ವಿಜಯಪುರ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಭೇಟಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು. ಶ್ರೀಗಳಿರುವ ಕೊಠಡಿಗೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ ಇವರು ಶ್ರೀಗಳ ಆರೋಗ್ಯ ಕ್ಷೇಮ ವಿಚಾರ ತಿಳಿಯಲು ವೈದ್ಯರ ಭೇಟಿ ಮಾಡಿದರು. ಬಳಿಕ ಮಾತನಾಡಿ ಶ್ರೀಗಳ ಆರೋಗ್ಯ ಸ್ಥಿರವಾಗಿದೆ, ನಾನು ವೈದ್ಯರ ಜೊತೆಗೆ ಮಾತನಾಡಿದ್ದೇನೆ, ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ, ಅವರು ಮಹಾಸಂತರು ಧಾರ್ಮಿಕವಾಗಿ ಜಾಗೃತಿಗೊಳಿಸುವ ಕೆಲಸ ಮಾಡಿದ್ದಾರೆ ಎಂದರು. ಪ್ರವಚನದ ಮೂಲಕ ಧಾರ್ಮಿಕ ಭಾವನೆ ಮೂಡಿಸಿದ್ದಾರೆ, …
Read More »ಸಾಧನೆಗೈದ ಕಾನಸ್ಟೆಬಲ್ ಪುತ್ರಿ MBBS ವ್ಯಾಸಂಗಕ್ಕಾಗಿ ಭಾರತದ ಪ್ರತಿಷ್ಠಿತ ಏಮ್ಸ್ (AIIMS New Delhi) ಗೆ
ಸಾಧನೆಗೈದ ಕಾನಸ್ಟೆಬಲ್ ಪುತ್ರಿ ಹಾಗೂ ಆಕೆಯ ತಂದೆ – ತಾಯಿಯನ್ನು ಕಚೇರಿಗೆ ಕರೆಸಿ ಸೋಮವಾರ ಸನ್ಮಾನಿಸುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಆದರ್ಶ ಕೆಲಸ ಮಾಡಿದ್ದಾರೆ. ಚಿಕ್ಕೋಡಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಲಗಮಣ್ಣಾ ನಾಯಕ್ ಮತ್ತು ಶೀಲಾ ಲಗಮಣ್ಣ ನಾಯಕ ರವರ ಮಗಳು ಸ್ನೇಹಾ ನಾಯಕ್ MBBS ವ್ಯಾಸಂಗಕ್ಕಾಗಿ ಭಾರತದ ಪ್ರತಿಷ್ಠಿತ ಏಮ್ಸ್ (AIIMS New Delhi) ಗೆ ಆಯ್ಕೆಯಾಗಿದ್ದಾರೆ. ಅವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ …
Read More »ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ:ಸತೀಶ್ ಜಾರಕಿಹೊಳಿ
ಯಮಕನಮರಡಿ: ಬಸವಣ್ಣನವರು ಹೇಳಿದಂತೆ ಕಾಯಕದಲ್ಲೇ ಕೈಲಾಸ ಕಾಣುವ ಮೂಲಕ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಸದುದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದಾಗ ಹಳ್ಳಿಗಳ …
Read More »ದುರುದ್ದೇಶದಿಂದ ದರ್ಗಾ ತೆರವು: ಸಿದ್ದರಾಮಯ್ಯ ಆರೋಪ
ಹುಬ್ಬಳ್ಳಿ: ‘ಮುಸ್ಲಿಮ್ ಸಮುದಾಯಕ್ಕೆ ದೌರ್ಜನ್ಯ ಎಸಗಬೇಕು ಎನ್ನುವ ದುರುದ್ದೇಶದಿಂದ ಬೈರಿದೇವರಕೊಪ್ಪದ ದರ್ಗಾ ಮತ್ತು ಮಸೀದಿಯನ್ನು ತೆರವು ಮಾಡಲಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ನಗರದಲ್ಲಿ ಏರ್ಪಡಿಸಿರುವ ಮಹದಾಯಿ ಜನಾಂದೋಲನ ಸಮಾವೇಶದಲ್ಲಿ ಪಾಲ್ಗೊಳ್ಳುವ ಪೂರ್ವ, ನಗರದ ಬೈರಿದೇವರಕೊಪ್ಪದಲ್ಲಿ ಇತ್ತೀಚೆಗೆ ದರ್ಗಾ ತೆರವು ಮಾಡಿರುವ ಸ್ಥಳಕ್ಕೆ ಭೇಟಿ ನೀಡಿ, ಮಾಧ್ಯಮದವರೊಂದಿಗೆ ಮಾತನಾಡಿದರು. ‘ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಮಸೀದಿ, ದರ್ಗಾ ನಿರ್ಮಿಸಲಾಗಿತ್ತು. ಅವುಗಳ ತೆರವು ಮಾಡಲು ಅದರ ಆಡಳಿತ ಮಂಡಳಿಗೆ ಸರ್ಕಾರ …
Read More »‘ಕಳಸಾ ಬಂಡೂರಿ ನಾಲಾ ಯೋಜನೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ಚುನಾವಣೆ ಗಿಮಿಕ್ : ಸತೀಶ ಜಾರಕಿಹೊಳಿ
ಬೆಳಗಾವಿ: ‘ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿಯ ಸಮಗ್ರ ಯೋಜನಾ ವರದಿಗೆ ಅನುಮೋದನೆ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿರುವುದು ಬಿಜೆಪಿಯ ಚುನಾವಣೆ ಗಿಮಿಕ್’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪಾದಿಸಿದರು. ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರು ಇಂತಹ ದಾಳ ಉರುಳಿಸುತ್ತಿದ್ದಾರೆ. ಆದರೆ, ಅವುಗಳಲ್ಲಿ ಸ್ಪಷ್ಟತೆ ಇಲ್ಲ’ ಎಂದು ಕಿಡಿಕಾರಿದರು.
Read More »ಹುಬ್ಬಳ್ಳಿ: ಕಾಂಗ್ರೆಸ್ ಸಮಾವೇಶಕ್ಕೆ ಬಂದ ವ್ಯಕ್ತಿ ಮೇಲೆ ಬಸ್ ಹರಿದು ಸಾವು
ಹುಬ್ಬಳ್ಳಿ: ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ವ್ಯಕ್ತಿ ಮೇಲೆ ಬಸ್ ಹಾಯ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ, ಜೆಸಿ ನಗರದ ಜೋಶಿ ಪೆಟ್ರೋಲ್ ಬಂಕ್ ಎದುರು ಸೋಮವಾರ ನಡೆದಿದೆ. ಮೃತಪಟ್ಟವರು ಅಣ್ಣಿಗೇರಿ ನಿವಾಸಿ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್’ಗೆ ದಾಖಲಿಸಲಾಗಿದೆ. ಸಮಾವೇಶ ನಡೆಯುತ್ತಿದ್ದ ಸ್ಥಳಕ್ಕೆ ತೆರಳುತ್ತಿದ್ದಾಗ ಗದುಗಿನಿಂದ ಗದಗ-ಹುಬ್ಬಳ್ಳಿ ಬಸ್ ಅವರ ಮೇಲೆ ಹಾಯ್ದಿದೆ. ಬಸ್ ಎಡ ಭಾಗದ ಟೈರ್ …
Read More »ಹೊಸ ವರ್ಷ ಸ್ವಾಗತಕ್ಕೆ ಹಾರಿಸಿದ ಗುಂಡು: ಇಬ್ಬರ ಸಾವು
ಶಿವಮೊಗ್ಗ: ಡಬಲ್ ಬ್ಯಾರಲ್ ಗನ್ ಮೂಲಕ ಗುಂಡು ಹಾರಿಸಿ ಹೊಸ ವರ್ಷವನ್ನು ಸ್ವಾಗತಿಸುವ ಧಾವಂತಕ್ಕೆ ನಗರದಲ್ಲಿ ಎರಡು ಜೀವಗಳು ಬಲಿಯಾಗಿವೆ. ಇಲ್ಲಿನ ವಿದ್ಯಾನಗರದ ನಿವಾಸಿ ಮಂಜುನಾಥ ಓಲೇಕಾರ, ತಮ್ಮ ಮನೆಯ ಮಹಡಿಯ ಮೇಲೆ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಶನಿವಾರ ರಾತ್ರಿ ಗನ್ಗೆ ಗುಂಡು ತುಂಬುವಾಗ ಆಕಸ್ಮಿಕವಾಗಿ ಸಿಡಿದ ಅದು ಎಚ್.ಯು. ವಿನಯ್ (34) ಅವರಿಗೆ ತಗುಲಿ ತೀವ್ರವಾಗಿ ಗಾಯಗೊಂಡರು. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಿಂದ ತೀವ್ರವಾಗಿ …
Read More »ಸ್ವಾರ್ಥ ಬಿಟ್ಟು ಕೆಲಸ ಮಾಡಿದರೇ ಇಡೀ ಸಮಾಜವೇ ಉದ್ಧಾರ- ಶಾಸಕ ಬಾಲಚಂದ್ರ ಜಾರಕಿಹೊಳಿ
ಸ್ವಾರ್ಥ ಬಿಟ್ಟು ಕೆಲಸ ಮಾಡಿದರೇ ಇಡೀ ಸಮಾಜವೇ ಉದ್ಧಾರ- ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ: ಮಠಾಧೀಶರು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸ್ವಾರ್ಥ ಬಿಟ್ಟು ಕೆಲಸ ಮಾಡಿದರೇ ಇಡೀ ಸಮಾಜವೇ ಉದ್ಧಾರವಾಗುತ್ತದೆ. ನಿಸ್ವಾರ್ಥ ಮನೋಭಾವನೆಯಿಂದ ಕೆಲಸಗಳನ್ನು ಮಾಡಿದರೆ ಮುಂದೊಂದು ದಿನ ದೇವರು ಯಾವುದಾದರೂ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ. ಸ್ವಾರ್ಥವನ್ನಿಟ್ಟುಕೊಂಡು ಕೆಲಸ ಮಾಡಿದ್ದಾದರೆ ದೇವರು ಎಂದಿಗೂ ಮೆಚ್ಚುವುದಿಲ್ಲ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಹುಣಶ್ಯಾಳ ಪಿಜಿ …
Read More »ಸಾಮಾನ್ಯ ಕಾರ್ಯಕರ್ತನನ್ನು ಸಿದ್ದರಾಮಯ್ಯ ವಿರುದ್ದ ಗೆಲ್ಲಿಸುತ್ತೇವೆ: ಈಶ್ವರಪ್ಪ
ಶಿವಮೊಗ್ಗ: ಚುನಾವಣೆಯಲ್ಲಿ ಗೆದ್ದ ಶಾಸಕ ಬೇರೆ ಕ್ಷೇತ್ರ ಹುಡುಕುವುದು ರಾಜ್ಯದ ಮತ್ತು ಆ ಕ್ಷೇತ್ರದ ಮತದಾರರಿಗೆ ಮಾಡುವ ಅವಮಾನ. ತನ್ನ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನತೆಯ ಮುಂದಿಟ್ಟು ಮತ ಕೇಳುವಂತಿರಬೇಕು. ಇವತ್ತಿಗೂ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆಂದು ಹೇಳುತ್ತಿಲ್ಲ. ಇಂದಲ್ಲ ನಾಳೆ ಯಾವ ಪಕ್ಷದಿಂದ ಸ್ಪರ್ಧೆ ಎಂದು ಹೇಳುವ ದಿನ ಕೂಡ ಬರಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರದಿಂದ ಸ್ಪರ್ಧೆ …
Read More »ಪಣಜಿ: ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಕೇಂದ್ರಕ್ಕೆ ಗೋವಾ ಸರಕಾರ ಒತ್ತಾಯ
ಪಣಜಿ: ಮಹದಾಯಿ ನದಿಯಿಂದ ಅಕ್ರಮವಾಗಿ ನೀರು ತಿರುಗಿಸುವುದನ್ನು ತಡೆಯಲು ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ರಾಜ್ಯ ಸಚಿವ ಸಂಪುಟವು ಇಂದು ನಿರ್ಧರಿಸಿದೆ. ಕಳಸಾ-ಭಂಡೂರಿ ನೀರಿನ ಯೋಜನೆಗೆ ಕರ್ನಾಟಕದ ವಿವರವಾದ ಯೋಜನಾ ವರದಿಗೆ ನೀಡಲಾದ ಎನ್ಒಸಿಯನ್ನು ತಕ್ಷಣವೇ ಹಿಂಪಡೆಯಲು ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಸೋಮವಾರ ಪಣಜಿಯಲ್ಲಿ ವಿಶೇಷ ಸಚಿವ …
Read More »
Laxmi News 24×7