Breaking News

ರಾಯಚೂರು

ಸಿಡಿ ಯುವತಿ ಪೋಷಕರ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?

ರಾಯಚೂರು : ಸಾಕ್ಷ್ಯಗಳಿದ್ರೆ ಪೊಲೀಸರಿಗೆ ನೀಡಲಿ ಯುವತಿ ಪೋಷಕರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇಂದು ದಿಢೀರ್ ಮಾಧ್ಯಮಗಳ ಮುಂದೆ ಬಂದ ಯುವತಿ ಪೋಷಕರು, ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದರು. ರಾಯಚೂರಿನ ಮುದಗಲ್ ನಲ್ಲಿ ಪೋಷಕರ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನನಗೂ ಸಿಡಿ ಲೇಡಿಗೂ ಸಂಬಂಧವಿಲ್ಲ. ಯಾರಬೇಕಾದರೂ ಏನು ಮಾಡಲಿ. ಒತ್ತಡದಲ್ಲಿರೋರು ಹೇಳಿಕೆಗೆ ಮತ್ತು ನನಗೂ ಸಂಬಂಧವಿಲ್ಲ. ಅವರ ಬಳಿ ದಾಖಲೆಗಳಿದ್ರೆ ಪೊಲೀಸರಿಗೆ …

Read More »

ಗರಿಗೆದರಿದ ಉಪಚುನಾವಣೆ ಕಣ : ಕಾಂಗ್ರೆಸ್-ಬಿಜೆಪಿ ಭರ್ಜರಿ ಪ್ರಚಾರ

ರಾಯಚೂರು : ಮಸ್ಕಿ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾ ಆರಂಭಿಸಿದ್ದಾರೆ. ಕಾಂಗ್ರಸ್ ದ್ವಿಚಕ್ರ ವಾಹನ ಹಾಗೂ ಮನೆ ಮನೆ ಪ್ರಚಾರಕ್ಕಿಳಿದಿದೆ. ಕಾಂಗ್ರೆಸ್ ನಾಯಕ ಬಸನಗೌಡ ತುರುವಿಹಾಳ ಬೂತ್ ಮಟ್ಟದಿಂದ ಮತಬೇಟೆ ಆರಂಭಿಸಿದ್ದಾರೆ. ಇತ್ತ ಬಿಜೆಪಿ ಪಕ್ಷದಿಂದಲೂ ಭರ್ಜರಿ ತಯಾರಿ ನಡೆಯುತ್ತಿದ್ದು, ಸಿಎಂ ಯಡಿಯೂರಪ್ಪ ನೇತೃತ್ವದ ಸಮಾವೇಶಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಸ್ಕಿಯಲ್ಲಿ ಮಾರ್ಚ್​ 20ರಂದು ಸಂಜೆ …

Read More »

ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು: ಚಾಲಕ ಸಜೀವ ದಹನ

ರಾಯಚೂರು: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನವಾದ ಘಟನೆ ತಾಲೂಕಿನ ಕಲ್ಮಲ ಸಮೀಪ ಸಂಭವಿಸಿದೆ. ಮೃತ ಕಾರು ಚಾಲಕನನ್ನು ಮಲ್ಲಟ ಗ್ರಾಮದ ಸದಾನಂದಗೌಡ ಮಾಲೀಪಾಟೀಲ (60) ಎಂದು ಗುರುತಿಸಲಾಗಿದೆ. ಮಲ್ಲಟದಿಂದ ರಾಯಚೂರು ಕಡೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡದಿದೆ. ಇದರಿಂದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣದಲ್ಲೇ ಹೊತ್ತಿ ಉರಿದಿದೆ. ಕಾರು ಲಾಕ್ ಆಗಿರುವ ಕಾರಣ ಚಾಲಕ …

Read More »

ಪೊಲೀಸರ ಎದುರೇ ವಿದ್ಯಾರ್ಥಿ ತಾಯಿಗೆ ಕಪಾಳಮೋಕ್ಷ

ರಾಯಚೂರು: ವಿದ್ಯಾರ್ಥಿಗೆ 80,000 ರೂ ಪೀಸ್ ಡಿಮ್ಯಾಂಡ್ ಮಾಡಿ ಕಿರುಕುಳ ನೀಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿ ತಾಯಿಗೆ ಪೊಲೀಸರ ಎದುರೇ ಕಪಾಳಮೋಕ್ಷ ಮಾಡಿದ ಮೊಂಟೆಸರಿ ಶಾಲೆ ಮುಖ್ಯಸ್ಥ ಸತೀಶ್ ಕುಮಾರ್ ಹಾಗೂ ಆತನ ಪತ್ನಿ ಇಬ್ಬರನ್ನು ಬಂಧಿಸಲಾಗಿದೆ. 10ನೇ ತರಗತಿ ವಿದ್ಯಾರ್ಥಿ ಸಂಪತ್ ಗೆ ತಾವು ಹೇಳಿದಷ್ಟು ಹಣವನ್ನು ಕಟ್ಟಬೇಕು ಎಂದು ಶಾಲೆಯ ಮುಖ್ಯಸ್ಥರು ಪ್ರತಿದಿನ ಕಿರುಕುಳ ನೀಡಿತ್ತಿದ್ದರು. ಇದರಿಂದ ಬೇಸತ್ತ ಸಂಪತ್ ಪೋಷಕರು ಟಿಸಿ ಕೊಡುವಂತೆ ಕೇಳಿಕೊಂಡಿದ್ದರು. ಟಿಸಿ ಕೊಡಲು …

Read More »

ರಾಯಚೂರು: ನಗರದ ಆಟೋನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನ ಕದ್ದು ಮಾರಾಟಕ್ಕೆ

ರಾಯಚೂರು: ನಗರದ ಆಟೋನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನ ಕದ್ದು ಮಾರಾಟಕ್ಕೆ ಮುಂದಾಗಿದ್ದ ಕಳ್ಳನನ್ನ ಸದರ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಆಶ್ರಯ ಕಾಲೋನಿಯ ನಿವಾಸಿ ಗೋವಿಂದ ಬಂಧಿತ ಆರೋಪಿ. ಹಣದ ಅವಶ್ಯಕತೆ ಕಾರಣಕ್ಕೆ ತನ್ನ ಮಾಲೀಕನ ಲಾರಿಯನ್ನೇ ಕದ್ದು ಸಿಕ್ಕಿಬಿದ್ದಿದ್ದಾನೆ.   ಆಟೋ ನಗರದ ಸೈಯದ್ ಹುಸೇನ್ ಎಂಬವರಿಗೆ ಸೇರಿದ ಲಾರಿಯನ್ನ ಗೋವಿಂದ ಕದ್ದು ಮಾರಾಟಕ್ಕೆ ಮುಂದಾಗಿದ್ದ. ರಾಯಚೂರು ತಾಲೂಕಿನ ಗಂಜಳ್ಳಿ ಬಳಿ ಲಾರಿಯೊಂದಿಗೆ ಆರೋಪಿ ಸೆರೆಸಿಕ್ಕಿದ್ದಾನೆ. …

Read More »

ಚಾಕು ಇರಿದು ಮಹಿಳೆಯ ಕೊಲೆ

ರಾಯಚೂರು: ಚಾಕು ಇರಿದು ಮಹಿಳೆಯನ್ನು ಕೊಲೆಗೈದ ಘಟನೆಯೊಂದು ರಾಯಚೂರಿನ ಲಿಂಗಸಗೂರಿನ ಮುದಗಲ್ ಪಟ್ಟಣದ ವೆಂಕಟರಾಯಪೇಟೆಯಲ್ಲಿ ನಡೆದಿದೆ. ನೇತ್ರಾವತಿ (33) ಕೊಲೆಯಾದ ಮಹಿಳೆ. ಸೋದರ ಸಂಬಂಧಿ ಶಿವರಾಜ್, ನೇತ್ರಾವತಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯ ಬಳಿಕ ಶಿವರಾಜ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬಸ್- ಕ್ರೂಸರ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಐವರು ಸಾವು !

ಮೊಳಕಾಲ್ಮುರು: ಬಸ್ ಹಾಗೂ ಕ್ರೂಸರ್ ಮಧ್ಯೆ ಮೊಳಕಾಲ್ಮುರು ತಾಲ್ಲೂಕಿನ ಬಿಜಿ ಕೆರೆ ಬಳಿ ಭಾನುವಾರ ಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಐದು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಿಮ್ಮಣ್ಣ(40) ಪತ್ನಿ ರತ್ನಮ್ಮ(38) ಸೋಮನಮರಡಿ ಗ್ರಾಮದ ದುರುಗಪ್ಪ(16), ಗಜಲಿ ಗ್ರಾಮದ ಮಹೇಶ (19) ಹಾಗು 55 ವರ್ಷದ ಓರ್ವ ವ್ಯಕ್ತಿ ಎಂದು ತಿಳಿದು ಬಂದಿದೆ. ಮೃತರು ರಾಯಚೂರು ಜಿಲ್ಲೆ ದೆವದುರ್ಗ ತಾಲೂಕಿನ ಹುಣಸೂರು ಗ್ರಾಮದವರಾಗಿದ್ದಾರೆ ಎನ್ನಲಾಗುತ್ತಿದೆ. ಗಾಯಾಳುಗಳನ್ನು ಬಳ್ಳಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಸ್ …

Read More »

ಅನೈತಿಕ ಸಂಬಂಧ ವಿರೋಧ ಹಿನ್ನಲೆ ವಿಷ ಸೇವಿಸಿ, ಅಪ್ರಾಪ್ತೆ ಸಾವು ಯುವಕನ ಸ್ಥಿತಿ ಚಿಂತಾಜನಕ

ರಾಯಚೂರು : ರಾಯಚೂರಿನ ಲಿಂಗಸುಗೂರು ತಾಲೂಕಿನ ಪೈದೊಡ್ಡಿಯಲ್ಲಿ ಅನೈತಿಕ ಸಂಬಂಧಕ್ಕೆ ವಿರೋಧ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಯತ್ನಿಸಿದ್ದು,ಅಪ್ರಾಪ್ತೆ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ,ಯುವಕನ ಸ್ಥಿತಿ ಗಂಭೀರವಾಗಿದೆ. 17 ವರ್ಷದ ಅಪ್ರಾಪ್ತೆ ವಿಷಸೇವನೆಯಿಂದ ಸಾವನ್ನಪ್ಪಿದ್ದಾಳೆ.ಯರಜಂತಿ ಗ್ರಾಮದ ನರಸಪ್ಪನ ಸ್ಥಿತಿ ಗಂಭೀರವಾಗಿದೆ.ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ನರಸಪ್ಪನಿಗೆ ಮದುವೆಯಾಗಿ ಎರಡು ಮಕ್ಕಳಿವೆ. ಅಪ್ರಾಪ್ತೆಯೊಂದಿಗಿನ ಪ್ರೇಮ‌ ಸಂಬಂಧಕ್ಕೆ ಮನೆಯಲ್ಲಿ ವಿರೋಧ ಹಿನ್ನಲೆ ವಿಷ ಸೇವನೆ ಮಾಡಿದ್ದಾರೆ.  ಈ ಹಿಂದೆ ಅಪ್ರಾಪ್ತೆಯನ್ನ ಯುವಕನಿಂದ ದೂರ ಮಾಡಿ ಬಾಲಮಂದಿರದಲ್ಲಿ ಇರಿಸಲಾಗಿತ್ತು. …

Read More »

ಮಂತ್ರಾಲಯದಲ್ಲಿ ತೆಪ್ಪೋತ್ಸವ ಸಂಭ್ರಮ

ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಇಂದು ತುಂಗಾರತಿ ಸಂಭ್ರಮ ಮನೆ ಮಾಡಿತ್ತು. ಕಾರ್ತಿಕ ಪೂರ್ಣಮೆ ಹಿನ್ನೆಲೆ ತುಂಗಭದ್ರಾ ನದಿಯಲ್ಲಿ ತೆಪ್ಪೋತ್ಸವ ನೆರವೇರಿಸಲಾಯಿತು. ಉತ್ಸವಮೂರ್ತಿ ಪ್ರಹ್ಲಾದ ರಾಜರಿಗೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತುಂಗಭದ್ರಾ ನದಿಯಲ್ಲಿ ಪ್ರಹ್ಲಾದರಾಜರ ತೆಪ್ಪೋತ್ಸವ ಜರುಗಿತು. ಕಾರ್ತಿಕ ಪೂರ್ಣಮೆ ಹಿನ್ನೆಲೆ ನದಿ ದಡದಲ್ಲಿ ಭಕ್ತರಿಂದ ದೀಪೋತ್ಸವ ನಡೆದಿದೆ. ಈ ವರ್ಷ ತುಂಗಭದ್ರಾ ನದಿಯಲ್ಲೆ ಪುಷ್ಕರ ಇರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ …

Read More »

ಸಾರಿಗೆ ಬಸ್ಸಿನಲ್ಲಿ ಕೊವಿಡ್ ನಿಯಮಪಾಲನೆ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರ ಆಕ್ರೋಶ

ರಾಯಚೂರು: ಸಾರಿಗೆ ಬಸ್ಸಿನಲ್ಲಿ ಕೊವಿಡ್ ನಿಯಮಪಾಲನೆ ಇಲ್ಲದ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಂತ್ರಾಲಯ ಬಸ್ ನಿಲ್ದಾಣದಲ್ಲಿ ನಡೆದಿದೆ. ತುಂಗಭದ್ರಾ ಪುಷ್ಕರ ಹಿನ್ನೆಲೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಬಂದಿದ್ದರು. ಆದರೆ ಇವರು ರಾಯಚೂರು- ಬೆಂಗಳೂರು ಮಾರ್ಗದ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸಲು ನಿರಾಕರಿಸಿದ್ದಾರೆ. ಅಲ್ಲದೆ ಸಾರಿಗೆ ಸಿಬ್ಬಂದಿಯೊಂದಿಗೆ ಪ್ರಯಾಣಿಕರ ಮಾತಿನ ಚಕಮಕಿ ನಡೆಸಿದ್ದಾರೆ. ಬಸ್ಸಿನಲ್ಲಿ ಸ್ವಚ್ಛತೆಯಿಲ್ಲ, ಸೀಟುಗಳು ಹಾಳಾಗಿರುವುದರಿಂದ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

Read More »