ಅಹಮದಾಬಾದ್ (ಗುಜರಾತ್): ಹೆಣ್ಣೆಂದರೆ ಹಾಗೆಯೇ. ಭೂಮಿ ಭಾರವನ್ನೂ ಹೊರುತ್ತಾಳೆ, ಯಾರದೇ ಕಣ್ಣೀರಿಗೂ ಮಿಡಿಯುತ್ತಾಳೆ. ಅದಕ್ಕೆ ಅಲ್ವೇ ನಾರಿಯರಿಗೆ ವಿಶ್ವಮನ್ನಣೆ ಇರೋದು. ಗುಜರಾತ್ ಹೈಕೋರ್ಟ್ ಜವಾನ (ಪ್ಯೂನ್) ಹುದ್ದೆಯ ಪರೀಕ್ಷೆಗೆ ಮಹಿಳೆಯೊಬ್ಬರು ಹಾಜರಾಗಿದ್ದರೆ, ಆಕೆಯ ಮಗುವನ್ನು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಎತ್ತಿಕೊಂಡು ಪರೀಕ್ಷೆ ಮುಗಿಸಿ ಬರುವವರೆಗೂ ರಕ್ಷಣೆ ಒದಗಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಗು ಕೂಡ ಆಕೆಯೊಂದಿಗೆ ನಗುತ್ತಾ ನಲಿದಾಡಿದೆ. ಭಾನುವಾರದಂದು ಗುಜರಾತ್ ಹೈಕೋರ್ಟ್‌ನ ಜವಾನ ಹುದ್ದೆಗೆ ಪರೀಕ್ಷೆ ನಡೆದಿದೆ. 6 ತಿಂಗಳ …
Read More »ಲೋಕ ಅದಾಲತ್‌ನಲ್ಲಿ ದಾಖಲೆಯ 34.76 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿ ಆದೇಶಿ
ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಾಜ್ಯಾದ್ಯಂತ ನಡೆಸಲಾದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ದಾಖಲೆಯ 34.76 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿ ಆದೇಶಿಸಲಾಗಿದೆ. ಈ ಸಂಬಂಧ ನಡೆದ ಮಾಧ್ಯಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಿ.ನರೇಂದರ್ ಮಾಹಿತಿ ನೀಡಿದರು. ಹೈಕೋರ್ಟ್‌ನ ಬೆಂಗಳೂರು ಪ್ರಧಾನಪೀಠ, ಧಾರವಾಡ ಮತ್ತು …
Read More »ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ಶರಣಾಗಿದ್ದಾರೆ.
ಹಾಸನ: ಮೂರು ದಿನಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ಶರಣಾಗಿದ್ದಾರೆ. ಚನ್ನರಾಯಪಟ್ಟಣದ ರೌಡಿಶೀಟರ್ ಹುಲಿವಾಲ ಚೇತು, ಹಾಸನದ ಸಾಲಗಾಮೆ ರಾಕೇಶ್ ಅಲಿಯಾಸ್ ರಾಕಿ ಮತ್ತು ಮಂಡ್ಯ ಮೂಲದ ಶಿವು, ಶರಣಾದ ಆರೋಪಿಗಳು. ಜೂ.4ರ ಮಂಗಳವಾರ ಐದು ಮಂದಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮಾಸ್ತಿಗೌಡನನ್ನು ಬರ್ಬರವಾಗಿ ಕೊಲೆ ಮಾಡಿ, ಪರಾರಿಯಾಗಿದ್ದರು. ಆರೋಪಿಗಳಲ್ಲಿ ಮೂವರು ತಾವಾಗಿಯೇ ಶರಣಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. …
Read More »ಸಾಂಸ್ಕೃತಿಕ ಪರಂಪರೆ ಭೂತಕಾಲದ ಆಧಾರ ಸ್ತಂಭ:ಪ್ರಹ್ಲಾದ್ ಜೋಶಿ
ವಿಜಯನಗರ: ಸಂಸ್ಕೃತಿ ಎಂಬುದು ಕೇವಲ ಗುರುತಾಗದೇ ಜಾಗತಿಕ ಸಾಂಗತ್ಯವಾಗಿ ಮಾರ್ಪಡಿಸಿಕೊಳ್ಳಲು ಜಿ-20 ಸಭೆ ಮಾರ್ಗವಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಆರಂಭಗೊಂಡ 3ನೇ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ತಂಡದ(ಸಿಡಬ್ಲ್ಯೂಜಿ) ಸಭೆಯನ್ನು ಇಂದು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಭೆಯನ್ನು ಉದ್ಘಾಟಿಸಿದ ಪ್ರಹ್ಲಾದ್ ಜೋಶಿನಾಲ್ಕು ಪ್ರಮುಖ ಆದ್ಯತೆಗಳಾದ ಆಯಾ ದೇಶಗಳ ಕಲಾಕೃತಿಗಳನ್ನು ಮೂಲ ಸ್ಥಾನಕ್ಕೆ …
Read More »ಆಯುಷ್ ಇಲಾಖೆ ಆಯುಕ್ತ ಮಂಜುನಾಥ್ ಸೇರಿದಂತೆ 9 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು : ಆಯುಷ್ ಇಲಾಖೆ ಆಯುಕ್ತ ಮಂಜುನಾಥ್ ಸೇರಿದಂತೆ ಒಟ್ಟು 9 ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಇಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಆಯುಷ್ಯ ಇಲಾಖೆಯ ಆಯುಕ್ತರಾಗಿದ್ದ ಮಂಜುನಾಥ್ ಅವರನ್ನು ಸರ್ವೇ ಇತ್ಯರ್ಥ ಮತ್ತು ಭೂಮಿ ದಾಖಲೆಗಳ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ನಿರ್ದೇಶಕರಾಗಿದ್ದ ಶ್ರೀಮತಿ ಸತ್ಯಭಾಮ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕ …
Read More »ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ.
ವಿಶಾಖಪಟ್ಟಣಂ( ಆಂಧ್ರಪ್ರದೇಶ) : ಆತ ಬಾಲಕಿ ಓದುತ್ತಿದ್ದ ಶಾಲೆಯಲ್ಲಿ ಅಟೆಂಡರ್. ಒಂದೇ ಅಪಾರ್ಟ್ಮೆಂಟ್ನ ನಿವಾಸಿ. ವಿದ್ಯಾರ್ಥಿನಿ ನೀಡಿದ ಸಲುಗೆಯನ್ನು ದುರುಪಯೋಗಪಡಿಸಿಕೊಂಡು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಡಿಯೋ ಮಾಡಿ ತನ್ನೊಂದಿಗೆ ಸಹಕರಿಸದಿದ್ದರೆ, ಹರಿಬಿಡುವ ಬೆದರಿಕೆ ಹಾಕಿ ತನ್ನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ. ಕೃತ್ಯ ಇದೀಗ ಬೆಳಕಿಗೆ ಬಂದಿದ್ದು, ಕೀಚಕ ಸತ್ಯರಾವ್ ಮತ್ತು ಆತನ ನಾಲ್ವರು ಸ್ನೇಹಿತರನ್ನ ಬಂಧಿಸಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಆರೋಪಿ …
Read More »ಜೈನ ಮುನಿ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ
ಚಿಕ್ಕೋಡಿ(ಬೆಳಗಾವಿ): ಹಿರೇಕೋಡಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಚಿಕ್ಕೋಡಿ ಪಟ್ಟಣದಲ್ಲಿ ಜೈನ್ ಧರ್ಮದ ಶ್ರಾವಕ ಶ್ರಾವಕಿಯರು ಬೃಹತ್ ಪ್ರತಿಭಟನೆ ನಡೆಸಿದರು. ಚಿಕ್ಕೋಡಿ ಪಟ್ಟಣದ ಆರ್‌ಡಿ ಮೈದಾನದಿಂದ 15 ಸಾವಿರಕ್ಕೂ ಹೆಚ್ಚು ಜನರು ಕೊಲ್ಲಾಪುರ ನಾಂದಣಿ ಮಠದ ಜೀನಸೇನ ಭಟ್ಟಾರಕ ಹಾಗೂ ವರೂರು ಮಠದ ಧರ್ಮಸೇನಾ ಭಟ್ಟಾರಕ, ಮತ್ತು ಕೊಲ್ಲಾಪುರದ ಕೀರ್ತಿಸೇನ ಭಟ್ಟಾರಕರ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಆರ್‌ಡಿ ಹೈಸ್ಕೂಲ್ ಮೈದಾನದಿಂದ ಮಹಾವೀರ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ …
Read More »ಟೊಮೆಟೊ ತುಂಬಿದ್ದ ಬೊಲೆರೊ ವಾಹನ ಹೈಜಾಕ್
ಬೆಂಗಳೂರು: ಕೆಲ ದಿನಗಳಿಂದ ಟೊಮೆಟೊ ಬೆಲೆ ಗಗನಕ್ಕೇರಿದೆ. ಇದೇ ಸಮಯವನ್ನು ಕಾದು ಕುಳಿತಿರುವ ಕೆಲ ಖದೀಮರು ಟೊಮೆಟೊ ಕದಿಯುತ್ತಿದ್ದಾರೆ. ಗಾಡಿ ಟಚ್ ಆಗಿದೆ ಎಂದು ಸುಳ್ಳು ಹೇಳಿದ ಮೂವರು ಆರೋಪಿಗಳು ಟೊಮೆಟೊ ತುಂಬಿದ್ದ ಬೊಲೆರೊ ವಾಹನವನ್ನು ಹೈಜಾಕ್ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಈ ಸಂಬಂಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Read More »ಧಾರವಾಡದ ಐವರು ತಮ್ಮದೇ ಸ್ವಂತ ಹಣದಲ್ಲಿಹೆಲಿಕ್ಯಾಪ್ಟರ್ ಮೂಲಕ ಶ್ರೀನಗರ ತಲುಪಿದ ಧಾರವಾಡದ ಯಾತ್ರಿಗಳು!
ಧಾರವಾಡ : ನಿರಂತರ ಮಳೆಯಾಗುತ್ತಿರುವ ಪರಿಣಾಮ ಜಮ್ಮು ಕಾಶ್ಮೀರದ ಅಮರನಾಥ ಮಾರ್ಗ ಮಧ್ಯೆ ಗುಡ್ಡಕುಸಿತ ಉಂಟಾಗಿ ಅಮರನಾಥದಲ್ಲಿ ಧಾರವಾಡದ ಐವರು ತಮ್ಮದೇ ಸ್ವಂತ ಹಣದಲ್ಲಿ ಶ್ರೀನಗರ ತಲುಪಿದ್ದಾರೆ. ಪಂಚತಾರಣಿ ಬಳಿ ಸಿಲುಕಿದ್ದ ಐವರು ಧಾರವಾಡ ಯಾತ್ರಿಗಳು ಸುರಕ್ಷಿತವಾಗಿ ಶ್ರೀನಗರ ತಲುಪಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಟೆಂಟ್‌ನಲ್ಲಿ ವಾಸವಾಗಿದ್ದ ಯಾತ್ರಿಗಳು ಸರ್ಕಾರದಿಂದ ಯಾವುದೇ ಸಹಾಯ ಸಿಗದ ಹಿನ್ನೆಲೆ ಹೆಲಿಕ್ಯಾಪ್ಟರ್ ಮೂಲಕ ಶ್ರೀನಗರಕ್ಕೆ ಪ್ರಯಾಣಿಸಿದ್ದಾರೆ. ಪ್ರತಿಯೊಬ್ಬರಿಗೆ 4200ರೂ. ನೀಡಿ ಹೆಲಿಕ್ಯಾಪ್ಟರ್ನಲ್ಲಿ ಪ್ರಯಾಣಿಸಿ ಸದ್ಯ ಐವರು …
Read More »ಜೈನ ಮುನಿಗಳ ಹತ್ಯೆ ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಪಟ್ಟು
ಬೆಂಗಳೂರು: ಜೈನ ಮುನಿಗಳ ಹತ್ಯೆ ಕೃತ್ಯವನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಉತ್ತಮ ಅಧಿಕಾರಿಗಳ ತಂಡವನ್ನು ತನಿಖೆಗೆ ಒದಗಿಸಲಿದ್ದೇವೆ. ಘಟನೆಯಲ್ಲಿ ಭಾಗಿಯಾದ ಯಾರೂ ನಮ್ಮ ಸರ್ಕಾರದಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ. ನಮ್ಮ ಮೇಲೆ ವಿಶ್ವಾಸ ಇಟ್ಟು ಸಹಕಾರ ನೀಡಿ, ನಿಮ್ಮ ಅವಧಿಯ ಪೊಲೀಸರೇ ಈಗಲೂ ಇದ್ದಾರೆ. ನಂಬಿಕೆ ಇಡಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಜೈನ ಮುನಿಗಳ ಹತ್ಯೆ ವಿಷಯದ ಚರ್ಚೆಗೆ …
Read More »
Laxmi News 24×7