Breaking News

ರಾಜಕೀಯ

ಬನವಾಸಿಗೆ ಆಗಮಿಸಿದ ಸಿಎಂ ಬೊಮ್ಮಾಯಿ: ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಕಾಂಗ್ರೆಸ್ ಪ್ರಮುಖರು

ಶಿರಸಿ: ಕನ್ನಡ ಪ್ರಥಮ ರಾಜಧಾನಿ ಬನವಾಸಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಎದುರು ಸ್ಥಳೀಯ ಕಾಂಗ್ರೆಸ್ ಪ್ರಮುಖರು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿದ ಘಟನೆ ಮಂಗಳವಾರ ನಡೆದಿದೆ. ಜನರ ಉತ್ಸವವನ್ನಾಗಿ ಕದಂಬೋತ್ಸವವನ್ನು ಆಚರಿಸಬೇಕಿತ್ತು. ಇದು ಬಿಜೆಪಿ ಉತ್ಸವದಂತೆ ನಡೆಸಲಾಗುತ್ತಿದೆ. ಬಿಜೆಪಿ ಚಿಹ್ನೆಯ ಟಿಶರ್ಟ್ ಹಂಚಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ತಾವು ಕಾಂಗ್ರೆಸ್ ಶಾಲು ಹಾಕಿ ಬಂದಿದ್ದು ಕೆಲ‌ ಕಾಲ ಗೊಂದಲ‌ ಉಂಟಾಗಿತ್ತು. ಸಿಎಂ ತೆರಳುವ ಮಾರ್ಗದಲ್ಲಿ …

Read More »

ಮುಂಬೈ ಹಳಿ ತಪ್ಪಿದ ಲೋಕಲ್ ರೈಲಿನ ಮೂರು ಬೋಗಿಗಳು, ಯಾವುದೇ ಪ್ರಾಣಹಾನಿ ಇಲ್ಲ

ಮುಂಬೈ: ಮುಂಬೈ ಉಪನಗರ ಲೋಕಲ್ ರೈಲಿನ ಮೂರು ಬೋಗಿಗಳು ಮಂಗಳವಾರ ಸೆಂಟ್ರಲ್ ರೈಲ್ವೇ (ಸಿಆರ್) ಯುರಾನ್ ಲೈನ್‌ನಲ್ಲಿ ಹಳಿತಪ್ಪಿದ್ದು, ಕಾರಿಡಾರ್‌ನಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸಿಆರ್ ಅಧಿಕಾರಿಗಳು ತಿಳಿಸಿದ್ದಾರೆ, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.   ಸಿಆರ್ ಮುಖ್ಯ ವಕ್ತಾರ ಶಿವಾಜಿ ಸುತಾರ್ ಪ್ರಕಾರ, ಬೇಲಾಪುರದಿಂದ ಖಾರ್ಕೋಪರ್‌ಗೆ ಹೋಗುತ್ತಿದ್ದ ರೈಲಿನ ಹಳಿತಪ್ಪುವಿಕೆಯು ಬೆಳಿಗ್ಗೆ 8.46 ಕ್ಕೆ ಸಂಭವಿಸಿದೆ, ಆದರೆ ಯಾವುದೇ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಬೆಲಾಪುರ್-ಖಾರ್ಕೋಪರ್-ನೆರೂಲ್ ಕಾರ್ಯಾಚರಣೆಗಳು ಸ್ಥಗಿತಗೊಳ್ಳುವವರೆಗೂ ದುರಸ್ತಿ-ಮರುಸ್ಥಾಪನೆ ಕಾರ್ಯಗಳನ್ನು …

Read More »

ಕಲ್ಮೇಶ್ವರ ದೇವರ ಬೆಳ್ಳಿ ಮೂರ್ತಿ ಕಳವು

ನವಲಗುಂದ: ತಾಲ್ಲೂಕಿನ ಶಿರಕೋಳ ಗ್ರಾಮದಲ್ಲಿರುವ ಕಲ್ಮೇಶ್ವರ ದೇವರ 11 ಕೆ.ಜಿ ತೂಕದ ಬೆಳ್ಳಿಯ ಮೂರ್ತಿ ಕಳ್ಳರು ಕಳವು ಮಾಡಿದ್ದಾರೆ. ಭಾನುವಾರ ತಡರಾತ್ರಿ ಈ ಕೃತ್ಯ ನಡೆದಿದೆ. ಕಳ್ಳ ದೇವಸ್ಥಾನದಲ್ಲಿ ಅತ್ತ ಇತ್ತ ತಿರುಗಾಡಿದ್ದಾನೆ. ಅಲ್ಲಿ ಮಲಗಿದ್ದವರು ಎಚ್ಚರಗೊಳ್ಳದಂತೆ ನೋಡಿಕೊಂಡು, ಕೀಲಿ ಮುರಿದು ಗರ್ಭಗುಡಿ ಪ್ರವೇಶಿಸಿ, ಆ ಬೆಳ್ಳಿ ಮೂರ್ತಿ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ದೃಶ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಮಾಯಿಸಿದ ಜನ: ಮೂರ್ತಿ ಕಳವು ಸುದ್ದಿ ತಿಳಿಯುತ್ತಿದ್ದಂತೆ …

Read More »

ಮುಷ್ಕರ ನಡೆಯುವುದು ಶತಸಿದ್ಧ; ವದಂತಿಗಳಿಗೆ ಕಿವಿಗೊಡದಿರಿ: ಷಡಾಕ್ಷರಿ

ಬೆಂಗಳೂರು: “ಬುಧವಾರದಿಂದ ಮುಷ್ಕರ ನಡೆಯುವುದು ಶತಸಿದ್ಧ. ಯಾವ ಕಾರಣಕ್ಕೂ ಮುಷ್ಕರ ಹಿಂಪಡೆಯುವ ಮಾತೇ ಇಲ್ಲ,ಈ ವಿಷಯದಲ್ಲಿ ರಾಜ್ಯ ಸರಕಾರಿ ನೌಕರರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು” ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಕರೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಹಿರಿಯ ಅಧಿಕಾರಿಗಳೂ ಸೇರಿದಂತೆ ರಾಜ್ಯ ಸರಕಾರದ ಎಲ್ಲ ನೌಕರರು ಈ ಮುಷ್ಕರದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು” ಎಂದು ಅವರು …

Read More »

ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳು ಬಂದ್?

ಬೆಂಗಳೂರು: 7ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಕರೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರಿ ಶಾಲಾ ಶಿಕ್ಷಕರು ಶಾಲೆಗಳಿಗೆ ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲಿಯೇ ಇದ್ದು ಮುಷ್ಕರದಲ್ಲಿ ಭಾಗಿಯಾಗುವಂತೆ ಷಡಕ್ಷರಿ …

Read More »

ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಿದ್ಧತೆ ಆರಂಭ

2023ರ ಡಿಸೆಂಬರ್ ತಿಂಗಳಿನಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಮಾಹಿತಿ ನೀಡಿದ್ದಾರೆ. ಮೈಸೂರು: 2023ರ ಡಿಸೆಂಬರ್ ತಿಂಗಳಿನಲ್ಲಿ ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ …

Read More »

ಕಲಬುರಗಿ-ಬೀದರ್ ಮಧ್ಯೆ ಮತ್ತೊಂದು ರೈಲು

ಕಲಬುರಗಿ: ಬಹು ದಿನಗಳ ಬೇಡಿಕೆಯಾಗಿದ್ದ ಕಲಬುರಗಿ-ಬೀದರ್ ಮಧ್ಯೆ ಮತ್ತೊಂದು ರೈಲಿಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದ ಡಾ. ಉಮೇಶ ಜಾಧವ್ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.   ಸದ್ಯಕ್ಕೆ ಒಂದೇ ಡೆಮು ರೈಲು ಇದ್ದು, ನಿತ್ಯ ಎರಡು ಬಾರಿ ಸಂಚರಿಸುತ್ತದೆ. ಹೊಸದಾಗಿ ಆರಂಭವಾಗುವ ಡೆಮು ರೈಲು ನಿತ್ಯ ಬೆಳಿಗ್ಗೆ 7.30ಕ್ಕೆ ಕಲಬುರಗಿಯಿಂದ ಹೊರಟು ಬೆಳಿಗ್ಗೆ 10.15ಕ್ಕೆ ಬೀದರ್‌ …

Read More »

ಖಾನಾಪುರ: ಕ್ರೀಡಾ ವಿಜೇತರಿಗೆ ನಗದು ಬಹುಮಾನ

ಖಾನಾಪುರ: ಪಟ್ಟಣದಲ್ಲಿ ಆಯೋಜಿಸಿದ್ದ ಲಿಂಗನಮಠ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ನಲ್ಲಿ ವಿಜೇತ ತಂಡಗಳಿಗೆ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್‌ ಭಾನುವಾರ ನಗದು ಬಹುಮಾನ ವಿತರಿಸಿದರು. ಚಾಂಪಿಯನ್‌ ತಂಡಕ್ಕೆ ₹50 ಸಾವಿರ, ದ್ವಿತೀಯ ಸ್ನಾನ ಪಡೆದ ತಂಡಕ್ಕೆ ₹ 25 ಸಾವಿರ, ತೃತೀಯ ಸ್ಥಾನದ ಆಟಗಾರರಿಗೆ ₹ 10 ಸಾವಿರದ ಚೆಕ್‌ಗಳನ್ನು ಅವರು ನೀಡಿದರು.   ನಂತರ ಮಾತನಾಡಿ, ‘ಮುಂದಿನ ವರ್ಷದಿಂದ ಈ ನಗದು ಬಹುಮಾನ ಮೊತ್ತವನ್ನು ₹ 5 ಲಕ್ಷಕ್ಕೆ ಏರಿಸಲಾಗುವುದು. …

Read More »

ವಿದ್ಯಾರ್ಥಿಗಳಿಗೆ ವಿಎಸ್‍ಎಂ ಫೌಂಡೇಷನ್ ನೆರವು

ನಿಪ್ಪಾಣಿ: ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅವರು ತಮ್ಮ ಸಂಸ್ಥೆಗಳಲ್ಲಿ ಓದುತ್ತಿರುವ, ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಡ ವಿದ್ಯಾರ್ಥಿಗಳ ಮನೆಗಳಿಗೆ ಶನಿವಾರ ತೆರಳಿ ಆರೋಗ್ಯ ವಿಚಾರಿಸಿ, ವಿಎಸ್‍ಎಂ ಫೌಂಡೇಷನ್‍ನಿಂದ ₹21 ಸಾವಿರ ಧನಸಹಾಯ ಮಾಡಿದರು.   5ನೇ ತರಗತಿಯ ಅಭಿಷೇಕ ವಿಕ್ರಮ ಕದಮ, 6ನೇ ತರಗತಿ ಆರ್ಯನ್ ಕುಂದನ್ ಖೋತ ಶಸ್ತ್ರಚಿಕಿತ್ಸೆಗೆ ಒಳಗಾದವರು.

Read More »

ನಿಪ್ಪಾಣಿ: ‘ನಿರ್ಲಕ್ಷಿತ ಗ್ರಾಮದಲ್ಲಿ ಅಭಿವೃದ್ಧಿ’

ನಿಪ್ಪಾಣಿ: ‘ರಾಜ್ಯದ ಕಟ್ಟಕಡೆಯ ಗಾಯಕವಾಡಿ ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ನನ್ನ ಆಡಳಿತಾವಧಿಯಲ್ಲಿ ಗ್ರಾಮದಲ್ಲಿ ಈವರೆಗೆ ₹8.4 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ’ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.   ತಾಲ್ಲೂಕಿನ ಗಾಯಕವಾಡಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುಮೋದನೆಗೊಂಡ ₹ 85 ಲಕ್ಷ ಅನುದಾನದ ಗಾಯಕವಾಡಿ-ಕೋಡಣಿ ಗ್ರಾಮಗಳ ನಡುವಿನ ಹಳ್ಳದ ಬ್ರಿಜ್ ಕಂ ಬ್ಯಾರೇಜ್ ಮತ್ತು ಲೋಕೋಪಯೋಗಿ ಇಲಾಖೆಯಿಂದ ವಿವೇಕ ಶಾಲಾ ಯೋಜನೆಯಡಿ ಅನುಮೋದನೆಗೊಂಡ ₹15 …

Read More »