಿರಿ ಪ್ಲಾಂಟೇಶನ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಾರೆಸ್ಟ್ ಗಾರ್ಡ್ (forest guard) ನಿಗೂಢವಾಗಿ ನಾಪತ್ತೆಯಾಗಿರುವಂತಹ ಘಟನೆ ನಡೆದಿದೆ. ನೂರಾರು ಅರಣ್ಯ ಸಿಬ್ಬಂದಿ ಸೇರಿ ಪೊಲೀಸರು, ನೀಲಗಿರಿ ಪ್ಲಾಂಟೇಶನ್ ಮತ್ತು ಅರಣ್ಯದಲ್ಲಿ ಹುಡುಕಾಟ ನಡೆಸಿದರೂ ಕಳೆದ 6 ದಿನಗಳಿಂದ ಗಾರ್ಡ್ ಸುಳಿವು ಮಾತ್ರ ಸಿಗುತ್ತಿಲ್ಲ. ಆರು ತಿಂಗಳ ಹಿಂದಷ್ಟೇ ವರ್ಗಾವಣೆ ಜಿಲ್ಲೆಯ ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆಯ ಕಾಲೂರು ಗ್ರಾಮದ ‌33 ವರ್ಷದ ಫಾರೆಸ್ಟ್ ಗಾರ್ಡ್ …

Read More »

ತರಂಗಿಣಿ’ ಕಾರ್ಯಕ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳನ್ನು ವಿಶೇಷ ಚೇತನರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ರಾಜ್ಯದ ಆಯ್ದ 200 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ‘ಅಲೆಕ್ಸಾ’ ಸಹಾಯಕ ಸಾಧನವನ್ನು ವಿತರಿಸುವ ‘ತರಂಗಿಣಿ’ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು. ಸ್ಟೇಟ್ ಸ್ಟ್ರೀಟ್ ಕಂಪನಿಯ ಸಿ.ಎಸ್.ಆರ್ ಅನುದಾನದೊಂದಿಗೆ ಯುನೈಟೆಡ್‌ ವೇ ಬೆಂಗಳೂರು (ಯುಡಬ್ಲ್ಯೂಬಿಇ) ಸಂಸ್ಥೆಯ ಸಹಯೋಗದಲ್ಲಿ …

Read More »

ರೈಲ್ವೆ ಟಿಕೆಟ್ ದರ ಏರಿಕೆ ತಕ್ಷಣವೇ ಹಿಂಪಡೆಯಬೇಕು: ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಸಾಮಾನ್ಯ ಜನರ ಸಾರಿಗೆ ಎಂದೇ ಜನಪ್ರಿಯವಾಗಿರುವ ರೈಲುಗಳ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ಮಧ್ಯಮ ಮತ್ತು ಬಡವರ್ಗದ ಬದುಕಿನ ಮೇಲೆ ಬರೆ ಎಳೆದಿದೆ. ಈ ಬೆಲೆ ಏರಿಕೆಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಸಂಬಂಧ ಮಾಧ್ಯಮ‌ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಏರುತ್ತಲೇ ಇರುವ ಪೆಟ್ರೋಲ್, ಡೀಸೆಲ್ ಮತ್ತು …

Read More »